ಮಂಗಳವಾರ, ಸೆಪ್ಟೆಂಬರ್ 17, 2013

ಬಿಸಿಯೂಟ ಯೋಜನೆ ನಮ್ಮ ದೇಶದ ಮಕ್ಕಳಿಗೆ ಅನಿವಾರ್ಯ



ಬಿಸಿಯೂಟ ಯೋಜನೆ ನಮ್ಮ ದೇಶದ ಮಕ್ಕಳಿಗೆ ಅನಿವಾರ್ಯ
ಕಾ೯ರಿ ಶಾಲೆಯಲ್ಲಿ ಬಿಸಿಯೂಟ ಯೋಜನೆ ನಡೆಯುತ್ತಿದೆ. ಯೋಜನೆಯನ್ನು ಬಂದು ಮಾಡಬೇಕು. ಇದರಿಂದ ಕಲಿಕೆ ಸರಿಯಾಗಿ ಆಗುತ್ತಿಲ್ಲ. ಶಿಕ್ಷಕರ ಮೇಲೆ ಹೆಚ್ಚಿನ ಹೊರೆ ಇರುವುದು. ಇಂದು ಎಲ್ಲ ಅಪ್ಪ ಅಮ್ಮಂದಿರು ಮಕ್ಕಳಿಗೆ ಊಟ ಹಾಕಲು ಸಕ್ಷಮರಿರುವರು ಆದ್ದರಿಂದ ಈ ಯೋಜನೆ ಬಂದು ಮಾಡಬೇಕು ಎಂದು ಶಾಲಾ ಸಮಿತಿಯ ತರಭೇತಿಗಳಲ್ಲಿ, ಕೆಲವೊಂದು ಶಿಕ್ಷಕರ ಸಭೆಯಲ್ಲಿ. ಕೆಲವೊಂದು ಜನಪ್ರತಿನಿಧಿಗಳ ಸಭೆಯಲ್ಲಿ ಆಗಾಗ ದೇಶದ ಎಲ್ಲಾ ಭಾಗದಲ್ಲಿಯೂ ಕೂಗು ಕೇಳಿಬರುವುದು. ಬಿಹಾರ ರಾಜ್ಯದಲ್ಲಿ ಬಿಸಿಯೂಟದಿಂದ ಆದ ಮಕ್ಕಳ ಸಾವಿನ ನಂತರ ಶಿಕ್ಷಕರನ್ನು ಈ ಜವಬ್ದಾರಿಯಿಂದ ಮುಕ್ತಗೊಳಿಸಬೇಕು ಎಂಬ ಕೂಗು ಇನ್ನೂ ಪ್ರಬಲವಾಗಿರುವುದು.
ವಾಸ್ತವ ಸಂಗತಿ ಎಂದರೆ ಬಿಸಿಯೂಟ ಯೋಜನೆ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವ 90% ಅಧಿಕ ಶಿಕ್ಷಕರ ಮಕ್ಕಳಾಗಲಿ, ಅಥವಾ ಆ ಬಗ್ಗೆ ದ್ವನಿ ಎತ್ತುವ ಕೆಲವು ಜನಪ್ರತಿನಿಧಿಗಳಾಗಲಿ, ಕೆಲವೊಂದು ಸಭೆಗಳಲ್ಲಿ ಬಂದು ಈ ಬಗ್ಗೆ ಮಾತನಾಡುವ ಎಲ್ಲಾ ಊರಿನಲ್ಲಿ ಇರುವ ಭಾಷಣಕಾರರ ಮಕ್ಕಳಾಗಲಿ ಯಾರು ಸಹಾ ಸಕಾ೯ರಿ ಶಾಲೆಯಲ್ಲಿ ಓದುತ್ತಿಲ್ಲ ಅವರಿಗೆ ಅದರ ಅಗತ್ಯವು ಇಲ್ಲ. ಸಕಾ೯ರಿ ಶಾಲೆಗಳಲ್ಲಿ ಓದುತ್ತಿರುವ ನಿಜವಾದ ಮಕ್ಕಳ ಪಾಲಕರಲ್ಲಿ  ಎಲ್ಲರ ಎದುರು ನಿಂತು ಮಾತನಾಡುವ ಅಭಿಪ್ರಾಯ ವ್ಯಕ್ತಪಡಿಸುವ ಸಾಮಥ್ರ್ಯ ಇರುವುದು ತುಂಬಾ ಕಡಿಮೆ ಜನರಲ್ಲಿರುವುದು. ಬಿಸಿಯೂಟ ಯೋಜನೆ ಶಾಲೆಯಲ್ಲಿ ಇರುವುದರಿಂದ ಪಾಲಕರು ಮಕ್ಕಳ ಮದ್ಯಾಹ್ನದ ಊಟದ ಬಗ್ಗೆ ಯೋಚಿಸಿದೆ ತಮ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳು ಸಹಕಾರಿಯಾಗಿರುವುದು.
 ಇಂದು ಸಕಾ೯ರಿ ಶಾಲೆಯಲ್ಲಿ ಮಕ್ಕಳು ಏನಾದರೂ ಬರುತ್ತಾ ಇದ್ದಾರೆ ಎಂದರೆ ಅದರಲ್ಲಿ ಮದ್ಯಾಹ್ನದ ಬಿಸಿಯೂಟ ಯೋಜನೆಯ ಪಾತ್ರ ಬಹುಮುಖ್ಯವಾಗಿರುವುದು ಎಂಬುದನ್ನು ನಾವು ಮರೆಯಬಾರದು. ಈ ಯೋಜನೆಯನ್ನು ಇನ್ನೂ ಅತ್ಯುತ್ತಮವಾಗಿ ಹೇಗಿ ಜಾರಿ ಮಾಡಬಹುದು ಎಂಬುದರ ಬಗ್ಗೆ ಎಲ್ಲರ ಚಚರ್ೆ ಇರಲಿ ವಿನಃ ಮಕ್ಕಳ ಹೊಟ್ಟೆಯ ಮೇಲೆ ಕಲ್ಲು ಹೊಡೆಯುವ ಬಗ್ಗೆ ಯಾರು ಯೋಚಿಸಲು ಬೇಡಿ.
ನಿಮಗಾಗಿ ಉತ್ತರಪ್ರದೇಶ ರಾಜ್ಯದ ಬರೇಲಿ ಜಿಲ್ಲೆಯ ಒಂದು ಶಾಲೆಯಲ್ಲಿ ಸರೆ ಹಿಡಿದ ಬಿಸಿಯೂಟದಲ್ಲಿನ ಮಕ್ಕಳ ಆಸಕ್ತಿಯನ್ನು ಒಮ್ಮೆ ಗಮನಿಸಿರಿ.

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...