ಬುಧವಾರ, ಜುಲೈ 3, 2013

ಮದುವೆ ಆಗುವುದು ಯಾಕೆ?



ಮದುವೆ ಆಗುವುದು ಯಾಕೆ?
ಮದುವೆಯ ಸೀಜನ್ ಪುನ: ಪ್ರಾರಂಭವಾಗಿದೆ. 25 ರಿಂದ 30 ವರ್ಷ ದಾಟಿದರೂ ಮದುವೆ ಆಗದೇ ಇರುವ ಗಂಡು ಹೆಣ್ಣಿನ ಮನೆಯಲ್ಲಿ ಒಂದು ರೀತಿಯ ದುಗುಡ ಮನೆ ಮಾಡಿದೆ. ಅಪ್ಪ ಅಮ್ಮ ತಮ್ಮ ಮಕ್ಕಳ ಮದುವೆ ವರ್ಷವಾದರೂ ಆಗುವುದಾ? ಎಲ್ಲಿ ಕೇಳುವುದು? ಹೇಗೆ ಮಾಡುವುದು? ಬಗ್ಗೆ ಚಚರ್ೆ ಚಿಂತನೆಯಲ್ಲಿ ಇರುವರು. ಮದುವೆ ವಯಸ್ಸಿನ ಮಕ್ಕಳು ಏನೋ ಒಂದು ರೀತಿಯ ಉತ್ಸಾಹ, ದುಗುಡ, ಬೇಸರ, ಲವಲವಿಕೆ ರೀತಿಯಾಗಿ ಅವರ ಅವರ ಸ್ಥಿತಿಗೆ ಅನುಗುಣವಾಗಿ ಇರುವರು. ಇದನ್ನು ಹೊರತು ಪಡಿಸಿ ಕೆಲವೊಂದು ಮದುವೆ ಮಾಡಿಸುವ ದಲ್ಲಾಳಿಗಳಿಗೆ ಎಲ್ಲಾ ಕಡೆ ಉತ್ತಮ ಊಟ ತಿಂಡಿಯ ವ್ಯವಸ್ಥೆ ಆಗುತ್ತಿರುವುದು. ಎಲ್ಲ ಚಟುವಟಿಕೆಗಳ ನಡುವೆ ಉದ್ಭವಿಸಿದ ಪ್ರಶ್ನೆಯೇ ಮದುವೆ ಆಗುವುದು ಯಾಕೇ? ಎಂಬುದಾಗಿದೆ. ಪ್ರಶ್ನೆ ತುಂಬಾ ಸರಳ ಮತ್ತು ತಮಾಷೆಯಾಗಿ ಅನಿಸುವುದು. ಆದರೇ ಬಗ್ಗೆ ಬರುವ ಉತ್ತರಗಳನ್ನು ಗಮನಿಸಿದಾಗ ಮದುವೆಯನ್ನು ಜನ ಯಾವ ಯಾವ ರೀತಿಯಲ್ಲಿ ನೋಡುತ್ತಿರುವರು ಎಂಬ ಬಗ್ಗೆ ತಿಳಿಯುವುದು. ಬಗ್ಗೆ ಚಚರ್ೆಯನ್ನು ಸಹಾ ತಮಾಷೆಯಾಗಿಯೇ ಮಾಡಿದರೆ ಉತ್ತಮ. ತಮಾಷೆ ಚಚರ್ೆ, ಮತ್ತು ಉತ್ತರದಲ್ಲಿ ಮದುವೆ ಬಗ್ಗೆ ಇನ್ನೂ ಹೆಚ್ಚಿನ ಸ್ಪಷ್ಟತೆ ಸಿಕ್ಕರೆ ಎಲ್ಲರಿಗೂ ಅನುಕೂಲವಾಗುವದು.  ಮದುವೆ ಆಗುವುದು ಯಾಕೆ ಎಂಬ ಪ್ರಶ್ನೆಗೆ ಬರುವ ಉತ್ತರಗಳನ್ನು ಕೆಳಗಿನಂತೆ ಕಾಣಬಹುದಾಗಿದೆ.
                1. ಮದುವೆ ಆಗುವುದು ಮಕ್ಕಳ ಮಾಡಿಕೊಳ್ಳಲಿಕೆ ಆಗಿದೆ. : ಹೆಚ್ಚಿನ ಜನರು ಮಾತನ್ನು ಹೇಳುವರು. ಹಿರಿಯರು ಇದರ ಬಗ್ಗೆ ಮಾತನಾಡುವುದಿಲ್ಲ. ಆದರೇ ನಾನು ನೋಡಿದಂತೆ ಮದುವೆ ಆದ ಒಂದೇ ವರ್ಷದಲ್ಲಿ ಹೆಣ್ಣು ತಾಯಿಯಾಗುವುದನ್ನು ನೋಡಿದರೆ ಉತ್ತರ ಬಹುಶ: ಸರಿ ಏನಿಸುವುದು. ಯಾರೇ ಬೇಕಾದರೂ ಬಗ್ಗೆ ಅನುಮಾನ ಇದ್ದರೂ ತಮ್ಮ ಸುತ್ತ ಮುತ್ತಲಿನ ಕೆಲವು ಉದಾಹರಣೆಗಳನ್ನು ಗಮನಿಸಬಹುದು.
                2. ಜೀವನದಲ್ಲಿ ಭದ್ರತೆಗಾಗಿ ಮದುವೆ ಅಗತ್ಯವಿದೆ : ನಮ್ಮ ದೇಶವೆ ಹಾಗೇ ಭವಿಷ್ಯದ ಬಗ್ಗೆ ಹೆಚ್ಚು ಯೋಚನೆ ಮಾಡುವೆವು. ನಾಳೆ ಹೇಗೆ ಜೀವನ ಎಂದು ಕೊರಗುತ್ತಲೇ ಇಂದಿನ ಜೀವನವನ್ನು ಹಾಳು ಮಾಡಿಕೊಳ್ಳುವೆವು. ಅದರಂತೆ ಮದುವೆ ಎಂಬುದು ನಮಗೆ ಭವಿಷ್ಯದಲ್ಲಿ ಒಂದು ರೀತಿಯ ಭದ್ರತೆ ಒದಗಿಸುವುದು ಎಂದು ನಂಬಿರುವೆವು. ಅದಕ್ಕಾಗಿಯೇ ಮದುವೆ ಆಗುವುದು ಇರುವುದು. ಆದರೇ ಜೀವನದಲ್ಲಿ ಭದ್ರತೆಯ ಹೆಸರಿನಿಂದ ಇಂದಿನ ಸುಂದರ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದನ್ನು ಸೂಕ್ತವಲ್ಲ. ಮದುವೆ ಆದ ಎಷ್ಟು ಜನರಿಗೆ ಭದ್ರತೆ ಸಿಕ್ಕಿದೆ ಎಂದು ಸಿಕ್ಕವರೆ ಹೇಳಬೇಕು. (ಮದುವೆ ಆದ ಮೇಲೆ ಸಮಸ್ಯೆಗಳ ಪಟ್ಟಿಯೇ ಇದೆ, ಹೊಸ ಹೊಸ ಸಮಸ್ಯೆಗಳನ್ನು ಎದುರಿಸುತ್ತಿರುವವರ ಬಗ್ಗೆ ಸಾಕಷ್ಟು ಉದಾಹರಣೆಗಳು ಕಾಣ ಸಿಗುವುದು.)
                3.ಭಾವನೆಗಳನ್ನು ಹಂಚಿಕೊಳ್ಳಲು ಪರಸ್ಪರ ಅರ್ಥಮಾಡಿಕೊಂಡು ಹೋಗಲು ಮದುವೆ ಅಗತ್ಯ: ಉತ್ತರ ಬಹುತೇಕ ಸರಿ ಏನಿಸಿದರು ಭಾವನೆಗಳನ್ನು ಹಂಚಿಕೊಳ್ಳಲು ಅರ್ಥಮಾಡಿಕೊಳ್ಳಲು ಮದುವೆಯೆಂಬ ಚೌಕಟ್ಟಿನಲ್ಲಿ ಮಾತ್ರವೇ ಸಾಧ್ಯವೆ? ಎಂಬುದು ಇನ್ನೊಂದು ಪ್ರಶ್ನೆ ಉದ್ಭವಿಸುವುದು ತುಂಬಾ ಕಡಿಮೆ ಏನಿಸಿದರು ಅಲ್ಲಿ ಇಲ್ಲಿ ಉತ್ತಮ ಸ್ನೇಹಿತರಲ್ಲಿ ಭಾವನೆಗಳ ಹಂಚಿಕೆ ಕಾಣುವುದು. ಆದರೇ ಸಮಾಜದ ಚೌಕಟ್ಟಿನಲ್ಲಿ ಹೆಣ್ಣು ಗಂಡಿನ ಸಂಬಂಧಕ್ಕೆ ಗೌರವ ಸಿಗಬೇಕು ಎಂಬುದಾದರೆ ಪರಸ್ಪರ ಅರ್ಥಮಾಡಿಕೊಂಡು ಹೋಗಲು ಸಹಾ ಮದುವೆಯ ಚೌಕಟ್ಟು ಅನಿವಾರ್ಯವಾಗಿರುವುದು.
                4.ಎಲ್ಲರೂ ಮದುವೆ ಆಗುತ್ತಿರುವರು ಎಂದು ಮದುವೆ ಆಗುವುದು : ಇದು ಸುಲಭದ ಉತ್ತರವಾಗಿದೆ. ಯಾವ ಯೋಚನೆಯೂ ಇಲ್ಲ ಊರಿನಲ್ಲಿ 25 ವರ್ಷ ದಾಟಿದ ಎಲ್ಲರು ಮದುವೆ ಆದರೂ ಅದಕ್ಕಾಗಿ ನಾನು ಆಗುವೆನು. ನಂತರ ಮದುವೆ ಆದ ಮೇಲೆ ಏನು ಏನು ಆಗುಬೇಕು ಅವೆಲ್ಲಾ ಆಗುತ್ತಾ ಇರುವುದು. ಬಗ್ಗೆ ಮುಂದಾಲೋಚನೆ ಮಾಡಿ ಮದುವೆ ಆಗುವುದು ಎಂಬುದರಲ್ಲಿ ಅರ್ಥವಿಲ್ಲ. ಎಲ್ಲರೂ ಆಗುತ್ತಾರೆಂದು ಆಗುವುದು ಇದು ಗಂಭೀರವಾದ ಯೋಚನೆಯ ಅಲ್ಲ.
                5. ವಂಶದ ವೃದ್ಧಿಗೆ ಮದುವೆ ಅಗತ್ಯವಿದೆ. : ನಮ್ಮದು ವಂಶ, ವಂಶ ಹಿಂದೆ ಅದಾಗಿದ್ದರೂ ಇದಾಗಿದ್ದರೂ ಅಂತಹ ಉನ್ನತ ವಂಶದ ಬೆಳವಣಿಗೆ ಅಗತ್ಯವಾಗಿರುವುದು ಆದ್ದರಿಂದ ವಂಶದ ವೃದ್ಧಿಗಾಗಿ ಕಡ್ಡಾಯವಾಗಿ ಮದುವೆ ಆಗಿ ಗಂಡು ಮಗುವನ್ನು ಪಡೆಯಲೇ ಬೇಕು. ಉದ್ದೇಶಕ್ಕಾಗಿಯೇ ಮದುವೆ ನನಗೆ ಅಗತ್ಯ ವಂಶದ ಹೆಸರು ಉಳಿಸಲೇ ಬೇಕಾಗಿದೆ ಇಲ್ಲವಾದರೇ ನನಗೆ ಮದುವೆ ಅಗತ್ಯವಿರಲಿಲ್ಲ. ಉತ್ತರ ಆಲಿಸುವ ವ್ಯಕ್ತಿ ವಂಶಕ್ಕೆ ಎಷ್ಟು ಬೆಲೆ ನೀಡುತ್ತಾನೆ ಎಂಬುದರ ಮೇಲೆ ಅದರ ಮೌಲ್ಯ ನಿರ್ಧರಿತವಾಗುವುದು.
                6.ಸಮಸ್ಯೆಗಳನ್ನು ಎದುರು ಹಾಕಿಕೊಳ್ಳಲು ಮದುವೆ ಅಗತ್ಯವಿದೆ. : ಇದು ಬಹುಶ: ಮದುವೆ ಆಗಿ ಒಂದೆರಡು ವರ್ಷ ಕಳೆದ ಹೆಚ್ಚಿನ ಜನರ ಉತ್ತರವಾಗಿದೆ. ಒಂದು ಸಮಸ್ಯೆಗೆ ಪರಿಹಾರ ಎಂದು ಮದುವೆ ಎಂದು ಕೊಂಡು ಮದುವೆ ಗುವುದು. ಆದರೆ ಅದರಿಂದ ಇನ್ನೂ ಹಲವಾರು ಸಮಸ್ಯೆಗಳನ್ನು ಎದುರಿಸುವುದು ಸಹಜವಾಗಿದೆ. ಇಂದಿನ ಕಾಲದಲ್ಲಿ ಒಂದಕ್ಕೆ ಒಂದು ಉಚಿತ ಎನ್ನುವಂತೆ ಮದುವೆಯ ಜೊತೆಗೆ ಕೆಲವು ಸಮಸ್ಯೆಗಳು ಉಚಿತವಾಗಿರುವುದು. ಉತ್ತರವು ಒಂದು ಹಂತದ ತನಕ ಸರಿಯಾಗಿರುವುದು.
                7. ಧರ್ಮದ ಪರಿಪಾಲನೆಗಾಗಿ ಮದುವೆ ಆಗುವುದು ಅಗತ್ಯವಾಗಿದೆ. : ಧರ್ಮ ಏನು ಏನು ಹೇಳುತ್ತದೆ ಎಂಬುದು ನನಗಂತು ಗೊತ್ತಿಲ್ಲ. ಯಾವ ಪುಣ್ಯಾತ್ಮ ಧರ್ಮದ ರೀತಿ ನೀಯಮದಲ್ಲಿ ಮದುವೆ ಬಗ್ಗೆ ಸೇರಿಸಿರುವನೋ ಅದೂ ತಿಳಿದಿಲ್ಲ. ಆದರೂ ಎಲ್ಲಾ ಧರ್ಮದವರು ಹೇಳುವರು ನಮ್ಮ ಧರ್ಮದ ಪ್ರಕಾರ ಮದುವೆಯಾಗದ ವ್ಯಕ್ತಿಗೆ ಮೊಕ್ಷ ಸಿಗುವುದಿಲ್ಲ. ಆದ್ದರಿಂದ ಮದುವೆ ಆಗುವುದು ಅನಿವಾರ್ಯವಾಗಿದೆ. ಮೊಕ್ಷ ಎಲ್ಲಿ ಹೇಗೆ ಯಾವ ರೀತಿಯಾಗಿ ಸಿಗುವುದು ಬಗ್ಗೆ ರೀತಿಯಾಗಿ ಮಾತನಾಡುವ ವ್ಯಕ್ತಿಗಳೊಂದಿಗೆ ಕೇಳಿ ತಿಳಿಯುವುದು ಅಗತ್ಯವಾಗಿದೆ. ಬಗ್ಗೆ ನಾನು ಮಾತನಡಿದವರಿಂದ ಸಮರ್ಪಕ ಉತ್ತರ ಸಿಕ್ಕಿಲ್ಲ. ನನಗೆ ಅನಿಸಿದು ಮದುವೆ ಆಗುವುದಕ್ಕಾಗಿ ಧರ್ಮದ ಹೆಸರು ಬಳಸಿಕೊಳ್ಳುತ್ತಿರುವರು ಎಂದು.
                8.ಮದುವೆ ಎಂಬುದು ಮೈಥುನವನ್ನು ಮಾಡಿಕೊಳ್ಳಲು ಸಮಾಜ ಮಡಿಕೊಟ್ಟ ವ್ಯವಸ್ಥೆಯಾಗಿದೆ. : ಮಾನವ ಸಹ ಒಮದು ಪ್ರಾಣಿ. ಪ್ರಾಣಿಗೆ ಹಸಿವು, ನಿದ್ರೆ, ಮೈಥುನ ಇವು ಅನಿವಾರ್ಯವಾಗಿದೆ. ಬುದ್ದಿವಂತ ಪ್ರಾಣಿ ಏನಿಸಿದ ಮಾನವ ಹಸಿವನ್ನು ನಿಗಿಸಿಕೊಳ್ಳಲು ತನ್ನದೆ ಆದ ರೀತಿಯಲ್ಲಿ ಪರಿಹಾರ ಕಂಡು ಕೊಂಡಿರುವನು. ಅದರಂತೆ ಮೈಥುನ ಸಹಾ ನೇರವೆರಿಸಿಕೊಲ್ಳಲು ಮತ್ತು ಒಂದು ವ್ಯವಸ್ಥಿತ ಕುಟುಂಬದ ಪರಿಕಲ್ಪನೆಯಿಂದ ಜೀವನ ಸಾಗಿಸಲು ಮದುವೆ ಎಂಬುದನ್ನು ಸೃಷ್ಠಿಸಿರುವನು. ಆದ್ದರಿಂದ ವ್ಯವಸ್ಥೆಯಲ್ಲಿ ಇರುವುದಕ್ಕೋಸ್ಕರ ಮದುವೆ ಅಗತ್ಯವಾಗಿದೆ. ಉತ್ತರವು ಸಹಾ ತಕ್ಕ ಮಟ್ಟಿಗೆ ಸೂಕ್ತವಾಗಿರುವುದು.
                9.ಮನೆಯ, ಸಂಬಂಧಿಗಳ ಸಮಾಧಾನಕ್ಕಾಗಿ ಮದುವೆ ಅಗತ್ಯವಾಗಿದೆ. : ಮನೆಯ ಅಪ್ಪ ಅಮ್ಮ, ಸಂಬಂಧಿಗಳ ಮನಸ್ಸಿನ ಸಮಾಧಾನಕ್ಕಾಗಿ ಮದುವೆ ಅಗತ್ಯವಾಗಿದೆ. ದೇವರಿಗೆ ಸಮಾಧಾನ ತರಲು ಕುರಿ ಕೋಳಿಯನ್ನು ಹರಕೆಯ ಬಲಿ ನೀಡುವಂತೆ, ಮನೆಯವರ ಸಂಬಂಧಿಕರ ಸಮಾಧಾನಕ್ಕಾಗಿ ಮದುವೆ ಮಾಡಲಾಗುವುದು. ಇದು ಒಂದು ರೀತಿಯ ಬಲಿ ಎಂದು ಕೊಂಡರೆ ಬಲಿ, ಸುಖ ಎಂದು ಕೊಂಡರೆ ಸುಖ. ಇದು ಮದುವೆ ಆದ ಮೇಲಿನ ಸ್ಥಿತಿಯ ಮೇಲೆ ನಿರ್ಧರಿತವಾಗುವುದು.
ಮದುವೆ ಯಾಕೆ ಎಂಬ ಪ್ರಶ್ನೆಗೆ ಪೂರಕವಾಗಿ ಬಂದ ಉತ್ತರಗಳಲ್ಲಿ ತಮ್ಮೆಲ್ಲರ ಮದುವೆಯೂ ಯಾವುದೋ ಒಂದು ಕಾರಣದಿಂದ ಆಗಿರಬಹುದು ಎಂದು ಕೊಳ್ಳುವೆನು. ಆದರೂ ಒಂದೇ ಕಾರಣ ಆಗಿರಲು ಸಾಧ್ಯವಿಲ್ಲ ಹಲವಾರು ಕಾರಣಗಳು ಸೇರಿರಬಹುದು. ಏನೇ ಇದ್ದರೂ ಮನುಷ್ಯನ ಜೀವನದಲ್ಲಿ ಮದುವೆ ಎಂಬುದು ಮಹತ್ವಪೂರ್ಣವಾದ ಘಟ್ಟ ಎಂದು ನಮ್ಮ ನಿಮರ್ಿತ ಸಮಾಜ ಭಾವಿಸಿರುವುದು. ನಿಮರ್ಿತ ಸಮಾಜದಲ್ಲಿಯೇ ಬದುಕಬೇಕು ಎಂಬುವವರು, ಸಮಾಜದ ನಿಯಮವನ್ನು ಪಾಲಿಸಬೇಕಾದ ಅಗತ್ಯವಿದೆ. ನಿಯಮ ಪಾಲಿಸದೇ ಹೊಸತನದಲ್ಲಿ ಬದುಕು ಸಾಗಿಸಬೇಕು ಎಂಬ ತುಡಿತದಲ್ಲಿರುವ ಜನರಿಗೆ ಸಮಾಜವನ್ನು ಎದುರಿಸುವು ಒಂದು ಸವಾಲೇ ಆಗಿದೆ. ಏನೇ ಇದ್ದರೂ ಸಮಾಜ ನಿರಂತರ ಪರಿವರ್ತನಶೀಲವಾಗಿರುವುದು. ಬದಲಾವಣೆ ಸಹಜವಾಗಿರುವುದು ಆಗುತ್ತಾ ಇರುವುದು. ಮದುವೆಯ ಕಲ್ಪನೆ, ಅದರ ಆಚರಣೆ, ರೀತಿ, ರಿವಾಜು, ದೃಷ್ಢಿಕೋನ ಇವುಗಳಲ್ಲಿ ಅಮೂಲಾಗ್ರ ಸುಧಾರಣೆಯಾಗಬೇಕು ಎಂದು ಬಯಸುವ ಎಲ್ಲರಿಗೂ ಲೇಖನ ವಿಚಾರ ಮಾಡಲು ವಿಷಯವನ್ನು ಕೊಟ್ಟಿತು ಎಂದು ನನ್ನ ಭಾವನೆ. ಸಮಾಜದಲ್ಲಿಯೇ ಸಮಾಜದ ರೀತಿಯೇ ಬದುಕಬೇಕು ಎಂದು ಬಯಸುವವರಿಗೆ ಇದೊಂದು ತಮಾಷೆಯ ಲೇಖನವಾಗಿ ಅದರಲ್ಲಿಯೇ ಒಂದು ಕಾರಣವಿದೆ ಎಂದು ತಮ್ಮಲಿಯೇ ಅಂದುಕೊಂಡು ಮುಂದೆ ಸಾಗಿರಿ. ಇದಲ್ಲದೇ ಇನ್ನೂ ಕೆಲವು ರೀತಿಯ ಕಾರಣಗಳಿದೆ ಎಂದು ಅನಿಸಿದರೆ  ಲೇಖನಕ್ಕೆ ಇನ್ನೂ ಹೆಚ್ಚಿನದನ್ನು ಸೇರಿಸಿರಿ.
                                                                                                                 ವಿವೇಕ ಬೆಟ್ಕುಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...