ಬುಧವಾರ, ಜನವರಿ 2, 2013

ಬಾಲ್ಯದ ನೆನpu



 ಯಕ್ಷಪ್ರಶ್ನೆ
ನಾನು 1990  ರಲ್ಲಿ ಶಿರಸಿ ತಾಲ್ಲೂಕು ಕಂಡ್ರಾಜಿ ಗ್ರಾಮದಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆನು.  ಆರು ಗಂಡು ಮಕ್ಕಳು, ಐದು ಹೆಣ್ಣು ಮಕ್ಕಳು ತರಗತಿಯಲ್ಲಿದ್ದರು.  ಪ್ರತಿ ವರ್ಷ ಅಗಸ್ಟ 15 ಮತ್ತು ಜನವರಿ 26 ಬಂದರೆ ನಮಗೆ ತುಂಬಾ ಸಂತೋಷ.  ದಿನ ಶಾಲೆಯಲ್ಲಿ ಕಡ್ಡಾಯವಾಗಿ ಮನರಂಜನಾ ಕಾರ್ಯಕ್ರಮವಿರುತ್ತಿತ್ತು.  ಅದರಂತೆ 1990 ರಲ್ಲಿ ಆರು ತಿಂಗಳ ಪರೀಕ್ಷೆಯಲ್ಲಿ ಯಾರು ಹೆಚ್ಚು ಅಂಕವನ್ನು ಗಳಿಸುವರೋ ಅದರಂತೆ ನಾಟಕದಲ್ಲಿ ಪಾತ್ರವನ್ನು ನೀಡುವುದಾಗಿ ಘೋಷಣೆಯಾಯಿತು. ಅತಿ ಹೆಚ್ಚು ಮಾತನಾಡುವ ಪಾತ್ರ ಇದ್ದರೆ ಅದು ತುಂಬಾ ಗೌರವಕ್ಕೆ ಪಾತ್ರವಾದ್ದದು ಎಂಬ ಭಾವನೆ ಆಗ ನಮ್ಮಲ್ಲಿ ಇತ್ತು. ಅದನ್ನು ಗಮನಿಸಿಯೇ ಓದಲು ಪ್ರೋತ್ಸಾಹಿಸುವ ಸಲುವಾಗಿ ರೀತಿಯ ಘೋಷಣೆಯನ್ನು ಉಷಾ ಟೀಚರ ಮಾಡಿದ್ದರು. ನಾಟಕವು ಸಹ ನಿಗದಿಯಾಗಿತ್ತು ಅದೇ ಯಕ್ಷಪ್ರಶ್ನೆ  ಅದರಲ್ಲಿ ಆರು ಪಾತ್ರದಾರಿಗಳಿದ್ದರು ನಾವು ಸಹಾ ಆರು ಗಂಡು ಮಕ್ಕಳು ನಾಲ್ಕನೇ ತರಗತಿಯಲ್ಲಿದ್ದೆವು. ಸಾಮಾನ್ಯವಾಗಿ ಓದುವ ವಿಚಾರ ಮತ್ತು ಪರೀಕ್ಷೆಯಲ್ಲಿ ಅಂಕ ಗಳಿಸುವಲ್ಲಿ ನಾನು ಮತ್ತು ನನ್ನ ಆತ್ಮೀಯ ಸ್ನೇಹಿತ ರಾಜೇಂದ್ರ ಇಬ್ಬರೇ ಸ್ಪ¢ðಗಳು.  ಕೈ ಬರಹ ಸುಂದರವಿದ್ದ ಕಾರಣಕ್ಕಾಗಿ ರಾಜೇಂದ್ರನಿಗೆ ಅಂಕ ಹೆಚ್ಚಾಗಿ ಒಮೊಮ್ಮೆ ಬರುತ್ತಿತ್ತು. ಅದರಂತೆ ಆರು ತಿಂಗಳ ಪರೀಕ್ಷೆ ಮುಗಿದು ಫಲಿತಾಂಶ ಬಂತು  ಎಂದಿನಂತೆ  ರಾಜೇಂದ್ರ ಶಾಲೆಯಲ್ಲಿ ಮೊದಲ ಸ್ಥಾನದಲ್ಲಿ ಇದ್ದನು. ನಾನು 2 ನೇ ಸ್ಥಾನದಲ್ಲಿ ಇದ್ದೆನು.  ಮಾಡಿದ ಘೋಷಣೆಯಂತೆ ಯಕ್ಷ ಪ್ರಶ್ನೆ ನಾಟಕದಲ್ಲಿ ಹೆಚ್ಚು ಮಾತಿರುವುದು ಯಕ್ಷನ ಪಾತ್ರದ್ದು ಅದು ರಾಜೇಂದ್ರನ ಪಾಲಾಯಿತು, ಧರ್ಮರಾಯನ ಪಾತ್ರ ನನ್ನದಾಯಿತು. ಅದರಂತೆ ಗಣಪತಿ ಭೀಮ, ಗುರುಮೂ dÄð, ಉಳಿದಂತೆ ದಿನೇಶ ಮತ್ತು ಬಲೀಂದ್ರ ನಕುಲ ಸಹದೇವರಾಗಿ ಆಯ್ಕೆ ಆದೆವು. ನಾಟಕದ ನಿಯಮದಂತೆ  ಕೇವಲ ಪಾಂಡವರು ಮಾತ್ರ ವೇದಿಕೆಯಲ್ಲಿ ಬರಬೇಕಾಗಿತ್ತು. ಯಕ್ಷ ವೇದಿಕೆ ಹಿಂಬಾಗದಲ್ಲಿಯೇ ಇರುವ ಅಗತ್ಯವಿತ್ತು. ಇದನ್ನು ತಿಳಿದು ನನ್ನ ಸ್ನೇಹಿತನಿಗೆ ತುಂಬಾ ದುಖ:ವಾಯಿತು ಆದರೆ ನಿರ್ಧರದಂತೆ ಪಾತ್ರವನ್ನು ನಿರ್ವಹಿಸಲೇ ಬೇಕಾಯಿತು. ನಾಟಕ ಉತ್ತಮವಾಗಿ ಆಯಿತು ಎಲ್ಲವೂ ಸುಗಮವಾಗಿ ನಡೆಯಿತು. ನಮ್ಮ ಇಬ್ಬರ ನಡುವೆ  ¸ÀàÂð 7 ನೇ ತರಗತಿಯವರೆ ನಡೆದು ನಂತರ ಇಬ್ಬರೂ ಬೇರೆ ಬೇರೆ ಶಾಲೆಗೆ ಹೋದೆವು.




ಒಬ್ಬಂಟಿಯಾಗಿ ಬಾಲ್ಯದ ನೆನಪನ್ನು ನೆನಪಿಸಿಕೊಳ್ಳುತ್ತಿರುವಾಗ ಪದೇ ಪದೇ ರಾಜೇಂದ್ರನ ನೆನಪಾಗುವುದು. ಆತ ಇಂದಿಗೂ ಯಕ್ಷನಾಗಿಯೇ ಇರುವುದು ಕಂಡು ಬರುವುದು. ರಾಜೇಂದ್ರನ ಜ್ಞಾನ, ಮಾತನಾಡುವ ಶೈಲಿ, ಬರವಣಿಗೆ, ಏನನಾದರೂ ಸಾಧಿಸುವ ಛಲ, ಕಾಲೇಜಿಗೆ ಹೋಗುವಾಗ ಎಸ್ಎಫ್ಐ ನೊಂದಿಗೆ ತೊಡಗಿಕೊಂಡ ರೀತಿ ಇವೆಲ್ಲವು ಆತ ಏನನಾದರೂ ಮಾಡಬಹುದು ಎಂದು ನನಗೆ ಅನಿಸುತಿತ್ತು. ಆದರೇ ರಾಜೇಂದ್ರ ನಾನು ಎಂದು ಕೊಂಡತೆ ಆಗಲಿಲ್ಲ.  ಅನೇಕ ಕಾರಣಗಳಿಂದ ಆತ ಡಿಎಡ್ ತರಭೇತಿಯನ್ನು ಅರ್ಧಕ್ಕೆ ಬಿಟ್ಟ, ಓದನ್ನು ಮುಂದುವರೆಸಲಿಲ್ಲ. ಯಾವುದೇ ಒಂದು ಕಡೆ ನೆಲೆಯೂ ನಿಲ್ಲಲಿಲ್ಲ ತುಂಬಾ ದಿನದಿಂದ ಸಂಪರ್ಕದಲ್ಲಿಯೂ ಇಲ್ಲ. ಬೆಂಗಳೂರಿನಲ್ಲಿ ಏನೋ ಮಾಡುತ್ತಿರುವನು ಎಂಬುದು ಮಾತ್ರ ತಿಳಿದಿರುವುದು. ಬಾಲ್ಯದ ನೆನಪಾದಾಗ ಇಂದಿಗೂ ನನಗೆ ನಾವು ಮಾಡಿದ ನಾಟಕ ಅದರಂತೆ ರಾಜೇಂದ್ರ ಇಂದಿಗೂ ಯಕ್ಷನಂತೆ ಇರುವುದು ನನಗೆ ಸಾಮ್ಯತೆಯಂತೆ ಕಂಡು ಬರುವುದು. ಹೌದು ಖಂಡಿತ ಆತ ಏನೋ ಒಳ್ಳೆಯ ಕೆಲಸವನ್ನು ಮಾಡುತ್ತಿರುವನ್ನು ಎಂಬ ನಂಬಿಕೆ ನನಗಿದೆ.
                                                                                                                         ವಿವೇಕ ಬೆಟ್ಕುಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...