ಶನಿವಾರ, ನವೆಂಬರ್ 2, 2013

ರಾಜ್ಯೋತ್ಸವದ ಸಂದರ್ಭದಲ್ಲಿ ಒಂದು ಬಹಿರಂಗ ಪತ್ರ




ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಒಂದು ಬಹಿರಂಗ ಪತ್ರ
ಮಕ್ಕಳನ್ನು, ಮೊಮ್ಮಕ್ಕಳನ್ನು ಇಂಗ್ಲೀಷ ಮಾಧ್ಯಮ ಶಾಲೆಗೆ ಕಳಿಸಿ ಕನ್ನಡದ ವಿವಿಧ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹಂತದ ಪದಾಧಿಕಾರಿಗಳೇ.
ಶಿಕ್ಷಣವನ್ನು ಒಂದು ವ್ಯವಹಾರ ಮಾಡಿಕೊಂಡು ಹಲವಾರಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಕಾ೯ರಿ ಶಾಲೆಯ ವ್ಯವಸ್ಥೆಯನ್ನು ಹಾಳುಗೆಡಹುತ್ತಿರುವ ಜನಪ್ರತಿನಿಧಿಗಳೇ. ( ಗ್ರಾಮ ಪಂಚಾಯಿತಿಯಿತ್ ಸದಸ್ಯರಿಂದ ಶಾಸಕ, ಮಂತ್ರಿ, ಸಂಸದರವರೆಗೆ)
ಕಾ೯ರಿ ಸಂಬಳವನ್ನು ತಿನ್ನುತ್ತಾ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಾ ಕಾ೯ ಯಾವ ವ್ಯವಸ್ಥೆಯ ಬಗ್ಗೆ ಸ್ವತ: ನಂಬಿಕೆ ಇಲ್ಲದ ಕಾ೯ರಿ ನೌಕರರೇ, 
ತಾನು ಸೇವೆ ಸಲ್ಲಿಸುವ ಶಾಲೆ ಅಥವಾ ಕಾ೯ರಿ ಶಾಲೆಯಲ್ಲಿ ಮಕ್ಕಳನ್ನು ಸೇರಿಸಲು ಹಿಂಜರಿಯುತ್ತಿರುವ ಸಮಾಜದ ಸುಧಾರಕ ಶಿಕ್ಷಕ ಬಂದುಗಳೇ,   
 ತಮ್ಮ ಮಕ್ಕಳು ಮೊಮ್ಮಕ್ಕಳನ್ನು ಇಂಗ್ಲೀಷ ಮಾಧ್ಯಮದ ಶಾಲೆಯಲ್ಲಿ ಓದಿಸುತ್ತಾ ಕಾ೯ರಿ ಶಾಲೆಯ ಸುಧಾರಣೆ ಬಗ್ಗೆ ಮಾತನಾಡುತ್ತಾ ಅವರ ಹೆಸರಿನಲ್ಲಿ ಬೇರೆ ಬೇರೆ ಕಡೆಯಿಂದ ಹಣವನ್ನು ತಂದು ಕಾರ್ಯನಿರ್ವಹಿಸುತ್ತಿರುವ ವಿವಿಧ ಸಮಾಜ ಸೇವಾ ಸಂಸ್ಥೆಯ ನಿಧೇ೯ಶಕ ಮಹಾಶಯರೇ ಹಾಗೂ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹಂತದ ಸಿಬ್ಬಂದಿಗಳೇ,
                                                                                                                                                                                                           ನೀವು ಎಲ್ಲರೂ ಸೇರಿ ಯಾರನ್ನು  ಸುಧಾರಣೆ ಮಾಡಲು ಪ್ರಯತ್ನಿಸುತ್ತಿರುವಿರಿ? ಯಾಕಾಗಿ ನಾಟಕ? ಇನ್ನೂ ಎಷ್ಟು ದಿನ ನಿಮ್ಮ ದ್ವಂದವನ್ನು ನೋಡುತ್ತಾ ನಿಮ್ಮನ್ನು ನಂಬಿ ಸುಧಾರಣೆ ಆಗುವುದು ಎಂದು ಭರವಸೆ ಇಟ್ಟುಕೊಳ್ಳಬೇಕು?
ನೀವು ಹೇಳುತ್ತಿರುವ ಬದಲಾವಣೆ/ಸುಧಾರಣೆ ಬಗ್ಗೆ ನಿಮಗೆ ನಂಬಿಕೆ ಇಲ್ಲದ ಮೇಲೆ ಬೇರೆ ಯಾರು ಯಾಕಾಗಿ ನಿಮ್ಮನ್ನು ನಂಬಬೇಕು? ಸಕರ್ಾರಿ ಶಾಲೆಯಾಗಿರಬಹುದು, ಆರೋಗ್ಯ ಕೇಂದ್ರವಾಗಿರಬಹುದು, ಇವೆಲ್ಲಾ ನಿಮಗೆ ನೌಕರಿ ಒದಗಿಸಲು ಮಾತ್ರ ಅಗತ್ಯವೇ?
 ನೀವು ಮಾಡುತ್ತಿರುವುದು ಒಂದು ರೀತಿ ದಬ್ಬಾಳಿಕೆ ಅಲ್ಲವೇ?
ನಿಮಗೆ ಬ್ರಿಟಿಷರಿಗೆ ಏನು ವ್ಯತ್ಯಾಸ? ಇನ್ನೂ ಎಷ್ಟು ದಿನ ರೀತಿಯ ವ್ಯವಸ್ಥೆಯನ್ನು ಸಹಿಸಿಕೊಳ್ಳುತ್ತಾ ನಿಮ್ಮನ್ನು ನಂಬಬೇಕು?                                                                           ನಮ್ಮ ತಾಳ್ಮೆಗೂ ಒಂದು ಮಿತಿಯಿದೆ. ಅದು ನಿಮಗೆಲ್ಲರಿಗೂ ಅರ್ಥವಾಗುವುದು ಎಂದು ಭಾವಿಸಿರುವೆವು. ಅರ್ಥಮಾಡಿಕೊಂಡು ಅದನ್ನು ಸರಿಪಡಿಸಲು ತಮ್ಮಿಂದ ಆಗಿರುವ ತಪ್ಪನ್ನು ಸರಿಪಡಿಸಲು ಒಂದೊಂದು ನಿಧಾ೯ರವನ್ನು ತಾವು ಕೈಗೊಳ್ಳುವಿರೆಂದು ನಂಬಿರುವೆವು.    ದಯವಿಟ್ಟು ನಮ್ಮೆಲ್ಲರ ನಂಬಿಕೆಯನ್ನು ಉಳಿಸಿಕೊಳ್ಳಿರಿ. ಬಲಿಷ್ಠ ಒಂದು ನಾಡನ್ನು ಕಟ್ಟಲು ನಾವೆಲ್ಲರೂ ಪ್ರಯತ್ನಿಸೋಣ ನಿಮ್ಮ ಎಲ್ಲಾ ರೀತಿಯ ಪ್ರಯತ್ನಕ್ಕೆ ಎಲ್ಲರೂ ಜೊತೆಯಲ್ಲಿರುವೆವು.                                                                      ಸಹನೆಯ ಕಟ್ಟೆ ಒಡೆದು ಅದು ಕ್ರಾಂತಿಯಾಗಿ ಹೊರಹೊಮ್ಮುವ ಮೊದಲು ಅದನ್ನು ಸರಿಪಡಿಸಲು ಪ್ರಯತ್ನ ನಿಮ್ಮಿಂದ ಆಗಲಿದೆ ಎಂದು ಬಯಸುವೆನು.                                                                    
                                                                                                                                             ಇಂತಿ ನಿಮ್ಮವರಾದ
                                                                                 ಒಕ್ಕೂಟ ವ್ಯವಸ್ಥೆಯ ಪ್ರಜೆಗಳು

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...