Thursday, February 20, 2014

ಬದಲಾವಣೆ

ಬದಲಾವಣೆ
ನಿನಗಾಗಿ ನಾನು ನನ್ನ ಎಲ್ಲವನ್ನು ಬಿಟ್ಟೆ
ನೀ ನನ್ನವಳಾಗುವೆ ಎಂದು ನಾನು ಕೆಟ್ಟೆ
ಕೊನೆಗೂ ನಾನು ನೀ ಹೇಳಿದಂತೆ ಆಗಲಿಲ್ಲ
ನೀ ಹೇಳಿದಂತೆ ನಾನಾಗುವ ವೇಳೆಗೆ ನೀ ನನ್ನ ಬಿಟ್ಟೆ
ನನ್ನ ಬದಲಿಸಲು ನೀ ಪ್ರಯತ್ನ ಪಟ್ಟೆ
ಅದಾಗದೂ ಎಂದು ಅರ್ಥವಾದಾಗ ನೀ ನನ್ನ ಬಿಟ್ಟೆ
ನಾನು ಬದಲಾಗುವ ವೇಳೆಗೆ ನೀ ನನ್ನ ಜೊತೆಗಿಲ್ಲ
ನೀ ಜೊತೆಗಿಲ್ಲದ ಈ ಬದಲಾವಣೆಗೆ ಅರ್ಥವೆಲ್ಲಿದೆ ಗೆಳತಿ?