ಭಾನುವಾರ, ಫೆಬ್ರವರಿ 15, 2015

ದೇಶ, ಜಾತಿ ಧರ್ಮವನ್ನು ಮೀರಿದ ಪ್ರೇಮಮಯ ಜಗತ್ತಿಗಾಗಿ ಪ್ರೇಮಿಗಳ ದಿನಾಚರಣೆ ಅಡಿಪಾಯವಾಗಲಿ




ದೇಶ, ಜಾತಿ ಧರ್ಮವನ್ನು ಮೀರಿದ  ಪ್ರೇಮಮಯ ಜಗತ್ತಿಗಾಗಿ  ಪ್ರೇಮಿಗಳ ದಿನಾಚರಣೆ ಅಡಿಪಾಯವಾಗಲಿ
               
ಪುನ: ಬಂದಿದೆ ಫಬ್ರವರಿ 14, ಈಗಾಗಲೇ ದಿನದ ಪರ ವಿರೋದಿಗಳ ಕೆಸರೆರಚಾಟ ಪ್ರಾಂರಭವಾಗಿರುವುದು. ಪ್ರೇಮಿಗಳು ಸಿಕ್ಕಿಬಿದ್ದರೆ ಮದುವೆ ಮಾಡಿಸುವುದಾಗಿ ಒಂದು ಧರ್ಮದ ಸಂಘಟನೆಯೊಂದು ಹೇಳಿದರೆ, ಇನ್ನೊಂದು ಧರ್ಮದ ಸಂಘಟನೆಗಳು ಧರ್ಮದ ಗುಂಪಿಗೆ ಆಚರಣೆ ಮಾಡದಂತೆ ಆದೇಶ ಹೊರಡಿಸಿರುವುದು. ಇವುಗಳ ಮಧ್ಯ ಎಲ್ಲಾ ಧರ್ಮದ ಪ್ರಗತಿ ಶೀಲರೆಂದು ಗುರುತಿಕೊಳ್ಳುವವರು ಸಂಘಟನೆಗಳು ತಮ್ಮದೇ ಆದ ರೀತಿಯಲ್ಲಿ ಪ್ರೇಮಿಗಳ ದಿನಾಚರಣೆ ಆಚರಿಸುವ ತಯಾರಿಯಲ್ಲಿ ಇರುವರು.
  ರೀತಿಯ ಪರ ವಿರೋಧದ ಅಭಿಪ್ರಾಯಕ್ಕೆ ರಾಜಕೀಯ ಪಕ್ಷಗಳು ತಮ್ಮದೇ ಆದ ಅಭಿಪ್ರಾಯವನ್ನು ಸೇರಿಸಿ ವಾತಾವರಣವನ್ನು ಇನ್ನೂ ಕೆಡಿಸಲು ಪ್ರಯತ್ನಿಸುತ್ತಿರುವರು. ಮಾಧ್ಯಮಗಳಾದರೂ ಇದೇ ವಿಚಾರವನ್ನು ಅತಿರಂಚಿತ ವರದಿಯನ್ನಾಗಿಸಿ ಬ್ರೇಕಿಂಗ್ ನ್ಯೂಸ ಮಾಡುವ ಕಾರ್ಯದಲ್ಲಿ ತೊಡಗಿರುವರು. ಒಟ್ಟಾರೆ ವರ್ಷಕ್ಕೆ ಒಮ್ಮೆ ಬರುವ ಪ್ರೇಮಿಗಳ ದಿನಾಚರಣೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರಚಾರ ಪಡೆದುಕೊಳ್ಳುತ್ತಿರುವುದು. ಇದು ವಿದೇಶ ಬಂಡವಾಳಿಗರ ಸಂಚು ಎಂದು ಕೆಲವರು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಿರುವರು. 
ದಿನಾಚರಣೆಯ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ಏನೇ ಇರಲಿ ಪ್ರೇಮದಲ್ಲಿ ಕಲ್ಮಶ ಹುಡುಕುವುದು ಸಾಧ್ಯವೇ? ಅಥವಾ ಪ್ರೇಮದಲ್ಲಿ ಕಲ್ಮಶ ಕಾಣುತ್ತದೆ ಎಂದರೆ ಅದು ನಿಜವಾದ ಪ್ರೇಮವೇ? ಎರಡು ರೀತಿಯಿಂದಲೂ ನಾವು ಆಲೋಚಿಸಬೇಕಾಗಿದೆ.
ಫೆಬ್ರವರಿ 14 ರಂದೇ ಪ್ರೇಮಿಗಳು ಒಟ್ಟಾಗಿ ಸೇರಿ ಮಾತನಾಡುವುದು,  ಉಡುಗೊರೆಕೊಡಬೇಕು ಎಂದು ವಾದಿಸುವುದರಲ್ಲಿ ಅರ್ಥವಿಲ್ಲ. ಒಂದು ಗುಂಪಿನ ವಿರೋಧಕ್ಕಾಗಿ ರೀತಿ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ ಬದಲಾಗಿ ದ್ವೇಷ ಬೆಳೆಯುವುದು.  ಆದರೇ ಯಾವುದೇ ನಿಜವಾದ ಪ್ರೇಮದಲ್ಲಿ ದ್ವೇಷ ಇರುವುದಿಲ್ಲ.
ಧರ್ಮದ ಸಂಸ್ಕೃತಿಯ ರಕ್ಷಣೆಗಾಗಿ ದಿನವನ್ನು ವಿರೋಧಿಸುವುದಕ್ಕಾಗಿಯೇ ಫೆಬ್ರವರಿ 14 ರಂದು ಸಿಕ್ಕ ಪ್ರೇಮಿಗಳನ್ನು ಅಥವಾ ಯಾವುದೇ ಹುಡುಗ ಹುಡುಗಿಯರನ್ನು  ಹಿಂದೆ ಮುಂದೆ ನೋಡದೇ ಒತ್ತಾಯದ ಮದುವೆ ಮಾಡಿಸುವುದು, ಆಚರಣೆ ಮಾಡದಂತೆ ಫತ್ವಾ ಹೊರಡಿಸುವುದು ಎಲ್ಲ ವರ್ತನೆಗಳು ಸಹಾ ಪ್ರತಿರೋಧವೆ ವಿನಹ ಧರ್ಮದ ರಕ್ಷಣೆಯಂತು ಅಲ್ಲವೇ ಅಲ್ಲ. ಯಾವ ಧರ್ಮವು ಒಬ್ಬರಿಗೆ ನೋವು ನೀಡಿ ಧರ್ಮ ರಕ್ಷಣೆ ಮಾಡಲು ಹೇಳುವುದಿಲ್ಲ. ರೀತಿ ಏನಾದರೂ ಇದ್ದರೇ ಅದು ಧರ್ಮವೇ ಅಲ್ಲವಾಗಿದೆ.
ದೇಶದಲ್ಲಿ ಎಲ್ಲಾ ಧರ್ಮದ ಕಟ್ಟಾ ಸಂಪ್ರದಾಯವಾದಿಗಳ ನಿಲುವುಗಳು ಸಹಾ ಕೊನೆಗಳಿಗೆಯಲ್ಲಿ ಒಂದೇ ಆಗಿರುವುದು ಅದು ನಮ್ಮ ಜಾತ್ಯಾತೀತ ಮೌಲ್ಯಗಳಿಗೆ ದಕ್ಕೆ ತರುವುದರಲ್ಲಿ ಯಾವುದೇ ಸಂಶಯವಿಲ್ಲ.
ಇತೀಚೆಗೆ ನಮ್ಮ ದೇಶದಲ್ಲಿ ನಡೆಯುತ್ತಿರುವ ವಿಧ್ಯಮಾನಗಳನ್ನು ಮಾಧ್ಯಮದಲ್ಲಿ ಗಮನಿಸಿದಾಗ ದೇಶ ತನ್ನ ಜಾತ್ಯಾತೀತ ಮೌಲ್ಯಗಳನ್ನು ಗಾಳಿಗೆ ತೂರಿ ಅವಸಾನದತ್ತ ಸಾಗುತ್ತಿರುವುದನ್ನು ಗಮನಿಸಬಹುದಾಗಿದೆ, ರಾಜಕೀಯ ಪಕ್ಷಗಳ ಪ್ರಮುಖರ ಧರ್ಮದ ಕುರಿತು ಹೇಳಿಕೆಗಳು, ಮತಾಂತರ ಗದ್ದಲ, ಸಾಧು ಸಂತರ , ಮೌಲಿಗಳ ಎಡಬಿಡಂಗಿ ಮಾತುಗಳು, ಕೋಮುಗಲಭೆ, ಧರ್ಮದ ಧಾಮರ್ಿಕ ಕೇಂದ್ರಗಳ ಮೇಲೆ ದಾಳಿ, ಎಲ್ಲವನ್ನು ನೋಡಿಯೂ ನೋಡದಂತೆ ಕುಳಿತ ಕಾ೯ರಗಳು, ಇವೆಲ್ಲವನ್ನು ಗಮನಿಸಿದಾಗ ಇದೇ ರೀತಿ ಮುಂದುವರೆದರೆ ಇನ್ನೂ ಕೆಲವು ವರ್ಷಗಳಲ್ಲಿ ನಮ್ಮ ದೇಶವು ಸಹಾ ಅರಜಕತೆಯ ಬೀಡಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಇಂತಹ ಸಂದರ್ಭದಲ್ಲಿ ದೇಶದಲ್ಲಿ ಯಾವುದೇ ದಿನಾಚರಣೆ ಬಂದರು ಅದಕ್ಕೆ ಪರ ವಿರೋಧ ಧ್ವನಿಗಳು ಇದ್ದೆ ಇರುವುದು. ಸಂದರ್ಭದಲ್ಲಿ ಜಾಗ್ರತ ನಾಗರೀಕರಾದ ಎಲ್ಲರೂ ಯೋಚಿಸಿ ಮುಂದುವರೆಯಬೇಕಾದ ಅನಿವಾರ್ಯತೆ ಇಂದಿನ ಅಗತ್ಯವಾಗಿರುವುದು. ಹಿನ್ನಲೆಯಲ್ಲಿ ಪ್ರೇಮವನ್ನು ನೋಡುವ ಅಗತ್ಯ ಇರುವುದು. ನಮ್ಮ ದೇಶದಲ್ಲಿರು ಹತ್ತಾರು, ಜಾತಿ ಧರ್ಮಗಳು ಸಾಮರಸ್ಯದಿಂದ ಇರುವುದಕ್ಕೆ ಪ್ರೇಮಮಯ ವಾತಾವರಣವೇ ಕಾರಣವಾಗಿರುವುದು. ಆದರೇ ಮೌಲ್ಯವನ್ನೇ ಮರೆತು ನಾವು ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ವರ್ಷದ 365 ದಿನವು ಯಾವುದೇ ದಿನಾಚರಣೆ ಬರಲಿ, ಬರದೇ ಇರಲಿ, ಆಚರಣೆ ಮಾಡಲಿ ಬಿಡಲಿ ನಾವು ಒಂದು ಸ್ಪಷ್ಟ ನಿಧರ್ಾರ ಮಾಡಬೇಕಾಗಿದೆ. ಜಗತ್ತಿನಲ್ಲಿ ಭಾರತ ಎಲ್ಲಾ ಧರ್ಮ, ಜಾತಿ, ವಿವಿಧ ಸಂಸ್ಕೃತಿ, ವೇಷ ಭೂಷಣ, ಭಾಷೆಗಳನ್ನು ಹೊಂದಿಯೂ  ಸಾಮರಸ್ಯದಿಂದ, ನಿಭೀ೯ತರಾಗಿ ಸಹಭಾಳ್ವೆಯಿಂದ ಬದುಕುತಿರುವ ಜೀವಂತ ಒಂದು ಉದಾಹರಣೆಯಾಗಿದೆ.   ಕಾರಣಕ್ಕಾಗಿ ದೇಶ ವಿದೇಶಗಳ ಜನ ಭಾರತೀಯ ಸಂಸ್ಕೃತಿಗೆ ಮಾರು ಹೋಗುತ್ತಿರುವರು. ಇಂತಹ ಒಂದು ಅಮೂಲ್ಯವಾದ ಆಸ್ತಿಯನ್ನು ಹೊಂದಿರುವ ನಾವು ಇದನ್ನು ಉಳಿಸಿ ಬೆಳಸಿಕೊಳ್ಳುವುದು ತುಂಬಾ ಅಗತ್ಯವಿದೆ.
ದೇಶವನ್ನು ಮೀರಿ ನಾವು ಕುವೆಂಪುರವರು ತಿಳಿಸಿದಂತೆ ಅನಿಕೇತನ ವಾಗಬೇಕು. ವಿಶ್ವ ಮಾನವರಾಗ ಬೇಕಾದ ಅಗತ್ಯವಿದೆ. ಒಂದು ಶಕ್ತಿಯೂ ಭಾರತೀಯರಿಗೆ ಇರುವುದು. ಹಿನ್ನಲೆಯಲ್ಲಿ ನಾವು ಪ್ರೇಮಿಗಳ ದಿನಾಚರಣೆಯನ್ನು ಪ್ರೇಮಮಯ ಜಗತ್ತನ್ನು ಕಾಣುವ ಹಿನ್ನಲೆಯಲ್ಲಿ ನೋಡಬೇಕಾದ ಅಗತ್ಯವಿದೆ.
ನನ್ನ ಚೇತನ,
ಆಗು ನೀ ಅನಿಕೇತನ!

                                                                                                              
  




ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...