Wednesday, February 1, 2017

ಸ್ವಚ್ಛ ಭಾರತ...ಸ್ವಚ್ಛ ಗ್ರಾಮ


ಸ್ವಚ್ಛ ಭಾರತಕ್ಕಾಗಿ ನಮ್ಮ ಶಾಲೆಯಲ್ಲಿಯೂ ಊರವರು, ಶಿಕ್ಷಕರು, ಗ್ರಾಮ ಪಂಚಾಯಿತಿಯವರು ಎಲ್ಲರೂ ಊರಿನಲ್ಲಿ ಜ್ರಾಗತಿ ಮೂಡಿಸುವ ಕಾರ್ಯಕ್ರಮ ಮಾಡಿರುವೆವು. ಆದರೇ ಭೃಷ್ಠ ಜನಪ್ರತಿನಿಧಿಗಳಿಗೆ, ಜವಬ್ದಾರಿ ಇಲ್ಲದೆ ಸಂಬಳಕ್ಕಾಗಿ ಕಾರ್ಯ ಮಾಡುವ ಶಿಕ್ಷಕರಿಗೆ ಹಳ್ಳಿಯ ಶಾಲೆಯಲ್ಲಿನ ಸ್ವಚ್ಛತೆ ಬಗ್ಗೆ ಗಮನ ನೀಡುವಷ್ಟು ವೇಳೆಯೂ ಇಲ್ಲ.  ನಮ್ಮ ಊರಿನವರಿಗೆ ಸಕಾ೯ರಿ ವ್ಯವಸ್ಥೆಯ ಬಗ್ಗೆ ಜಿಗುಪ್ಸೆ, ತಾತ್ಸಾರ ಬಂದಿರುವುದು. ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಸಕಾ೯ರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗಿರುವದು........ಇದಕ್ಕೆ ಪರಿಹಾರ ಇದೆಯಾ.....???????????


Tuesday, January 31, 2017

ದೇಶಭಕ್ತಿ ಮತ್ತು ಮಾಧ್ಯಮಗಳು

ದೇಶಭಕ್ತಿ ಮತ್ತು ಮಾಧ್ಯಮಗಳು

ಜಿ೯ಕಲ್ ದಾಳಿ ಮಾಡಿ ಮತ್ತು ದೇಶದ ರಕ್ಷಣಾ ವೆಚ್ಚವನ್ನು ಹೆಚ್ಚಿಸುವುದರ ಮೂಲಕ ದೇಶವನ್ನು ಬಲಿಷ್ಠಗೊಳಿಸಿರುವೆವು, ಇದು ನಮ್ಮ ನಮ್ಮ ದೇಶದ ಹೆಮ್ಮೆ ಎಂದು ಸಂಭ್ರಮಿಸುವ ದೇಶಭಕ್ತರು ಒಂದು ಕಡೆ, ಸ್ವಾತಂತ್ಯ ಬಂದಾಗಿನಿಂದ ದೇಶದ ರಕ್ಷಣೆಯನ್ನು ಮಾಡುತ್ತಾ, ಅಗತ್ಯವಾದಾಗ ಯುದ್ದವನ್ನು ಮಾಡಿ ದೇಶವನ್ನು ರಕ್ಷಣೆ ಮಾಡುತ್ತಾ ಗಡಿಯನ್ನು ನಿಮಿ೯ಸಿದವರು ನಾವು ಮೂಲ ದೇಶಭಕ್ತರು ಎಂದು ಹೇಳುವವರು ಇನ್ನೊಂದು ಕಡೆ, ನೈಜವಾಗಿ ದೇಶದ ಗಡಿಯಲ್ಲಿ ಗಡಿ ಕಾಯುತ್ತಾ ಮೇಲಾಧಿಕಾರಿಗಳ ಆದೇಶ ಪಾಲಿಸುವ ಸೈನಿಕರು, ತಮಗಿರುವ ಸಂಕಷ್ಟವನ್ನು ಹೇಳಿಕೊಳ್ಳುವ ಸೈನಿಕರು ಈ ಎಲ್ಲವುಗಳ ಮಧ್ಯದಲ್ಲಿ ದೇಶದಲ್ಲಿ ತಮ್ಮ ತಮ್ಮ ವಿಚಾರಗಳ ಬಗ್ಗೆ ಮಾಧ್ಯಮ, ಸಾರ್ವಜನಿಕ ಸಭೆಗಳ ಬಗ್ಗೆ ವಾದ ವಿವಾದ ಮಾಡುವ ಬುದ್ದಿಜೀವಿಗಳು ಇನ್ನೊಂದು ಕಡೆ, ಒಟ್ಟಾರೆ ದೇಶದ ಗಡಿ ರಕ್ಷಣೆ ಚಚೆ೯ಯ ವಿಷಯವಾಗಿರುವುದು. ಇದರ ಮುಂದುವರೆದೆ ಭಾಗವಾಗಿ ಹೊಟ್ಟೆ ತುಂಬಾ ತಿಂದು ಊಂಡು, ಕಾ೯ರಿ ಅಥವಾ ಖಾಸಗಿ ಕ್ಷೇತ್ರದಲ್ಲಿ ಅಗತ್ಯವಾದ ಸಂಬಳ ಪಡೆಯುತ್ತಿರುವವರು, ಉತ್ತಮವಾದ ವ್ಯವಹಾರ ಮಾಡುತ್ತಾ ಹಣ ಸಂಪಾದನೆ ಮಾಡುತ್ತಿರುವ ಚಿಕ್ಕ ದೊಡ್ಡ ವ್ಯಾಪಾರಸ್ತರು, ಅತ್ಯುತ್ತಮವಾದ ಕೃಷಿ ಭೂಮಿಯನ್ನು ಹೊಂದಿ (ಕೆಲಸಕ್ಕೆ ಕಾಮಿ೯ಕರನ್ನು ಇರಿಸಿಕೊಂಡು) ಸಕಾ೯ರದ ಸೌಲಭ್ಯವನ್ನು ಪಡೆದು ಸುಖದ ಜೀವನವನ್ನು ಸಾಗಿಸುತ್ತಿರುವ ಪ್ರಗತಿಪರರೆಂಬ ಹಣೆಪಟ್ಟಿ ಪಡೆದ ರೈತರುಗಳು ಇವರುಗಳೆಲ್ಲಾ ಇಂದು ಗಡಿಯ ಬಗ್ಗೆ, ಸೈನಿಕರ ಬಗ್ಗೆ,ದೇಶ ರಕ್ಷಣೆಯ ಚಚೆ೯ ಮಾಡುತ್ತಿರುವರು, ಸಂಭ್ರಮಿಸುತ್ತಿರುವರು ಮುಖ್ಯವಾಗಿ ಸ್ಥಳೀಯ ನೆಲೆಯಲ್ಲಿ ಈ ವಿಷಯಗಳನ್ನು ಇರಿಸಿಕೊಂಡು ರಾಜಕೀಯವನ್ನು ಮಾಡುತ್ತಿರುವರು.
ನೈಜವಾಗಿ ದೇಶದ ಗಡಿಯಲ್ಲಿನ ಸ್ಥಿತಿಯನ್ನು ಬಲ್ಲವರು ಯಾರು ಇಲ್ಲ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ರಾಜಕೀಯ ಪಕ್ಷಗಳ ಮುಖ್ಯಸ್ಥರು ಬೇರೆಯವರ ದೇಶಭಕ್ತಿಯ ಬಗ್ಗೆ ಪ್ರಶ್ನೆ ಮಾಡುತ್ತಿರುವರು.
ಗಡಿಯಲ್ಲಿ ವಾಸ ಮಾಡುವ ಸಾವಿರಾರು ಕುಟುಂಬಗಳು 10-15 ಕೀ.ಮೀ ದೂರದ ತಮ್ಮ ಸಂಭಂದಿಗಳನ್ನು ನೋಡಲು ಪಾಸಪೋರ್ಟ ವೀಸಾ ಎಂದು ಓಡಾಡುತ್ತಿರುವರು. ಗಡಿಯಲ್ಲಿ ಇರುವ ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ, ಶಿಕ್ಷಕರ ಕೊರತೆ ಬೇರೆ, ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ, ವ್ಯವಸ್ಥಿತವಾ ಮನೆಗಳು ಇಲ್ಲ. ಈ ಎಲ್ಲಾ ವಿಚಾರಗಳು ನಮಗೆ ಬೇಕಾಗಿಯೂ ಇಲ್ಲ, ಅಗತ್ಯವು ಇಲ್ಲ. ನಾವಿರುವದು ಗಡಿ ಪ್ರದೇಶದಲ್ಲಿ ಅಲ್ಲ. ನಮ್ಮದು ಸಮೂಹ ಸನ್ನಿ ದೇಶಭಕ್ತಿಯಾಗಿದೆ. ಮಾಧ್ಯಮ, ಸಾಮಾಜಿಕ ಮಾಧ್ಯಮಗಳು ನಮ್ಮ ಇಂದಿನ ಮಾರ್ಗದರ್ಶಕರಾಗಿರುವರು. ನೈಜತೆಯನ್ನು ಕಳೆದುಕೊಂಡು, ಯಾವುದೋ ವ್ಯಕ್ತಿ, ಪಕ್ಷಗಳಿಗೆ ತಮ್ಮನ್ನು ಮಾರಿಕೊಂಡ ಮಾಧ್ಯಮಗಳಿಗೆ ದಿಕ್ಕಾರವಿರಲಿ, ಇಂತಹ ವ್ಯವಸ್ಥೆಯನ್ನು ಬೆಳೆಸಿ ಪೋಷಿಸುತ್ತಿರುವ ನಮ್ಮ ಶೈಕ್ಷಣಿಕ ಸಾಮಾಜಿಕ ವ್ಯವಸ್ಥೆಯನ್ನು ಮರು ಅವಲೋಕಿಸುವ ಅಗತ್ಯವಿದೆ.

ರಾಜಸ್ಥಾನ ಮತ್ತು ಗುಜರಾತಗೆ ಹೊಂದಿಕೊಂಡಂತೆ ಪಾಕಿಸ್ತಾನದ ಮತ್ತು ಭಾರತದ ಗಡಿ ಪ್ರದೇಶದ ಕೆಲವೊಂದು ಚಿತ್ರಣ.

Monday, January 30, 2017

ಗ್ರಾಮೀಣ ಕ್ರೀಡೆ......ನೆನಪಿದೆಯಾ..?


ಗ್ರಾಮೀಣ ಕ್ರೀಡೆ......ನೆನಪಿದೆಯಾ..?
ಗೋಣಿ ಚೀಲದಲ್ಲಿ ಕಾಲುಗಳನ್ನು ಹಾಕಿ ಓಡುವುದು. ತುಂಬಾ ಕಡಿಮೆ ಖಚಿ೯ನಲ್ಲಿನ ಈ ಆಟ ಮಕ್ಕಳಿಗೆ ಸಂತೋಷವನ್ನು ನೀಡುವುದು. ಕೆಳಗೆ ಬೀಳದೆ ನಿಗದಿತ ಗುರಿ ತಲುಪುವ ಈ ಆಟದಲ್ಲಿ ಯಾರು ಗೆದ್ದರು ಏನುವುದಕ್ಕಿಂತ ಪ್ರತಿಯೊಬ್ಬರು ಭಾಗವಹಿಸುವುದು ಅಗತ್ಯವಾಗಿದೆಗೋಣಿ ಚೀಲದಲ್ಲಿ ಕಾಲುಗಳನ್ನು ಹಾಕಿ ಓಡುವುದು. ತುಂಬಾ ಕಡಿಮೆ ಖಚಿ೯ನಲ್ಲಿನ ಈ ಆಟ ಮಕ್ಕಳಿಗೆ ಸಂತೋಷವನ್ನು ನೀಡುವುದು. ಕೆಳಗೆ ಬೀಳದೆ ನಿಗದಿತ ಗುರಿ ತಲುಪುವ ಈ ಆಟದಲ್ಲಿ ಯಾರು ಗೆದ್ದರು ಏನುವುದಕ್ಕಿಂತ ಪ್ರತಿಯೊಬ್ಬರು ಭಾಗವಹಿಸುವುದು ಅಗತ್ಯವಾಗಿದೆ

Sunday, February 15, 2015

ದೇಶ, ಜಾತಿ ಧರ್ಮವನ್ನು ಮೀರಿದ ಪ್ರೇಮಮಯ ಜಗತ್ತಿಗಾಗಿ ಪ್ರೇಮಿಗಳ ದಿನಾಚರಣೆ ಅಡಿಪಾಯವಾಗಲಿ
ದೇಶ, ಜಾತಿ ಧರ್ಮವನ್ನು ಮೀರಿದ  ಪ್ರೇಮಮಯ ಜಗತ್ತಿಗಾಗಿ  ಪ್ರೇಮಿಗಳ ದಿನಾಚರಣೆ ಅಡಿಪಾಯವಾಗಲಿ
               
ಪುನ: ಬಂದಿದೆ ಫಬ್ರವರಿ 14, ಈಗಾಗಲೇ ದಿನದ ಪರ ವಿರೋದಿಗಳ ಕೆಸರೆರಚಾಟ ಪ್ರಾಂರಭವಾಗಿರುವುದು. ಪ್ರೇಮಿಗಳು ಸಿಕ್ಕಿಬಿದ್ದರೆ ಮದುವೆ ಮಾಡಿಸುವುದಾಗಿ ಒಂದು ಧರ್ಮದ ಸಂಘಟನೆಯೊಂದು ಹೇಳಿದರೆ, ಇನ್ನೊಂದು ಧರ್ಮದ ಸಂಘಟನೆಗಳು ಧರ್ಮದ ಗುಂಪಿಗೆ ಆಚರಣೆ ಮಾಡದಂತೆ ಆದೇಶ ಹೊರಡಿಸಿರುವುದು. ಇವುಗಳ ಮಧ್ಯ ಎಲ್ಲಾ ಧರ್ಮದ ಪ್ರಗತಿ ಶೀಲರೆಂದು ಗುರುತಿಕೊಳ್ಳುವವರು ಸಂಘಟನೆಗಳು ತಮ್ಮದೇ ಆದ ರೀತಿಯಲ್ಲಿ ಪ್ರೇಮಿಗಳ ದಿನಾಚರಣೆ ಆಚರಿಸುವ ತಯಾರಿಯಲ್ಲಿ ಇರುವರು.
  ರೀತಿಯ ಪರ ವಿರೋಧದ ಅಭಿಪ್ರಾಯಕ್ಕೆ ರಾಜಕೀಯ ಪಕ್ಷಗಳು ತಮ್ಮದೇ ಆದ ಅಭಿಪ್ರಾಯವನ್ನು ಸೇರಿಸಿ ವಾತಾವರಣವನ್ನು ಇನ್ನೂ ಕೆಡಿಸಲು ಪ್ರಯತ್ನಿಸುತ್ತಿರುವರು. ಮಾಧ್ಯಮಗಳಾದರೂ ಇದೇ ವಿಚಾರವನ್ನು ಅತಿರಂಚಿತ ವರದಿಯನ್ನಾಗಿಸಿ ಬ್ರೇಕಿಂಗ್ ನ್ಯೂಸ ಮಾಡುವ ಕಾರ್ಯದಲ್ಲಿ ತೊಡಗಿರುವರು. ಒಟ್ಟಾರೆ ವರ್ಷಕ್ಕೆ ಒಮ್ಮೆ ಬರುವ ಪ್ರೇಮಿಗಳ ದಿನಾಚರಣೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರಚಾರ ಪಡೆದುಕೊಳ್ಳುತ್ತಿರುವುದು. ಇದು ವಿದೇಶ ಬಂಡವಾಳಿಗರ ಸಂಚು ಎಂದು ಕೆಲವರು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಿರುವರು. 
ದಿನಾಚರಣೆಯ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ಏನೇ ಇರಲಿ ಪ್ರೇಮದಲ್ಲಿ ಕಲ್ಮಶ ಹುಡುಕುವುದು ಸಾಧ್ಯವೇ? ಅಥವಾ ಪ್ರೇಮದಲ್ಲಿ ಕಲ್ಮಶ ಕಾಣುತ್ತದೆ ಎಂದರೆ ಅದು ನಿಜವಾದ ಪ್ರೇಮವೇ? ಎರಡು ರೀತಿಯಿಂದಲೂ ನಾವು ಆಲೋಚಿಸಬೇಕಾಗಿದೆ.
ಫೆಬ್ರವರಿ 14 ರಂದೇ ಪ್ರೇಮಿಗಳು ಒಟ್ಟಾಗಿ ಸೇರಿ ಮಾತನಾಡುವುದು,  ಉಡುಗೊರೆಕೊಡಬೇಕು ಎಂದು ವಾದಿಸುವುದರಲ್ಲಿ ಅರ್ಥವಿಲ್ಲ. ಒಂದು ಗುಂಪಿನ ವಿರೋಧಕ್ಕಾಗಿ ರೀತಿ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ ಬದಲಾಗಿ ದ್ವೇಷ ಬೆಳೆಯುವುದು.  ಆದರೇ ಯಾವುದೇ ನಿಜವಾದ ಪ್ರೇಮದಲ್ಲಿ ದ್ವೇಷ ಇರುವುದಿಲ್ಲ.
ಧರ್ಮದ ಸಂಸ್ಕೃತಿಯ ರಕ್ಷಣೆಗಾಗಿ ದಿನವನ್ನು ವಿರೋಧಿಸುವುದಕ್ಕಾಗಿಯೇ ಫೆಬ್ರವರಿ 14 ರಂದು ಸಿಕ್ಕ ಪ್ರೇಮಿಗಳನ್ನು ಅಥವಾ ಯಾವುದೇ ಹುಡುಗ ಹುಡುಗಿಯರನ್ನು  ಹಿಂದೆ ಮುಂದೆ ನೋಡದೇ ಒತ್ತಾಯದ ಮದುವೆ ಮಾಡಿಸುವುದು, ಆಚರಣೆ ಮಾಡದಂತೆ ಫತ್ವಾ ಹೊರಡಿಸುವುದು ಎಲ್ಲ ವರ್ತನೆಗಳು ಸಹಾ ಪ್ರತಿರೋಧವೆ ವಿನಹ ಧರ್ಮದ ರಕ್ಷಣೆಯಂತು ಅಲ್ಲವೇ ಅಲ್ಲ. ಯಾವ ಧರ್ಮವು ಒಬ್ಬರಿಗೆ ನೋವು ನೀಡಿ ಧರ್ಮ ರಕ್ಷಣೆ ಮಾಡಲು ಹೇಳುವುದಿಲ್ಲ. ರೀತಿ ಏನಾದರೂ ಇದ್ದರೇ ಅದು ಧರ್ಮವೇ ಅಲ್ಲವಾಗಿದೆ.
ದೇಶದಲ್ಲಿ ಎಲ್ಲಾ ಧರ್ಮದ ಕಟ್ಟಾ ಸಂಪ್ರದಾಯವಾದಿಗಳ ನಿಲುವುಗಳು ಸಹಾ ಕೊನೆಗಳಿಗೆಯಲ್ಲಿ ಒಂದೇ ಆಗಿರುವುದು ಅದು ನಮ್ಮ ಜಾತ್ಯಾತೀತ ಮೌಲ್ಯಗಳಿಗೆ ದಕ್ಕೆ ತರುವುದರಲ್ಲಿ ಯಾವುದೇ ಸಂಶಯವಿಲ್ಲ.
ಇತೀಚೆಗೆ ನಮ್ಮ ದೇಶದಲ್ಲಿ ನಡೆಯುತ್ತಿರುವ ವಿಧ್ಯಮಾನಗಳನ್ನು ಮಾಧ್ಯಮದಲ್ಲಿ ಗಮನಿಸಿದಾಗ ದೇಶ ತನ್ನ ಜಾತ್ಯಾತೀತ ಮೌಲ್ಯಗಳನ್ನು ಗಾಳಿಗೆ ತೂರಿ ಅವಸಾನದತ್ತ ಸಾಗುತ್ತಿರುವುದನ್ನು ಗಮನಿಸಬಹುದಾಗಿದೆ, ರಾಜಕೀಯ ಪಕ್ಷಗಳ ಪ್ರಮುಖರ ಧರ್ಮದ ಕುರಿತು ಹೇಳಿಕೆಗಳು, ಮತಾಂತರ ಗದ್ದಲ, ಸಾಧು ಸಂತರ , ಮೌಲಿಗಳ ಎಡಬಿಡಂಗಿ ಮಾತುಗಳು, ಕೋಮುಗಲಭೆ, ಧರ್ಮದ ಧಾಮರ್ಿಕ ಕೇಂದ್ರಗಳ ಮೇಲೆ ದಾಳಿ, ಎಲ್ಲವನ್ನು ನೋಡಿಯೂ ನೋಡದಂತೆ ಕುಳಿತ ಕಾ೯ರಗಳು, ಇವೆಲ್ಲವನ್ನು ಗಮನಿಸಿದಾಗ ಇದೇ ರೀತಿ ಮುಂದುವರೆದರೆ ಇನ್ನೂ ಕೆಲವು ವರ್ಷಗಳಲ್ಲಿ ನಮ್ಮ ದೇಶವು ಸಹಾ ಅರಜಕತೆಯ ಬೀಡಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಇಂತಹ ಸಂದರ್ಭದಲ್ಲಿ ದೇಶದಲ್ಲಿ ಯಾವುದೇ ದಿನಾಚರಣೆ ಬಂದರು ಅದಕ್ಕೆ ಪರ ವಿರೋಧ ಧ್ವನಿಗಳು ಇದ್ದೆ ಇರುವುದು. ಸಂದರ್ಭದಲ್ಲಿ ಜಾಗ್ರತ ನಾಗರೀಕರಾದ ಎಲ್ಲರೂ ಯೋಚಿಸಿ ಮುಂದುವರೆಯಬೇಕಾದ ಅನಿವಾರ್ಯತೆ ಇಂದಿನ ಅಗತ್ಯವಾಗಿರುವುದು. ಹಿನ್ನಲೆಯಲ್ಲಿ ಪ್ರೇಮವನ್ನು ನೋಡುವ ಅಗತ್ಯ ಇರುವುದು. ನಮ್ಮ ದೇಶದಲ್ಲಿರು ಹತ್ತಾರು, ಜಾತಿ ಧರ್ಮಗಳು ಸಾಮರಸ್ಯದಿಂದ ಇರುವುದಕ್ಕೆ ಪ್ರೇಮಮಯ ವಾತಾವರಣವೇ ಕಾರಣವಾಗಿರುವುದು. ಆದರೇ ಮೌಲ್ಯವನ್ನೇ ಮರೆತು ನಾವು ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ವರ್ಷದ 365 ದಿನವು ಯಾವುದೇ ದಿನಾಚರಣೆ ಬರಲಿ, ಬರದೇ ಇರಲಿ, ಆಚರಣೆ ಮಾಡಲಿ ಬಿಡಲಿ ನಾವು ಒಂದು ಸ್ಪಷ್ಟ ನಿಧರ್ಾರ ಮಾಡಬೇಕಾಗಿದೆ. ಜಗತ್ತಿನಲ್ಲಿ ಭಾರತ ಎಲ್ಲಾ ಧರ್ಮ, ಜಾತಿ, ವಿವಿಧ ಸಂಸ್ಕೃತಿ, ವೇಷ ಭೂಷಣ, ಭಾಷೆಗಳನ್ನು ಹೊಂದಿಯೂ  ಸಾಮರಸ್ಯದಿಂದ, ನಿಭೀ೯ತರಾಗಿ ಸಹಭಾಳ್ವೆಯಿಂದ ಬದುಕುತಿರುವ ಜೀವಂತ ಒಂದು ಉದಾಹರಣೆಯಾಗಿದೆ.   ಕಾರಣಕ್ಕಾಗಿ ದೇಶ ವಿದೇಶಗಳ ಜನ ಭಾರತೀಯ ಸಂಸ್ಕೃತಿಗೆ ಮಾರು ಹೋಗುತ್ತಿರುವರು. ಇಂತಹ ಒಂದು ಅಮೂಲ್ಯವಾದ ಆಸ್ತಿಯನ್ನು ಹೊಂದಿರುವ ನಾವು ಇದನ್ನು ಉಳಿಸಿ ಬೆಳಸಿಕೊಳ್ಳುವುದು ತುಂಬಾ ಅಗತ್ಯವಿದೆ.
ದೇಶವನ್ನು ಮೀರಿ ನಾವು ಕುವೆಂಪುರವರು ತಿಳಿಸಿದಂತೆ ಅನಿಕೇತನ ವಾಗಬೇಕು. ವಿಶ್ವ ಮಾನವರಾಗ ಬೇಕಾದ ಅಗತ್ಯವಿದೆ. ಒಂದು ಶಕ್ತಿಯೂ ಭಾರತೀಯರಿಗೆ ಇರುವುದು. ಹಿನ್ನಲೆಯಲ್ಲಿ ನಾವು ಪ್ರೇಮಿಗಳ ದಿನಾಚರಣೆಯನ್ನು ಪ್ರೇಮಮಯ ಜಗತ್ತನ್ನು ಕಾಣುವ ಹಿನ್ನಲೆಯಲ್ಲಿ ನೋಡಬೇಕಾದ ಅಗತ್ಯವಿದೆ.
ನನ್ನ ಚೇತನ,
ಆಗು ನೀ ಅನಿಕೇತನ!

                                                                                                              
  
Thursday, August 14, 2014

ಶೈಕ್ಷಣಿಕ ವ್ಯವಸ್ಥೆಗೆ ಇನ್ನೂ ಸಿಕ್ಕಿಲ್ಲ ಸ್ವಾತಂತ್ಯ!!

ದಾಸ್ಯದಿಂದ ಮುಕ್ತಿ ಹೊಂದದ ನಮ್ಮ ಶೈಕ್ಷಣಿಕ ವ್ಯವಸ್ಥೆ
ನಮ್ಮ ಶೈಕ್ಷಣಿಕ ವ್ಯವಸ್ಥೆಗೆ ಇನ್ನೂ ಸಿಕ್ಕಿಲ್ಲ ಸ್ವಾತಂತ್ಯ!!
                         ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದು ನಾವು ಸ್ವಾತಂತ್ರ್ಯರಾದೆವು  ಸಂಭ್ರಮಕ್ಕಾಗಿ ಪ್ರತಿವರ್ಷ  ಅಗಷ್ಟ-15 ನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುತ್ತಿರುವೆವು. ಸ್ವಾತಂತ್ರ್ಯ ಪಡೆದು ಇಂದಿಗೆ ನಾವು 67 ವಸಂತಗಳನ್ನು ಕಳೆದಿರುವೆವು. ಸಂದರ್ಭದಲ್ಲಿ ನಾವು ದೇಶವಾಗಿ ಜಗತ್ತಿನಲ್ಲಿಯೇ ವಿಶಿಷ್ಟವಾದ ಸ್ಥಾನವನ್ನು ಪಡೆದಿರುವೆವು. ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರೆದಿರುವೆವು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರವೆವುಸ್ವತಂತ್ರ್ಯ ಭಾರತದಲ್ಲಿ ನಿಜವಾಗಿ ಎಲ್ಲರಿಗೂ ಸ್ವಂತಂತ್ಯ ಸಿಕ್ಕಿರುವುದೇ? ಬಗ್ಗೆ ನಮಗೆ ನಾವೇ ಪ್ರಶ್ನೆ ಮಾಡಿಕೊಂಡು ಅವಲೋಕಿಸುವುದು ಸಮಯದಲ್ಲಿ ಉಚಿತವಾಗಿದೆ. ದಾಸ್ಯದಿಂದ ಮುಕ್ತಿ ಹೊಂದಿದ ನಾವು ಪ್ರಜಾಪ್ರಭುತ್ವ  ಸಕಾರ ಇದ್ದರು ಇನ್ನೂ ಯಾಕೆ ಸಮಾನತೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ? ಇನ್ನೂ ನಮ್ಮ ದೇಶದಲ್ಲಿ ದಲಿತರ ಸಮಸ್ಯೆ ಇದೆ? ಅಧಿಕಾರ ಎಂಬುದು ಇನ್ನೂ ಯಾಕಾಗಿ ಕೆಲವೆ ಜನರಲ್ಲಿ ಕೇಂದ್ರಿಕೃತವಾಗಿದೆ.? ನಮ್ಮ ದೇಶದಲ್ಲಿ ಮಹಿಳೆಗೆ ಸ್ವಾತಂತ್ಯ ಸಿಕ್ಕಿದೆಯಾ? ಮಕ್ಕಳಿಗೆ ಸ್ವಾತಂತ್ಯ ಇದೆಯಾ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಬಹುಶ: ಸಿಗುವುದು ಇಲ್ಲ. ನಮ್ಮ ಸಮಾಧಾನಕ್ಕಾಗಿ ಒಂದೆರಡು ಉದಾಹರಣೆಗಳನ್ನು ಹೇಳಿಕೊಂಡು ನಾವು ಸಂತೋಷಪಡಬಹುದು ಆದರೇ ಯಾವ ಪ್ರಮಾಣದಲ್ಲಿ ನಾವು ಮುಂದೆ ಹೋಗಬೇಕಾಗಿತ್ತು ಇನ್ನೂ ಅಲ್ಲಿ ತಲುಪಿಲ್ಲ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾಗಿರುವುದು ನಮ್ಮ ಶೈಕ್ಷಣಿಕ ವ್ಯವಸ್ಥೆಯೆ ಆಗಿರುವುದು. ಇನ್ನೂ ನಾವು ಬ್ರಿಟಿಷರ ಹಾಕಿ ಕೊಟ್ಟ ಶೈಕ್ಷಣಿಕ ಪದ್ದತಿಯಲ್ಲಿಯೇ ಇರುವೆವು. ಸ್ವಾತಂತ್ಯಾ ನಂತರ ಶಿಕ್ಷಣ ಸುಧಾರಣೆ ಹೆಸರಲ್ಲಿ  ಸಾಕಷ್ಟು ಬದಲಾವಣೆಗಳನ್ನು ಮಾಡಿದರು ಸಹಾ ನಾವಿನ್ನು ಬ್ರಿಟಿಷರು ಹಾಕಿ ಕೊಟ್ಟ ಶೈಕ್ಷಣಿಕ ಅಡಿಪಾಯದಿಂದ ಹೊರಬಂದಿಲ್ಲ.  67 ವರ್ಷದ ನಂತರವು ನಮ್ಮ ಶೈಕ್ಷಣಿಕ ವ್ಯವಸ್ಥೆ ದಾಸ್ಯದಲ್ಲಿಯೇ ಇರುವುದು. ಅದರ ಪರಿಣಾಮವೇ ಇಂದಿನ ಸಮಾಜವಾಗಿದೆ.
ನಮ್ಮನ್ನು ಆಳಿದ ಬ್ರಿಟಿಷರಿಗೆ ನಮ್ಮಿಂದಲ್ಲೇ ಲಾಭ ಪಡೆದುಕೊಳ್ಳಲು ಯಾವ ರೀತಿ ಶೈಕ್ಷಣಿಕ ಪದ್ದತಿ ಬೇಕೋ ಅದನ್ನು ಜಾರಿಗೊಳಿಸಿದರು ಅದರಲ್ಲಿ ಅವರು ಯಶಸ್ವಿ ಆದರು. ಅದರಲ್ಲಿಯೂ ಸಾಕಷ್ಟು ಒಳ್ಳೆಯ ಅಂಶಗಳು ಇರುವವು. ಆದರೇ ಮುಖ್ಯವಾಗಿ ಇಲ್ಲಿನ ನೈಸಗರ್ಿಕ ಸಂಪನ್ಮೂಲವನ್ನು ಲೂಟಿ ಮಾಡಿ ಕೊಂಡೊಯ್ಯಲು ಬೇಕಾದ ಎಲ್ಲಾ ರೀತಿಯ ಶಿಕ್ಷಣವನ್ನು ಅವರು ನೀಡಿದರು. ಅದು ದೇಶದ ಲಾಭಕ್ಕಾಗಿ ಅಗತ್ಯವಾಗಿತ್ತು.ಆದರೇ ಸ್ವಾತಂತ್ಯ ದೊರೆತ ಅರ್ಧ ಶತಕಗಳು ಕಳೆದರು ನಾವು ನಮ್ಮ ಶೈಕ್ಷಣಿಕ ವ್ಯವಸ್ಥೆಯ ಅಡಿಪಾಯವನ್ನು ಸರಿಪಡಿಸಲು ಪ್ರಯತ್ನಿಸುತ್ತಿಲ್ಲ. ಬದಲಾಗಿ ಬೇರೆ ಬೇರೆ ಯೋಜನೆ ಕಾನೂನುಗಳ ಹೆಸರಿನಿಂದ ಅದೇ ಅಡಿಪಾಯದ ಮೇಲೆ ಬೇರೆ ಬೇರೆ ಆಕಾರದ ಕಟ್ಟಡವನ್ನು ಕಟ್ಟುತ್ತಿರುವೆವು ಕಾರಣದಿಂದಾಗಿಯೇ ನಮ್ಮ  ಶೈಕ್ಷಣಿಕ ವ್ಯವಸ್ಥೆಯಲ್ಲಿ ಕೆಳಕಂಡ ಅಂಶಗಳು ಕಂಡುಬರುವವು.
o   ಕೃಷಿ ಪ್ರಧಾನ ನಮ್ಮ ದೇಶದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕೃಷಿ ಪ್ರಮುಖ ಭಾಗವಾಗಿಲ್ಲ.
o   ಶೈಕ್ಷಣಿಕ ವ್ಯವಸ್ಥೆ ಕೇಂದ್ರಿಕೃತವಾಗಿರುವುದು ಕೇಂದ್ರ/ರಾಜ್ಯ ಹಂತದಲ್ಲಿಯೇ ಆಗಿರುವುದು.
o   ಬೃಹದ್ದಾಕಾರದ ಶೈಕ್ಷಣಿಕ ವ್ಯವಸ್ಥೆ ಇದ್ದರು ಪಾರದರ್ಶಕತೆಯ ಕೊರತೆ.
o   ಸಮುದಾಯದ ತೊಡಗಿಸುವಿಕೆ ಇಲ್ಲದಿರುವುದು.
o   ಶಿಕ್ಷಣವನ್ನು ಆಥರ್ಿಕತೆಯ ಹಿನ್ನಲೆಯಲ್ಲಿ ನೋಡುತ್ತಿರುವುದು.
o   ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕಂಪನಿಗಳು, ಆಣೆಕಟ್ಟುಗಳು, ಅಪರಾಧಗಳು
o   ನೈಸಗಿ೯ ಸಂಪತ್ತಿನ ಲೂಟಿ, ಅಗತ್ಯಕ್ಕಿಂತ ಹೆಚ್ಚಿನ ಆಸೆ
  ಎಲ್ಲಾ ಅಂಶಗಳು ನಮ್ಮ ಶೈಕ್ಷಣಿಕ ವ್ಯವಸ್ಥೆ ದಾರಿ ತಪ್ಪಿರುವುದಕ್ಕೆ ಸ್ಪಷ್ಟ ಸೂಚಕಗಳಾಗಿದೆ. ದೇಶದ ಭವಿಷ್ಯ ಎಂಬುದು ಮಕ್ಕಳ ಕೈಯಲ್ಲಿ  ಇದೆ ಎಂಬುದನ್ನು ನಾವೆಲ್ಲರೂ  ಒಪ್ಪ್ಪಿಕೊಳ್ಳುವೆವುಆದರೇ ನಾವು ನಮ್ಮ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣದಿಂದ ಮಗುವನ್ನು ಸ್ವಾಥರ್ಿಯನ್ನಾಗಿ ಮಾಡುತ್ತಿರುವೆವು. ಚೆನ್ನಾಗಿ ಓದು ಅವನಿಗಿಂತ/ಅವಳಿಗಿಂತ ಹೆಚ್ಚಿನ ಅಂಕ ತೆಗೆ, ಹೆಚ್ಚಿನ ಸಂಬಂಳದ ಕೆಲಸಕ್ಕೆ ಸೇರು. ಇದೇ ನಾವು ಮಕ್ಕಳಿಗೆ ಕಲಿಸುತ್ತಿರುವೆವು. ಅಗಷ್ಟ-15 ಆಚರಣೆಯಲ್ಲಿಯೂ ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ ಬಹುಮಾನ ನೀಡುತ್ತಿರುವೆವು. ಒಬ್ಬರಿಗೆ ಬಹುಮಾನ ನೀಡಿ ಉಳಿದವರ ಮನಸ್ಸಿನಲ್ಲಿ ದ್ವೇಷವನ್ನು ಹೆಚ್ಚಿಸುತ್ತಿರುವೆವು. ಕಾ೯ರದ ಯೋಜನೆ  ಸಹಾ ಹೆಚ್ಚಿನ ಅಂಕ ಪಡೆದವರಿಗಾಗಿ ಇರುವುದುಒಟ್ಟಾರೆ ನಮ್ಮ ಶೈಕ್ಷಣಿಕ ರೀತಿ ನೀತಿಗಳು ದ್ವಂದದಲ್ಲಿರುವುದು. ಹೇಳುವುದು ಒಂದು ಮಾಡುವುದು ಒಂದು ಎಂಬತಾಗಿದೆ.
ನಮ್ಮ ಶೈಕ್ಷಣಿಕ ವ್ಯವಸ್ಥೆಯ ಅಡಿಪಾಯವನ್ನೇ ನಾವು ಬದಲಾಯಿಸದಿದ್ದರೇ ಮುಂದಿನ ಕೆಲವು ವರ್ಷಗಳಲ್ಲಿ ಪರಿಸ್ಥಿತಿ ಗಂಭೀರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಆದರೇ ನಾವಿಂದು ದುರಾಸೆಯ ಕಾರಣದಿಂದ ಬೇರೆಯವರ ಬದುಕಿನ ಹಕ್ಕನ್ನು ಕಸಿಯುತ್ತಿರುವೆವು. ಇದೇ ಸ್ಥಿತಿ ಮುಂದುವರೆದರೆ  ಪುನ: ನಾವು ದಾಸ್ಯದಲ್ಲಿಯೇ  ಬದುಕಬೇಕಾಗುವುದು. ಅದಕ್ಕೂ ಮುಂಚೆ ಸಾಮರಸ್ಯದಿಂದ ಬದುಕುವ ಸಮಾಜ ಸೃಷ್ಠಿ ಮಾಡುವ ಅಗತ್ಯವಿದೆ. ಅದಕ್ಕಾಗಿ ನಾವು ನಮ್ಮ ಶೈಕ್ಷಣಿಕ ಅಡಿಪಾಯವನ್ನು ಹೊಸದಾಗಿ ನಿಮಿ೯ಸುವ ಅಗತ್ಯವಿದೆಇದರ ಬಗ್ಗೆ ಚೆ೯ಯನ್ನು ಸ್ವಾತಂತ್ಯೋತ್ಸವ ಸಂದರ್ಭದಲ್ಲಿ ಹುಟ್ಟುಹಾಕುವ ಅಗತ್ಯವಿದೆ...

                                                                                                                ವಿವೇಕ ಬೆಟ್ಕುಳಿ