ಬುಧವಾರ, ಅಕ್ಟೋಬರ್ 31, 2012

ಕನ್ನಡದ ಅಭಿವೃದ್ಧಿ



ಕನ್ನಡದ ಬಗ್ಗೆ ಅಭಿರುಚಿ ಮೂಡುವಂತೆ ಮಾಡುವುದೇ ಕನ್ನಡದ ಅಭಿವೃದ್ಧಿ
ಕನ್ನಡ ಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ, ಐತಿಹಾಸಿಕ ಹಿನ್ನಲೆ ಇರುವುದು. ಹಾಗೇ ಕನ್ನಡ ಭಾಷೆ ಸರಳ, ಸಹಜ, ಇಂಪಾಗಿರುವುದು ಕೂಡ. ಜಾಗತಿಕರಣದ ಪ್ರಭಾವದಿಂದ ಇಂದು ಎಷ್ಟೋ ಸಾಂಪ್ರದಾಯಿಕ ಕಲೆಗಳು, ವಸ್ತುಗಳು, ತಮ್ಮತನ್ನವನ್ನು ಕಳೆದುಕೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ. ಅದರಂತೆ ಜಾಗತೀಕರಣ ಹೊಡೆತ ಪ್ರಾಂತೀಯ ಭಾಷೆಗಳು ಮೇಲೂ ಆಗಿರುವುದು.  ಇಂತಹ ಸಂದಿಗ್ಧ ಸಂದರ್ಭದಲ್ಲಿ ನಮ್ಮ ಕನ್ನಡ ಭಾಷೆಯ ಮೇಲೆಯೂ ಸಹಾ ಜಾಗತಿಕರಣದ ಪ್ರಭಾವ ಉಂಟಾಗಿರುವುದು.  ಮೊದಮೊದಲು ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಕನ್ನಡದ ಕಂಪು ಕಡಿಮೆಯಾಗುತ್ತಾ ಬಂದು ಈಗ ಹಳ್ಳಿಗಳಲ್ಲಿಯೂ ಸಹಾ ಬೇರೆ ಭಾಷೆಗಳ ಪ್ರಭಾವ ಹೆಚ್ಚಾಗಿರುವುದನ್ನು ಗಮನಿಸಬಹುದಾಗಿದೆ.
ಕನ್ನಡ ಭಾಷೆಯ ಏಳ್ಗೆಗಾಗಿ ಕಾ೯, ಹತ್ತು ಹಲವಾರು ಸಂಘಟನೆಗಳು. ರಾಜಕೀಯ ಪಕ್ಷಗಳು, ಸಾಹಿತಿಗಳು ಹೀಗೆ ಅನೇಕರು ಅವರದೇ ಆದ ರೀತಿಯಲ್ಲಿ ಪ್ರಯತ್ನ ಪಡುತ್ತಲೇ ಇರುವರು. ಆದರೇ ಎಲ್ಲಾ ಪ್ರಯತ್ನಗಳಿಂದ ಹೇಳಿಕೊಳ್ಳುವಂತಹ ಭಾಷೆಯ ಏಳ್ಗೆ ನೀರಿಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ.
ಕನ್ನಡ ಭಾಷೆಯ ಬಗ್ಗೆ ನಾವು ಜಾಗ್ರತವಾಗುವುದು ಒಂದು ಕಾವೇರಿ ನೀರು, ಕನ್ನಡ ರಾಜ್ಯೋತ್ಸವ, ಸಾಹಿತ್ಯ ಸಮ್ಮೆಳನ, ಉಳಿದಂತೆ ಸಭೆ ಸಮಾರಂಭಗಳಲ್ಲಿ ಮಾತ್ರವಾಗಿದೆ. ನಮ್ಮಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ನಿರಂತರ ಕಟ್ಟುವ ಕಾರ್ಯ ನಡೆದಿಲ್ಲ ಎಂಬುದು ಅಕ್ಷರಶಹ ಸತ್ಯವಾಗಿದೆ.
ಭಾಷೆಯ ಅಭಿರುಚಿಯನ್ನು ಜನರಲ್ಲಿ ಹೆಚ್ಚಿಸಿ ಅದನ್ನು ಉಳಿಸಿಕೊಳ್ಳಬೇಕು ಬದಲಾಗಿ ಯಾವುದೇ ಕಾನೂನು, ನಿಯಮದಿಂದ, ಬಲವಂತದಿಂದ ಭಾಷೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಿರುವುದಿಲ್ಲ. ಮುಖ್ಯವಾಗಿ ಭಾಷೆಯ ಪ್ರಭಾವಶಾಲಿ ಚಲನೆ ಇರುವುದು ವಿವಿಧ ಮಾಧ್ಯಮ ಮತ್ತು ಶಾಲೆಯಲ್ಲಿ ಆಗಿರುವುದು. ಆದ್ದರಿಂದ ಮಾಧ್ಯಮ ಮತ್ತು ಶಾಲೆಯಲ್ಲಿ ಕನ್ನಡದ ಬಗ್ಗೆ ಅಭಿರುಚಿ ಮೂಡಿಸುವಂತಹ ಕಾರ್ಯವನ್ನು ಮಾಡಬೇಕಾಗಿದೆ.
ನಮ್ಮ ರಾಜ್ಯದಲ್ಲಿ 50 ಸಾವಿರಕ್ಕೂ ಅಧಿಕ ಸಕರ್ಾರಿ ಶಾಲೆಗಳಿವೆ ಕನ್ನಡ ಭಾಷೆಯನ್ನು ಏನಾದರೂ ಅಭಿವೃದ್ಧಿ ಪಡಿಸಬೇಕೆಂದರೆ ಮುಂಚೆ ಶಾಲೆಗಳಿಂದಲ್ಲೇ ಕಾರ್ಯ ಪ್ರಾರಂಭವಾಗಬೇಕಾಗಿದೆ. ಆದರೇ ದುರಾದೃಷ್ಟವಶಾತ ನಮ್ಮ ಕಾ೯ರಿ ಶಾಲೆಗಳ ಬಗ್ಗೆ ನಮಗೆ ನಂಬಿಕೆ ಇಲ್ಲವಾಗಿದೆ. ಕನ್ನಡದ ಬಗ್ಗೆ ಹೋರಾಟ ಮಾಡುವ ಪಕ್ಷ, ಸಂಘಟನೆ, ಕವಿಗಳು, ಸಾಹಿತಿಗಳು, ರಾಜಕಾರಣಿಗಳು ಒಟ್ಟಾರೆ ಭಾಷಣ ಮಾಡುವ ಎಲ್ಲಾ ಅರ್ಹತೆ ಮತ್ತು ಹುದ್ದೆ ಪಡೆದವರ ಮಕ್ಕಳು ಮೊಮ್ಮಕ್ಕಳು 90 ಶೇಕಡಾಕ್ಕೂ ಅಧಿಕ ಮಂದಿ ಇಂಗ್ಲೀಷ ಅಥವಾ ಖಾಸಗಿ ಶಾಲೆಯಲ್ಲಿಯೇ ಇರುವುರು. ಸಕರ್ಾರಿ ಶಾಲೆಯಲ್ಲಿ ಪಾಠ ಮಾಡುತ್ತಿರುವ 90 ಶೇಕಡಾ ಶಿಕ್ಷಕರ ಮಕ್ಕಳು ಓದುತ್ತಿರುವುದು ಖಾಸಗಿ ಶಾಲೆಯಲ್ಲಿಯೇ ಆಗಿರುವುದು. ವ್ಯವಸ್ಥೆಯಲ್ಲಿ ಪ್ರಮುಖ ಹುದ್ದೆಯಲ್ಲಿರುವವರಿಗೆ ವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲದ ಮೇಲೆ ವ್ಯವಸ್ಥೆಯ ಪ್ರಮುಖ ಭಾಗೀದಾರರಾದ ಸಾಮಾನ್ಯ ಜನರಿಗೆ ಹೇಗೆ ತಾನೇ ನಂಬಿಕೆ ಬರಲು ಸಾಧ್ಯ? ದಿನ ಕಳೆದಂತೆ  ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ಕನ್ನಡ ಭಾಷೆಯ ಶಿಕ್ಷಣ, ಕಾ೯ರಿ ಶಾಲೆ ಬಗ್ಗೆ ಪ್ರಶ್ನೆಗಳು ಬರುತ್ತಲ್ಲೇ ಇರುವುದು.
ಕನ್ನಡ ಮಾಧ್ಯಮದಲ್ಲಿ ನಾನು ವಿಜ್ಞಾನದಲ್ಲಿ ಪದವಿ ಪಡೆಯಲು ಬಯಸಿದರೇ ಅದಕ್ಕೆ ಅವಕಾಶ ಇಲ್ಲ, ಇದ್ದರೇ ಅದಕ್ಕೆ ಯೋಗ್ಯವಾದ ಕನ್ನಡ ಪುಸ್ತಕಗಳಿಲ್ಲ. ದೊಡ್ಡ ದೊಡ್ಡ ಪಟ್ಟಣಕ್ಕೆ ಹೋಗಿ ಯಾವುದೇ ಕಂಪನಿಯಲ್ಲಿ ಕಾರ್ಯನಿರ್ವಹಿಸಲು ಕೇವಲ ಕನ್ನಡ ಸಾಕಾಗುವುದಿಲ್ಲ. ಅನಿವಾರ್ಯವಾಗಿ ನಾವು ಇಂಗ್ಲೀಷ ಭಾಷೆಯನ್ನು ತಬ್ಬಿಕೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ. ಇಂಗ್ಲೀಷ ಭಾಷೆಯ ಹಿಡಿತದಿಂದ ಅವಕಾಶಗಳು ಹೆಚ್ಚಿಗೆ ಇರುವುದು ಎಂಬುದು ಎಲ್ಲರಿಗೂ ಅರ್ಥವಾಗಿದೆ. ರೀತಿಯ ಸಂದರ್ಭದಲ್ಲಿ ನಮ್ಮ ಕನ್ನಡ ಭಾಷೆಯನ್ನು ಹೇಗೆ ಬೆಳಸಿಕೊಂಡು ಹೋಗಬೇಕು ಎಂಬುದರ ಬಗ್ಗೆ ಚಿಂತನೆ ಆಗಲೇ ಬೇಕಾಗಿದೆ.
 ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ತಿಂಗಳುಗಳ ಕಾಲ ವಿವಿಧ ಮನರಂಜನೆ ಕಾರ್ಯಕ್ರಮಗಳು ನಡೆಯುವುದು, ಭಾಷೆಯ ಅಭಿವೃದ್ಧಿಗಾಗಿ ದೊಡ್ಡ ದೊಡ್ಡ ಘೋಷಣೆಗಳು ಹೊರಬೀಳುವುದು. ವಿವಿಧ ಭಾಷಣ ಭರವಸೆಗಳ ಮಹಾಪೂರವೇ ಹರಿಯುವುದು. ಎಲ್ಲಾ ರೀತಿಯ ಕಾರ್ಯಕ್ರಮಗಳಿಂದ ವರ್ಷದ ಕನ್ನಡ ರಾಜ್ಯೋತ್ಸವ ವಿಜ್ರಂಭಣೆಯಿಂದ ಆಯಿತು ಎಂದು ಹೇಳಬಹುದೇ ವಿನಹಾ ಕನ್ನಡ ಭಾಷೆಗೆ ಏನು ಪ್ರಯೋಜನ ಆಯಿತು ಎಂಬುದನ್ನು ಹೇಳಲು ಸಾಧ್ಯವಿಲ್ಲವಾಗಿದೆ.
ನಮ್ಮ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆಯ ಭೋದನೆಯ ಬಗ್ಗೆ ಗಮನಿಸುವ ಅಗತ್ಯವಿದೆ. ನಮ್ಮ ಎಲ್ಲಾ ಕನ್ನಡ ಶಾಲೆಗಳಲ್ಲಿ ಜಗತ್ತಿನ ಎಲ್ಲಾ ಬಗ್ಗೆಯ ಮಾಹಿತಿಗಳು ಕನ್ನಡ ಪುಸ್ತಕದಲ್ಲಿಯೇ ಸಿಗುವಂತಹ ವ್ಯವಸ್ಥೆ ಆಗ ಬೇಕಾಗಿದೆ. ಇಂಗ್ಲೀಷ್, ಹಿಂದಿ ಇತರ ಅನೇಕ ಭಾಷೆಗಳಲ್ಲಿ ಇರುವ ವಿಜ್ಞಾನ, ಗಣಿತ, ಸಾಹಿತ್ಯ, ತಂತ್ರಜ್ಞಾನ ಹೀಗೆ ಎಲ್ಲಾ ಬಗೆಯ ಪುಸ್ತಕಗಳು ಕನ್ನಡಕ್ಕೆ ಅನುವಾದಿಸುವ ಕಾರ್ಯ ಹೆಚ್ಚು ಹೆಚ್ಚು ಆಗಬೇಕಾಗಿದೆ ಅದರ ವಿತರಣೆ ಎಲ್ಲಾ ಸಕರ್ಾರಿ ಶಾಲೆಗಳಿಗೂ ಕಡ್ಡಾಯವಾಗಿ ಆಗಬೇಕಾಗಿದೆ. ನಮ್ಮ ಶಾಲೆ, ಗ್ರಂಥಾಲಯ ಕನ್ನಡ ಭಾಷೆಯಲ್ಲಿಯೇ ಜಗತ್ತಿನ ಬಗ್ಗೆ ತಿಳಿಸುವ ಮಾಹಿತಿ ಕೇಂದ್ರಗಳಾಗುವಂತೆ ಗಮನಹರಿಸಬೇಕಾಗಿದೆ. ನಮ್ಮ ಪ್ರತಿ ಬಾರಿಯ ರಾಜ್ಯೋತ್ಸವಕ್ಕೆ ಪ್ರತಿ ಶಾಲೆಗೂ ಅನೇಕ ಪುಸ್ತಕಗಳು ಸಿಗುವಂತ ವ್ಯವಸ್ಥೆ ಆಗಬೇಕಾಗಿದೆ. ಮಾದ್ಯಮಗಳು ಕೂಡ ದೇಶ ವಿದೇಶದ ಮಾಹಿತಿಯನ್ನು ಕನ್ನಡದಲ್ಲಿ ತಿಳಿಸುವಂತೆ ಮಾಡಬೇಕು. ಯಾರು ಏನೇ ಓದಲು ತಿಳಿಯಲು ಪ್ರಯತ್ನಿಸಿದರೂ ಅದೂ ಕನ್ನಡದಲ್ಲಿ ಸಿಗುವಂತೆ ಮಾಡಬೇಕಾಗಿದೆ.
ಕನ್ನಡ ತಂತ್ರಾಶದ ಬಗ್ಗೆ ವ್ಯಾಪಕ ಪ್ರಚಾರ, ವಿವಿಧ ಕನ್ನಡ ವೆಬ್ತಾಣಗಳ ರಚನೆ ಆಗಬೇಕಾಗಿದೆ. ಕನ್ನಡ ಭಾವುಟ ಹಾರಿಸುವುದು, ಕೂಗುವುದು, ಎಮ್ಮೆಗಳ ಮೆರವಣಿಗೆ ಮಾಡುವುದು, ಎಡಬಿಡಂಗಿ ರಾಜಕಾರಣಗಳ ಮಾತಿಗೆ ವಿರೋಧ ವ್ಯಕ್ತಪಡಿಸಿ ಹರತಾಳ, ಮೆರವಣಿಗೆ ಮಾಡುವುದು ಇವುಗಳಿಂದ ತಾತ್ಕಾಲಿಕವಾದ ಕನ್ನಡ ಟಿವಿಯಲ್ಲಿ ಸುದ್ದಿ ಬರಬಹುದೇ ವಿನ: ಭಾಷೆಯ ಅಭಿವೃದ್ಧಿ ಖಂಡಿತಾ ಸಾಧ್ಯವಿಲ್ಲ.
ಒಂದು ಭಾಷೆಯ ಬೆಳವಣಿಗೆ ಆಗಬೇಕು ಎಂದರೆ ಅದು ಭಾಷೆಯನ್ನು ಹೆಚ್ಚು ಹೆಚ್ಚು ಜನರು ಬಳಸಿದರೆ ಮಾತ್ರ ಸಾಧ್ಯವಿರುವುದು. ಬದಲಾಗಿ ಇನ್ನೊಂದು ಭಾಷೆಯನ್ನು ವಿರೋಧಿಸುವುದು, ಅನ್ಯ ಭಾಷೆಯನ್ನಾಡುವ ಜನರನ್ನು ವಿರೋಧಿಸುವುದು ಇದು ನಮಗೆ ನಮ್ಮ ಭಾಷೆ ಮತ್ತು ರಾಜ್ಯದ ಬಗ್ಗೆ ಇರುವ ಭಯವನ್ನು ಸೂಚಿಸುವುದೇ ವಿನಹ ಇದರಿಂದ ಯಾವುದೇ ಬದಲಾವಣೆ ಖಂಡಿತಾ ಆಗುವುದಿಲ್ಲ. ನಾವು   ರಾಷ್ಟ್ರಕವಿ ಕುವೆಂಪು ಆಶಿಸಿರುವಂತೆ ವಿಶ್ವಮಾನವರಾಗಿ ಕನ್ನಡ ಉಳಿಸಿ ಬೆಳಸುವ ಕಾರ್ಯವನ್ನು ಮಾಡಬೇಕಾಗಿದೆ. ಬದಲಾಗಿ ಕುವೆಂಪು, ಬಸವಣ್ಣ, ಕನಕದಾಸ ಇಂತಹ ವ್ಯಕ್ತಿಗಳನ್ನೇ ನಮ್ಮ ಜಾತಿಯ ವ್ಯಕ್ತಿಗಳೆಂದು ಹೇಳುತ್ತಾ ಅವರನ್ನು ರಾಜ್ಯಕ್ಕೆ, ಒಂದು ಧರ್ಮಕ್ಕೆ, ಜಾತಿಗೆ, ಪಂಗಡಕ್ಕೆ ಸೀಮಿತಪಡಿಸುವುದರಲ್ಲಿ ಯಾವ ಪ್ರಯೋಜನವು ಇಲ್ಲ. ಬದಲಾಗಿ ನಾವೆಲ್ಲರೂ ಒಟ್ಟಾಗಿ ಕನ್ನಡವನ್ನು ಸಕಾರಾತ್ಮಕವಾಗಿ ಬೆಳಸುವ ದಿಶೆಯಲ್ಲಿ ನಿರಂತರವಾಗಿ ಪ್ರಯತ್ನಿಸಬೇಕಾಗಿದೆ.

                                                                                                                                                             ವಿವೇಕ ಬೆಟ್ಕುಳಿ ಕುಮಟಾ

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...