ಶುಕ್ರವಾರ, ನವೆಂಬರ್ 30, 2012

ವಿಶ್ವ ಏಡ್ಸ್ ದಿನಾಚರಣೆ



ವಿಶ್ವ ಏಡ್ಸ್ ದಿನಾಚರಣೆ
ಮುಚ್ಚಿಟ್ಟ ಲೈಂಗಿಕತೆಯಿಂದಲೇ ದಿನೇ ದಿನೇ ಹೆಚ್ಚುತ್ತಿರುವ ಏಡ್ಸ್ .
ಮಾನವ ಮೂಲತ: ಒಂದು ಪ್ರಾಣಿ. ಆದರೇ ಬುದ್ದಿವಂತ ಪ್ರಾಣಿ ಎಂದು ನಾವು ಹೇಳಿಕೊಳ್ಳುತ್ತಿರುವೆವು. ಅದಕ್ಕಾಗಿಯೇ ಸಮಾಜ, ರೀತಿ, ನೀತಿ ನಿಯಮ, ಸರಿ ತಪ್ಪು, ದೇವರು, ಧರ್ಮಗಳನ್ನು ನಾವು ಸೃಷ್ಠಿಮಾಡಿಕೊಂಡು ಜೀವನ ಸಾಗಿಸುತ್ತಿರುವೆವು. ನಾವೇ ಸೃಷ್ಠಿ ಮಾಡಿದ ಸಮಾಜದ ನೀತಿ ನಿಯಮದ ಬಗ್ಗೆ ಮಾತನಾಡುವ ಧೈರ್ಯ ಸಹಾ ನಮಗೆ ಇಲ್ಲ. ನಾವು ಮಾಡಿಕೊಂಡ ಕಾನೂನು ಸಹಾ ಅದನ್ನು ವಿರೋಧಿಸುವುದು.
ಆದರೇ ಮೂಲತ:  ಪ್ರಾಣಿಯಾದ ಮಾನವನಿಗೆ ಇತರೆ ಪ್ರಾಣಿಗಳಂತೆ ಹಸಿವು, ನಿದ್ರೆ, ಲೈಂಗಿಕತೆ ಇವು ಸ್ವಾಭಾವಿಕವಾಗಿಯೆ ಇರುವುದು. ಇದರಲ್ಲಿಯೂ ಸಹಾ ನಾವು ನಮ್ಮದೇ ಆದ ನೀತಿ ನಿಯಮವನ್ನು ಸೃಷ್ಠಿ ಮಾಡಿಕೊಂಡಿರುವೆವು.  ಸರಿಯಾದ ವೇಳೆಗೆ ಆಹಾರ ಸೇವನೆ, ನಿದಿಷ್ರ್ಟ ಅವಧಿಯಲ್ಲಿ ನಿದ್ದೆ, ನಾಲ್ಕು ಗೋಡೆಯ ನಡುವೆ ಲೈಂಗಿಕತೆ ರೀತಿಯ ನಿಯಮಗಳನ್ನು ಹೆಚ್ಚಾಗಿ ಪಾಲಿಸುತ್ತಾ ಬಂದಿರುವೆವು. ಆದರೇ ಪ್ರಾಣಿಗಳಲ್ಲಿ ರೀತಿಯಾಗಿಲ್ಲ ಹಸಿವಾದಾಗ ಆಹಾರ ಸೇವನೆ, ಹೊಟ್ಟೆ ತುಂಬಿದಾಗ ನಿದ್ದೆ, ಲೈಂಗಿಕತೆಯ ಅಗತ್ಯತೆ ಏನಿಸಿದಾಗ ಅನ್ಯ ಲಿಂಗದ ಜೊತೆ ಲೈಂಗಿಕತೆ ಇವು ಸ್ವಾಭಾವಿಕವಾಗಿದೆ. ಅದರಲ್ಲಿ ಒಂದೇ ಹೆಂಡತಿ, ಗಂಡ, ತಾಯಿ, ಮಗ, ಬೇರೆಯವರ ಮನೆ ರೀತಿಯ ವಿಭಾಗಗಳಿಲ್ಲ. ಯಾರಿಗೂ ಕಾಣದಂತೆ ಕೋಣೆಯಲ್ಲಿ, ಮರೆಯಾಗಿ ಲೈಂಗಿಕತೆ ಮಾಡುವ ಅಗತ್ಯವೂ ಪ್ರಾಣಿಗೆ ಇಲ್ಲ. ಸ್ವಾಭಾವಿಕವಾಗಿ ಜೀವಿಯ ಮೂರು ಅಗತ್ಯತೆಗಳನ್ನು ಆಯಾ ಸಂದರ್ಭದಲ್ಲಿ ನೆರವೆರಿಸಿಕೊಳ್ಳುತ್ತಿರುವವು. ಆದರೇ ಅದೇ ಪ್ರಾಣಿ ಜಾತಿಯಲ್ಲಿ ಹುಟ್ಟಿದ ಮಾನವ ತಾನೇ ಮಾಡಿಕೊಂಡ ಚೌಕಟ್ಟಿನಲ್ಲಿ ಮೂರು ಅಗತ್ಯತೆಯನ್ನು ಪೂರೈಸಿಕೊಳ್ಳುವ ಕಟ್ಟುಪಾಡನ್ನು ವಿಧಿಸಿಕೊಂಡಿರುವನು. ಸಹಜವಾಗಿರುವ ಆಶೆಯವನ್ನು ಕಟ್ಟುಪಾಡಿನ ಸಂಪ್ರದಾಯದಲ್ಲಿ ನೆರೆವೆರಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಸಹಜವಾಗಿ ಸಂಪ್ರದಾಯ ಒಪ್ಪದ ರೀತಿಯಲ್ಲಿ ಅಗತ್ಯ ಚಟುವಟಿಕೆಗಳು ನಡೆಯುವುದು. ಅಂತಹ ಚಟುವಟಿಕೆಗಳು ಹೊರಬಂದಾಗ ಮಾಧ್ಯಮಗಳಿಗೆ ದೊಡ್ಡ ಸುದ್ದಿಯಾಗುವುದು ಪುನ: ಸರಿ ತಪ್ಪುಗಳ ಬಗ್ಗೆ ZÂð ಮಾಡುತ್ತಿರುವೆವು. ನಾವು ಎಂದಿಗೂ ಅದೊಂದು ಸಹಜ ಕ್ರೀಯೆ ಎಂಬುದನ್ನು ಒಪ್ಪು ತಯಾರಿಲ್ಲ.
ರೀತಿಯ ನಾವೇ ಮಾಡಿಕೊಂಡ ಚೌಕಟ್ಟಿನಲ್ಲಿ ಎಡವಿದರ ಪರಿಣಾಮವಾಗಿ ಇಂದು ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವೆವು. ಅದರಲ್ಲಿ ಲೈಂಗಿಕತೆ ಬಗ್ಗೆ ನಮಗೆ ಇರುವ ಚೌಕಟ್ಟು, ಸಮಾಜದ ದೃಷ್ಠಿಕೋನ ಇವೆಲ್ಲವುಗಳ ಪರಿಣಾಮವೇ ಇಂದು ನಾವು ಏಡ್ಸ್ ದಿನಾಚರಣೆ ಮಾಡುವ ಸ್ಥಿತಿಗೆ ಬಂದು ತಲುಪಿರುವೆವು. ಏಡ್ಸ್ ಎಂಬ ಮಾಹಾಮಾರಿಕೆ ದಿನೇ ದಿನೇ  ಸಾಕಷ್ಟು ಜನರು ಬಲಿಯಾಗುತ್ತಾ ಇರುವರು ಹೆಚ್ಚಾಗಿ ಏನೂ ತಿಳಿಯದ ಮಕ್ಕಳು ಬಲಿಯಾಗುತ್ತಿರುವುದು ಆತಂಕಕಾರಿಯಾದ ವಿಚಾರವಾಗಿದೆ.
  ಮುಕ್ತ ಲೈಂಗಿಕತೆ, ಲೈಂಗಿಕ ಶಿಕ್ಷಣದ ಅಗತ್ಯತೆ : ನಮ್ಮ ದೇಶದಲ್ಲಿ ಯುವ ಪೀಳಿಗೆಗೆ ಮುಖ್ಯವಾಗಿ ಲೈಂಗಿಕ ಶಿಕ್ಷಣದ ಅಗತ್ಯತೆ ಇರುವುದು. ನೀರೋಧ, ಗರ್ಭನಿರೋಧಕ ಮಾತ್ರೆಗಳು, ಲೈಂಗಿಕ ಕಾಯಿಲೆಗಳು, ಸುರಕ್ಷಿತ ಲೈಂಗಿಕತೆ ಇವುಗಳ ಬಗ್ಗೆ ಬಾಲ್ಯಾವಸ್ಥೆ ಮುಗಿಸಿ ಬರುವ ಪ್ರತಿಯೊಬ್ಬರಿಗೂ ಮಾಹಿತಿಯ ಅಗತ್ಯತೆ ಇರುವದು. ನೀರೋಧ ಬಳಕೆಯ ಬಗ್ಗೆ ಕೆಲ ಧಾಮರ್ಿಕ ಮುಖಂಡರ ಆಕ್ಷೇಪ, ಲೈಂಗಿಕ ಶಿಕ್ಷಣದ ಬಗ್ಗೆ ಆಕ್ಷೇಪ ಇವೆಲ್ಲವೂ ಸ್ವಾಭಾವಿಕವಾಗಿದೆ ಬಗ್ಗೆ ಹೆಚ್ಚಿನ ಮಹತ್ವವನ್ನು ನೀಡದೇ ಆಗಬೇಕಾಗಿರವ ಕಾರ್ಯಕ್ಕೆ ಹೆಚ್ಚಿನ ಗಮನ ನೀಡುವ ಅಗತ್ಯತೆ ಇದೆ. ಯಾವುದೇ ಬದಲಾವಣೆಯನ್ನು ಎಲ್ಲರಿಗೂ ಅರ್ಥಮಾಡಿಸಿ ಬದಲಾಯಿಸಲು ಸಾಧ್ಯವಿಲ್ಲ. ಬದಲಾಗಿ ಬದಲಾಯಿಸಿ ಎಲ್ಲರಿಗೂ ಅರ್ಥಮಾಡಿಸುವದನ್ನು ನಾವು ಕಂಡು ಕೊಳ್ಳುವ ಅಗತ್ಯತೆ ಇರುವುದು. ಪ್ರೌಢ ಶಾಲಾ ಹಂತದಲ್ಲಿ ಲೈಂಗಿಕ ಶಿಕ್ಷಣ ಕಡ್ಡಾಯ ಮಾಡುವುದು, ಲೈಂಗಿಕ ಕಾಯಿಲೆ, ಸುರಕ್ಷಿತ ಲೈಂಗಿಕತೆ ಬಗ್ಗೆ ಮುಕ್ತವಾಗಿ ಮಾತನಾಡುವಂತಹ ವಾತಾವರಣ ಸೃಷ್ಠಿಸುವುದು, ಲೈಂಗಿಕತೆಯನ್ನು ಧಾ«ÄÃðಕತೆ, ತಪ್ಪು ಸರಿ ಹಿನ್ನಲೆಯಲ್ಲಿ ನೋಡದೇ ಸಹಜವಾಗಿ ನೋಡುವ ವಾತಾವರಣವನ್ನು ಸೃಷ್ಠಿಸುವುದು ಬಗ್ಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ.
 ಇಲ್ಲಿ ನಾವು ಸಂಪ್ರದಾಯ ತಪ್ಪು, ಸರಿ ಎಂದು ZÂð ಮಾಡುತ್ತಾ ಇದ್ದರೇ ಮುಂದಿನ ಕೆಲವು ವರ್ಷಗಳಲ್ಲಿ ಏಡ್ಸ್ ಕಾಯಿಲೆ ಜನಸಂಖ್ಯೆಯ ಬಹುಪಾಲನ್ನು ಆಕ್ರಮಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
ಡಿಸೆಂಬರ 1 ನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತಿದೆ. ದಿನದಂದು ಮಾತ್ರ ಮಾಹಾ ಮಾರಿಯ ಬಗ್ಗೆ ಚಚರ್ೆನಡೆಸುವುದು, ಮೆರವಣಿಗೆ ಮಾಡುವುದು ಇವೆಲ್ಲವುಗಳ ಜೊತೆಗೆ ಹಳ್ಳಿ ಹಳ್ಳಿಯಲ್ಲಿ ಇದರ ಬಗ್ಗೆ ತಿಳಿಯುವಂತೆ ಮಾಡುವ  ಅಗತ್ಯವಿದೆ. ಕೇವಲ 30 ವರ್ಷಗಳಲ್ಲಿ ಏಡ್ಸ್ ನಮ್ಮ ಜಗತ್ತನ್ನು ವ್ಯಾಪಿಸಿರುವ ರೀತಿ ತುಂಬಾ ಭಯಾನಕವಾಗಿರುವುದು. ಮುಂಬರುವ ದಿನಗಳು ಇನ್ನೂ ಭಯಾನಕವಾಗುವ ಮೊದಲೇ ನಮ್ಮ ಸಂಪ್ರದಾಯವನ್ನು ಸ್ವಲ್ಪ ಸಡಿಲಗೊಳಿಸುವ ಅಗತ್ಯತೆ ಇರುವುದು. ನಾವೇ ಎಷ್ಟೇ ಬುದ್ದಿಜೀವಿಗಳೆಂದು ಹೇಳಿಕೊಂಡರೂ ಕಾಯಿಲೆಗೆ ನಾವು ಇದೂವರೆಗೂ ಪರಿಣಾಮಕಾರಿಯಾದ ಔಷಧವನ್ನು ಕಂಡುಹಿಡಿಯಲು ವಿಫಲರಾಗಿರುವೆವು ಎಂಬುದನ್ನು ನಾವು ಮರೆಯಬಾರದು.
ವಿವೇಕ ಬೆಟ್ಕುಳಿ
vivekpy@gmail.com

ಬುಧವಾರ, ಅಕ್ಟೋಬರ್ 31, 2012

ಕನ್ನಡದ ಅಭಿವೃದ್ಧಿ



ಕನ್ನಡದ ಬಗ್ಗೆ ಅಭಿರುಚಿ ಮೂಡುವಂತೆ ಮಾಡುವುದೇ ಕನ್ನಡದ ಅಭಿವೃದ್ಧಿ
ಕನ್ನಡ ಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ, ಐತಿಹಾಸಿಕ ಹಿನ್ನಲೆ ಇರುವುದು. ಹಾಗೇ ಕನ್ನಡ ಭಾಷೆ ಸರಳ, ಸಹಜ, ಇಂಪಾಗಿರುವುದು ಕೂಡ. ಜಾಗತಿಕರಣದ ಪ್ರಭಾವದಿಂದ ಇಂದು ಎಷ್ಟೋ ಸಾಂಪ್ರದಾಯಿಕ ಕಲೆಗಳು, ವಸ್ತುಗಳು, ತಮ್ಮತನ್ನವನ್ನು ಕಳೆದುಕೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ. ಅದರಂತೆ ಜಾಗತೀಕರಣ ಹೊಡೆತ ಪ್ರಾಂತೀಯ ಭಾಷೆಗಳು ಮೇಲೂ ಆಗಿರುವುದು.  ಇಂತಹ ಸಂದಿಗ್ಧ ಸಂದರ್ಭದಲ್ಲಿ ನಮ್ಮ ಕನ್ನಡ ಭಾಷೆಯ ಮೇಲೆಯೂ ಸಹಾ ಜಾಗತಿಕರಣದ ಪ್ರಭಾವ ಉಂಟಾಗಿರುವುದು.  ಮೊದಮೊದಲು ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಕನ್ನಡದ ಕಂಪು ಕಡಿಮೆಯಾಗುತ್ತಾ ಬಂದು ಈಗ ಹಳ್ಳಿಗಳಲ್ಲಿಯೂ ಸಹಾ ಬೇರೆ ಭಾಷೆಗಳ ಪ್ರಭಾವ ಹೆಚ್ಚಾಗಿರುವುದನ್ನು ಗಮನಿಸಬಹುದಾಗಿದೆ.
ಕನ್ನಡ ಭಾಷೆಯ ಏಳ್ಗೆಗಾಗಿ ಕಾ೯, ಹತ್ತು ಹಲವಾರು ಸಂಘಟನೆಗಳು. ರಾಜಕೀಯ ಪಕ್ಷಗಳು, ಸಾಹಿತಿಗಳು ಹೀಗೆ ಅನೇಕರು ಅವರದೇ ಆದ ರೀತಿಯಲ್ಲಿ ಪ್ರಯತ್ನ ಪಡುತ್ತಲೇ ಇರುವರು. ಆದರೇ ಎಲ್ಲಾ ಪ್ರಯತ್ನಗಳಿಂದ ಹೇಳಿಕೊಳ್ಳುವಂತಹ ಭಾಷೆಯ ಏಳ್ಗೆ ನೀರಿಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ.
ಕನ್ನಡ ಭಾಷೆಯ ಬಗ್ಗೆ ನಾವು ಜಾಗ್ರತವಾಗುವುದು ಒಂದು ಕಾವೇರಿ ನೀರು, ಕನ್ನಡ ರಾಜ್ಯೋತ್ಸವ, ಸಾಹಿತ್ಯ ಸಮ್ಮೆಳನ, ಉಳಿದಂತೆ ಸಭೆ ಸಮಾರಂಭಗಳಲ್ಲಿ ಮಾತ್ರವಾಗಿದೆ. ನಮ್ಮಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ನಿರಂತರ ಕಟ್ಟುವ ಕಾರ್ಯ ನಡೆದಿಲ್ಲ ಎಂಬುದು ಅಕ್ಷರಶಹ ಸತ್ಯವಾಗಿದೆ.
ಭಾಷೆಯ ಅಭಿರುಚಿಯನ್ನು ಜನರಲ್ಲಿ ಹೆಚ್ಚಿಸಿ ಅದನ್ನು ಉಳಿಸಿಕೊಳ್ಳಬೇಕು ಬದಲಾಗಿ ಯಾವುದೇ ಕಾನೂನು, ನಿಯಮದಿಂದ, ಬಲವಂತದಿಂದ ಭಾಷೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಿರುವುದಿಲ್ಲ. ಮುಖ್ಯವಾಗಿ ಭಾಷೆಯ ಪ್ರಭಾವಶಾಲಿ ಚಲನೆ ಇರುವುದು ವಿವಿಧ ಮಾಧ್ಯಮ ಮತ್ತು ಶಾಲೆಯಲ್ಲಿ ಆಗಿರುವುದು. ಆದ್ದರಿಂದ ಮಾಧ್ಯಮ ಮತ್ತು ಶಾಲೆಯಲ್ಲಿ ಕನ್ನಡದ ಬಗ್ಗೆ ಅಭಿರುಚಿ ಮೂಡಿಸುವಂತಹ ಕಾರ್ಯವನ್ನು ಮಾಡಬೇಕಾಗಿದೆ.
ನಮ್ಮ ರಾಜ್ಯದಲ್ಲಿ 50 ಸಾವಿರಕ್ಕೂ ಅಧಿಕ ಸಕರ್ಾರಿ ಶಾಲೆಗಳಿವೆ ಕನ್ನಡ ಭಾಷೆಯನ್ನು ಏನಾದರೂ ಅಭಿವೃದ್ಧಿ ಪಡಿಸಬೇಕೆಂದರೆ ಮುಂಚೆ ಶಾಲೆಗಳಿಂದಲ್ಲೇ ಕಾರ್ಯ ಪ್ರಾರಂಭವಾಗಬೇಕಾಗಿದೆ. ಆದರೇ ದುರಾದೃಷ್ಟವಶಾತ ನಮ್ಮ ಕಾ೯ರಿ ಶಾಲೆಗಳ ಬಗ್ಗೆ ನಮಗೆ ನಂಬಿಕೆ ಇಲ್ಲವಾಗಿದೆ. ಕನ್ನಡದ ಬಗ್ಗೆ ಹೋರಾಟ ಮಾಡುವ ಪಕ್ಷ, ಸಂಘಟನೆ, ಕವಿಗಳು, ಸಾಹಿತಿಗಳು, ರಾಜಕಾರಣಿಗಳು ಒಟ್ಟಾರೆ ಭಾಷಣ ಮಾಡುವ ಎಲ್ಲಾ ಅರ್ಹತೆ ಮತ್ತು ಹುದ್ದೆ ಪಡೆದವರ ಮಕ್ಕಳು ಮೊಮ್ಮಕ್ಕಳು 90 ಶೇಕಡಾಕ್ಕೂ ಅಧಿಕ ಮಂದಿ ಇಂಗ್ಲೀಷ ಅಥವಾ ಖಾಸಗಿ ಶಾಲೆಯಲ್ಲಿಯೇ ಇರುವುರು. ಸಕರ್ಾರಿ ಶಾಲೆಯಲ್ಲಿ ಪಾಠ ಮಾಡುತ್ತಿರುವ 90 ಶೇಕಡಾ ಶಿಕ್ಷಕರ ಮಕ್ಕಳು ಓದುತ್ತಿರುವುದು ಖಾಸಗಿ ಶಾಲೆಯಲ್ಲಿಯೇ ಆಗಿರುವುದು. ವ್ಯವಸ್ಥೆಯಲ್ಲಿ ಪ್ರಮುಖ ಹುದ್ದೆಯಲ್ಲಿರುವವರಿಗೆ ವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲದ ಮೇಲೆ ವ್ಯವಸ್ಥೆಯ ಪ್ರಮುಖ ಭಾಗೀದಾರರಾದ ಸಾಮಾನ್ಯ ಜನರಿಗೆ ಹೇಗೆ ತಾನೇ ನಂಬಿಕೆ ಬರಲು ಸಾಧ್ಯ? ದಿನ ಕಳೆದಂತೆ  ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ಕನ್ನಡ ಭಾಷೆಯ ಶಿಕ್ಷಣ, ಕಾ೯ರಿ ಶಾಲೆ ಬಗ್ಗೆ ಪ್ರಶ್ನೆಗಳು ಬರುತ್ತಲ್ಲೇ ಇರುವುದು.
ಕನ್ನಡ ಮಾಧ್ಯಮದಲ್ಲಿ ನಾನು ವಿಜ್ಞಾನದಲ್ಲಿ ಪದವಿ ಪಡೆಯಲು ಬಯಸಿದರೇ ಅದಕ್ಕೆ ಅವಕಾಶ ಇಲ್ಲ, ಇದ್ದರೇ ಅದಕ್ಕೆ ಯೋಗ್ಯವಾದ ಕನ್ನಡ ಪುಸ್ತಕಗಳಿಲ್ಲ. ದೊಡ್ಡ ದೊಡ್ಡ ಪಟ್ಟಣಕ್ಕೆ ಹೋಗಿ ಯಾವುದೇ ಕಂಪನಿಯಲ್ಲಿ ಕಾರ್ಯನಿರ್ವಹಿಸಲು ಕೇವಲ ಕನ್ನಡ ಸಾಕಾಗುವುದಿಲ್ಲ. ಅನಿವಾರ್ಯವಾಗಿ ನಾವು ಇಂಗ್ಲೀಷ ಭಾಷೆಯನ್ನು ತಬ್ಬಿಕೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ. ಇಂಗ್ಲೀಷ ಭಾಷೆಯ ಹಿಡಿತದಿಂದ ಅವಕಾಶಗಳು ಹೆಚ್ಚಿಗೆ ಇರುವುದು ಎಂಬುದು ಎಲ್ಲರಿಗೂ ಅರ್ಥವಾಗಿದೆ. ರೀತಿಯ ಸಂದರ್ಭದಲ್ಲಿ ನಮ್ಮ ಕನ್ನಡ ಭಾಷೆಯನ್ನು ಹೇಗೆ ಬೆಳಸಿಕೊಂಡು ಹೋಗಬೇಕು ಎಂಬುದರ ಬಗ್ಗೆ ಚಿಂತನೆ ಆಗಲೇ ಬೇಕಾಗಿದೆ.
 ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ತಿಂಗಳುಗಳ ಕಾಲ ವಿವಿಧ ಮನರಂಜನೆ ಕಾರ್ಯಕ್ರಮಗಳು ನಡೆಯುವುದು, ಭಾಷೆಯ ಅಭಿವೃದ್ಧಿಗಾಗಿ ದೊಡ್ಡ ದೊಡ್ಡ ಘೋಷಣೆಗಳು ಹೊರಬೀಳುವುದು. ವಿವಿಧ ಭಾಷಣ ಭರವಸೆಗಳ ಮಹಾಪೂರವೇ ಹರಿಯುವುದು. ಎಲ್ಲಾ ರೀತಿಯ ಕಾರ್ಯಕ್ರಮಗಳಿಂದ ವರ್ಷದ ಕನ್ನಡ ರಾಜ್ಯೋತ್ಸವ ವಿಜ್ರಂಭಣೆಯಿಂದ ಆಯಿತು ಎಂದು ಹೇಳಬಹುದೇ ವಿನಹಾ ಕನ್ನಡ ಭಾಷೆಗೆ ಏನು ಪ್ರಯೋಜನ ಆಯಿತು ಎಂಬುದನ್ನು ಹೇಳಲು ಸಾಧ್ಯವಿಲ್ಲವಾಗಿದೆ.
ನಮ್ಮ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆಯ ಭೋದನೆಯ ಬಗ್ಗೆ ಗಮನಿಸುವ ಅಗತ್ಯವಿದೆ. ನಮ್ಮ ಎಲ್ಲಾ ಕನ್ನಡ ಶಾಲೆಗಳಲ್ಲಿ ಜಗತ್ತಿನ ಎಲ್ಲಾ ಬಗ್ಗೆಯ ಮಾಹಿತಿಗಳು ಕನ್ನಡ ಪುಸ್ತಕದಲ್ಲಿಯೇ ಸಿಗುವಂತಹ ವ್ಯವಸ್ಥೆ ಆಗ ಬೇಕಾಗಿದೆ. ಇಂಗ್ಲೀಷ್, ಹಿಂದಿ ಇತರ ಅನೇಕ ಭಾಷೆಗಳಲ್ಲಿ ಇರುವ ವಿಜ್ಞಾನ, ಗಣಿತ, ಸಾಹಿತ್ಯ, ತಂತ್ರಜ್ಞಾನ ಹೀಗೆ ಎಲ್ಲಾ ಬಗೆಯ ಪುಸ್ತಕಗಳು ಕನ್ನಡಕ್ಕೆ ಅನುವಾದಿಸುವ ಕಾರ್ಯ ಹೆಚ್ಚು ಹೆಚ್ಚು ಆಗಬೇಕಾಗಿದೆ ಅದರ ವಿತರಣೆ ಎಲ್ಲಾ ಸಕರ್ಾರಿ ಶಾಲೆಗಳಿಗೂ ಕಡ್ಡಾಯವಾಗಿ ಆಗಬೇಕಾಗಿದೆ. ನಮ್ಮ ಶಾಲೆ, ಗ್ರಂಥಾಲಯ ಕನ್ನಡ ಭಾಷೆಯಲ್ಲಿಯೇ ಜಗತ್ತಿನ ಬಗ್ಗೆ ತಿಳಿಸುವ ಮಾಹಿತಿ ಕೇಂದ್ರಗಳಾಗುವಂತೆ ಗಮನಹರಿಸಬೇಕಾಗಿದೆ. ನಮ್ಮ ಪ್ರತಿ ಬಾರಿಯ ರಾಜ್ಯೋತ್ಸವಕ್ಕೆ ಪ್ರತಿ ಶಾಲೆಗೂ ಅನೇಕ ಪುಸ್ತಕಗಳು ಸಿಗುವಂತ ವ್ಯವಸ್ಥೆ ಆಗಬೇಕಾಗಿದೆ. ಮಾದ್ಯಮಗಳು ಕೂಡ ದೇಶ ವಿದೇಶದ ಮಾಹಿತಿಯನ್ನು ಕನ್ನಡದಲ್ಲಿ ತಿಳಿಸುವಂತೆ ಮಾಡಬೇಕು. ಯಾರು ಏನೇ ಓದಲು ತಿಳಿಯಲು ಪ್ರಯತ್ನಿಸಿದರೂ ಅದೂ ಕನ್ನಡದಲ್ಲಿ ಸಿಗುವಂತೆ ಮಾಡಬೇಕಾಗಿದೆ.
ಕನ್ನಡ ತಂತ್ರಾಶದ ಬಗ್ಗೆ ವ್ಯಾಪಕ ಪ್ರಚಾರ, ವಿವಿಧ ಕನ್ನಡ ವೆಬ್ತಾಣಗಳ ರಚನೆ ಆಗಬೇಕಾಗಿದೆ. ಕನ್ನಡ ಭಾವುಟ ಹಾರಿಸುವುದು, ಕೂಗುವುದು, ಎಮ್ಮೆಗಳ ಮೆರವಣಿಗೆ ಮಾಡುವುದು, ಎಡಬಿಡಂಗಿ ರಾಜಕಾರಣಗಳ ಮಾತಿಗೆ ವಿರೋಧ ವ್ಯಕ್ತಪಡಿಸಿ ಹರತಾಳ, ಮೆರವಣಿಗೆ ಮಾಡುವುದು ಇವುಗಳಿಂದ ತಾತ್ಕಾಲಿಕವಾದ ಕನ್ನಡ ಟಿವಿಯಲ್ಲಿ ಸುದ್ದಿ ಬರಬಹುದೇ ವಿನ: ಭಾಷೆಯ ಅಭಿವೃದ್ಧಿ ಖಂಡಿತಾ ಸಾಧ್ಯವಿಲ್ಲ.
ಒಂದು ಭಾಷೆಯ ಬೆಳವಣಿಗೆ ಆಗಬೇಕು ಎಂದರೆ ಅದು ಭಾಷೆಯನ್ನು ಹೆಚ್ಚು ಹೆಚ್ಚು ಜನರು ಬಳಸಿದರೆ ಮಾತ್ರ ಸಾಧ್ಯವಿರುವುದು. ಬದಲಾಗಿ ಇನ್ನೊಂದು ಭಾಷೆಯನ್ನು ವಿರೋಧಿಸುವುದು, ಅನ್ಯ ಭಾಷೆಯನ್ನಾಡುವ ಜನರನ್ನು ವಿರೋಧಿಸುವುದು ಇದು ನಮಗೆ ನಮ್ಮ ಭಾಷೆ ಮತ್ತು ರಾಜ್ಯದ ಬಗ್ಗೆ ಇರುವ ಭಯವನ್ನು ಸೂಚಿಸುವುದೇ ವಿನಹ ಇದರಿಂದ ಯಾವುದೇ ಬದಲಾವಣೆ ಖಂಡಿತಾ ಆಗುವುದಿಲ್ಲ. ನಾವು   ರಾಷ್ಟ್ರಕವಿ ಕುವೆಂಪು ಆಶಿಸಿರುವಂತೆ ವಿಶ್ವಮಾನವರಾಗಿ ಕನ್ನಡ ಉಳಿಸಿ ಬೆಳಸುವ ಕಾರ್ಯವನ್ನು ಮಾಡಬೇಕಾಗಿದೆ. ಬದಲಾಗಿ ಕುವೆಂಪು, ಬಸವಣ್ಣ, ಕನಕದಾಸ ಇಂತಹ ವ್ಯಕ್ತಿಗಳನ್ನೇ ನಮ್ಮ ಜಾತಿಯ ವ್ಯಕ್ತಿಗಳೆಂದು ಹೇಳುತ್ತಾ ಅವರನ್ನು ರಾಜ್ಯಕ್ಕೆ, ಒಂದು ಧರ್ಮಕ್ಕೆ, ಜಾತಿಗೆ, ಪಂಗಡಕ್ಕೆ ಸೀಮಿತಪಡಿಸುವುದರಲ್ಲಿ ಯಾವ ಪ್ರಯೋಜನವು ಇಲ್ಲ. ಬದಲಾಗಿ ನಾವೆಲ್ಲರೂ ಒಟ್ಟಾಗಿ ಕನ್ನಡವನ್ನು ಸಕಾರಾತ್ಮಕವಾಗಿ ಬೆಳಸುವ ದಿಶೆಯಲ್ಲಿ ನಿರಂತರವಾಗಿ ಪ್ರಯತ್ನಿಸಬೇಕಾಗಿದೆ.

                                                                                                                                                             ವಿವೇಕ ಬೆಟ್ಕುಳಿ ಕುಮಟಾ

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...