Tuesday, July 1, 2014

ರಾಜಸ್ಥಾನದಲ್ಲಿ ಪ್ರಾರಂಭವಾಯಿತು ಶಾಲೆಗಳು......

ರಾಜಸ್ಥಾನದಲ್ಲಿ ಪ್ರಾರಂಭವಾಯಿತು ಶಾಲೆಗಳು......
ಮಕ್ಕಳ ಸ್ವಾಗತಿಸುತ್ತಿರುವ ಜನಪ್ರತಿಗಳು, ಶಾಲಾ ಸಮಿತಿ ಮತ್ತು ಶಿಕ್ಷಕರು
ಮಕ್ಕಳ ಸ್ವಾಗತಿಸುತ್ತಿರುವ ಜನಪ್ರತಿಗಳು, ಶಾಲಾ ಸಮಿತಿ ಮತ್ತು ಶಿಕ್ಷಕರು
ರಾಜಸ್ಥಾನದಲ್ಲಿ ಇಂದಿನಿಂದ ಶಾಲೆಗಳು ಪ್ರಾರಂಭವಾಗಿರುವುದು. ಸುಡುವ ಬಿಸಿಲಿನಲ್ಲಿ ಕೆಲವು ಮಕ್ಕಳು ಪ್ರಥಮ ದಿನವೇ ಶಾಲೆಗೆ ಬಂದಿದ್ದರು. ಮಕ್ಕಳನ್ನು ಸ್ವಾಗತ ಮಾಡಿ ಬರಮಾಡಿಕೊಳ್ಳಲಾಗುತ್ತಿದೆ. ಜೈಪುರ ಜಿಲ್ಲೆಯಲ್ಲಿ ಇಂದು ನಡೆದ ಶಾಲಾ ಪ್ರಾರಂಭೋತ್ಸವದ ಒಂದರಲ್ಲಿ ನಾನು ಸಹಾ ಪಾಲ್ಗೊಂಡಿದ್ದೆ. ಮಕ್ಕಳ ಹಣೆಗೆ ಕುಂಕುಮ ಇಟ್ಟು ಹೂವಿನ ಮಾಲೆಯನ್ನು ಹಾಕಿ ನೋಟ್ ಬುಕ್ ಮತ್ತು ಪೆನ್ನನ್ನು ನೀಡಿ ಮಕ್ಕಳನ್ನು ಸ್ವಾಗತಿಸಲಾಯಿತು. ಮಾಲೆ ಧರಿಸಿ ಒಂದನೆ ತರಗತಿಗೆ ಬಂದ ಮಕ್ಕಳು ಮತ್ತು ಹಿರಿಯಮಕ್ಕಳೆಲ್ಲರು ಸೇರಿ ಪ್ರಭಾತ ಪೇರಿ ನಡೆಸಿ ಮಕ್ಕಳನ್ನು ದಾಖಲಿಸಲು ಕರೆ ನೀಡಿದರು. ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಲಾ ಸಮಿತಿಯವರು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲೆಯಲ್ಲಿ ಸಿಗುವ ಬಟ್ಟೆ, ಪಠ್ಯ ಪುಸ್ತಕ,ಬಿಸಿಯೂಟ, ಇಂದು ಶಿಕ್ಷಕರು ಮಕ್ಕಳಿಗೆ ತೋರಿಸುತ್ತಿದ್ದ ಪ್ರೀತಿ ಮತ್ತು ಕೊಟ್ಟ ಸಿಹಿ ತಿಂಡಿ ಇವನ್ನು ನೋಡುತ್ತಾ ನನಗೂ ಅನಿಸಿತು ನಾನು ಯಾಕೆ ದೊಡ್ಡವನಾದೆ?,
ಮಕ್ಕಳ, ಜನಪ್ರತಿನಿಧಿಗಳ ಪ್ರಭಾತ ಪೇರಿಯ ಒಂದು ನೋಟ

ಮಕ್ಕಳ, ಜನಪ್ರತಿನಿಧಿಗಳ ಪ್ರಭಾತ ಪೇರಿಯ ಒಂದು ನೋಟ
 ದುಖ:ವು ಆಯಿತು ನಾನು ಓದುವಾಗ ಇಂತಹ ಸೌಲಭ್ಯ ಇಲ್ಲದೇ ಇದ್ದರು ಕಾ೯ರಿ ಶಾಲೆಯ ಬಗ್ಗೆ ಶಿಕ್ಷಕರ ಎಲ್ಲರ ವಿಶ್ವಾಸ ಇತ್ತು. ಇಂದು ವಿಶ್ವಾಸದ ಕೊರತೆ ಎದ್ದು ಕಾಣುತ್ತಿತ್ತು.
ಸಭೆಯ ಒಂದು ನೋಟ
ನಂತರ ನಡೆದ ಸಭೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಎಲ್ಲರು ಜನರಲ್ಲಿ ಸಕಾ೯ರಿ ಶಾಲೆಯ ಬಗ್ಗೆ ವಿಶ್ವಾಸ ತುಂಬುವ ಕಾರ್ಯವನ್ನು ಶಿಕ್ಷಕರೇ ಪ್ರಾರಂಭಿಸಬೇಕಾಗಿದೆ. ಇಲ್ಲವಾದರೇ ಮುಂದಿನ ದಿನಗಳಲ್ಲಿ ಸಕಾ೯ರಿ ಶಾಲೆಗಳಲ್ಲಿ ಮಕ್ಕಳೆ ಇಲ್ಲದೇ ಹೋಗುವ ಸ್ಥಿತಿ ಬರಬಹುದು ಎಂಬ ಆತಂಕ ವ್ಯಕ್ತಪಡಿಸಿದರು. ಮುಂದಿನ ದಿನದಲ್ಲಿ ಎಲ್ಲರೂ ಸೇರಿ ಸಕಾ೯ರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ತೀಮಾ೯ ಮಾಡಿದರು.

ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕಾ(ಬ್ಲಾಕ್) ಪಂಚಾಯಿತಿಯ ಶಿಕ್ಷಣ ಸ್ಥಾಯಿ ಸಮಿತಿಗಳು ಸಕಾ೯ರಿ ಶಾಲೆಯಲ್ಲಿ ಮಕ್ಕಳ ದಾಖಲಾತಿಗಾಗಿ ಪ್ರಚಾರ ಸಾಮಗ್ರಿಯನ್ನು  ತಯಾರಿಸಿ ಎಲ್ಲಾ ಕಡೆ ಹಂಚುತ್ತಿರುವುದು ಇಂದು ಕಂಡು ಬಂತು.
ಮಕ್ಕಳ ಪ್ರಭಾತ ಪೇರಿಯ ಒಂದು ನೋಟ