ಸೋಮವಾರ, ಜುಲೈ 7, 2014

ವಿಶ್ವದ ಮೊದಲ ಹಡಗು ಮಂದಿರ

ವಿಶ್ವದ ಮೊದಲ ಹಡಗು ಮಂದಿರ
ಹಡಗು ಮಂದಿರದ ರಾತ್ರಿಯ ಒಂದು ನೋಟ
ರಾಜಸ್ಥಾನ ರಾಜ್ಯದ ಜಾಲೋರ ಜಿಲ್ಲೆಯಲ್ಲಿ ಬರುವ ಜಿಲ್ಲೆಯ ಸಾಯಲಾ ಬ್ಲಾಕನ ಮಂಡವಾಲಾ ಗ್ರಾಮದಲ್ಲಿ ವಿಶ್ವದ ಪ್ರಥಮ ಹಡಗು ಮಂದಿರವಿರುವುದು. ಜಾಲೋರದಿಂದ 20-22 ಕಿ. ಮೀ ದೂರವಿರುವ ಜೈನ ಮಂದಿರವನ್ನು  ಜಹಾಜ್ ಮಂದಿರವೆಂದೆ ಕರೆಯುವರು. ಜಹಾಜ್ ಎಂದರೆ ಹಡಗು ಎಂದರ್ಥ.
ಹಡಗು ಮಂದಿರದ ಒಂದು ನೋಟ್
 ಮಂದಿರದಲ್ಲಿ ಇರುವ  ಪ್ರತಿಮೆ
ಶ್ರೀ ಕಾಂತಿಸಾಗರಸೂರಿ ಸ್ಮಾರಕ ಟ್ರಸ್ಟನವರು ನಿಮಿ೯ಸಿರುವ ಮಂದಿರ ತನ್ನದೇ ಆದ ವಿಶೇಷತೆಯನ್ನು ಹಂದಿರುವುದುಕ್ರಿ. 1992 ರಲ್ಲಿ ಕಟ್ಟಲ್ಪಟ್ಟ   ಜೈನ ಮಂದಿರ ಮಾರ್ಬಲನಿಂದ ನಿಮಿ೯ತವಾಗಿರುವುದು. ಮಂದಿರದ ಒಳಗೆ ಬಳಕೆ ಮಾಡಿರುವ ಎಲ್ಲಾ ಸಾಮಗ್ರಿಗಳು ತಳ ತಳ ಹೊಳುಯುವಂತಹ ಸಾಮಗ್ರಿಯಾಗಿದೆ. ಸಂಪೂರ್ಣ ಮಂದಿರ ಶ್ರೀಮಂತಿಕೆಯಿಂದ ತುಂಬಿ ತಳ ತಳಸಿರುವುದು
ಪುರಾಣ ಕಾಲದ ಮಂದಿರಗಳನ್ನು ನೋಡುತ್ತಾ ಅವುಗಳನ್ನು ಣಿ೯ಸುತ್ತಾ ಇತಿಹಾಸ ಕೆದಕುತ್ತಾ ಇರುವ ನಾವು ಆಧುನಿಕ ಯುಗದಲ್ಲಿ ಹೆಚ್ಚು ವೈಭವೋಪ್ರೇರಿತ ಮಂದಿರಗಳನ್ನು ನಿಮಿ೯ಸಿರುವುದು ಕಡಿಮೆ ಇರುವುದುಇಂತಹ ಸಂದರ್ಭದಲ್ಲಿ ಜೈನ ಸಮುದಾಯವರು ನಿಮಿ೯ಸಿರುವ ಹಡಗು ಮಂದಿರ ಎಲ್ಲರ ಆಕರ್ಷಣೆಯ ಬಿಂದುವಾಗಿರುವುದುಮುಂದೆ ಇದು ಜೈನ ಧರ್ಮದ ಇತಿಹಾಸ ಆಗುವುದರಲ್ಲಿ ಯಾವ ಸಂದೇಹವು ಇಲ್ಲ.
ದೇವಾಲಯದ ಹೆಸರೆ ಹೇಳುವಂತೆ ಇದು ಹಡಗು ಮಂದಿರ. ದೂರದಿಂದ ನೋಡಿದಾಗ ದೊಡ್ಡದಾದ ಹಡಗು ಬಂದರಿನಲ್ಲಿ ಬಂದು ನಿಂತಂತೆ ಕಾಣುವುದು. ರಾತ್ರಿಯಲ್ಲಿ ನೋಡಿದಾಗ ಇದು ದೇವಾಲಯ ಎಂದು ಹೇಳಲು ಬಾಯಿ ಬರದು ಬದಲಾಗಿ ಸಮುದ್ರದಲ್ಲಿ ನಿಂತಿರುವ ಹಡಗಾಗಿರುವುದು.
ಹಡಗು ಮಂದಿರದ ಒಳಗೆ ತಳ ತಳಿಸುವ ಮಾಬ್ರಲ್, ವಿವಿಧ ಕಲ್ಲುಗಳು, ಅಗತ್ಯಕ್ಕೆ ತಕ್ಕ ಲೈಟ್ ವ್ಯವಸ್ಥೆ ಎಲ್ಲವು ಮಂದಿರದ ಸೌಂಧರ್ಯವನ್ನು ಇಮ್ಮಡಿಗೊಳಿಸಿರುವುದು.
ರಾಜಸ್ಥಾನದ ಪ್ರಮಾಸಕ್ಕಾಗಿ ತಾವುಗಳು ಬಂದರೆ ಮಂದಿರವು ಸಹಾ ನಿಮ್ಮ ಯೋಜನೆಯಲ್ಲಿರಲಿ. ಇಲ್ಲಿ ತಮಗೆ ಬೇಕಾದ ವಸತಿ ಮತ್ತು ಊಟದ ವ್ಯವಸ್ಥೆಯೂ ಇರುವುದು.

                                                                                                    ವಿವೇಕ ಬೆಟ್ಕುಳಿ


ಮಂದಿರದ ಒಳಗಿನ ತಳ ತಳಿಸುವ ಕಂಬಗಳ ಸಾಲು
ಮಂದಿರದ ಒಳಗಿನ ತಳ ತಳಿಸುವ ಕಂಬಗಳ ಸಾಲು


ಇಲ್ಲಿ ಕಾಣಿಕೆ ಹಾಕುವುದು ಹಡಗಿನಲ್ಲಿಯೇ ಆಗಿರುವುದು.

- ಮಂದಿರದ ಮೇಲ್ಭಾಗದ ಒಂದು ನೋಟ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...