ಸೋಮವಾರ, ಡಿಸೆಂಬರ್ 2, 2013

ಹಿಮಾಲಯ-ಸಾಗರ-ನಾವು

ಹಿಮಾಲಯ-ಸಾಗರ-ನಾವು










ಕಣ್ಣು ಮುಟ್ಟುವ ತನಕ ಪರ್ವತಗಳೆ ಕಾಣುವ
ಹಿಮಾಲಯ ಶಾಂತವಾಗಿರುವುದು.
ಕಣ್ಣು ಮುಟ್ಟುವ ತನಕ ನೀರೇ  ಕಾಣುವ ಸಾಗರ
ಪ್ರಶಾಂತವಾಗಿರುವದು.
ಇವುಗಳನ್ನು ಗಮನಿಸಿಯೂ ಶಾಂತಿಯಿಂದ ಬದುಕದ ನಾವು ಮೂರ್ಖರಲ್ಲವೇ?






ಶನಿವಾರ, ನವೆಂಬರ್ 2, 2013

ರಾಜ್ಯೋತ್ಸವದ ಸಂದರ್ಭದಲ್ಲಿ ಒಂದು ಬಹಿರಂಗ ಪತ್ರ




ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಒಂದು ಬಹಿರಂಗ ಪತ್ರ
ಮಕ್ಕಳನ್ನು, ಮೊಮ್ಮಕ್ಕಳನ್ನು ಇಂಗ್ಲೀಷ ಮಾಧ್ಯಮ ಶಾಲೆಗೆ ಕಳಿಸಿ ಕನ್ನಡದ ವಿವಿಧ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹಂತದ ಪದಾಧಿಕಾರಿಗಳೇ.
ಶಿಕ್ಷಣವನ್ನು ಒಂದು ವ್ಯವಹಾರ ಮಾಡಿಕೊಂಡು ಹಲವಾರಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಕಾ೯ರಿ ಶಾಲೆಯ ವ್ಯವಸ್ಥೆಯನ್ನು ಹಾಳುಗೆಡಹುತ್ತಿರುವ ಜನಪ್ರತಿನಿಧಿಗಳೇ. ( ಗ್ರಾಮ ಪಂಚಾಯಿತಿಯಿತ್ ಸದಸ್ಯರಿಂದ ಶಾಸಕ, ಮಂತ್ರಿ, ಸಂಸದರವರೆಗೆ)
ಕಾ೯ರಿ ಸಂಬಳವನ್ನು ತಿನ್ನುತ್ತಾ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಾ ಕಾ೯ ಯಾವ ವ್ಯವಸ್ಥೆಯ ಬಗ್ಗೆ ಸ್ವತ: ನಂಬಿಕೆ ಇಲ್ಲದ ಕಾ೯ರಿ ನೌಕರರೇ, 
ತಾನು ಸೇವೆ ಸಲ್ಲಿಸುವ ಶಾಲೆ ಅಥವಾ ಕಾ೯ರಿ ಶಾಲೆಯಲ್ಲಿ ಮಕ್ಕಳನ್ನು ಸೇರಿಸಲು ಹಿಂಜರಿಯುತ್ತಿರುವ ಸಮಾಜದ ಸುಧಾರಕ ಶಿಕ್ಷಕ ಬಂದುಗಳೇ,   
 ತಮ್ಮ ಮಕ್ಕಳು ಮೊಮ್ಮಕ್ಕಳನ್ನು ಇಂಗ್ಲೀಷ ಮಾಧ್ಯಮದ ಶಾಲೆಯಲ್ಲಿ ಓದಿಸುತ್ತಾ ಕಾ೯ರಿ ಶಾಲೆಯ ಸುಧಾರಣೆ ಬಗ್ಗೆ ಮಾತನಾಡುತ್ತಾ ಅವರ ಹೆಸರಿನಲ್ಲಿ ಬೇರೆ ಬೇರೆ ಕಡೆಯಿಂದ ಹಣವನ್ನು ತಂದು ಕಾರ್ಯನಿರ್ವಹಿಸುತ್ತಿರುವ ವಿವಿಧ ಸಮಾಜ ಸೇವಾ ಸಂಸ್ಥೆಯ ನಿಧೇ೯ಶಕ ಮಹಾಶಯರೇ ಹಾಗೂ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹಂತದ ಸಿಬ್ಬಂದಿಗಳೇ,
                                                                                                                                                                                                           ನೀವು ಎಲ್ಲರೂ ಸೇರಿ ಯಾರನ್ನು  ಸುಧಾರಣೆ ಮಾಡಲು ಪ್ರಯತ್ನಿಸುತ್ತಿರುವಿರಿ? ಯಾಕಾಗಿ ನಾಟಕ? ಇನ್ನೂ ಎಷ್ಟು ದಿನ ನಿಮ್ಮ ದ್ವಂದವನ್ನು ನೋಡುತ್ತಾ ನಿಮ್ಮನ್ನು ನಂಬಿ ಸುಧಾರಣೆ ಆಗುವುದು ಎಂದು ಭರವಸೆ ಇಟ್ಟುಕೊಳ್ಳಬೇಕು?
ನೀವು ಹೇಳುತ್ತಿರುವ ಬದಲಾವಣೆ/ಸುಧಾರಣೆ ಬಗ್ಗೆ ನಿಮಗೆ ನಂಬಿಕೆ ಇಲ್ಲದ ಮೇಲೆ ಬೇರೆ ಯಾರು ಯಾಕಾಗಿ ನಿಮ್ಮನ್ನು ನಂಬಬೇಕು? ಸಕರ್ಾರಿ ಶಾಲೆಯಾಗಿರಬಹುದು, ಆರೋಗ್ಯ ಕೇಂದ್ರವಾಗಿರಬಹುದು, ಇವೆಲ್ಲಾ ನಿಮಗೆ ನೌಕರಿ ಒದಗಿಸಲು ಮಾತ್ರ ಅಗತ್ಯವೇ?
 ನೀವು ಮಾಡುತ್ತಿರುವುದು ಒಂದು ರೀತಿ ದಬ್ಬಾಳಿಕೆ ಅಲ್ಲವೇ?
ನಿಮಗೆ ಬ್ರಿಟಿಷರಿಗೆ ಏನು ವ್ಯತ್ಯಾಸ? ಇನ್ನೂ ಎಷ್ಟು ದಿನ ರೀತಿಯ ವ್ಯವಸ್ಥೆಯನ್ನು ಸಹಿಸಿಕೊಳ್ಳುತ್ತಾ ನಿಮ್ಮನ್ನು ನಂಬಬೇಕು?                                                                           ನಮ್ಮ ತಾಳ್ಮೆಗೂ ಒಂದು ಮಿತಿಯಿದೆ. ಅದು ನಿಮಗೆಲ್ಲರಿಗೂ ಅರ್ಥವಾಗುವುದು ಎಂದು ಭಾವಿಸಿರುವೆವು. ಅರ್ಥಮಾಡಿಕೊಂಡು ಅದನ್ನು ಸರಿಪಡಿಸಲು ತಮ್ಮಿಂದ ಆಗಿರುವ ತಪ್ಪನ್ನು ಸರಿಪಡಿಸಲು ಒಂದೊಂದು ನಿಧಾ೯ರವನ್ನು ತಾವು ಕೈಗೊಳ್ಳುವಿರೆಂದು ನಂಬಿರುವೆವು.    ದಯವಿಟ್ಟು ನಮ್ಮೆಲ್ಲರ ನಂಬಿಕೆಯನ್ನು ಉಳಿಸಿಕೊಳ್ಳಿರಿ. ಬಲಿಷ್ಠ ಒಂದು ನಾಡನ್ನು ಕಟ್ಟಲು ನಾವೆಲ್ಲರೂ ಪ್ರಯತ್ನಿಸೋಣ ನಿಮ್ಮ ಎಲ್ಲಾ ರೀತಿಯ ಪ್ರಯತ್ನಕ್ಕೆ ಎಲ್ಲರೂ ಜೊತೆಯಲ್ಲಿರುವೆವು.                                                                      ಸಹನೆಯ ಕಟ್ಟೆ ಒಡೆದು ಅದು ಕ್ರಾಂತಿಯಾಗಿ ಹೊರಹೊಮ್ಮುವ ಮೊದಲು ಅದನ್ನು ಸರಿಪಡಿಸಲು ಪ್ರಯತ್ನ ನಿಮ್ಮಿಂದ ಆಗಲಿದೆ ಎಂದು ಬಯಸುವೆನು.                                                                    
                                                                                                                                             ಇಂತಿ ನಿಮ್ಮವರಾದ
                                                                                 ಒಕ್ಕೂಟ ವ್ಯವಸ್ಥೆಯ ಪ್ರಜೆಗಳು

ಶನಿವಾರ, ಅಕ್ಟೋಬರ್ 26, 2013

ನನ್ನ ಬಗ್ಗೆ ಯೋಚಿಸುವವರು ಯಾರು ಇಲ್ಲವೇ?............ಇದ್ದರೇ ನನಗೆ ಯಾಕೆ ಈ ರೀತಿ ಶಿಕ್ಷೆ?

 
 ನನ್ನ ಬಗ್ಗೆ ಯೋಚಿಸುವವರು ಯಾರು ಇಲ್ಲವೇ?............ಇದ್ದರೇ ನನಗೆ ಯಾಕೆ ಈ ರೀತಿ ಶಿಕ್ಷೆ?
ಯಾವುದೇ ಮಕ್ಕಳಿಗೆ ಮಾನಸಿಕವಾಗಿ ದೈಹಿಕವಾಗಿ ಯಾವುದೇ ಶಿಕ್ಷೆಯನ್ನು ಕೊಡಬಾರದು ಎಂದು ಕಾನೂನಿನಲ್ಲಿ ತಿಳಿಸಲಾಗಿದೆ. ಆದರೂ ನಮ್ಮ ದೇಶದ ಶಾಲೆಗಳಲ್ಲಿ ಆಗಾಗ ಮಕ್ಕಳ ಮೇಲೆ ಶಿಕ್ಷಕರಿಂದ ದೌರ್ಜನ್ಯ ನಡದೆ ಇರುವುದು. ಆಗಾಗ ದೌರ್ಜನ್ಯದಿಂದ ಮಗುವಿನ ಪ್ರಾಣದ ಮೇಲೆ ಅಪಾಯವಾದಾಗ ಮಾತ್ರ ಈ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಬರುವುದು. ಇಲ್ಲವಾದರೇ ಆ ಬಗ್ಗೆ ಯಾವುದೇ ಸುದ್ದಿಯೂ ಇರುವುದಿಲ್ಲ................

ಮಂಗಳವಾರ, ಸೆಪ್ಟೆಂಬರ್ 17, 2013

ಬಿಸಿಯೂಟ ಯೋಜನೆ ನಮ್ಮ ದೇಶದ ಮಕ್ಕಳಿಗೆ ಅನಿವಾರ್ಯ



ಬಿಸಿಯೂಟ ಯೋಜನೆ ನಮ್ಮ ದೇಶದ ಮಕ್ಕಳಿಗೆ ಅನಿವಾರ್ಯ
ಕಾ೯ರಿ ಶಾಲೆಯಲ್ಲಿ ಬಿಸಿಯೂಟ ಯೋಜನೆ ನಡೆಯುತ್ತಿದೆ. ಯೋಜನೆಯನ್ನು ಬಂದು ಮಾಡಬೇಕು. ಇದರಿಂದ ಕಲಿಕೆ ಸರಿಯಾಗಿ ಆಗುತ್ತಿಲ್ಲ. ಶಿಕ್ಷಕರ ಮೇಲೆ ಹೆಚ್ಚಿನ ಹೊರೆ ಇರುವುದು. ಇಂದು ಎಲ್ಲ ಅಪ್ಪ ಅಮ್ಮಂದಿರು ಮಕ್ಕಳಿಗೆ ಊಟ ಹಾಕಲು ಸಕ್ಷಮರಿರುವರು ಆದ್ದರಿಂದ ಈ ಯೋಜನೆ ಬಂದು ಮಾಡಬೇಕು ಎಂದು ಶಾಲಾ ಸಮಿತಿಯ ತರಭೇತಿಗಳಲ್ಲಿ, ಕೆಲವೊಂದು ಶಿಕ್ಷಕರ ಸಭೆಯಲ್ಲಿ. ಕೆಲವೊಂದು ಜನಪ್ರತಿನಿಧಿಗಳ ಸಭೆಯಲ್ಲಿ ಆಗಾಗ ದೇಶದ ಎಲ್ಲಾ ಭಾಗದಲ್ಲಿಯೂ ಕೂಗು ಕೇಳಿಬರುವುದು. ಬಿಹಾರ ರಾಜ್ಯದಲ್ಲಿ ಬಿಸಿಯೂಟದಿಂದ ಆದ ಮಕ್ಕಳ ಸಾವಿನ ನಂತರ ಶಿಕ್ಷಕರನ್ನು ಈ ಜವಬ್ದಾರಿಯಿಂದ ಮುಕ್ತಗೊಳಿಸಬೇಕು ಎಂಬ ಕೂಗು ಇನ್ನೂ ಪ್ರಬಲವಾಗಿರುವುದು.
ವಾಸ್ತವ ಸಂಗತಿ ಎಂದರೆ ಬಿಸಿಯೂಟ ಯೋಜನೆ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವ 90% ಅಧಿಕ ಶಿಕ್ಷಕರ ಮಕ್ಕಳಾಗಲಿ, ಅಥವಾ ಆ ಬಗ್ಗೆ ದ್ವನಿ ಎತ್ತುವ ಕೆಲವು ಜನಪ್ರತಿನಿಧಿಗಳಾಗಲಿ, ಕೆಲವೊಂದು ಸಭೆಗಳಲ್ಲಿ ಬಂದು ಈ ಬಗ್ಗೆ ಮಾತನಾಡುವ ಎಲ್ಲಾ ಊರಿನಲ್ಲಿ ಇರುವ ಭಾಷಣಕಾರರ ಮಕ್ಕಳಾಗಲಿ ಯಾರು ಸಹಾ ಸಕಾ೯ರಿ ಶಾಲೆಯಲ್ಲಿ ಓದುತ್ತಿಲ್ಲ ಅವರಿಗೆ ಅದರ ಅಗತ್ಯವು ಇಲ್ಲ. ಸಕಾ೯ರಿ ಶಾಲೆಗಳಲ್ಲಿ ಓದುತ್ತಿರುವ ನಿಜವಾದ ಮಕ್ಕಳ ಪಾಲಕರಲ್ಲಿ  ಎಲ್ಲರ ಎದುರು ನಿಂತು ಮಾತನಾಡುವ ಅಭಿಪ್ರಾಯ ವ್ಯಕ್ತಪಡಿಸುವ ಸಾಮಥ್ರ್ಯ ಇರುವುದು ತುಂಬಾ ಕಡಿಮೆ ಜನರಲ್ಲಿರುವುದು. ಬಿಸಿಯೂಟ ಯೋಜನೆ ಶಾಲೆಯಲ್ಲಿ ಇರುವುದರಿಂದ ಪಾಲಕರು ಮಕ್ಕಳ ಮದ್ಯಾಹ್ನದ ಊಟದ ಬಗ್ಗೆ ಯೋಚಿಸಿದೆ ತಮ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳು ಸಹಕಾರಿಯಾಗಿರುವುದು.
 ಇಂದು ಸಕಾ೯ರಿ ಶಾಲೆಯಲ್ಲಿ ಮಕ್ಕಳು ಏನಾದರೂ ಬರುತ್ತಾ ಇದ್ದಾರೆ ಎಂದರೆ ಅದರಲ್ಲಿ ಮದ್ಯಾಹ್ನದ ಬಿಸಿಯೂಟ ಯೋಜನೆಯ ಪಾತ್ರ ಬಹುಮುಖ್ಯವಾಗಿರುವುದು ಎಂಬುದನ್ನು ನಾವು ಮರೆಯಬಾರದು. ಈ ಯೋಜನೆಯನ್ನು ಇನ್ನೂ ಅತ್ಯುತ್ತಮವಾಗಿ ಹೇಗಿ ಜಾರಿ ಮಾಡಬಹುದು ಎಂಬುದರ ಬಗ್ಗೆ ಎಲ್ಲರ ಚಚರ್ೆ ಇರಲಿ ವಿನಃ ಮಕ್ಕಳ ಹೊಟ್ಟೆಯ ಮೇಲೆ ಕಲ್ಲು ಹೊಡೆಯುವ ಬಗ್ಗೆ ಯಾರು ಯೋಚಿಸಲು ಬೇಡಿ.
ನಿಮಗಾಗಿ ಉತ್ತರಪ್ರದೇಶ ರಾಜ್ಯದ ಬರೇಲಿ ಜಿಲ್ಲೆಯ ಒಂದು ಶಾಲೆಯಲ್ಲಿ ಸರೆ ಹಿಡಿದ ಬಿಸಿಯೂಟದಲ್ಲಿನ ಮಕ್ಕಳ ಆಸಕ್ತಿಯನ್ನು ಒಮ್ಮೆ ಗಮನಿಸಿರಿ.

ಮಂಗಳವಾರ, ಜುಲೈ 16, 2013

ವಿಕೇಂದ್ರಿಕರಣದ ವ್ಯವಸ್ಥೆ



ವಿಕೇಂದ್ರಿಕರಣದ ವ್ಯವಸ್ಥೆ
(ಇಚ್ಛಾಶಕ್ತಿಯ ಕೊರತೆಯಿಂದ ತೆವಳುತ್ತಿರುವ ವಿಕೇಂದ್ರಿಕರಣ ವ್ಯವಸ್ಥೆ)
ನಮ್ಮ ದೇಶದಲ್ಲಿ ಆಡಳಿತವನ್ನು ವಿಕೇಂದ್ರಿಕರಣಗೊಳಿಸುವ ಸಂದರ್ಭದಲ್ಲಿ ಬಗ್ಗೆ ತುಂಬಾ ನಿರೀಕ್ಷೆಯಿತ್ತು. ನಿರೀಕ್ಷೆಯಲ್ಲಿಯೇ ಸ್ವತಂತ್ರ ಭಾರತದಲ್ಲಿ ಪಂಚಾಯತ ರಾಜ್ 1959 ರಲ್ಲಿ ಪ್ರಾರಂಬವಾಯಿತು. 1993 ಸಂವಿಧಾನದ 73 ತಿದ್ದುಪಡಿಯಿಂದ ಪಂಚಾಯಿತಿ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿರುವುದು. ಆದರೂ ಆಡಳಿತದ ವಿಕೇಂದ್ರಿಕರಣದ ಹಿನ್ನಲೆಯಲ್ಲಿ  ಪಂಚಾಯಿತಿಯ ಉದಯ ಅದರ ಬೆಳವಣಿಗೆಯನ್ನು ನೋಡಿದರೆ ನಾವು ವಿಕೇಂದ್ರಿಕರಣದ ಬಗ್ಗೆ ಇರಿಸಿಕೊಂಡ ಕನಸು ನನಸಾಗಿಲ್ಲ ಮತ್ತು ನನಸಾಗುವ ನಿಟ್ಟಿನಲ್ಲಿ ಕಾರ್ಯಗಳು ಜರುಗುತ್ತಿಲ್ಲ. 
ಹೌದು ವಿಕೇಂದ್ರಿಕರಣದ ಬಗ್ಗೆ ಅತಿಯಾದ ನಂಬಿಕೆ ಇತ್ತು. ಆದರೆ ನಮ್ಮ ದೇಶದಲ್ಲಿ ಇರುವ ವಿಕೇಂದ್ರಿಕರಣ ವ್ಯವಸ್ಥೆ ಒಂದು ಕಾರ್ಯ ಜಾರಿಗೊಳಿಸುವ ವ್ಯವಸ್ಥೆಯಾಗಿ ಇರುವುದೇ ವಿನ: ಜನರಿಂದ ಜನರೇ ಮಾಡಿದ ಯೋಜನೆಯಿಂದ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿ ರೂಪುಗೊಳದೇ ಇರುವುದು ಕಂಡುಬರುವುದು. ಇಂದಿಗೂ ನಮ್ಮ ಆಡಳಿತ ವ್ಯವಸ್ಥೆ ರಾಜ್ಯ ಹಂತದಲ್ಲಿಯೇ ಕೇಂದ್ರಿಕೃತವಾಗಿರುವುದು.
ವಿಕೇಂದ್ರಿಕರಣ ವ್ಯವಸ್ಥೆ ಅಧಿಕೃತವಾಗಿ ನಮ್ಮ ದೇಶದಲ್ಲಿ ಜಾರಿಯಾದ ದಿನದಿಂದ ಇಂದಿನವರೆಗೆ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಸಾಕಷ್ಟು ಕಾನೂನು ತಂದಿರುವೆವು, ಸಾಕಷ್ಟು ಸಮಿತಿಯನ್ನು ನೇಮಕ ಮಾಡಿರುವೆವು ಆದರೇ ಇವೆಲ್ಲವುಗಳ ಪರಿಣಾಮ ಮಾತ್ರ ನೀರಿಕ್ಷಿತ ಪ್ರಮಾಣದಲ್ಲಿ ಆಗಿರುವುದಿಲ್ಲ.  
 ಗ್ರಾಮ, ತಾಲ್ಲೂಕು, ಜಿಲ್ಲೆಯ ಹಂತದಲ್ಲಿ ಪಂಚಾಯಿತಿ ವ್ಯವಸ್ಥೆ ಇರುವುದು. ನಿಯಮದಂತೆ 29 ಇಲಾಖೆಗಳ ಜವಬ್ದಾರಿಯೂ ಪಂಚಾಯಿತಿಯದ್ದಾಗಿರುವುದು. ಆದರೇ ನಿಜವಾಗಿ ರೀತಿಯ ಕಾರ್ಯವಾಗುವುದನ್ನು ನೋಡುತ್ತಿಲ್ಲ ಬದಲಾಗಿ ಪ್ರತಿಯೊಂದಕ್ಕೂ ರಾಜ್ಯ ಕಾ೯ರ ರದ ಮೇಲೆಯ ಅವಲಂಬಿತವಾಗಿವೆವು. ರಾಜ್ಯ ಕಾ೯ರದ ಅನುಧಾನ, ರಾಜ್ಯ ಅಥವಾ ಕೇಂದ್ರ ಕಾ೯ ಘೋಷಿಸುವ ಯೋಜನೆ ಅದನ್ನು ಜಾರಿಗೊಳಿಸುವ ಮದ್ಯಂತರ ವ್ಯವಸ್ಥೆಯಾಗಿ ನಮ್ಮ ಪಂಚಾಯತ್ ರಾಜ್ಯ ವ್ಯವಸ್ಥೆ ರೂಪುಗೊಂಡಿರುವುದು.   ಪಂಚಾಯತ್ ವ್ಯವಸ್ಥೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸನ್ನು ಸಾಧಿಸದೇ ಇರಲು ಕಾರಣವೇನು ಎಂಬುದರ ಬಗ್ಗೆ ಅವಲೋಕಿಸಿದಾಗ ಸಾಕಷ್ಟು ಕಾರಣಗಳು ಕಂಡು ಬರುವುದು ಮುಖ್ಯವಾಗಿ ಅವನ್ನು ಕೆಳಗಿನಂತೆ ಗುರುತಿಸಬಹುದಾಗಿದೆ.
 ಸಂಪನ್ಮೂಲದ ಕೊರತೆ :
ಇಂದು ನಮ್ಮ ಪಂಚಾಯತ್ ರಾಜ್ಯ ಸಂಸ್ಥೆಗಳಿಗೆ ಸಂಪನ್ಮೂಲದ ಕೊರತೆ ಕಂಡು ಬರುವುದು. ಎಲ್ಲಾ ಯೋಜನೆಗಳನ್ನು ಪಂಚಾಯತ್ ವ್ಯವಸ್ಥೆ ಮೂಲಕವೇ ಜಾರಿಗೊಳಿಸುತ್ತಿರುವೆವು. ಯೋಜನೆ ಮತ್ತು ಹಣ ಎರಡು ಬರುತ್ತಿರುವುದು ಅದನ್ನು ಜಾರಿಗೊಳಿಸುವ ಮಧ್ಯವತಿ೯ಯಾಗಿ ಪಂಚಾಯಿತಿ ರಾಜ್ ವ್ಯುವಸ್ಥೆ ರೂಪಗೊಂಡಿರುವುದು. ತನ್ನದೇ ಆದ ರೀತಿಯಲ್ಲಿ ಸಂಪನ್ಮೂಲ ಸಂಗ್ರಹಿಸಿ ಯೋಜನೆ ಮಾಡುವಲ್ಲಿ ಸಂಸ್ಥೆಗಳು ವಿಫಲವಾಗುತ್ತಿರುವುದು. ಕೇಂದ್ರ ರಾಜ್ಯಗಳು ಸಹಾ ಕೇವಲ ಸಂಪನ್ಮೂಲ ನೀಡಿ ತಮಗೆ ಬೇಕಾದ ಯೋಜನೆ ಮಾಡಿ ಜಾರಿಗೊಳಿಸಲು ತಿಳಿಸುವ ಬದಲು ಹಣದೊಂದಿಗೆ ಬಳಸುವ ವಿಧಾನದ ಬಗ್ಗೆ ಚೌಕಟ್ಟು ನೀಡುತ್ತಿರುವರು ಇದು ಸ್ವಂತತ್ರವಾಗಿ ಯೋಚನೆಯನ್ನು ಮಾಡಲು ತೊಡಕಾಗಿರುವುದು.
ರಾಜಕೀಯ ಇಚ್ಛಾಶಕ್ತಿಯ ಕೊರತೆ :
ಸ್ಥಳೀಯ ಆಡಳಿತಕ್ಕೆ ಎಲ್ಲಾ ಅಧಿಕಾರವನ್ನು ಹಸ್ತಾಂತರಿಸುವ ಮೂಲಕ ಗ್ರಾಮೀಣ ಸ್ವರಾಜ ಕಲ್ಪನೆಯನ್ನು ಸಾಕಾರಗೊಳಿಸಲು ಒಂದು ಗಟ್ಟಿ ಒಮ್ಮತದ ನಿಧಾ೯ರಕ್ಕೆ ಬರಲು ನಮ್ಮ ಎಲ್ಲಾ ನಾಯಕರಿಗೆ ಇಚ್ಛಾಶಕ್ತಿಯ ಕೊರತೆ ಇರುವುದು. ಅಧಿಕಾರ ತಮ್ಮಿಂದ ದೂರವಾಗುವುದೆಂಬ ಭಯ ಅವರಲ್ಲಿದೆ. ನಮ್ಮ ಎಲ್ಲಾ ರಾಜಕೀಯ ನಾಯಕರಿಗೆ ಕೇಂದ್ರ ರಾಜ್ಯ ಹಂತದಲ್ಲಿ ನಡೆಯುವ ಕೋಟ್ಯಾಂತರ ರೂಪಾಯಿ ಅವ್ಯವಹಾರ, ಭೃಷ್ಟಾಚಾರ ದೊಡ್ಡದಾಗಿ ಕಾಣುತ್ತಿಲ್ಲ. ಬದಲಾಗಿ ಪಂಚಾಯಿತಿ ಹಂತದಲ್ಲಿ ನಡೆಯುವ ಭೃಷ್ಟಾಚಾರ ಬಹು ದೊಡ್ಡದಾಗಿ ಕಾಣುತ್ತಿರುವುದು ಮತ್ತು ಆದ್ದರಿಂದಲ್ಲೇ ಪಂಚಾಯಿತಿಗೆ ಹೆಚ್ಚಿನ ಅಧಿಕಾರ ಸಿಗಬಾರದು ಎಂಬ ಭ್ರಮೆಯಲ್ಲಿ ಇರುವರು. ಇಚ್ಛಾಶಕ್ತಿ ಇರುವಂತಹ ನಾಯಕರಿಗೆ ನಾಯಕರ ಅಭಿಪ್ರಾಯಕ್ಕೆ ಪ್ರಸ್ಥುತ ರಾಜಕೀಯದಲ್ಲಿ ಬೆಲೆಯೆ ಇಲ್ಲ ಎನ್ನುವಂತಹ ಪರಿಸ್ಥಿತಿ ಇರುವುದು.
ಅಧಿಕಾರಿ ಶಾಹಿಯ ಅಸಡ್ಡೆ :
ಪಂಚಾಯಿತಿಯ ಕಲ್ಪನೆಯ ಬಗ್ಗೆ ಅದನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಅಧಿಕಾರಿ ವರ್ಗದ ಪಾತ್ರ ಬಹು ಮುಖ್ಯವಾಗಿರುವುದು. ಆದರೇ ದುರಾದೃಷ್ಟವಶಾತ ಅಧಿಕಾರಿಗಳು ಕೇವಲ ಕಾರ್ಯಕ್ರಮ ಜಾರಿಗೊಳಿಸುವ ಯಂತ್ರದಂತೆ ಕಾರ್ಯನಿರ್ವಹಿಸುತ್ತಿರುವುದನ್ನು ಕಾಣುವೆವು. ಎಲ್ಲೋ ಒಂದು ಕಡೆ ಪಂಚಾಯಿತಿಯೇ ಎಲ್ಲಾ ಕಾರ್ಯವನ್ನು ನಿಭಾಯಿಸಲು ಪ್ರಾರಂಭಿಸಿದರೆ ತಮ್ಮ ಕಾರ್ಯ ನಿರ್ವಹಣೆಗೆ ತೊಡಕಾಗಬಹುದು ಎಂಬ ಭ್ರಮೆ ಇರುವುದು. ಆದ್ದರಿಂದ ಬಹುತೇಕ ಅಧಿಕಾರಿಗಳು ಪಂಚಾಯಿತಿ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಯೋಚಿಸುತ್ತಿಲ್ಲ. ಬದಲಾಗಿ ರಾಜ್ಯ ಹಂತದ ಮುಖಾಂತರ ಮಾತ್ರವೆ ಆಡಳಿತ ಸಾಗಬೇಕು ಎಂಬ ಮನಸ್ಥಿತಿ ಇರುವುದು. ಕೆಲಸಕ್ಕಾಗಿ ಮಾತ್ರ ಗ್ರಾಮ ಜಿಲ್ಲೆ ಅಗತೖ ಆದರೇ ಹಿಡಿತ ಪೂತಿ೯ ರಾಜ್ಯದಲ್ಲಿಯೇ ಇರಬೇಕು ಎಂಬ ವಿಚಾರದಲ್ಲಿ ಅಧಿಕಾರಿಗಳು ಇರುವರು.  ರೀತಿಯಾಗಿ ಅಧಿಕಾರಿ ವರ್ಗದ ಅಸಡ್ಡೆ ಸಹಾ ಗ್ರಾಮ ಸ್ವರಾಜದ ಕಲ್ಪನೆ ಸಾಕಾರಗೊಳ್ಳದಿರಲು ಒಂದು ಪ್ರಮುಖ ಕಾರಣವಾಗಿದೆ.
ವಿಕೇಂದ್ರಿಕರಣದ ಕಲ್ಪನೆ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು :
ವಿಕೇಂದ್ರಿಕರಣದ ಬಗ್ಗೆ ಎಲ್ಲರಲ್ಲಿಯೂ ಸಾಮಾನ್ಯವಾದ ಸ್ಪಷ್ಟತೆ ಇಲ್ಲದೆ ಇರುವುದು ಕಂಡು ಬರುವುದು. ಪಂಚಾಯಿತಿ ಎಂಬುದು ರಾಜ್ಯ, ಕೇಂದ್ರ ಯೋಜನೆಯನ್ನು ಜಾರಿಗೊಳಿಸುವ ಮಧ್ರ್ಯವತಿ೯ಯೆಂದು ಕೆಲವರು ಭಾವಿಸಿದರೆ, ಇದೊಂದು ಇಲಾಖೆ ಎಂಬ ರೀತಿಯಲ್ಲಿ ಇನ್ನೂ ಕೆಲವರು ನೋಡುತ್ತಿರುವರು ಅದರಂತೆ ಅದರೊಂದಿಗೆ ವ್ಯವಹಾರ ಇರುವುದು. ರೀತಿಯಾದ ವಿಕೇಂದ್ರಿಕರಣದ ಬಗ್ಗೆ ಸ್ಪಷ್ಟತೆ ಇಲ್ಲದ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಮೂಲ ಗ್ರಾಮ ಸ್ವರಾಜದ ಕನಸು ನನಸಾಗಲು ಅಗತ್ಯ ಸಹಕಾರ ಸಿಗುತ್ತಿಲ್ಲವಾಗಿರುವುದು.
ಅತ್ಯುತ್ತಮ ಉದಾಹರಣೆಯ ಕೊರತೆ :
ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಾಗಿ ಇಷ್ಟು ವರ್ಷವಾದರೂ ಮಾದರಿ ಪಂಚಾಯಿತಿಗಳಾಗಿ ದೇಶದಲ್ಲಿ ಸಿಗುವ ಉದಾಹರಣೆಗಳು ತುಂಬಾ ಕಡಿಮೆ ಇರುವುದು. ಇದ್ದರೂ ವ್ಯಕ್ತಿ ಕೇಂದ್ರಿತವೂ ಅಥವಾ ಅಧಿಕಾರಿ ಕೇಂದ್ರಿಕತವಾಗಿರುವಂತಹುದ್ದೆ ಹೆಚ್ಚಾಗಿದೆ. ತಮಗೆ ಓದಗಿಸಿರುವ ಇರುವ ವ್ಯಾಪ್ತಿಯಲ್ಲಿಯೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ಇನ್ನೂ ಹೆಚ್ಚಿನ ಅವಕಾಶ ನೀಡಿದರೆ ಪಂಚಾಯತ್ ವ್ಯವಸ್ಥೆಯಿಂದ ಅಮೂಲಾಗ್ರ ಬದಲಾವಣೆ ಸಾಧ್ಯವಿದೆ ಎಂಬ ಸಂದೇಶವನ್ನು ಸಾರಲು ನಮ್ಮಲ್ಲಿ ಹೆಚ್ಚಿನ ಉದಾಹರಣೆಗಳ ಕೊರತೆ ಇರುವುದು. ದೇಶದಲ್ಲಿ ಒಂದು ಎರಡು ಉದಾಹರಣೆ ಮಾತ್ರ ಸಕಾರಾತ್ಮವಾಗಿ ಇರುವುದು ಆದರೇ ನಕಾರಾತ್ಮಕವಾಗಿ ಎಲ್ಲಾ ರಾಜ್ಯದಿಂದಲ್ಲೂ ಅತಿ ಹೆಚ್ಚಿನ ಉದಾಹರಣೆಗಲಿರುವುದು. ಕಾರಣ ಸಹಾ ಪಂಚಾಯತ್ ವ್ಯವಸ್ಥೆ ನಿಧಿ೯ಷ್ಟ ಗುರಿಯನ್ನು ತಲುಪುವಲ್ಲಿ ತೊಡಕಾಗಿರುವುದು.
ಪಕ್ಷ ರಾಜಕಾರಣ :
ಪಂಚಾಯತ್ ವ್ಯವಸ್ಥೆಯಲ್ಲಿಯೂ ಸಹಾ ಪ್ರತ್ಯಕ್ಷವಾಗಿ ಹಾಗೂ ಅಪ್ರತ್ಯಕ್ಷವಾಗಿ ಇರುವ ಪಕ್ಷ ವ್ಯವಸ್ಥೆ ಪಂಚಾಯಿತಿಯ ಕನಸನ್ನು ಕಮರಿಹಾಕಿರುವುದು. ಅಧಿಕಾರದಲ್ಲಿರುವ ಮತ್ತು ಮಾಜಿಯಾಗಿರುವ ಎಂಪಿ, ಎಂಎಲ್ಎ,  ಗಳ ಚೇಲಾಗಳಂತೆ ಪಂಚಾಯಿತಿಯ ಜನಪ್ರತಿನಿಧಿಗಳು ಕಾರ್ಯನಿರ್ವಹಿಸುವರು. ವ್ಯವಸ್ಥೆಯಿಂದ ಗ್ರಾಮ ಹಂತದಲ್ಲಿಯೂ ಸಹಾ ಪರಸ್ಪರ ಜನರ ನಡುವ ವೈಮನಸ್ಸು ಮೂಡುವಂತೆ ಮಾಡಿರುವುದು. ವೈಮನಸ್ಸಿನ ನಡುವೆ ವಿಕೇಂದ್ರಿಕರಣದ ಮೂಲ ಆಶಯವನ್ನು ಈಡೇರಿಸಲು ಪಂಚಾಯತ್ ವ್ಯವಸ್ಥೆ ವಿಫಲವಾಗಿರುವುದು.

ಹಾಗಾದರೇ ಮುಂದೇನು?
ಪಂಚಾಯತ್ ವ್ಯವಸ್ಥೆ ಏನೇ ಏಳು ಬೀಳುಗಳನ್ನು ಕಂಡರು ಅದು ನಮ್ಮ ದೇಶದಲ್ಲಿ ಕಾನೂನಿನ ರೂಪದಲ್ಲಿ ಅಸ್ಥಿತ್ವದಲ್ಲಿದೆ. ಒಂದು ಅಂಶವನ್ನು ನಾವು ಗಮನಿಸಿ ಮುಂದೆ ನಿಜವಾಗಿ ಯಾವ ರೀತಿ ವ್ಯವಸ್ಥೆ ನಮ್ಮದಾಗಬೇಕು ಎಂಬುದರ ಬಗ್ಗೆ ಗಮನಹರಿಸುವ ಅಗತ್ಯವಿದೆ. ಹಾಗೇ ಗಾಂಧಿ ಕಂಡ ಗ್ರಾಮ ಸ್ವರಾಜದ ಕನಸನ್ನು ನಮ್ಮ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಸಾಕಾರಗೊಳಿಸುವ ಬಗ್ಗೆ ಪ್ರಯತ್ನಗಳು ಸಾಗಬೇಕಾಗಿದೆ. ವಿಕೇಂದ್ರಿಕರಣವನ್ನು ನೈಜ ಅರ್ಥದಲ್ಲಿ ಜಾರಿಗೊಳಿಸುವ ಬಗ್ಗೆ ಆಳುವ ಕಾ೯ರಕ್ಕೆ  ಮನದಟ್ಟು ಮಾಡಿಕೊಡುವ ಅಗತ್ಯವಿದೆ. ಹಿನ್ನಲೆಯಲ್ಲಿ ಪಂಚಾಯತಿಗಳು ಚೌಕಟ್ಟನ್ನು ಮೀರಿ ಕಾರ್ಯ ನಿರ್ವಹಿಸಿ ತೋರಿಸುವ ಅಗತ್ಯವಿದೆ.
ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲು ಗುರುತಿಸಿಕೊಳ್ಳಬಹುದಾದ ದಾರಿಗಳನ್ನು ಕೆಳಕಂಡಂತೆ ನೋಡಬಹುದಾಗಿದೆ.
ಸಂಪನ್ಮೂಲ ಕ್ರೋಢಿಕರಣ :
ಹೆಚ್ಚಿನ ಪಂಚಾಯತಿಗಳು ತಮ್ಮ ವ್ಯಾಪ್ತಿಯಲ್ಲಿ ಏನೇ ಅಭಿವೃದ್ಧಿ ಮಾಡಲು ರಾಜ್ಯ ಅಥವಾ ಕೇಂದ್ರದ ಅನುಧಾನವನ್ನೇ ಅವಲಂಬಿಸಿರುವುದು. ಬದಲಾಗಿ ಪಂಚಾಯಿತಿ ತನ್ನ ವ್ಯಾಪ್ತಿಯಲ್ಲಿ ಸಂಪನ್ಮೂಲವನ್ನು ಸಂಗ್ರಹಿಸುವ ಬಗ್ಗೆ ಹೆಚ್ಚಾಗಿ ಯೋಚಿಸುತ್ತಿಲ್ಲ. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಸಂಪನ್ಮೂಲ ಸಂಗ್ರಹಕ್ಕಾಗಿ ಹಲವಾರು ಮೂಲಗಳಿರುವುದು. ಹಾಗೇ ಬೇರೆ ಬೇರೆ ಮೂಲಗಳಿಂದ ಸಂಪನೂಲವನ್ನು ಸಂಗ್ರಹಿಸಿ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಶ್ವತ ಸಂಪನ್ಮೂಲಕ್ಕಾಗಿ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಾಗಿದೆ(ವಾಣಿಜ್ಯ ಕಟ್ಟಡಗಳ ನಿಮಾ೯, ವಸತಿ ನಿಲಯಗಳ ನಿಮಾ೯, ಇತ್ಯಾದಿ) ರೀತಿಯಲ್ಲಿ ಸಂಪನ್ಮೂಲಗಳನ್ನು ಸಂಗ್ರಹಿಸಿ ಸ್ವಾವಲಂಬಿ ಪಂಚಾಯಿತಿಯಾಗಿ ಕಾರ್ಯನಿರ್ವಹಿಸವ ಅಗತ್ಯತೆ ಇರುವುದು. ಬಗ್ಗೆ ವಿಕೇಂದ್ರಿಕರಣದ ಬಗ್ಗೆ ಮಾತನಾಡುವವರು ಗಂಭೀರವಾಗಿ ಆಲೋಚಿಸಬೇಕಾಗಿದೆ.
ರಾಜಕೀಯ ಇಚ್ಛಾಶಕ್ತಿ :
ಪಂಚಾಯಿತಿಗಳ ಬಗ್ಗೆ ಅದರ ಕಾರ್ಯನಿರ್ವಹಣೆ ಬಗ್ಗೆ ಸಕಾರಾತ್ಮಕವಾಗಿ ಆಲೋಚಿಸುವ ಅದನ್ನು ಒಂದು ಸ್ಥಳೀಯ ಕಾ೯ರವನ್ನಾಗಿ ಒಪ್ಪಿಕೊಂಡು ಕಾರ್ಯನಿರ್ವಹಿಸುವ ಎಂಪಿ, ಎಂ ಎಲ್ ಗಳು ನಮಗೆ ಅಗತ್ಯ ಇರುವುದು. ಎಲ್ಲಾಹಂತದಲ್ಲಿನ ಜನ ಪ್ರತಿನಿಧಿಗಳಿಗೆ ವಿಕೇಂದ್ರಿಕರಣವನ್ನು ಸಾಕಾರಗೊಳಿಸುವ ಇಚ್ಛಾ ಶಕ್ತಿಯ ಅಗತ್ಯವಿದೆ. ಅದಕ್ಕಾಗಿ ಬಗ್ಗೆ ಶಾಲಾ ಪಠ್ಯಕ್ರಮದಿಂದ ಹಿಡಿದು ಸಂಸತ್ತಿನಲ್ಲಿ ನಡೆಯುವ ಚೆ೯ಯಲ್ಲಿ ಬಗ್ಗೆ ಸಕಾರಾತ್ಮವಾಗಿ ಚೆ೯ಗಳಾಗುವ ಅಗತ್ಯವಿದೆ. ಮೂಖಾಂತರ ವಿಕೇಂದ್ರಿಕರಣದ ಬಗ್ಗೆ ಎಲ್ಲರಲ್ಲಿಯೂ ಒಂದು ಕಲ್ಪನೆಯನ್ನು ಮೂಡಿಸುವುದು ಅಗತ್ಯವಿರುವುದು.
ಅಧಿಕಾರಶಾಹಿಗಳ ನಂಬಿಕೆ ಗಳಿಕೆ :
ಇಂದು ಪಂಚಾಯತ್ ರಾಜ ವ್ಯವಸ್ಥೆ ಬಗ್ಗೆ ಹೆಚ್ಚಿನ ಅಧಿಕಾರಶಾಹಿಗಳಿಗೆ ನಂಬಿಕೆ ಇಲ್ಲ.  ಕಾ೯ರದ ನಿಯಮದ ಕಾರಣದಿಂದಲ್ಲೋ, ಅಥವಾ ತಮ್ಮ ಕೆಲಸದ ಬಗ್ಗೆ ಇರುವ ಭಯದ ಕಾರಣದಿಂದಲ್ಲೋ ಅಥವಾ ಒಂದೆರಡು ಪಂಚಾಯಿತಿ ಜನ ಪತ್ರತಿನಿಧಿಗಳಿಂದ ಆದ ಕಹಿ ಘಟನೆಗಳಿಂದಲ್ಲೋ ಒಟ್ಟಾರೆ ಪಂಚಾಯಿತಿಯ ಬಗ್ಗೆ ನಂಬಿಕೆ ಇಲ್ಲವಾಗಿದೆ. ವಿಕೇಂದ್ರಿಕರಣವನ್ನು ಬಲಗೊಳಿಸುವ ಹಿನ್ನಲೆಯಲ್ಲಿ ಅಧಿಕಾರಶಾಹಿಗಳ ತೊಡಗಿಸುವಿಕೆ ಬಹುಮುಖ್ಯವಾಗಿರುವುದು. ವಿಕೇಂದ್ರಿಕರಣವನ್ನು ಸದೃಡಗೊಳಿಸುವ ಹಿನ್ನಲೆಯಲ್ಲಿ ಹಳ್ಳಿಯಲ್ಲಿ ಇರುವ ಶಿಕ್ಷಕ, ಅಂಗನವಾಡಿ ಶಿಕ್ಷಕಿಯಿಂದ ಹಿಡಿದು ಐಎಎಸ್ ಅಧಿಕಾರಿಯವರೆಗಿನ ಎಲ್ಲಾ ಹಂತದ ಅಧಿಕಾರಿಗಳು ಬಗ್ಗೆ ಸಕಾರಾತ್ಮಕವಾಗಿ ಯೋಚಿಸುವ ಅಗತ್ಯವಿದೆ ಅದಕ್ಕೆ ಪೂರಕವಾಗಿ ಜನಪ್ರತಿಧಿಗಳು ಸಹಾ ವ್ಯವಹರಿಸುವ ಅಗತ್ಯವಿರುವುದು.  ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಯಾವುದೇ ಕಾ೯ರಿ ನೌಕರನಿಗೆ ಯಾವುದರ ಭಯವು ಇರದು ಅಂತಹ ಅಧಿಕಾರಿ/ನೌಕರನಿಗೆ ಒಂದು ಗುರುತಿಸುವಿಕೆ ಸಿಗಲು ನೈಜ ವಿಕೇಂದ್ರಿಕರಣ ಬಹು ಅಗತ್ಯವಾಗಿರುವುದು. ತನ್ನ ಕಾರ್ಯದಲ್ಲಿಯೇ ತನಗೆ ನಂಬಿಕೆ ಇಲ್ಲವಾದಾಗ ಬೇರೆ ಎಲ್ಲಾ ಕಡೆಯಿಂದಲ್ಲೂ ಭಯ ಇರುವುದು ಸಹಜವಾಗಿದೆ. ಭಯದಿಂದ ಹೊರ ಬಂದು ಜನರೊಂದಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಾ ವಿಕೇಂದ್ರಿಕರಣದ ಬಗ್ಗೆ ಆಲೋಚಿಸುವ ಅಗತ್ಯವಿದೆ.
ವಿಕೇಂದ್ರಿಕರಣದ ಬಗ್ಗೆ ವ್ಯಾಪಕ ಪ್ರಚಾರ :
ವಿಕೇಂದ್ರಿಕರಣ ಎಂದರೇನು? ಅದರಿಂದ ಏನೇನು ಪ್ರಯೋಜನವಿದೆ ಎಂಬುದರ ಬಗ್ಗೆ ಇಂದಿನ ಪಂಚಾಯಿತಿ ವ್ಯವಸ್ಥೆಯ ಜಾರಿಗೂ ಹಾಗೂ ನೈಜ ವಿಕೇಂದ್ರಿಕರಣಕ್ಕೆ ಇರುವ ವ್ಯತ್ಯಾಸದ ಬಗ್ಗೆ ಸಾಕಷ್ಟು ಚೆ೯ಗಳಾಗುವ ಅಗತ್ಯವಿದೆ ಮೂಲಕ ವಿಕೇಂದ್ರಿಕರಣ ಕಲ್ಪನೆಯನ್ನು ಬಲಪಡಿಸುವ ಅಗತ್ಯವಿದೆ. ಶಾಲಾ ಕಾಲೇಜುಗಳಲ್ಲಿ ಬಗ್ಗೆ ಚೆ೯ಗಳಾಗುವುದು, ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ ಬಗ್ಗೆ ಪಕ್ಷದ ನಿಲುವನ್ನು ಸ್ಪಷ್ಟಪಡಿಸುವ ಕಾರ್ಯವಾಗಬೇಕಾಗಿದೆ.
ಪ್ರತಿ ಜಿಲ್ಲೆ ತಾಲ್ಲೂಕಿನಲ್ಲಿಯೂ ಉತ್ತಮ ಉದಾಹರಣೆ ಸಿಗುವಂತಾಗಬೇಕು :
ನಮ್ಮ ದೇಶದಲ್ಲಿ ಅತ್ಯುತ್ತಮ ಗ್ರಾಮ ಪಂಚಾಯಿತಿಗಳ ಉದಾಹರಣೆಯಲ್ಲಿ  ಮಹಾರಾಷ್ಟದ ಹಿಬ್ರರೆ ಬಜಾರ್ ಪ್ರಥಮ ಸ್ಥಾನದಲ್ಲಿ ಇರುವುದು. ಎಲ್ಲಾ ರಾಜ್ಯಗಳಲ್ಲಿ ಬಗ್ಗೆ ಹೇಳುವರು. ಎಲ್ಲಾ ಕಡೆ ವಿಕೇಂದ್ರಿಕರಣದ ನೈಜ ಸ್ಥಾಪನೆಗಾಗಿ ನಮಗೆ ಪ್ರತಿ ಜಿಲ್ಲೆ ತಾಲ್ಲೂಕುಗಳಲ್ಲಿ ಅತ್ಯತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿಗಳ ಉದಾಹರಣೆಗಳು ಬೇಕು.  ಪಂಚಾಯಿತಿಗಳು ಮಾಡಿದ ಅತ್ಯುತ್ತಮ ಕಾರ್ಯಗಳು ಮತ್ತು ಅದರಿಂದ ಜನರಿಗೆ ಆದ ಪ್ರಯೋಜನ ಬಗ್ಗೆ ವ್ಯಾಪಕ ಪ್ರಚಾರದ ಅಗತ್ಯವಿರುವುದು. ಅದಕ್ಕಾಗಿ ಕೆಲ ಪಂಚಾಯಿತಿಗಳನ್ನು ಗುರುತಿಸಿಕೊಂಡು ಚೌಕಟ್ಟನ್ನು ಮೀರಿ ಅಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿರುವದು.
ಪಕ್ಷ ರಾಜಕಾರಣದಿಂದ ಮುಕ್ತಿ :
ಪಂಚಾಯಿತಿ ವ್ಯವಸ್ಥೆಯನ್ನು ಮೂರು ಹಂತದಲ್ಲಿಯೂ ಪಕ್ಷ ರಾಜಕಾರಣದಿಂದ ದೂರವಿಡುವ ಅಗತ್ಯವಿದೆ. ಪಕ್ಷರಾಜಕಾರಣದಿಂದಲ್ಲೇ ಪಂಚಾಯಿತಿಗಳಲ್ಲಿ ದ್ವೇಷ ರಾಜಕೀಯ ಪ್ರಾರಂಭವಾಗಿ ಅಭೀವೃದ್ಧಿ ಎಂಬುದು ಮರೆಯಾಗಿರುವುದು. ಬಗ್ಗೆ ಸಹಾ ನಿಯಮಗಳಲ್ಲಿ ಮಾಪಾ೯ಡು ತರುವ ಅಗತ್ಯ ವಿರುವುದು.

ನೈಜ ವಿಕೇಂದ್ರಿಕರಣದಲ್ಲಿ ಪಂಚಾಯಿತಿ ಹೇಗಿರಬೇಕು : ಪಂಚಾಯಿತಿ ಎಂಬುದು ಒಂದು ಸ್ಥಳೀಯ ಕಾ೯ರದಂತೆ ಕಾರ್ಯನಿರ್ವಹಿಸಬೇಕು. ಅಲ್ಲಿನ ಅಧ್ಯಕ್ಷ ಪ್ರಧಾನ ಮಂತ್ರಿ ಆದರೆ ಉಳಿದ ಸದಸ್ಯರು ಮಂತ್ರಿಮಂಡಲದ ಸದಸ್ಯರಂತೆ ಕಾರ್ಯನಿರ್ವಹಿಸಬೇಕು. ರೀತಿಯ ಕಲ್ಪನೆಯಲ್ಲಿ ಪಂಚಾಯಿತಿಯನ್ನು ನೋಡಿದಾಗ ಕೆಳಕಂಡ ಅಪೇಕ್ಷೆಗಳನ್ನು ಸಹಜವಾಗಿ ಈಡೇರುವುದು
ಶಿಕ್ಷಣ : ಮಕ್ಕಳ ಸಂಖ್ಯೆಗನುಗುಣವಾಗಿ ಕಾ೯ರದಿಂದ ಹಣ ಬರುವುದು ಅದರ ವಿನಿಯೋಗವನ್ನು ಅಂದರೆ ಮಕ್ಕಳಿಗೆ ಯಾವ ರೀತಿ ಊಟ ನೀಡಬೇಕು, ಸಮವಸ್ತ್ರ ಹೇಗಿರಬೇಕು, ಪಾಠ್ಯಕ್ರಮ ಹೇಗಿರಬೇಕು, ಯಾವಾಗ ಶಾಲೆಗೆ ರಜೆ ಇರಬೇಕು ಎಲ್ಲಾ ವಿಚಾರಗಳ ಬಗ್ಗೆ ರಾಜ್ಯ ಹಂತದ ಬದಲಾಗಿ ಪಂಚಾಯಿತಿ ನಿರ್ಧರಿಸುವಂತೆ ಆಗಬೇಕು. ( ಇದು ಯಾವ ಹಂತದಲ್ಲಿ ಇದ್ದರೆ ಒಳ್ಳೆಯದು ಎಂಬುದರ ಬಗ್ಗೆ ಚೆ೯ ಅಗತ್ಯ. ಜಿಲ್ಲೆ/ತಾಲ್ಲೂಕು/ಗ್ರಾಮ)
ಪಂಚಾಯಿತಿಗೆ ವಹಿಸಲ್ಪಟ್ಟ 29 ಇಲಾಖೆಗಳ ಎಲ್ಲಾ ನೌಕರರ ವೇತನವನ್ನು ಆಯಾ ಹಂತದ ಪಂಚಾಯಿತಿಯ ಮುಖಾಂತರವೇ ನೀಡುವಂತಾಗಬೇಕು. ಹಾಗೇ ಎಲ್ಲಾ ನೌಕರರ ಕೆಲಸದ ಬಗ್ಗೆ ಸಹಾ ಪಂಚಾಯಿತಿಯೇ ಜವಬ್ದಾರಿ ವಹಿಸಿಕೊಳ್ಳಬೇಕು.
ಸ್ಥಳೀಯ ವಾತಾವರಣಕ್ಕೆ ತಕ್ಕಂತ ಮನೆ ನಿಮಾ೯, ಆರೋಗ್ಯ ಸೇವೆ ಬಗ್ಗೆ ಪಂಚಾಯಿತಿಯೇ ನಿರ್ಧರಿಬೇಕು. ರಾಜ್ಯ ಅಥವಾ ಕೇಂದ್ರ ಕಾ೯ರದ ಯಾವುದೇ ಯೋಜನೆಯ ಬಗ್ಗೆ ಸ್ಥಳೀಯತೆಗೆ ಅನುಗುಣವಾಗಿ ಬದಲಾಯಿಸಿಕೊಳ್ಳುವ ಸಂಪೂರ್ಣ ಅಧಿಕಾರ ಪಂಚಾಯಿತಿಯಲ್ಲಿರಬೇಕು.
ರಾಜ್ಯ ಮತ್ತು ಕೇಂದ್ರದ ಬಜೆಟ್ ಮಂಡನೆಯಂತೆ ಪಂಚಾಯಿತಿಯ  ಎಲ್ಲಾ ಹಂತದಲ್ಲಿ ಬಜೆಟ್ ಮಂಡನೆ ಆಗಬೇಕು ( ಈಗ ಆಗುತ್ತಿರುವುದು ಕೇವಲ ನಕಲು ಒಂದು ಪಂಚಾಯಿತಿಯಿಂದ ಇನ್ನೊಂದು ಪಂಚಾಯಿತಿಗೆ ಕೇವಲ ಹಣ ಮತ್ತು ಸಂಖ್ಯೆಯಲ್ಲಿ ವ್ಯತ್ಯಾಸ ಬಿಟ್ಟು ಬೇರೆ ಏನು ಬದಲಾವಣೆ ಇರದು.)
 ಯಾವುದೇ ಒಂದು ವ್ಯಕ್ತಿಗೆ ಅಧಿಕಾರ ಕೊಟ್ಟ ಮೇಲೆ ಮಾತ್ರ ತಿಳಿಯುವುದು ಆದ ಅಧಿಕಾರವನ್ನು ನಿಭಾಯಿಸಲು ಯೋಗ್ಯನೋ ಇಲ್ಲಾ ಎಂದು. ಅಧಿಕಾರ ನೀಡುವ ಮುಂಚೆ ಅವನ ಬಗ್ಗೆ ಅನುಮಾನ ಪಡುತ್ತಾ ಅಧಿಕಾರ ನೀಡದೇ ಇರುವುದು ಅದು ನಮ್ಮ ಭಯವೇ ಹೊರತು ಅದು ಸತ್ಯವಾಗದು
 ವಿವೇಕ ಬೆಟುಳಿ

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...