Thursday, September 27, 2012

ಬನಶಂಕರಿ ಬುತ್ತಿ


ಬನಶಂಕರಿ ಬುತ್ತಿ
ಬರ್ರೀ ಅಣ್ಣವ್ರ ಊಟ ಮಾಡಬರ್ರೀ, ಕೆನಿ-ಮೊಸರು ಐತಿ ಬರ್ರೀ, ಮಜ್ಜಿಗೆ ಕುಡಿಬರ್ರೀ ರೀತಿಯಾಗಿ ನಿಮ್ಮನ್ನು ಊಟಕ್ಕೆ ಕರೆಯುತ್ತಿರುವುದು ಎಲ್ಲಿ ಎಂದು ಅನುಮಾನವೇ? ಹಾಗಾದರೇ ನೀವು ಒಮ್ಮೆ ಬನಶಂಕರಿ ದೇವಾಲಯಕ್ಕೆ ಬರಬೇಕು. ಅಲ್ಲಿ ತಲೆಯ ಮೇಲೆ ಬುತ್ತಿಯ  ಬುಟ್ಟಿಯನ್ನು ಹೊತ್ತು ಕೊಂಡು ನಿಮನ್ನು ಅಲ್ಲಿನ ಮಹಿಳೆಯರು ಪ್ರೀತಿಯಿಂದ ಕರೆಯುವರು.
ಕನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಬಾದಾಮಿಯಿಂದ ಮೂರು ಕಿ.ಮೀ. ದೂರದಲ್ಲಿರುವ ಬನಶಂಕರಿಯು ರಾಜ್ಯದಲ್ಲಿರುವ ಪ್ರಾಚೀನ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದೆಂದೂ ಪರಿಗಣಿಸಲ್ಪಟ್ಟಿದೆ. ಬನಶಂಕರಿಯು ಆದಿ ದೇವತೆ ಬನದೇವಿ, ಬನಶಂಕರಿ, ಅಥವಾ ಶಾಕಾಂಬರಿ ಎಂದು ಕರೆಯಲ್ಪಡುವುದುಬನಶಂಕರಿದೇವಾಲಯವು ಚಾಲುಕ್ಯರ ಕಾಲದ ಸುಂದರ ದೇವಾಲಯವಾಗಿದೆ.
ಬಾದಾಮಿ ಬಯಲು ಪ್ರದೇಶವಾದರು, ಬನಶಂಕರಿ ದೇವಾಲಯವಿರುವ ಪ್ರದೇಶವು ಮಲೇನಾಡಿನ ನಿಸರ್ಗವನ್ನು ನೆನಪಿಗೆ ತರುವಂತೆ ಇದೆಸರಸ್ವತಿ ಹಳ್ಳವು ಸಮೀಪದಲ್ಲಿ ಹರಿಯುವುದರಿಂದ ತೆಂಗು, ಬಾಳೆ, ವಿಳ್ಳೆದೆಲೆ ತೋಟದ ಹಸಿರು ಅಲ್ಲಿ ಕಂಡುಬರುವುದು. ಬನಶಂಕರಿ ದೇವಾಲಯದ ಮುಂದಿರುವ ಹೊಂಡಕ್ಕೆ ಹರಿಶ್ಚಂದ್ರ ತೀರ್ಥವೆಂದು ಕರೆಯಲಾಗುತ್ತದೆ. ಹೊಂಡದ ಮೂರು ಕಡೆಯು ಸುಂದರ ಕಲ್ಲಿನ ಮಂಟಪವಿದೆ. ಪ್ರತಿ ವರ್ಷ ಸಂಕ್ರಾಂತಿಯ ತರುವಾಯ ಬರುವ ಬನದ ಹುಣ್ಣಿಮೆಯ ಸಮಯಕ್ಕೆ ಬನಶಂಕರಿಯ ದೇವಿಯ ಜಾತ್ರೆ ನಡೆಯುವುದು. ಲಕ್ಷಾಂತರ ಭಕ್ತಾದಿಗಳು ಅಲ್ಲಿಗೆ ಬರುವರು. ಸುಮಾರು ಒಂದು ತಿಂಗಳವರೆಗೆ ಜಾತ್ರೆಯು ನಡೆಯುತ್ತದೆ
   ಬನಶಂಕರಿಯಲ್ಲಿ ಪ್ರತಿ ವರ್ಷ ನಡೆಯುವ ಜಾತ್ರೆಯು ವಿಶೇಷವೆನಿಸಿದರೂ, ಅದಕ್ಕಿಂತಲೂ ವಿಶೇಷವೆನಿಸುವುದು ಇಲ್ಲಿ ಪ್ರತಿದಿವಸವು ಕಂಡುಬರುವ ಬನಶಂಕರಿಯ ಬುತ್ತಿ. ಬಾದಾಮಿಯಲ್ಲಿ  ಪ್ರವಾಸಿಗರಿಗೆ ತಿಂಗಳಾನುಗಟ್ಟಲೆ ನೋಡಲು ಬೇಕಾದಷ್ಟು ಪ್ರದೇಶಗಳಿವೆ. ರೀತಿಯ ಹಲವಾರು ಪ್ರದೇಶಗಳಲ್ಲಿ ನಂತರ ಒಂದೊಂದು ನೆನಪಿಗೆ ಬರದೇ ಇರಬಹುದು.   ಆದರೇ ಬನಶಂಕರಿ ದೇವಾಲಯದಲ್ಲಿ  ಮನೆಯ ಊಟವನ್ನು ನೆನೆಪಿಗೆ ತರುವ  ಬನಶಂಕರಿಯ ಬುತ್ತಿ ಅದನ್ನು ಬಡಿಸುವ ಮಹಿಳೆಯರ ಪ್ರೀತಿ, ಅಕ್ಕರೆಯ ಮಾತು ಮಾತ್ರ ಬಾದಾಮಿಯ ಪ್ರವಾಸವನ್ನು ಚಿರಕಾಲ ನೆನಪಿನಲ್ಲಿಡುವುದು.
ಅತಿಥಿ ದೇವೊಭವ ಎಂದು ನಂಬಿರುವ ಭಾರತೀಯರ ಸಂಸ್ಕ್ರತಿಯನ್ನು ಬಿಂಬಿಸುವ ಬನಶಂಕರಿಯ ಬುತ್ತಿ ಕಾಲದಲ್ಲಿನ ಒಂದು ವಿಶೇಷವಾಗಿದೆ. ಬನಶಂಕರಿಗೆ ಬಂದಾಗ ಇಲ್ಲಿನ ಮಹಿಳೆಯರು ತಲೆಯ ಮೇಲೆ ಬುತ್ತಿಯ  ಬುಟ್ಟಿಯನ್ನು ಹೊತ್ತು ಕೊಂಡು ಬರ್ರೀ ಅಣ್ಣವ್ರ ಊಟ ಮಾಡಬರ್ರೀ, ಕೆನಿ-ಮೊಸರು ಐತಿ ಬರ್ರೀ, ಮಜ್ಜಿಗೆ ಕುಡಿಬರ್ರೀ ಎಂದು ಪ್ರೀತಿಯಿಂದ ಕರೆದಾಗ ಪ್ರವಾಸಿಗರು, ಭಕ್ತಾದಿಗಳು, ತಡ್ರೇವ್ವರ್ರೇ  ಬನಶಂಕರಿ ಅಮ್ಮಗ ಕಾಯಿ ವಡೆಸಿಕೊಂಡು ಹರಿಕೆ ಸಲ್ಲಸಿ ಬಂದು ಊಟ ಮಾಡ್ತಿವಿ ಎಂದು ಹೇಳಿ ಹರಿಕೆಯನ್ನು ಸಲ್ಲಿಸಿ ಊಟಕ್ಕೆ ಬರುತ್ತಾರೆ.
     ಬನಶಂಕರಿಯ ಬುತ್ತಿಯನ್ನು ಬಿಚ್ಚಿದಾಗ ಅಮೃತದ ಸವಿಯನ್ನ ತಂದುಕೊಡುವ ಹಲವಾರು ಭೋಜ್ಯಗಳಿರುವುದುಬನಶಂಕರಿಯು ತನ್ನಲಿಗೆ ಬರುವ ಬಡವ-ಬಲ್ಲಿದ ನೆಂಬ ಬೇದವಿಲ್ಲದೆ ಎಲ್ಲರನ್ನು ಕಾಡುವ ಹಸಿವೆಯನ್ನು ತಣಿಸಲು ಇರುವುದು ಬುತ್ತಿಯಾಗಿದೆ. ಇದರಲ್ಲಿ ಸಜ್ಜಿ-ರೋಟ್ಟಿ, ಬಿಳಿ ಜೋಳದ ಕಡಕ್ ರೋಟ್ಟಿ, ಚೌಳಿಕಾಯಿ ಪಲ್ಲೆ, ಬದನೆಕಾಯಿ ಪಲ್ಲೆ, ಕಡಲೇಕಾಯಿ ಪಲ್ಲೆ, ಹೆಸರುಬೇಳೆಯ ಪಲ್ಲೆ, ಮಡಕೆ ಕಾಳಿನ ಉಸಳಿ, ಅಲಸಂಧಿ ಕಾಳಿನ ಪಲ್ಲೇ, ಹಸಿರು ತೋಪ್ಪಲು ಪಲ್ಲೆಗಳಾದ ರಾಜಗಿರಿ, ಸಬ್ಬಸಿಗೆ, ಮೆಂತ್ತೆ ಸೊಪ್ಪು, ಪುಂಡಿ ಪಲ್ಲೆ ನುಚ್ಚು, ಖುಸಬಿ ಪಲ್ಲೆ, ಹತ್ತರಕಿ ಪಲ್ಲೆ, ಹುಣಸಿ ತಕ್ಕು, ನಿಂಬೆ ಹಣ್ಣಿನ ಉಪ್ಪಿನಕಾಯಿ, ಊಟದೊಂದಿಗೆ ಕಡೆದು ತಿನ್ನಲು ಉಳ್ಳಾಗಡ್ಡಿ, ನೆಂಜಿಕೊಳ್ಳಲು ಶೇಗಾದ ಹಿಂಡಿ, ಗುರೆಳ್ಳ ಚಟ್ನಿ, ಅಗಸಿ ಹಿಂಡಿ, ಉತ್ತರ ಕನ್ನಡಿಗರ ವಿಶೇಷವಾದ ಕಲ್ಹನ ಚಟ್ನಿ ಕೆಂಪ್ಹಿಂಡಿ ಇದೆಲ್ಲವುಗಳ ಜೊತೆಗೆ ಸ್ವಾದಿಸ್ಟಿವಾದ ಕೆನೆ-ಮೊಸರು ಬುತ್ತಿಯಲ್ಲಿದೆ. ನಿಮಗೆ ಬೇಕಾದ ರೀತಿಯ ಆಹಾರವನ್ನು ಕೇಳಿ ಪಡೆಯಬಹುದು. ಅಲ್ಪ ಪ್ರಮಾಣದ ಹಣವನ್ನು ಅದಕ್ಕೆ ನೀಡಬೇಕಾಗುವುದು.
ಊಟಕ್ಕೆ ಬಡಿಸುವ ಮಹಿಳೆಯರು ಪಕ್ಕದಲ್ಲಿಯೇ ಕುಳಿತು ಪ್ರೀತಿಯಿಂದ ಊಟ ಬಡಿಸುತ್ತಾ ಅಕ್ಕರೆಯ ಮಾತುಗಳನ್ನ ಆಡುವಾಗ ಯಾವುದೋ ಕಾಲದ ಸಂಬಂಧ ಇವರೊಂದಿಗೆ ಇರುವಂತೆ ಅವರು ನಮಗೆ ಉಣ ಬಡಿಸಿದಂತೆ ಬಾಸ ವಾಗುತ್ತದೆ.    ಊಟವನ್ನು ನೀಡಿದ ತಾಯಿ ಹೋಗುವಾಗ ಸ್ವಲ್ಪ ಹೊತ್ತು ಆರಾಮ ಮಾಡಿ ಹೋಗ್ರೀ ಅಪ್ಪಾವ್ರೇ, ನಮ್ಮವ್ವ ಬನಶಂಕರಿ ನಿಮಗೆಲ್ಲಾ ಒಳ್ಳೆಯದನ್ನ ಮಾಡ್ಲಿ ಎಂದು ಹ್ರದಯ ತುಂಬಿ ಹರಸಿ ಹೋಗುತ್ತಾಳೆ. ಜಾತಿ, ಧರ್ಮ ಎಂದು ಹೊಡೆದಾಡುತ್ತಾ ಅಧಿಕಾರ, ಅಂತಸ್ತು, ದುಡ್ಡು ಎನ್ನುತ್ತಾ ಮಾಯಾ ಜಿಂಕೆಯ ಬೆನ್ನು ಹತ್ತಿರುವ ಸಮಾಜದಲ್ಲಿ ಬಂದವರಿಗೆಲ್ಲ ಸಮಾನವಾಗಿ ನೊಡುತ್ತಾ ಉತ್ತರ ಕನಾಟಕ ಶೈಲಿಯ ಊಟವನ್ನು ನೀಡುತ್ತಿರುವ ಬನಶಂಕರಿಯ ಬುತ್ತಿಯನ್ನು ನೀಡುತ್ತಿರುವ ಎಲ್ಲಾ ಮಹಿಳೆಯರು ನಿಜಕ್ಕೂ ಧನ್ಯರು. ನೀವು ಒಮ್ಮೆ ಬನಶಂಕರಿಗೆ ಹೋಗಿ ಬನ್ನಿ

ವಿವೇಕ ಬೆಟ್ಕುಳಿ

ಕನ್ನಡ ಭಾಷೆ ಬೆಳವಣಿಗೆ ಕನ್ನಡ ಭಾಷೆ ಬೆಳವಣಿಗೆ ನಾವು ಸಾಗುತ್ತಿರುವ ದಿಕ್ಕು ಸರಿ ಇದೆಯೇ,,,,,?
(ಕನಾಟಕದಲ್ಲಿ ಕನ್ನಡ ಉಳಿಸುವ ಬಗ್ಗೆ ಬೆಳೆಸುವ ಬಗ್ಗೆ ಚಚರ್ೆ ಆಂದೋಲನ ಹೋರಾಟ ನಡೆಯುತ್ತಲೇ ಇದೆ.  ನಮ್ಮ ಭಾಷಾ ಹೋರಾಟ ಮತ್ತು ನಾವು ಸಾಗುತ್ತಿರುವ ದಾರಿಯ ಬಗ್ಗೆ ಒಂದು ಪ್ರಾರಂಭದ ಚಚರ್ೆ ಮಾತ್ರ ಇದಾಗಿದೆ)
ದಿನೇ ದಿನೇ ಕನ್ನಡ ಹೋರಾಟಗಾರರ ಸಂಖ್ಯೆ, ಕನ್ನಡದ ಉಳಿವಿನ ಬಗ್ಗೆ ಮಾತನಾಡುವವರ ಸಂಖ್ಯೆ ರಾಜಕೀಯ ಪಕ್ಷದವರ ಕನ್ನಡ ಹೇಳಿಕೆಗಳ ಸಂಖ್ಯೆ ಹನುಮಂತನ ಬಾಲದ ಹಾಗೆ ಪ್ರಚಾರಗೊಳ್ಳುತ್ತಾ ಬೆಳೆಯುತ್ತಾ ಇದೆ. ಆದರೇ ಅದಕ್ಕಿಂತ ವೇಗವಾಗಿ ಇಂಗ್ಲೀಷ ಶಾಲೆಗಳ ಸಂಖ್ಯೆ ಅದಕ್ಕೆ ಮಕ್ಕಳನ್ನು ಕಳುಹಿಸುವ ಗುಂಪಿನ ಸಂಖ್ಯೆ ಗೌಪ್ಯವಾಗಿ  ಹೆಚ್ಚಾಗುತ್ತಿದೆ.  ಈ ರೀತಿಯಲ್ಲಿ ದ್ವಂದದಲ್ಲಿ ಸಾಗುತ್ತಿರುವ ನಮ್ಮ ಕನರ್ಾಟಕ ರಾಜ್ಯ ಪುನ: ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವೆವು. ಈ ಸಂದರ್ಭದಲ್ಲಿಯಾದರೂ ಕನ್ನಡದ ಉಳಿವಿನ ಬಗ್ಗೆ ವ್ಯವಸ್ಥೆಯ ನೆಲೆಯಲ್ಲಿ ಚಿಂತಿಸಬೇಕಾದ ಅಗತ್ಯತೆ ಕಾಣುವುದು.
ವಾಹನಕ್ಕೆ ಕುತ್ತಿಗೆಗೆ ಕನ್ನಡದ ಬಾವುಟವನ್ನು ಹಾಕಿ ಓಡಾಡುವುದರಿಂದ, ತಮಿಳು, ಮರಾಠಿ ಜನರಿಗೆ ಹೊಡೆಯುವುದರಿಂದ, ಇಂಗೀಷ ನಾಮಫಲಕ ತೆಗೆಯುವುದರಿಂದ, ಪ್ರತಿಮೆ ಅನಾವರಣ ಮಾಡುವುದನ್ನು ನಿಲ್ಲಿಸುವುದರಿಂದ, ಬೇರೆ ಭಾಷೆಯ ಚಲನಚಿತ್ರ ಟಿ.ವಿ ಚಾನೆಲ್ ಗಳನ್ನು ನಿರ್ಭಂದಿಸುವುದರಿಂದ ಕನ್ನಡ ಬೆಳವಣಿಗೆ ಆಗುತ್ತದೆ ಎಂಬುದು ಕನಸು. ಈ ಎಲ್ಲ ವಿಧಾನಗಳು ಒಂದು ಸಾರಿ ಕನ್ನಡಿಗರನ್ನು ಭಾವನಾತ್ಮಕವಾಗಿ ಪ್ರತಿಕ್ರಿಯಿಸುವಂತೆ ಮಾಡಬಹುದು. ಇವೆಲ್ಲವು ದ್ವೇಷವನ್ನು ಬೆಳೆಸುವಂತಹಾ ವಿಧಾನಗಳೆ ವಿನಹಾ; ಭಾಷೆಯ ಬೆಳವಣಿಗೆಗೆ ಪೂರಕವಾಗಿಲ್ಲ.
ಕೇವಲ ದೊಡ್ಡ ದೊಡ್ಡ ಸಾಹಿತಿಗಳ ಪುಸ್ತಕವನ್ನು ಪ್ರಕಟಿಸುವುದರಿಂದ, ಅನ್ಯ ಭಾಷೆಯ ಶಾಲೆಗಳಿಗೆ ಅನುಮತಿ ನೀಡದಿರುವುದರಿಂದ, ಅಂತಹ ಶಾಲೆಗಳ ಮೇಲೆ ದಂಡ ಹಾಕುವುದರಿಂದ, ಕನ್ನಡದ ಉಳಿವಿಗಾಗಿ ಎಂದು ಕೋಟರ್್ನಲ್ಲಿ ದಾವೆ ಹೂಡುವುದರಿಂದ, ರಾಜಕೀಯ ಪಕ್ಷದವರ ಪ್ರಣಾಳಿಕೆಯಿಂದ ಯಾವುದೇ ಕಾರಣಕ್ಕೂ ಕನ್ನಡ ಬೆಳವಣಿಗೆ ಅಸಾಧ್ಯ ಈ ಎಲ್ಲವೂ ಸಹಾ ಯಾರನ್ನೋ ಮೆಚ್ಚಿಸುವುದಕ್ಕಾಗಿ ಅಥವಾ ತಾವು ಕನ್ನಡ ಪರ ತೋರಿಸಿಕೊಳ್ಳುವ ವಿಧಾನವಾಗಿರುವುದು. ಸೂಕ್ಷ್ಮವಾಗಿ ಗಮನಿಸಿದರೆ ಕನ್ನಡ ಹೋರಾಟದಲ್ಲಿರುವ ಕನ್ನಡಾಭಿಮಾನಿಗಳು, ರಾಜಕೀಯ ಪುಡಾರಿಗಳು, ಸಕರ್ಾರಿ ನೌಕರರು ಇವರುಗಳ ಮಕ್ಕಳಿಂದಲ್ಲೇ ಇಂದು ಹೆಚ್ಚು ಇಂಗ್ಲೀಷ ಶಾಲೆಗಳು ನಡೆಯುತ್ತಿರುವುದು ಎಂಬುದನ್ನು ಗಮನಿಸಬೇಕಾಗಿದೆ.
ಸಕರ್ಾರ ಪ್ರತಿ ಗ್ರಾಮ ಪಂಚಾಯಿತಿಗೆ ಗ್ರಂಥಾಲಯದ ಸೌಲಭ್ಯ ಓದಗಿಸಿದೆ. ಅಲ್ಲಿ ಸಾಕಷ್ಟು ಪುಸ್ತಕಗಳು ಇವೆ ಆದರೇ ಹೆಚ್ಚಿನ ಕಡೆ ಇನ್ನೂ ಕೆಲವೊಂದು ಪುಸ್ತಕಗಳನ್ನು ಒಬ್ಬರೂ ತೆಗೆದುಕೊಂಡ ಹೋಗಿರುವ ಉದಾಹರಣೆ ಇಲ್ಲ. ಕೇವಲ ದಿನ ಪತ್ರಿಕೆ ವಾರಪತ್ರಿಕೆಯ ಪ್ರಯೋಜನವನ್ನು ಗ್ರಂಥಾಲಯದಿಂದ ಪಡೆದುಕೊಳ್ಳುತ್ತಿರುವರು.  ಇದಕ್ಕೆ ಕಾರಣ ಏನೆಂದು ಹುಡುಕುವ ಬದಲು ನಾವು ಇನ್ನೂ ಪುಸ್ತಕವನ್ನು ಒದಗಿಸುವ, ಆಂದೋಲನ ಮಾಡುವ ಬಗ್ಗೆ ಮಾತನಾಡುತ್ತಿರುವೆವು.
ಒಂದು ಭಾಷೆಯ ಬೆಳವಣಿಗೆ ಆಗಬೇಕಾದರೆ ಅದು ಮಕ್ಕಳ ಪ್ರಾಥಮಿಕ ಹಂತದಿಂದಲೆ ಪ್ರಾರಂಭವಾಗಬೇಕು. ಮಾತನಾಡು, ಓದುವ, ಬರೆಯುವ ಬಗ್ಗೆ ಆಸಕ್ತಿ ಬರಬೇಕು. ಆದರೇ ನಮ್ಮ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಅಂಕದ ಮೇಲೆ ಅವಲಂಬಿತವಾಗಿದೆ ಯಾರಿಗೂ ಭಾಷೆಯ ಬಗ್ಗೆ ಗಮನವಿಲ್ಲ ಬದಲಾಗಿ ಹೆಚ್ಚು ಅಂಕ ಪಡೆಯಬೇಕು ಬೇರೆ ಬೇರೆ ಕೋರ್ಸನಲ್ಲಿ ಅವಕಾಶ ಗಿಟ್ಟಿಸಬೇಕು ಎಂಬುದೊಂದೆ ಚಿಂತೆಯಾಗಿದೆ. ಪರೀಕ್ಷೆ ಮೇಲೆ ಸಂಪೂರ್ಣ ಶಿಕ್ಷಣ ಅವಲಂಬಿತವಾಗಿದೆ. ಅದಕ್ಕೆ ಪೂರಕವಾಗಿ ಇಲ್ಲಿಯವರೆಗೂ ಎಲ್ಲರೂ ಅವರವರ ತರಗತಿ ಪುಸ್ತಕ ಓದುವುದಕ್ಕಾಗಿ ಮಾತ್ರ ಶ್ರಮ ಪಡುತ್ತಿರುವರು ಅದೂ ಆಸಕ್ತಿಯಿಂದ ಅಲ್ಲ ಬದಲಾಗಿ ಒತ್ತಡದಿಂದ ಆಗಿದೆ. ಅದೇ ರೀತಿ ಶಿಕ್ಷಕರು ಅದನ್ನೇ ಕಂಠ ಪಾಠ ಮಾಡಿಸುವರು ಹೆಚ್ಚು ಅಂಕ ಪಡೆದು ಪಾಸಾದರೆ ಶಾಲೆಯ ಮತ್ತು ಆಯಾ ಶಿಕ್ಷಕರ ಗೌರವ ಸಹಾ ಹೆಚ್ಚಾಗುವುದು.  ನಮ್ಮ ಸಕರ್ಾರ ಸಹಾ ಇದನ್ನೇ ಪೋಷಿಸುತ್ತಿರುವುದು ದುರಾದೃಷ್ಠಕರವಾಗಿದೆ. ಕಲಿಯಲ್ಲಿ ಹಿಂದುಳಿದ ಮಕ್ಕಳು ಅವರಿಗೆ ಪರಿಹಾರ ಬೋಧನೆ ಎಂಬ ಯೋಜನೆ, ಮಕ್ಕಳ ಕಲಿಕೆಯ ಮಟ್ಟವನ್ನು ತಿಳಿಯಲು ಮೌಲ್ಯಾಂಕನ ಸಂಸ್ಥೆ ಈ ರೀತಿಯ ಯೋಜನೆಗಳನ್ನು ಮಾಡುತ್ತಾ ಇದೆ. ಆದರೇ ಶಿಕ್ಷಣದ ಬಗ್ಗೆ ಹೇಳುವಾಗ ಶಿಕ್ಷಣ ಮುಂದಿನ ಜೀವನಕ್ಕೆ ಪೂರಕವಾಗಿರಬೇಕು ಎಂದು ಹೇಳುತ್ತೇವೆ. ಅದಕ್ಕೆ ಪೂರಕವಾದ ವ್ಯವಸ್ಥೆ ಇಲ್ಲವಾಗಿದೆ. ಕನ್ನಡ ಬೆಳವಣಿಗೆ ಕುಂಠಿತವಾಗಲು ನಮ್ಮ ಪ್ರಾಥಮಿಕ ಶಾಲೆಯ ಕಲಿಕಾ ಪದ್ದತಿಯೂ ಓಂದು ಕಾರಣವಾಗಿದೆ.  ಓದುವ ಹವ್ಯಾಸವನ್ನು ಬೆಳೆಸಲು, ಬೇರೆ ಬೇರೆ ಮಾಹಿತಿಯನ್ನು ಹುಡುಕುವ, ಹೊಸದಾಗಿ ಏನಾದರೂ ಸೃಷ್ಠಿ ಮಾಡುವ ಸಾಮಥ್ರ್ಯವನ್ನು ಬೆಳಸುವಲ್ಲಿ ನಾವು ವಿಫಲರಾಗುತ್ತಿರುವೆವು. ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ.
ಸಿನಿಮಾ ಕನ್ನಡ ಆದರೂ ಅದರ ಹಾಡು, ಸಂಭಾಷಣೆಯಲ್ಲಿ  ಶಬ್ದಗಳು ಅನೇಕ ಬೇರೆ ಭಾಷೆಯೇ ಇರುವುದು. ಸಾವಿರಾರು ವರ್ಷದ ಇತಿಹಾಸ ಇರುವ ನಮ್ಮ ಕನ್ನಡ ಭಾಷೆಗೆ ಶಬ್ದ ದಾರಿದ್ರ್ಯವೆ? ಅಥವಾ ಭಾಷೆಯಲ್ಲಿ ಹೊಸ ಹೊಸದನ್ನು ಹುಡುಕುವ ಸಾಮಥ್ರ್ಯವೇ ನಮಗೆ ಇಲ್ಲವೇ? ಇಂತಹ ವಿಚಾರಗಳ ಚಿಂತನೆ ಈ ಕಾಲಘಟ್ಟದಲ್ಲಿ ಸೂಕ್ತವೆಂದು ಅನಿಸುವುದು.
ದಿನೇ ದಿನೇ ಹೊಸ ಹೊಸ ಪತ್ರಿಕೆಗಳು ಬರುತ್ತಿವೆ. ಆದರೇ ಅದು ನಿರಂತರವಾಗಿ ಮುನ್ನಡೆಯುತ್ತಿಲ್ಲ. ಆಥರ್ಿಕ ನಷ್ಟದಿಂದ ಮುಚ್ಚಲ್ಪಡುತ್ತಿವೆ. ದೊಡ್ಡ ದೊಡ್ಡ ಪತ್ರಿಕೆಗಳ ದರ ಸಮರದಲ್ಲಿ ಜಿಲ್ಲಾ ತಾಲ್ಲೂಕಾ ಮಟ್ಟದ ಪತ್ರಿಕೆಗಳು ನೆಲೆ ನಿಲ್ಲಲು ಹೆಣಗಾಡುತ್ತಿದೆ. ಸಕರ್ಾರದ ಸಹಕಾರ ಸಹಾ ಹೆಚ್ಚು ರಾಜ್ಯ ಹಂತದ ಪತ್ರಿಕೆಗೆ ಇರುವುದು.  ಕೇವಲ ಆಥರ್ಿಕ ದೃಷ್ಠಿಯಿಂದ ಮಾತ್ರ ನೋಡದೇ ಒಂದೊಂದು ವಿಚಾರವನ್ನು ಕಟ್ಟುವ ಹಿನ್ನಲೆಯಲ್ಲಿ ಪತ್ರಿಕೆಗಳು ಕಾರ್ಯನಿರ್ವಹಿಸಬೇಕಾಗಿದೆ. ಅದಕ್ಕೆ ಪೂರಕವಾದ ವಾತಾವರಣವನ್ನು ಒದಗಿಸಬೇಕು. ಅಂದಾಗ ಬೇರೆ ಬೇರೆ ವಿಚಾರಗಳ ಬಗ್ಗೆ ಎಲ್ಲರೂ ಚಿಂತಿಸಲು ಸಾಧ್ಯವಾಗುವುದು. ಇದರಲ್ಲಿ ಭಾಷೆಯ ಬೆಳವಣೆಗೆ ಸಹಾ ಒಂದಾಗಿದೆ.
ಇಂದು ಕನರ್ಾಟಕ ರಾಜ್ಯೋತ್ಸವ ದುಂದುವೆಚ್ಚಮಾಡಿ ಕಾರ್ಯಕ್ರಮ ಮಾಡುವುದಕ್ಕಿಂತ ಹಳ್ಳಿಯ  ಶಾಲೆಗಳಿಗೆ ಚಿಕ್ಕ ಚಿಕ್ಕ ವಿಭಿನ್ನ ಬಗೆಯ ಪುಸ್ತಕವನ್ನು ಒದಗಿಸುವುದು. ಮತ್ತು ಮಕ್ಕಳು ಯಾವುದೇ ಒತ್ತಡ, ಪರೀಕ್ಷೆ ಇಲ್ಲದೇ ಸ್ವತಂತ್ರವಾಗಿ ಕಲಿಯುವ ಅವಕಾಶವನ್ನು ಒದಗಿಸುವ ಕಲಿಕಾ ಪದ್ದತಿ ಬಗ್ಗೆ ಚಿಂತಿಸುವ ಕಾರ್ಯ ಪ್ರಾರಂಭವಾಗಲಿ. ಆ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಹೊಸ ರೂಪವನ್ನು ಕೊಡುವ ಪ್ರಯತ್ನ ಆಗಲಿ.
                                                         ಜೈ ಕನರ್ಾಟಕ.
                                                           ವಿವೇಕ.
                                            


ಕವನಗಳು

          ಗಂಡು
ಮದುವೆ ಮುಂಚೆ ವೀರ
ಮದುವೆ ನಂತರ ಗಂಭೀರ
ಮಕ್ಕಳಾದ ನಂತರ ಫಕೀರ !

      ಹೆಣ್ಣು
ಮದುವೆಗೆ ಮುಂಚೆ ನಾರಿ
ಮದುವೆ ಆದ ಮೇಲೆ ಅಲೆಮಾರಿ
ಮದುವೆಯ ನಂತರ ಹೆಮ್ಮಾರಿ!
ನಾನು ಈ ರೀತಿ ಬರೆದದ್ದು ತಪ್ಪೆನಿಸಿದರೆ ಸ್ವಾರಿ.
             ಕುಡುಕನ ಜೀವನ
ಮಗುವಾಗಿರುವಾಗ ಮೊಲೆಹಾಲು ಕುಡಿದು ನಡೆದಾಡಿದೆ
ನಡೆದಾಡುವಾಗ  ಹಾಲು ಕುಡಿದು ಹುಡುಗನಾದೆ
ಹುಡುಗನಾದಾಗ ಕೋಲಾ ಪೆಪ್ಸಿ ಕುಡಿದು ಯುವಕನಾದೆ
ಯುವಕನಾದಾಗ ಬೀರು ಕುಡಿದು ದೊಡ್ಡವನಾದೆ
ದೊಡ್ಡವನಾದಾಗ ಹಾಟ್ ಕುಡಿದು ಗ್ರಹಸ್ಥನಾದೆ
ಗ್ರಹಸ್ಥನಾದಾಗ ಕಂಟ್ರಿ ಸರಾಯಿ ಕುಡಿದು ಹಾಸಿಗೆ ಹಿಡಿದೆ
ಹಾಸಿಗೆ ಹಿಡಿದಾಗ, ತುಳಸಿನೀರು ಕುಡಿದು ಯಾತ್ರೆ ಮುಗಿಸಲು ಕಾದೆ !
                                                                                                  ವಿವೇಕ ಬೆಟ್ಕುಳಿ ಕುಮಟಾ
                                                                                                                    vivekpy@gmail.com

ಮೊಬೈಲ್


ಮೊಬೈಲ್
ಮೊಬೈಲ್ ಎಂಬ ಪುಟ್ಟ ಯಂತ್ರದ ಸಹಾಯದಿಂದ ವಿದೇಶದಲ್ಲಿರುವ ಮಗಳು ಅಳಿಯನೊಂದಿಗೆ, ಪೇಟೆಗೆ ಹೋದ ಮಗನೊಂದಿಗೆ ಹೀಗೆ ನಮಗೆ ಹತ್ತಿರದ ಎಲ್ಲರೊಂದಿಗೆ ನಮಗೆ ಅಗತ್ಯವೆನಿಸಿದಾದ ನೇರವಾಗಿ ಅವರೊಂದಿಗೆ ಎಲ್ಲಿಯಾದರೂ ನಿಂತು ಮಾತನಾಡಲು ಇಂದು ಸಾಧ್ಯವಾಗಿರುವುದು. ರೀತಿಯ ಬದಲಾವಣೆ ಆಗುತ್ತದೆ ಎಂದು ಅದನ್ನು ಬಳಕೆ ಮಾಡುವ ಬಹುತೇಕ ಜನರಿಗೆ ಹಿಂದೆ ತಿಳಿದಿರಲಿಲ್ಲ. ಆದರೇ ಇಂದು ಸಾಧ್ಯವಾಗಿದೆ. ಹೌದು ಮೊಬೈಲ್ ಇಂದು ನಮ್ಮ ಜೀವನದಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆದಿರುವುದು ಸಂದರ್ಭದಲ್ಲಿ  ಮೊಬೈಲ್ ಮಾನವನ ಅಗತ್ಯವನ್ನು ಪೂರೈಸುವ ಒಂದು ವಸ್ತುವೇ? ಅಥವಾ ಅನಿವಾರ್ಯವೇ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿರುವುದು ಅಗತ್ಯವಾಗಿದೆ. ಹತ್ತು ವರ್ಷದ ಹಿಂದೆ ಮೊಬೈಲ ಎಂಬುದು ಒಂದು ಅಗತ್ಯವಾಗಿತ್ತು, ಆದರೇ ಇಂದು ಅದು ಅಗತ್ಯವನ್ನು ಮೀರಿ ಅಗತ್ಯತೆಯ ಪೂರೈಕೆಗಾಗಿ ಇರುವ ಯಂತ್ರದ ದಾಸರಾಗಿರುವೆವು.
ರಾಜರ ಕಾಲದಲ್ಲಿ ಸಂಪರ್ಕಕ್ಕಾಗಿ ಪಾರಿವಾಳವನ್ನು ಬಳಸುತ್ತಿದ್ದರು ಎಂಬುದನ್ನು ಪೌರಾಣಿಕ ಸಿನಿಮಾಗಳಲ್ಲಿ ನೋಡಿರುವೆವು. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಸಂಪರ್ಕಕ್ಕಾಗಿ ವ್ಯಕ್ತಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪತ್ರ ತಲುಪಿಸುತ್ತಿದ್ದರು ಎಂಬುದನ್ನು ತಿಳಿದಿರುವೆವು. ಸ್ವಾತಂತ್ರ್ಯಾನಂತರ ಅಂಚೆ ಇಲಾಖೆ ಪ್ರಮುಖ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಿರುವುದನ್ನು ಪತ್ರ, ಗ್ರೀಟಿಂಗ್ಸ್ ಬರೆದು ನಾವೇ ಕಂಡಿರುವೆವು. ತಕ್ಷಣದ ಸಂದೇಶಕ್ಕಾಗಿ ಆಗ ಅಂಚೆ ಇಲಾಖೆ ಟೆಲಿಗ್ರಾಂ ವ್ಯವಸ್ಥೆ ಇದ್ದು ತುಂಬಾ ಅನಿವಾರ್ಯತೆಯಲ್ಲಿ ಜನತೆ ಇದನ್ನು ಬಳಸುತ್ತಿದ್ದರುತದನಂತರ ಅಂದರೆ ಹತ್ತು ವರ್ಷದ ಹಿಂದೆ ಬೇರೆ ರಾಜ್ಯ ಅಥವಾ ದೇಶದವರೊಂದಿಗೆ ಮಾತನಾಡಬೇಕೆಂದರೆ ತಾಲ್ಲೂಕಾ ಕೇಂದ್ರಕ್ಕೆ ಹೋಗಿ ಟೇಲಿಪೋನ ಬುತ್ ಮೂಲಕ ಮಾತನಾಡಬೇಕಾಗಿತ್ತು. ಒಂದೆರಡು ವರ್ಷದಲ್ಲಿ ಟೆಲಿಪೋನ್ ಬುತ್ ಗ್ರಾಮ ಗ್ರಾಮದಲ್ಲಿ ತಲೆ ಎತ್ತಿತ್ತು. ಸಾಕಷ್ಟು ಜನಕ್ಕೆ ಉದ್ಯೋಗವನ್ನು ಕಲ್ಪಿಸಿತು. 2000 ದಶಕದಲ್ಲಿ ಟೋಲಿಪೋನ ಬುತ್ ಬಿಜನೆಸ್ಗೆ ಎಲ್ಲಿಲ್ಲದ ಬೇಡಿಕೆ ಇತ್ತು ಸಂದರ್ಭದಲ್ಲಿ ಬುತ್ನಲ್ಲಿ ಕಾರ್ಯನಿರ್ವಹಿಸುವ ಹುಡುಗಿ/ಹುಡುಗರಿಗೆ ಬಿಸನೆಸ್ ನೋಡಿಯೇ ಕೆಲವರ ನೆಂಟಸ್ಥಿಕೆ ಆಗಿ ಮದುವೆಯಾಗಿರುವುದು ಇದೆ. ಯಾವಾಗ 2005 ನಂತರ ಮೊಬೈಲ ಬಳಕೆ ಹೆಚ್ಚಾಯಿತೋ ಆಗ ಜನಸ್ನೇಹಿಯಾಗಲಾರಂಭಿಸಿತು. ಒಂದೊಂದೆ ಟೇಲಿಪೋನ ಬುತ್ಗಳು ಮುಚ್ಚಲಾರಂಭಿಸಿತು. ಇಂದು ಎಲ್ಲಾದರೂ ಟೇಲಿಪೋನ ಬುತ್ ಸಿಕ್ಕರೇ ಅದು ಮ್ಯೂಜಿಯಂನಲ್ಲಿ ಇಡುವಂತ ವಸ್ತುವಾಗಿರುವುದು.
ಟೆಲಿಗ್ರಾಂ ಅನ್ನುವುದು ಹೆಸರಿಲ್ಲದೇ ಹೋಗಿದೆ. ಅಂಚೆಯಣ್ಣನ ಕೆಲಸ ಕಡಿಮೆಯಾಗಿದೆ. ಅಂಚೆ ಇಲಾಖೆಯ ಕಾರ್ಯವೈಖರಿ ಬೇರೆ ರೂಪ ಪಡೆದುಕೊಂಡಿದೆ. ಇವೆಲ್ಲಾ ಬದಲಾವಣೆ ಕಾರಣ ಮೊಬೈಲ ಆಗಿದೆ. ಒಂದು ಕಂಪನಿಯ ಜಾಹೀರಾತಿನಂತೆ ದುನಿಯಾ ಮುಠಿ ಮೇ ಹೈ ಎಂಬುದು ನಿಜವಾಗಿದೆ.
ಇಂದು ಏಡ್ಸಗಿಂತಲ್ಲೂ ವೇಗವಾಗಿ ಹರಡುತ್ತಿರುವ ಕಾಯಿಲೆ ಎಂದರೆ ಮೊಬೈಲ ಕಾಯಿಲೆ ಎಂದರೇ ತಪ್ಪಾಗಲಾರದು. ಇಂದಿನ ಯುವ ಪೀಳಿಗೆ ಒಂದು ದಿನ ಮೊಬೈಲೆ ಬಿಟ್ಟು ಇರಲು ಸಿದ್ದರಿಲ್ಲ. ಓದುವಾಗ, ಬರೆಯುವಾಗ, ತಿನ್ನುವಾಗ, ಮಲಗುವಾಗ ಮೊಬೈಲ ಹತ್ತಿರವೇ ಇರಬೇಕು ಅಷ್ಟೊಂದು ಆತ್ಮೀಯವಾಗಿ ಬಿಟ್ಟಿದೆ. ಮೊಬೈಲ್ನಲ್ಲಿ ಕರೆನ್ಸಿ ಇಲ್ಲದೆ ವ್ಯಕ್ತಿ ನೀರಿಲ್ಲದ ಮೀನಿನಂತೆ ಹಾರಾಡುತ್ತಿರುವನು. ಶಾಲೆಗೆ ಹೋಗುವ ಮಕ್ಕಳಿಂದ ನಾಳೆ ನಾಡಿದ್ದು ಇಹಲೋಕ ತ್ಯಜಿಸುವ ಮಾತನಾಡುವಂತ ವ್ಯಕ್ತಿಗೆ ಮೊಬೈಲ ಇಂದು ಅನಿವಾರ್ಯವಾಗಿದೆ. ಇದು ಅಗತ್ಯತೆಯ ಪೂರೈಸುವ ಒಂದು ಸಾಧನವಾಗಿ ಇಲ್ಲ ಬದಲಾಗಿ, ಗಾಳಿ, ನೀರು, ಆಹಾರ, ಬಟ್ಟೆ ಗುಂಪಿಗೆ ಸೇರುವ ಅನಿವಾರ್ಯತೆಯ ಹಂತಕ್ಕೆ ತಲುಪಿರುವುದು. ನಮ್ಮ ಅಗತ್ಯತೆ ಪೂರೈಸುವ ಒಂದು ವಸ್ತುವಿನ ಮೇಲೆ ರೀತಿಯ ಅವಲಂಬನೆ ಮಾಡಿಕೊಂಡಿರುವ ನಾವು ಇದು ನಮಗೆ ಅಂಟಿರುವ ಒಂದು ಸಾಂಕ್ರಾಮಿಕ ಕಾಯಿಲೆ ಎಂದೇ ಪರಿಗಣಿಸುವ ಅಗತ್ಯವಿದೆ.

ಸರ್ಕಾರಿ ನೌಕರಿಗೆ ಮೀಟಿಂಗ ನೋಟಿಸಗಾಗಿ, ಕಛೇರಿಯ ಅಂಕಿ ಸಂಖ್ಯೆ ತಿಳಿಯುವುದಕ್ಕಾಗಿ, ಮೇಲಾಧಿಕಾರಿಗಳ ಪ್ರವಾಸದ ಬಗ್ಗೆ ತಿಳಿಸುವುದಕ್ಕಾಗಿ, ಸಹಪಾಠಿಯ ಕಳ್ಳ ರಜೆಯ ಮಾಹಿತಿಯನ್ನು ಮುಟ್ಟಿಸುವುದಕ್ಕಾಗಿ ಮೊಬೈಲ ಅನಿವಾರ್ಯವಾದರೇ, ಯುವ ಸಮೂಹಕ್ಕೆ ತಮ್ಮ ಮನದ ಭಾವನೆಯನ್ನು ತಮ್ಮ ಇಷ್ಟದವರೊಂದಿಗೆ ಹಂಚಿಕೊಳ್ಳಲು, ತಿರುಗಾಡಲು ಹೋಗುವ ಸಮಯ, ಸ್ಥಳವನ್ನು ತಿಳಿಸಲು, ಎದುರಿಗೆ ಮಾತನಾಡಲು ಸಾಧ್ಯವಾಗದಂತಹ ವಿಷಯವನ್ನು ಮೆಸೇಜ್ ಮೂಲಕ ತಿಳಿಸಲು, ಇಷ್ಟದ ಹಾಡನ್ನು ಕೇಳುತ್ತಾ ಇರಲು, ವ್ಯವಹಾರಸ್ಥರಿಗೆ ತಮ್ಮ ವ್ಯವಹಾರವನ್ನು ಮಾಡಲು ಮತ್ತು ತಮ್ಮ ವ್ಯವಹಾರದ ಪ್ರತಿಷ್ಠೆಯನ್ನು ತೋರ್ಪಡಿಸಲು, ಸಾಮಾನ್ಯನಿಗೆ ದಿನನಿತ್ಯದ ಎಲ್ಲಾ ಕೊಡು ಕೊಳ್ಳುವ ವ್ಯವಹಾರದಲ್ಲಿಯೂ ಮೊಬೈಲ್ ಅನಿವಾರ್ಯವಾಗಿದೆ. ಒಟ್ಟಾರೆ ಬೆಳ್ಳಿಗೆ ಎದ್ದು ಮುಂದಿನ ಕಾರ್ಯಕ್ರಮವನ್ನು ನಿಗದಿ ಮಾಡುವುದರಿಂದ ಹಿಡಿದು, ರಾತ್ರಿ ಆತ್ಮೀಯರಿಗೆ ಗುಡ್ನೈಟ್ ಮೇಸೆಜ್ ಕಳುಹಿಸುವರೆಗೂ ಮೊಬೈಲ್ ಅಗತ್ಯವಾಗಿದೆ. ಮೊಬೈಲ್ ಇಂದು ಕೇವಲ ಮಾತನಾಡುವ ವಸ್ತುವಾಗಿ ಇಲ್ಲ. ಬದಲಾಗಿ ಮನರಂಜನೆಯ ಪೆಟ್ಟಿಗೆಯಾಗಿ, ಆಟವಾಡುವ ವಸ್ತುವಾಗಿ, ಪತ್ರ ಬರೆದು ಓದುವ ಸಾಧನವಾಗಿ, ಬ್ಯಾಂಕ ವ್ಯವಹಾರವನ್ನು ಮಾಡುವ ಮತ್ತು ಟಿಕೇಟ ಬುಕಿಂಗ್ ಮಾಡುವ ಯಂತ್ರವಾಗಿ ಬದಲಾಗಿರುವುದು.

ಕಾಲಕಾಲಕ್ಕೆ ಮತ್ತು ಜನತೆಯ ಆಶೋತ್ತರಗಳಿಗೆ ತಕ್ಕಂತೆ ಮೊಬೈಲಗಳು ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಹತ್ತು ಹಲವಾರು ಕಂಪನಿಗಳು ವಿವಿಧ ರೀತಿಯ ಕೊಡುಗೆಗಳ ಮುಖಾಂತರ ಗ್ರಾಹಕರನ್ನು ಆಕಷರ್ಿಸಲು ಪ್ರಯತ್ನಿಸುತ್ತಿವೆ. ಕರೆ ಬಂದಾಗ ಮತ್ತು ಮೆಸೇಜ್ ಬಂದಾಗ ಎಚ್ಚರಿಸುವ ವಿವಿಧ ನಮೂನೆಯ ಶಬ್ದ ಹಾಡುಗಳು ಮೊಬೈಲನಲ್ಲಿ ಇರುವುದು.
ಮೊಬೈಲ ಇಂದು ದೇಶದಲ್ಲಿ ಹೆಚ್ಚು ವ್ಯಾಪಾರವಾಗುತ್ತಿರುವ ವಸ್ತುವಾಗಿದೆ. ದಿನದಿಂದ ದಿನಕ್ಕೆ ಇದರ ಮಾರುಕಟ್ಟೆ ವಿಸ್ತರಿಸುತ್ತಾ ಇರುವುದು. ಐದಾರು ವರ್ಷದ ಹಿಂದೆ ಒಂದು ಬಿಎಸ್ಎನ್ಎಲ್ ಸಿಮ್ ಕೊಳ್ಳಬೇಕೆಂದರೆ ತಿಂಗಳು ಮೊದಲೇ ಬುಕಿಂಗ್ ಮಾಡಬೇಕಾಗಿತ್ತು. ಕಛೇರಿಯಲ್ಲಿ ಸರಿಯಾದ ಸ್ಪಂದನೆ ಸಿಗುತ್ತಿರಲಿಲ್ಲ. ಯಾವುದೋ ಪ್ರಭಾವ ಬೀರಿ ಸಿಮ್ ಪಡೆದುಕೊಳ್ಳುವ ಪ್ರಯತ್ನವು ಇರುತ್ತಿತ್ತು. ನಂತರವು ಅದು ಸಿಗುವುದು ಕಷ್ಟವಾಗಿತು. ಆದರೇ ಇಂದು ಹತ್ತಾರು ಕಂಪನಿಗಳು ಕ್ಷೇತ್ರ ಪ್ರವೇಶದ ಪರಿಣಾಮವಾಗಿ ಬೀದಿ ಬೀದಿಯಲ್ಲಿ ಸಿಮ್ ಮಾರಾಟ ಪ್ರಾರಂಭವಾಗಿದೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಬೀದಿಯಲ್ಲಿ ತಾತ್ಕಾಲಿಕ ಶೆಡ್ಗಳ ಮೂಲಕ, ಸಂಚಾರಿ ಅಂಗಡಿಗಳ ಮೂಲಕ ಸಿಮ್ ಮಾರಾಟ ನಿರಂತರವಾಗಿ ಸಾಗಿರುವುದು.
ಅನಿವಾರ್ಯವಾಗಿ ಅಸ್ಥಿತ್ವ ಇರಿಸಿಕೊಳ್ಳಲು ಬಿಎಸ್ಎನ್ಎಲ್ ಅವರು ಎಲ್ಲರಂತೆ ಬೀದಿಗಿಳಿದು ವ್ಯಾಪಾರ ಪ್ರಾರಂಭಿಸಿದ್ದಾರೆ. ಅವರು ಗ್ರಾಹಕರನ್ನು ಆಧರಿಸುವ ರೀತಿ ಬದಲಾಗಿದೆ. ಜನಸಂದಣಿ ಇರುವ ಎಲ್ಲಾ ಪ್ರದೇಶದಲ್ಲಿ ಇಂದು ಮೊಬೈಲ್ ಅಂಗಡಿಗಳಿವೆ. ಹಳ್ಳಿ ಹಳ್ಳಿಗಳ ಅಂಗಡಿಯಲ್ಲಿ ಕರೆನ್ಸಿ ಸಿಗುತ್ತಿದೆ. ಎಲ್ಲಾ ಕಡೆ ದೊಡ್ಡ ದೊಡ್ಡ ವಿವಿಧ ಕಂಪನಿಗಳ ಜಾಹೀರಾತುಗಳಿವೆ. ಒಟ್ಟಾರೆ ಹೆಚ್ಚಿನ ಜನಕ್ಕೆ ಉದ್ಯೋಗವನ್ನು ಇದು ಕಲ್ಪಿಸಿರುವುದು. ಎಲ್ಲಾ ಕಂಪನಿಗಳು ಮಾರುಕಟ್ಟೆ ವಿಸ್ತರಣೆಗಾಗಿ ಮುಖ್ಯವಾಗಿ ವಿದ್ಯಾಥರ್ಿಗಳನ್ನು ಮತ್ತು ಯುವ ಸಮೂಹವನ್ನು ಕೇಂದ್ರಿಕರಿಸಿರುವುದನ್ನು ಕಾಣಬಹುದಾಗಿದೆ.
 ಹಿಂದೆ ಸಂಬಳ ಆಗಿದೆ ಎಂಬುದನ್ನು ತಿಳಿಯಲು ಬ್ಯಾಂಕ ಹೋಗಿ ವಿಚಾರಿಸಬೇಕಾಗಿತ್ತು. ಇಲ್ಲ ಯಾರಾದರೂ ಪಟ್ಟಣಕ್ಕೆ ಹೋದ ಸಹಪಾಠಿಗಳಿಂದ ಕೇಳಿ ತಿಳಿಯಬೇಕಾಗಿತ್ತು. ಆದರೇ ಇಂದು ಹಣ ಖಾತೆಗೆ ಬಂದ 10 ನಿಮಿಷದಲ್ಲಿ ಮೆಸೇಜ ಬರುವುದು. ಬೇರೆ ಬೇರೆ ಕಂಪನಿಗಳು ತಮ್ಮ ತಮ್ಮ ವ್ಯವಹಾರವನ್ನು ಕುದುರಿಸಲು ಮೊಬೈಲ ಮುಖಾಂತರ ಜಾಹೀರಾತು ನೀಡುತ್ತಿರುವುದನ್ನು ಕಾಣಬಹುದಾಗಿದೆ.
ಆರು ವರ್ಷದ ಹಿಂದಿನ ಮಾತು ಕುಮಟಾದ ಸರ್ಕಲ್ನಲ್ಲಿ  ಹಳ್ಳಿಯಿಂದ ಬಂದ ಹೆಂಗಸರ ಗುಂಪೊಂದು ದಾರಿಯಲ್ಲಿ ಮೊಬೈಲನಲ್ಲಿ ಮಾತನಾಡುತ್ತಾ  ನಿಂತಿರುವ ಒಬ್ಬ ಗುತ್ತಿಗೆದಾರರನ್ನು ನೋಡಿ . ಅವನಿಗೆ ಮಳ್ಳ ಹಿಡಿದಿದೆ ನೋಡೇ ತನ್ನಟ್ಟಕೆ ಮಾತಡದಿಂವ್. ಸಾವಕಾರನಂಗೆ ಕಾಣುತ್ತಿಯಾ ಪಾಪ ಎಂದು ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು. ಸಂದರ್ಭದಲ್ಲಿ ಹಳ್ಳಿಗಳಲ್ಲಿ ಇನ್ನೂ ಮೊಬೈಲ್ ಬಳಕೆ ಪ್ರಾರಂಭವಾಗಿರಲಿಲ್ಲ. ಆದರೇ ಇಂದು ಎಲ್ಲಾ ಹಳ್ಳಿಗಳಲ್ಲಿಯೂ ಒಬ್ಬರೇ ಮಾತನಾಡುವವರು ಅಲ್ಲಲ್ಲಿ ಸಿಗುತ್ತಾರೇ ವ್ಯತ್ಯಾಸ ಇಷ್ಟೇ ಅವರನ್ನು ಯಾರು ಮಳ್ಳ, ಹುಚ್ಚ ಎಂದು ಪರಿಗಣಿಸುವುದಿಲ್ಲ. ನಿಜವಾಗಿ ಹುಚ್ಚನಾಗಿದ್ದರೂ ಆತನ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ.
ಮೊಬೈಲ ಬಳಕೆ ತಿಳಿಯದ ವ್ಯಕ್ತಿ ಅನಕ್ಷರಸ್ಥ ಮೊಬೈಲ ಇಲ್ಲದ ಯವಕ/ಯುವತಿ ಹಳ್ಳಿ ಗುಗ್ಗು ಎನ್ನುವಂತಹ ವಾತಾವರಣ ಸೃಷ್ಠಿಯಾಗಿರುವುದು.
ಎನ್ಡಿಎ ಸಕರ್ಾರ ಇದ್ದಾಗ ಪ್ರಮೋದ ಮಹಾಜನ ಸಂಪರ್ಕ ಕ್ರಾಂತಿಯ ಬಗ್ಗೆ ಕಂಡ ಕನಸು ಇಂದು ನನಸಾಗಿದೆ. ಆದರೇ ದುರಾದೃಷ್ಟವಶಾತ ಅವರು ನಮ್ಮೊಂದಿಗೆ ಇಲ್ಲ. ಆದರೇ ಸಂಪರ್ಕ ಕ್ರಾಂತಿಯ ಹೆಸರಿನಲ್ಲಿ ಅತಿ ದೊಡ್ಡ ಹಗರಣವನ್ನು ಮಾಡಿರುವ ಹಾಲಿ ಯುಪಿಎ ಸಕರ್ಾರದ  ರಾಜಾ ಮಾಜಿ ಮಂತ್ರಿಯಾಗಿ ನಮ್ಮೊಂದಿಗೆ ಇರುವರು. ಇದು ಕೂಡ ಮೊಬೈಲ್ ಕ್ರಾಂತ್ರಿಯ ಒಂದು ಆಯಾಮವೇ ಆಗಿರುವುದು.

ನಾವು ಬಳಸುತ್ತಿರುವ ಮೊಬೈಲ್, ಇಂಟರನೆಟ್, ರೇಡಿಯೋ, ಟಿವಿ ಇವೆಲ್ಲವು ತಂರಗಗಳ ಮೂಲಕವೇ ನಡೆಯುವುದು. ವಾತಾವರಣದಲ್ಲಿ ಮಾನವ ಸೃಷ್ಠಿತ ತರಂಗಗಳು ಹೆಚ್ಚಿದಂತೆ ಅದು ಪರಿಸರ ವಿವಿಧ ಜೀವಿಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆಅದರಲ್ಲಿಯೂ   ಮೊಬೈಲ್ ಕ್ರಾಂತಿ ಎಂದೂ ಪ್ರಾರಂಭವಾಯಿತೋ ಅಂದಿನಿಂದ ಹಳ್ಳಿ ಹಳ್ಳಿಗಳಲ್ಲಿ ಮೊಬೈಲ್ ಟವರ್ ತಲೆಎತ್ತಿತ್ತು ನಂತರದಲ್ಲಿ ಗುಬ್ಬಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹಳ್ಳಿಗಳಲ್ಲಿ ಕಡಿಮೆಯಾದರೇ ಪಟ್ಟಣದಲ್ಲಿ ಗುಬ್ಬಿಯನ್ನು ಚಿತ್ರದಲ್ಲಿ ಮಾತ್ರ ನೋಡುವಂತೆ ಆಗಿರುವುದುನಮ್ಮ ಪರಿಸರದಲ್ಲಿ ಇದ್ದ ಗುಬ್ಬಿಯಂತಹ ಹಲವಾರು ಪಕ್ಷಿ, ಕೀಟಗಳು ಸಂಪರ್ಕ ಕ್ರಾಂತಿಯಿಂದ ಮರೆಯಾಗಿರುವುದು. ಅದರಂತೆ ಮಾನವನ ಮೇಲೂ ಹಲವಾರು ದುಷ್ಪಪರಿಣಾಮಗಳು ಆಗುತ್ತಾ ಇರುವುದು. ಆದರೇ ಅದರಿಂದ ನಮಗೆ ಆಗುತ್ತಿರುವ ಉಪಯೋಗದ ಮುಂದೆ  ಏನು ಕಾಣಿಸುತ್ತಿಲ್ಲವಾಗಿದೆ. ಆದರೇ ಪ್ರಕೃತಿಯಲ್ಲಿ ನಮ್ಮ ರೀತಿಯಲ್ಲಿಯೇ ಬದುಕ ಬೇಕಾದ ಅನೇಕ ಜೀವ ಸಂಕುಲವನ್ನೇ ಆಧುನಿಕತೆಯ ಹೆಸರಿನಲ್ಲಿ ನಾಶ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ ಎಂಬುದನ್ನು ನಾವು ನೆನಪಿರಿಸಿಕೊಳ್ಳಬೇಕಾಗಿದೆ.
ಮುಂದಿನ ದಿನಗಳಲ್ಲಿ ಮೊಬೈಲ ನಮ್ಮನ್ನು ಎಲ್ಲಿ ತೆಗೆದುಕೊಂಡು ಹೋಗಿ ಮುಟ್ಟಿಸುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಬಗ್ಗೆ ಈಗಲೇ ಚಿಂತಿಸದಿದ್ದರೇ ಮುಂದಿನ ಪರಿಸ್ಥಿತಿಯನ್ನು ಎದುರಿಸಲು ಕಷ್ಟವಾಗಬಹುದು. ನಾವು ಆಧುನಿಕ ಯುಗದಲ್ಲಿ ಯಂತ್ರಗಳ ದಾಸರಾಗುವುದಕ್ಕಿಂತ ನಮ್ಮ ಅಂಕೆಯಲ್ಲಿ ಯಂತ್ರಗಳನ್ನು ಇರಿಸಿಕೊಂಡು ಮುಂದುವರೆಯುವುದನ್ನು ರೂಢಿಸಿಕೊಳ್ಳಬೇಕಾಗಿದೆ. ಒಂದಾನು ವೇಳೆ ಒಂದು ದಿನದ ಮಟ್ಟಿಗೆ ಏನಾದರೂ ಸಂಪೂರ್ಣ ಮೊಬೈಲ್ ಸಂಪರ್ಕ ನಿಂತು ಹೋದರೇ ಅದರ ಪರಿಣಾಮ ಒಂದು ಹಂತದ ಪ್ರಳಯದಂತೆ ಇರುವುದು. ಮುಂದೆ ಅದನ್ನೇ ಪ್ರಳಯದ ಮುನ್ಸುಚನೆ ಎಂದು ಕೊಳ್ಳಬಹುದು. ಪ್ರಕೃತಿಯ ಮೇಲೆ ಇದೇ ರೀತಿ ಮಾನವನ ದಬ್ಬಾಳಿಕೆ ನಡೆದರೇ ಪ್ರಕೃತಿಗೂ ತನ್ನನ್ನು ಸಮತೋಲನ ಮಾಡಿಕೊಳ್ಳುವ ವಿಧಾನ ತಿಳಿದಿದೆ ಎಂಬುದನ್ನು ನಾವು ಮರೆಯಬಾರದು.                  
ವಿವೇಕ ಬೆಟ್ಕುಳಿ ಕುಮಟಾ