ಬುಧವಾರ, ಜುಲೈ 9, 2014

ಭಾರತದ ಪ್ರಥಮ “72 ಜೀನಾಲಯ”

ಭಾರತದ ಪ್ರಥಮ  “72 ಜೀನಾಲಯ”
72  ಜೀನಾಲಯದ ಇದರ ಸಂಪೂರ್ಣ ನೋಟ
72  ಜೀನಾಲಯದ ಇದರ ಸಂಪೂರ್ಣ ನೋಟ
ರಾಜಸ್ಥಾನ ರಾಜ್ಯದ  ಜಾಲೋರ ಜಿಲ್ಲೆ ಬೀನಮಾಲ್ ಬ್ಲಾಕನಲ್ಲಿ  (ತಾಲ್ಲೂಕು) ಲಕ್ಷ್ಮೀ ವಲ್ಲಭ 72 ಜೀನಾಲಯ ಇರುವುದು. ಇದು ಭಾರತ ದೇಶದ ಪ್ರಥಮ 72 ಜೀನಾಲಯವಾಗಿರುವುದು. ಬ್ಲಾಕನ ಕೇಂದ್ರ ಸ್ಥಳದಲ್ಲಿಯೇ ಮಂದಿರ ಇರುವದು. ಲುಕಡ ಪರಿವಾರದವರು ಕಟ್ಟಿಸಿರುವ ಜೀನಾಲಯದಲ್ಲಿ ಜೈನ ಧರ್ಮದ 72 ತೀರ್ಥಂಕರರ ವಿಗ್ರಹಗಳು ಇರುವುದು ವಿಶೇಷವಾಗಿದೆ. ಜೈನ ಧರ್ಮದ ಅನುಯಾಯಿಗಳಿಗೆ ತಮ್ಮ ಎಲ್ಲಾ ತೀರ್ಥಂಕರರನ್ನು ಒಂದೇ ಮಂದಿರದಲ್ಲಿ ನೋಡುವ ಸೌಭಾಗ್ಯವನ್ನು ಜೀನಾಲಯ ಒದಗಿಸಿರುವುದು. ತನ್ನದೇ ಆದ ವಿಶಿಷ್ಠ ಅತ್ಯಂತ ಸುಂದರವಾದ ಶಿಲ್ಪ ಕಲೆಗಳಿಂದ ನಿಮೀ೯ತವಾದ ಜೈನ ದೇವಾಲಯ ಆಧುನಿಕ ಶಿಲ್ಪಕಲೆಯ ಪ್ರತಿಬಿಂಬವಾಗಿರುವುದು. ಬಿಳಿಯಾದ ಮಾರ್ಬಲಗಳಿಂದ ರಚಿತವಾದ ಮಂದಿರ ರಾಜಸ್ಥಾನದ ಒಂದು ಹೆಮ್ಮೆಯಾಗಿರುವುದುಜಾಲೋರ-ಬೀನಮಾಲ ಮುಖ್ಯ ರಸ್ತೆಯ ಬದಿಯಲ್ಲಿಯೇ ಇರುವ ಇದು ದಾರಿಯಲ್ಲಿ ಸಾಗುವ ಎಲ್ಲರನ್ನು ಕೈ ಬೀಸಿ ಕರೆಯುತ್ತಿರುವುದು.
ಜೀನಾಲಯದ ಎರಡು ಬದಿಯ ನೋಟಗಳು
ಜೀನಾಲಯದ  ಬದಿಯ ನೋಟಗಳು
72 ಜೀನಾಲಯದ ಮುಖ್ಯ ದ್ವಾರದ ಒಂದು ನೋಟ
72 ಜೀನಾಲಯದ ಮುಖ್ಯ ದ್ವಾರದ ಒಂದು ನೋಟ
ವಿಶಾಲವಾದ ದೇವಾಲಯದ ಹೊರಗಿನ ಆವರಣ, ಜೀನಾಲಯದಲ್ಲಿ ಇರುವ ಪಾರಿವಾಳಗಳು, ಹಸಿರು ಹುಲ್ಲುಗಳು, ಸುಂದರ ಹೂವುಗಳು ಬೇವಿನ ಮರದ ಕೆಳಗಿನ ತಂಪಾದ ಗಾಳಿ ರಾಜಸ್ಥಾನದ ಊರಿ ಬಿಸಿಲಿನಲ್ಲಿಯೂ ನಾವು ಬೇರೆ ಯಾವುದೋ ಲೋಕದಲ್ಲಿರು ಅನುಭವವನ್ನು ನೀಡುವುದು.
ಸುಮಾರು 140 ಕೊಠಡಿಗಳ ಧರ್ಮಶಾಲೆ, ಭೋಜನಶಾಲೆ ಎಲ್ಲವೂ ಮಂದಿರದ ಆವರಣದಲ್ಲಿಯೇ ಇದ್ದು ಬರುವ ಪ್ರವಾಸಿಗರಿಗೆ ಸೇವೆಯನ್ನು ಒದಗಿಸುತ್ತಿರುವುದು.
72 ಜೀನಾಲಯದ ಹೊರ ಆವರಣದ ಒಂದು ನೋಟ
ಮುಖ್ಯ ದ್ವಾರದ ಸೌಂದರ್ಯ ಹೆಚ್ಚಿಸಿರುವ ಪಾರಿವಾಳಗಳು
ರಾಜಸ್ಥಾನದ ಪ್ರವಾಸಕ್ಕೆಂದು ನೀವು ಬಂದರೆ  ತಪ್ಪದೇ ದೇವಾಲಯದ ಸೌಂದರ್ಯವನ್ನು ಸವಿದೇ ಹೋಗಿರಿ. 72 ತೀರ್ಥಂಕರರನ್ನು ತಾವು ಸಹಾ ದರ್ಶನ ಮಾಡಿರಿ.









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...