Saturday, February 16, 2013

ಶಿಕ್ಷಣನಾವು ಶಿಕ್ಷಣವನ್ನು ನೋಡುವ ದೃಷ್ಠಿ ಬದಲಾಗಬೇಕೆ?

ಒಂದು ಶಾಲೆಯಲ್ಲಿರುವ 50 ಮಕ್ಕಳೊಂದಿಗೆ ಮಾತನಾಡುತ್ತಾ ಜೀವನದಲ್ಲಿ ಮುಂದೆ ಏನಾಗಬಯಸುವಿರಿ ಎಂದು ಪ್ರಶ್ನಿಸಿದಾಗ ಶಿಕ್ಷಕ, ಡಾಕ್ಟರ್,ಇಂಜಿನೀಯರ್, ಪಿಎಸ್ಐ, ವಿಜ್ಞಾನಿ,ಲೆಕ್ಚರ್ ರೀತಿಯಾದ ಉತ್ತರ ಎಲ್ಲರಿಂದಲೂ ಬಂತು. ಇದು ಒಂದು ಶಾಲೆಯ ವಿಚಾರವಲ್ಲ ಬಹುತೇಕ ಎಲ್ಲಾ ಶಾಲೆಗಳ ಮಕ್ಕಳು ಉತ್ತರಿಸುವುದು ಹೀಗೆಯೇ ಆಗಿರುವುದು. ಒಂದು ಸಮಾಜ ಸದ್ಯ ಶಿಕ್ಷಣವನ್ನು  ಯಾವ ದೃಷ್ಠಿಯಲ್ಲಿ ನೋಡುತ್ತಿರುವರು ಅದೇ ರೀತಿಯಲ್ಲಿಯೇ ಸಮಾಜದಲ್ಲಿ ಬದುಕುತಿರುವ ಮಕ್ಕಳು ಪ್ರತಿಕ್ರಿಯಿಸುವುದು ಸಹಜ. ಪ್ರಸ್ಥುತ ಶೈಕ್ಷಣಿಕ ವಾತಾವರಣವನ್ನು ನೋಡಿದಾಗ ಶಿಕ್ಷಣವನ್ನು ಯಾಕಾಗಿ ಪಡೆಯಬೇಕು ಎಂಬುದರ ಬಗ್ಗೆಯೆ ಗೊಂದಲವಿರುವಂತ ಸ್ಥಿತಿ ಉಂಟಾಗಿರುವುದು. ಸಂದರ್ಭದಲ್ಲಿ ಕೇವಲ ಹೆಚ್ಚು ಹಣ ಸಂಪಾದನೆಗಾಗಿ ಶಿಕ್ಷಣ ಪಡೆಯುವುದು ಎಂಬ ವಾತಾವರಣ ಇರುವುದು ಅದಕ್ಕಾಗಿ ಪಾಲಕರು, ಮಕ್ಕಳು ಶಿಕ್ಷಣವನ್ನು ಅದೇ ದೃಷ್ಠಿಕೋನದಿಂದ ನೋಡುತ್ತಿರುವರು.
ನಮ್ಮ PÁðರಗಳು ಎಲ್ಲಾ ಮಕ್ಕಳು ಶಾಲೆಯಲ್ಲಿರಬೇಕು ಬಯಸುತ್ತದೆ. ಎಲ್ಲಾ ಮಕ್ಕಳು ಬರಬೇಕು ಎಂದು ಹತ್ತಾರು ಯೊಜನೆಗಳನ್ನು ಜಾರಿ ಮಾಡಿ ಕೋಟ್ಯಾಂತರ ಹಣವನ್ನು ವ್ಯಯಿಸುತ್ತಿದೆ. ಆದರೂ ಸಹಾ ನಾವು ಸಂಪೂರ್ಣವಾಗಿ  ಯಶಸ್ವಿ ಎಂದು ಹೇಳಲು ಸಾಧ್ಯವಾಗುತ್ತಿಲ್ಲ.  ನಾವು ಇನ್ನೂ ಯೋಜನೆ ರೂಪಿಸುತ್ತಿರುವೆವು ವಿನಹಾ ಯಾಕಾಗಿ ಮಕ್ಕಳು ಶಾಲೆಗೆ ಬರುತ್ತಿಲ್ಲ ಎಂಬುದರ ಬಗ್ಗೆ ಚಿಂತಿಸುತ್ತಿಲ್ಲ. ಬದಲಾಗಿ ವಿವಿಧ ಯೋಜನೆಯನ್ನು ರೂಪಿಸಿ ಅದನ್ನು ಜಾರಿಗೊಳಿಸಿ ಹಣವನ್ನು ವ್ಯಯಿಸುತ್ತಿರುವೆವು. 
ಮಗುವನ್ನು ಆಕ¶ðಸುವ ರೀತಿಯಲ್ಲಿ ನಮ್ಮ ಶಾಲೆಗಳು ಇದ್ದರೇ ಖಂಡಿತವಾಗಿ ಮಗು ಶಾಲೆಗೆ ಬರಲು ಇಷ್ಟಪಡುತ್ತಿತ್ತು, ಶಾಲೆಗೆ ಮಗುವನ್ನು ಕಳಿಸಿದರೆ ಏನಾದರೂ ಪ್ರಯೋಜನ ಇದೆ ಎಂದು ಮನವರಿಕೆ ಆಗಿದ್ದರೇ ಖಂಡಿತ ಮಗುವಿನ ಪಾಲಕರು ಮಗುವನ್ನು ಶಾಲೆಗೆ ಕಳುಹಿಸಲು ಉತ್ಸಾಹ ತೋರುತ್ತಿದ್ದರು. ಆದರೇ ಅಂತಹ ವಾತಾವರಣ ನಮ್ಮ ಶಿಕ್ಷಣದಿಂದ ಸೃಷ್ಠಿಯಾಗದೇ ಇದ್ದಾಗ ಏನು ಮಾಡಲು ಸಾಧ್ಯ?  ಇದ್ದ ವ್ಯವಸ್ಥೆಯಲ್ಲಿ ಮುಂದುವರಿಯಲು ಹೆಣಗಾಡುವ ಪರಿಸ್ಥಿತಿ ಇದೆ. ವ್ಯವಸ್ಥೆಯಲ್ಲಿ ಬದಲಾವಣೆ ತರುವ ಯಾವುದೇ ಇಚ್ಛಾಶಕ್ತಿಯನ್ನು ತೋರಿಸಲು ರಾಜಕೀಯ ಮುಖಂಡರು ಹಿಂಜರಿಯುತ್ತಿರುವರು. ಎಲ್ಲವನ್ನು ಎದುರಿಸಿ ಬದಲಾವಣೆ ತರುತ್ತೇವೆ ಎಂದು ಮುನ್ನುಗುವವರಿಗೆ ಸಮುದಾಯದ ಬೆಂಬಲ ಸಿಗುತ್ತಿಲ್ಲ. ಇಂತಹ ಸಂದಿಗ್ದ ಸ್ಥಿತಿಯಲ್ಲಿ ಶಿಕ್ಷಣ ವ್ಯವಸ್ಥೆ ಮುಂದುವರೆಯುತ್ತಿರುವದು. ಸಂದರ್ಭದಲ್ಲಿಯೂ ವ್ಯವಸ್ಥೆಯ ಬದಲಾವಣೆಯ ಅಗತ್ಯತೆಯ ಬಗ್ಗೆ ಯೋಚಿಸದಿದ್ದರೇ ಮುಂದಿನ ಪರಿಣಾಮ ಉಹಿಸಲು ಅಸಾಧ್ಯವಾಗುವುದು.
ಬದಲಾವಣೆ ತರುವವರು ಯಾರು? ಏನು ಬದಲಾವಣೆ ಆಗಬೇಕು? ಎಲ್ಲಿಂದ ಬದಲಾವಣೆ ಪ್ರಾರಂಭವಾಗಬೇಕು? : ಶಿಕ್ಷಣದಲ್ಲಿ ಸುಧಾರಣೆ ತರಬೇಕು, ಯೋಜನೆಗಳು ಕಟ್ಟು ನಿಟ್ಟಾಗಿ ಜಾರಿಯಾಗಬೇಕು. ಶಿಸ್ತು ಮತ್ತು ನಿಯಮವನ್ನು ಪಾಲಿಸುವ ಆಡಳಿತವರ್ಗ ಇದ್ದರೇ ಶಿಕ್ಷಣ ಸುಧಾರಣೆ ಆಗುತ್ತದೆ ಅದರಲ್ಲಿ ಯಾವ ಸಂಶಯವು ಇಲ್ಲಾ. ಅದಕ್ಕಾಗಿ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಪಾಲಿಸದವರ ವಿರುದ್ದ ಶಿಕ್ಷೆ ಜಾರಿಗೊಳಿಸಬೇಕು.ಇವು ಸದ್ಯದ ಶಿಕ್ಷಣ ಸುಧಾರಣೆಗಾಗಿ ನಾವು ವಿಚಾರಮಾಡುತ್ತಿರುವ ಅಂಶಗಳು. ಇದಕ್ಕಾಗಿಯೇ ನಮ್ಮಲ್ಲಿ ಶ್ರೇಣಿಕೃತವಾದ ಆಡಳಿತ ವ್ಯವಸ್ಥೆ,  ಹಲವಾರು ಯೋಜನೆಗಳು, ಯೋಜನೆಯ ಉಸ್ತುವಾರಿಗೊಂದು ಅಧಿಕಾರಿಗಳು, ಹೀಗೆ ಕಾರ್ಯವನ್ನು ಕೇಂದ್ರಕೃತವಾಗಿ ಇರಿಸಿಕೊಂಡು ಕಾರ್ಯನಿರ್ವಹಿಸಲು ವಿಕೇಂದ್ರಿಕತ ವ್ಯವಸ್ಥೆಯ ಮುಖವಾಡ ಧರಿಸಿರುವ ಬಹುದೊಡ್ಡ ಪಡೆಯೇ ಇದೆ. ರೀತಿಯಾಗಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿರುವೆವು. ಇವುಗಳ ಪರಿಣಾಮದ ಧನಾತ್ಮಕ ಅಂಶ ಅಂಕಿ ಸಂಖ್ಯೆಯಲ್ಲಿರುವುದು ಹೊರತು ವಾಸ್ತವದಲ್ಲಿ ಬದಲಾವಣೆ ಆಗಿದೆ ಎಂದು ಹೇಳಲು ಧೈರ್ಯ ಸಾಕಾಗುತ್ತಿಲ್ಲ. ಎಲ್ಲರೂ ತಮ್ಮ ತಮ್ಮ ಮೇಲಾಧಿಕಾರಿಗಳನ್ನು ಮೆಚ್ಚಿಸುವ ಸಲುವಾಗಿ ಪ್ರಯತ್ನಿಸುತ್ತಿರುವರು.
 ಶಾಲೆಯ ಶಿಕ್ಪ್ಷಕಿಯೊಬ್ಬರು ಮಗುವಿಗೆ ಶಿಕ್ಷೆ ಕೊಟ್ಟರು ಅದರಿಂದ ಮಗು ಸತ್ತು ಹೋಯಿತು ಎಂದ ತಕ್ಷಣ ಶಿಕ್ಷಕಿಯ ಅಮಾನತ್ತು ಮಾಡುವರು. ಮಗುವಿಗೆ ಹೊಡೆದು ಕಲಿಸುವುದು ತಪ್ಪು ಮತ್ತು ನಿಯಮಬಾಹಿರ ಎಂದು ಹೇಳುವ ಮೇಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಏನಾದರೂ ವಾಮ ಮಾರ್ಗದಿಂದ ಫಲಿತಾಂಶ ಹೆಚ್ಚು ಇರುವಂತೆ  ಮಾಡಲು ಪ್ರಯತ್ನಿಸುತ್ತಾರೆ. ವಾಮ ಮಾರ್ಗವನ್ನು ಅನುಸರಿಸಲು ಮನಸ್ಸು ಒಪ್ಪದ ಶಿಕ್ಷಕಿ ಮಕ್ಕಳಿಗೆ ಶಿಕ್ಷೆ ನೀಡಿಯಾದರೂ ಫಲಿತಾಂಶ ಹೆಚ್ಚಿಸಲು ಪ್ರಯತ್ನಿಸುವರು. ಸಂದರ್ಭದಲ್ಲಿ ಏನಾದರೂ ಅವಘಡ ನಡೆದರೆ ಅದಕ್ಕೆ ಶಿಕ್ಷಕರನ್ನು ಅಮಾನತ್ತು ಮಾಡುವ ಶಿಕ್ಷೆ ಜಾರಿಯಾಗುವುದು. ಯಾರೊಬ್ಬರು ಸಹಾ ಯಾಕಾಗಿ ರೀತಿಯ ಒತ್ತಡ ಮಕ್ಕಳ ಮೇಲಾಗುತ್ತಿದೆ ಎಂದು ಗಂಭೀರವಾಗಿ ಚಿಂತಿಸುತ್ತಿಲ್ಲ. ಶಿಕ್ಷಕರ ಮೇಲೆ ಯಾವ ರೀತಿ ಒತ್ತಡ ಇದೆ ಎಂಬುದನ್ನು ಅರ್ಥಮಾಡಿಕೊಳ್ಳದೇ ಯಾವುದೇ ಘಟನೆಗೆ ತಕ್ಷಣ ಪ್ರತಿಕ್ರಿಯಿಸಲು ಪ್ರಯತ್ನಿಸುತ್ತಾರೆ. ಪರಿಣಾಮ ಘಟನೆಗಳು ಮೇಲಿಂದ ಮೇಲೆ  ಮರುಕಳಿಸುತ್ತಾ ಇರುವುದು.
ಬದಲಾವಣೆ ಸಾಧ್ಯವೇ?......       
         
ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯವೇ? ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಂಡಾಗ ಉತ್ತರಿಸಲು ಕಷ್ಟವಾಗುವುದು. ರೀತಿಯಾಗಿ ಪ್ರಸ್ಥುತವಾದ ವ್ಯವಸ್ಥೆ ತನ್ನ ಪ್ರಭಾವವನ್ನು ಸಮಾಜದ ಮೇಲೆ ಬೀರಿರುವುದು. ಸಮಾಜದ ಹೆಚ್ಚಿನವನರು ಅದೇ ವ್ಯವಸ್ಥೆಯಲ್ಲಿ ಮುಂದುವರೆಯುತ್ತಿದ್ದರೂ ಬದಲಾವಣೆ ಆಗಬೇಕು ನಿಟ್ಟಿನಲ್ಲಿ ಪ್ರಯತ್ನ ಸಾಗಬೇಕು ಎಂಬ ಮನಸ್ಥಿತಿಯಲ್ಲಿರುವರು. ಒಂದು ಸಕಾರಾತ್ಮಕ ಅಂಶವೇ ಬದಲಾವಣೆಯ ಸೂಚಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಶಾಲೆ ಅಥವಾ ಶಿಕ್ಷಣದಲ್ಲಿ ಸುಧಾರಣೆ ಆದರೇ ಅದರಿಂದ ಸಮಾಜದ ಬದಲಾವಣೆಗೆ ದಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಸದ್ಯದ ಶಿಕ್ಷಣ ಪದ್ದತಿಯಿಂದ ನಾವೇನು ಪಡೆದಿರುವೆವು? ಶಿಕ್ಷಣದ ಬಗ್ಗೆ ನಮ್ಮ ನೀರಿಕ್ಷೆಗಳೇನು? ರೀತಿಯ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಂಡಾಗ ಪ್ರಶ್ನೆಗೆ ಉತ್ತರ ಸಿಗುವುದು ಅಸಾಧ್ಯವಾಗಿದೆ. ಉತ್ತರ ದೊರೆತರು ಅದು ಸಂಕುಚಿತ ನೆಲೆಯ ಅಂಕಪಟ್ಟಿಯಿಂದ ದೊರೆತೆ ಅವಕಾಶದ ಬಗ್ಗೆ ಇರುವುದು ವಿನ: ಬೇರೆ ಇರದು. ವಿಶಾಲವಾದ ಪ್ರಯೋಜನದ ಬಗ್ಗೆ ಪ್ರಶ್ನೆ ಪ್ರಶ್ನೆಯಾಗಿಯೇ ಇರುವುದು. ಇದಕ್ಕೆ ಉತ್ತರ ಸುಲಭವಾಗಿ ಸಿಗಲು ಸಾಧ್ಯವು ಇಲ್ಲ ಕಾರಣ ನಾವು ಇಲ್ಲಿಯವರೆಗೆ ಶಿಕ್ಷಣವನ್ನು ನೋಡಿರುವ ದೃಷ್ಠಿಕೋನವೇ ರೀತಿಯಾಗಿದೆ.
 ಆದ್ದರಿಂದ ಈಗ ಮೊದಲು ಆಗಬೇಕಾಗಿರುವುದು ಸಮುದಾಯ ಶಿಕ್ಷಣವನ್ನು ನೊಡುವ ದೃಷ್ಠಿಕೋನ ಬದಲಾಗಬೇಕು. ಅಂದರೆ ವಿಶಾಲವಾದ ದೃಷ್ಠಿಕೋನದಿಂದ ಶಿಕ್ಷಣ ಮತ್ತು ಅದರ ಪ್ರಯೋಜನವನ್ನು ನೋಡಬೇಕಾದ ಅಗತ್ಯವಿದೆ. ರೀತಿ ದೃಷ್ಠಿಕೋನ ಸಮುದಾಯದಲ್ಲಿ ಬಂದರೆ ಸದ್ಯದ ಶಿಕ್ಷಣ ಪದ್ದತಿ, ಮೌಲ್ಯಮಾಪನ ಪದ್ದತಿ, ಶಿಕ್ಷಣವನ್ನು ನೋಡುವ ರೀತಿಯಿಂದ ಹಿಡಿದು ಸಂಪೂರ್ಣ ಶೈಕ್ಷಣಿಕ ವ್ಯವಸ್ಥೆಯೇ ಬದಲಾಗುವುದು. ಕಾರ್ಯ ಅಷ್ಟೊಂದು ಸುಲಭವೂ ಅಲ್ಲ. ಸಮುದಾಯವನ್ನು ಶಾಲೆಯ ಹತ್ತಿರ ಕರೆದುಕೊಂಡು ಬರುವುದಕ್ಕಾಗಿಯೇ ವಿವಿಧ ಯೋಜನೆ, ಕಾಯ್ದೆ, ನೀತಿ ನಿಯಮಗಳ ಮೊರೆ ಹೋಗಿರುವ ನಾವು ಅದೇ ಸಮುದಾಯದಿಂದ ಬದಲಾವಣೆ ಬಯಸುವುದು ಸಂದರ್ಭದಲ್ಲಿ ಸೂಕ್ತವಾಗಿದೆ.
 ಬದಲಾವಣೆ ಆಗಬೇಕು ಎಂದು ಬಯಸುವ ಎಲ್ಲರೂ ವಿಚಾರವನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ನಂತರ  ಶಾಲಾ ಸಮಿತಿಯರಿಗೆ ಉಳಿದ ಸಮುದಾಯದವರಿಗೆ ವಿಚಾರವನ್ನು ಅರ್ಥಮಾಡಿಸುತ್ತಾ ಆಂದೋಲನದ ರೂಪದಲ್ಲಿ ಮುಂದುವರೆಯಬೇಕು. ರೀತಿಯಾದ ಒಂದು ವಾತಾವರಣ ಸೃಷ್ಠಿಯಾಗಬೇಕಾದರೆ ಅದಕ್ಕೆ ಆಡಳಿತವರ್ಗದವರು, ಅಧಿಕಾರಿಗಳು ಬೆಂಬಲ ನೀಡಬೇಕಾದ ಅಗತ್ಯವಿದೆ. ಸುಧಾರಣಾ ಕಾರ್ಯದಲ್ಲಿ ನಾವೇ ಮೊದಲು ತೊಡಗಿಕೊಂಡಾಗ ಮಾತ್ರ ನಮ್ಮ ಮೇಲೆ ನಂಬಿಕೆ ಬರಲು ಸಾಧ್ಯವಿದೆ. ರೀತಿಯಾದ ವಾತಾವರಣವನ್ನು ನಮ್ಮ ಸುತ್ತಮುತ್ತ ಸೃಷ್ಠಿಸಬೇಕಾಗಿದೆ. ಮೊದಲು ಸಮುದಾಯ ಸಕಾರಾತ್ಮಕವಾಗಿ ಬದಲಾವಣೆ ಆಗುತ್ತದೆ ಎಂದು ನಂಬಬೇಕು. ರೀತಿಯ ನಂಬಿಕೆ ತರಿಸುವ ಪ್ರಯತ್ನ ವೇಗದಿಂದ ಆಗಬೇಕಾದ ಅಗತ್ಯತೆ ಇದೆ. ಯಾವುದು ಮನಸ್ಸು ಮಾಡಿದರೇ ಅಸಾಧ್ಯವಲ್ಲ. ಪ್ರಯತ್ನಕ್ಕೆ ನಾವೆಲ್ಲ ಮುಂದಾಗೋಣ.
                                                                                                                                                                       ವಿವೇಕ ಬೆಟ್ಕುಳಿ
                                                                                                                                                                               vivekpy@gmail.com