ಮಂಗಳವಾರ, ಅಕ್ಟೋಬರ್ 9, 2018

ಪ್ರತಿ ಮನೆಯ ಸಂಭ್ರಮವಾಗುತ್ತಿರುವ ಹುಟ್ಟು ಹಬ್ಬದ ಆಚರಣೆ


ಪ್ರತಿ ಮನೆಯ ಸಂಭ್ರಮವಾಗುತ್ತಿರುವ ಹುಟ್ಟು ಹಬ್ಬದ ಆಚರಣೆ
ಇಂದು ನನ್ನ ಸ್ನೇಹಿತ ಕಿರಣನ ಹುಟ್ಟಿದ ಹಬ್ಬ ಇತ್ತು. ನಮಗೆಲ್ಲಾ ಚಾಕಲೇಟ್ ಕೊಟ್ಟನು. ಶಾಲೆಯಲ್ಲಿ ಇರುವ ಎಲ್ಲಾ ಮಕ್ಕಳಿಗೂ ಚಾಕಲೇಟ್ ಕೊಟ್ಟಿರುವನು. ಆಯಿ.. ನನ್ನ ಹುಟ್ಟು ಹಬ್ಬ ಯಾವಾಗ.,,, ಶಿರಶಿ ತಾಲ್ಲೂಕಿನ ಕೊರ್ಲಕಟ್ಟಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 90 ದಶಕದಲ್ಲಿ ಓದುತ್ತಿದ್ದ ನಾನು ಮನೆಗೆ ಬಂದು ಕೇಳಿದೆನು. ಶಾಲೆಯಲ್ಲಿ ಓದುತ್ತಿದ್ದ ಸುಮಾರು 200 ಮಕ್ಕಳಲ್ಲಿ ಆ ಕಾಲದಲ್ಲಿ ಶಾನಭಾಗ, ಭಟ್ಟ್ ತೇಲಂಗ್.. ಇಂತಹ ಮನೆಯಿಂದ ಬಂದ ನಾಲ್ಕಾರು ಮಕ್ಕಳು ಮಾತ್ರ ಹುಟ್ಟು ಹಬ್ಬದ ದಿನ ಹೊಸ ಬಟ್ಟೆಯನ್ನು ಧರಿಸಿ ಬರುತ್ತಿದ್ದರು. ಶಾಲೆಯ ಎಲ್ಲಾ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಚಾಕಲೇಟು ಹಂಚುತ್ತಿದ್ದರು. ಉಳಿದ ನಮಗೆ ಯಾರಿಗೂ ಸಹಾ ತಾವು ಹುಟ್ಟಿದ ದಿನ ಯಾವುದು ಎಂದುದು ತಿಳಿದಿರಲಿಲ್ಲ. ಶಾಲೆಯ ನೊಂದಣಿ ಪುಸ್ತಕದಲ್ಲಿ ಎಲ್ಲರದು ಜುಲೈ 1 ಹುಟ್ಟಿದ ದಿನವಾಗಿ ದಾಖಲೆಗಾಗಿ ಬರೆಸುತ್ತಿದ್ದರು. ನಾನು ಹುಟ್ಟಿದು ರವಿವಾರ ಅದಕ್ಕಾಗಿಯೇ. ಇಂದು ತಲೆ ಕುದಲನ್ನು ಹೊಡಸಬೇಡ ಎಂಬ ಆಯಿಯ ಎಚ್ಚರಿಕೆಯಿಂದ ನಾನು ಹುಟ್ಟಿದ ವಾರ ಪಕ್ಕಾ ಆಗಿತ್ತು. ನನ್ನ ಹುಟ್ಟಿದ ಹಬ್ಬದ ಬಗ್ಗೆ ಮಾತಾಡಿದರೆ ರವಿವಾರ ಮೀನು ತಂದಿರುವುದು ಅದೇ ಸಂಭ್ರಮಕ್ಕೆ ಎಂದು ಆಯಿ,,,,, ಸಮಜಾಯಿಷಿ ನೀಡುತ್ತಿದ್ದರು. ಹೌದು ಇವೆಲ್ಲಾ 20-25 ವರ್ಷದ ಹಿಂದಿನ ಮಾತಾಗಿರುವುದು. ಆದರೇ ಇಂದು ಅದೇ ನನ್ನ ಆಯಿ ಇಂದು ಅಣ್ಣನ ಮಗಳ ಹುಟ್ಟಿದ ಹಬ್ಬದ ಆಚರಣೆ ಬಗ್ಗೆ ವಾರದ ಮೊದಲೆ ತಯಾರಿ ಮಾಡಿಕೊಳ್ಳುವಳು.
ಹೌದು ಚೌತಿ, ದೀಪಾವಳಿ, ಸಂಕ್ರಾತಿ ಅಥವಾ ಬೇರೆ ಯಾವುದೋ ವಿಶೇಷ ದಿನದಂದು ಹುಟ್ಟಿದರೇ ಮಾತ್ರ ಅಂದಿನ ತಾಯಂದಿರಿಗೆ ತಮ್ಮ ಮಕ್ಕಳು ಹುಟ್ಟಿದ ದಿವಸ ನೆನಪಿರುತ್ತಿತ್ತು. ಇಲ್ಲಾ ಅಂದರೇ ಇಲ್ಲ. ಹುಟ್ಟಿದ ಹಬ್ಬದ ಸಂಭ್ರಮ ಮುಂಚೆ ಇರುತ್ತಿರಲಿಲ್ಲ. ಆ ಬಗ್ಗೆ ಹೆಚ್ಚಿನ ಜನಕ್ಕೆ ಗೊತ್ತು ಇರಲಿಲ್ಲ.
ಇಂದು ಕಾಲ ಬದಲಾಗಿದೆ. ಹುಟ್ಟಿದ ಒಂದನೇ ವರ್ಷದಿಂದ ಮಕ್ಕಳ ಹುಟ್ಟು ಹಬ್ಬದ ಆಚರಣೆಗಳು ಪ್ರಾರಂಭವಾಗಿರುವುದು. ಆ ದಿನ ಮನೆಯಲ್ಲಿ ವಿಶೇಷ ಅಡುಗೆ, ಕೇಕ್. ತಂಪು ಪಾನಿಯ ಇದ್ದರೆ ಬರುವ ಸಂಬಂಧಿಕರು, ಸ್ನೇಹಿತರು ಗಿಪ್ಟ್ ತರುವ ಸಂಪ್ರದಾಯ ಹೆಚ್ಚಾಗುತ್ತಾ ಇರುವುದು.
ಹೈಸ್ಕೂಲ್ ಪದವಿ ಪೂರ್ವ ಕಾಲೇಜಿಗೆ ಹೋಗುವ ಮಕ್ಕಳಲ್ಲಿ ಸ್ನೇಹಿತರಿಗೆ ವಿಶೇಷ ಪಾnÂ೯ ನೀಡುವ ಸಂಪ್ರದಾಯ ಪ್ರಾರಂಭವಾಗಿರುವುದು. ಇನ್ನೂ ಒಂದು ಹಂತ ಮುಮದುವರೆದವರಿಗೆ ಬಾರನಲ್ಲಿಯೇ ಪಾnÂ೯ ಆಗಬೇಕು. ಒಟ್ಟಾರೆ ಆಯಾ ವಯಸ್ಸಿನವನರಿಗೆ ತಕ್ಕುದಾದ ರೀತಿಯಲ್ಲಿ ಹುಟ್ಟು ಹಬ್ಬದ ಆಚರಣೆಗಳು ಚಾಲ್ತಿಯಲ್ಲಿ ಇರುವುದು. ಈ ರೀತಿಯ ಆಚರಣೆಗಳು 20-25 ವರ್ಷದ ಹಿಂದೆ ಇರಲಿಲ್ಲ. ಇದು ಆಧುನಿಕತೆಯ ಕೊಡುಗೆಯಾಗಿರುವುದು. ಇಂದು ಹುಟ್ಟು ಹಬ್ಬದ ಗಿಪ್ಟ್ ಅಂಗಡಿಗಳು ಎಲ್ಲಾ ಕಾಲೇಜುಗಳ ಅಕ್ಕ ಪಕ್ಕದಲ್ಲಿ ಪ್ರಾರಂಭವಾಗಿರುವುದು. ಬರ್ತಡೇ ಸಂಬಂಧಿತ ಗ್ರಿಟಿಂಗ್ಸ್ಗಳು ಎಲ್ಲಾ ಕಡೆ ಸಿಗುತ್ತಿರುವುದು. ಹುಟ್ಟು ಹಬ್ಬಕ್ಕೆ ಆಚರಣೆಗೆ ಸಂಬಂಧಿಸಿದಂತೆ ಹೋಟೆಲಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮುಖ್ಯ ನಗರಗಳಲ್ಲಿ ಪ್ರಾರಂಭವಾಗಿರುವುದು. ಒಟ್ಟಾರೆ ಹುಟ್ಟು ಹಬ್ಬದ ಶುಭಾಶಯ ಕೊರುವಿಕೆಯೂ ಇಂದು ದೊಡ್ಡ ಮಟ್ಟದ ವ್ಯವಹಾರವಾಗಿ ನಮ್ಮ ದೇಶದ ಜಿಡಿಪಿ ಹೆಚ್ಚಾಗಲು ಕಾಣಿಕೆ ನೀಡಿರುವುದು. ಕಾಲೇಜು ದಿನಗಳ ನಂತರದಲ್ಲಿ ಸಾಮನ್ಯವಾಗಿ ಎಲ್ಲರೂ ಅವರವರ ಕಾರ್ಯಗಳಲ್ಲಿ ಮಗ್ನವಾದ ಮೇಲೆ ಹುಟ್ಟು ಹಬ್ಬದ ಆಚರಣೆ ಎಂಬುದು ಸ್ವಲ್ಪ ಕಡಿಮೆಯಾಗುವುದು. ಬದಲಾಗಿ ಮನೆಯ ಮಕ್ಕಳ ಹೊಸದಾಗಿ ಬಂದಿರುವ ಪತ್ನಿಯರ ಹುಟ್ಟು ಹಬ್ಬದ ಆಚರಣೆಯ ಕಡೆ ಹೆಚ್ಚಿನ ಗಮನ ಇರುವುದು.
ಹುಟ್ಟು ಹಬ್ಬದ ಸಂಭ್ರಮ ಇಂದು ಹೆಚ್ಚಾಗಲು ಕಾರಣಗಳು :
ಮಾಧ್ಯಮಗಳು : ಟಿ.ವಿಯ ಪ್ರಭಾವ ಹೆಚ್ಚಾದಂತೆ ವಿದೇಶ ಮತ್ತು ದೇಶದ ವಿವಿಧ ಆಚರಣೆಗಳ ಬಗ್ಗೆ ತಿಳಿಯಲಾರಂಭಿಸಿದೆವು. ಅದನ್ನೇ ಅನುಕರಣೆ ಮಾಡುತ್ತಾ ನಾವಿಂದ ನಮ್ಮ ಹಿರಿಯರಿಗೆ ತಿಳಿದಿರದ ಹಲವಾರು ಸಂಭ್ರಮಗಳನ್ನು ಆಚರಿಸುತ್ತಿರುವೆವು. ಅದರಲ್ಲಿ ಹುಟ್ಟು ಹಬ್ಬದ ಆಚರಣೆಯೂ ಒಂದಾಗಿದೆ.
ಜಾಗತೀಕರಣದ ಪ್ರಭಾವ : ಪ್ರತ್ಯಕ್ಷವಾಗಿ ಇಲ್ಲಾ ಅಪ್ರತ್ಯಕ್ಷವಾಗಿ ವಿಶ್ವ ಮಾರುಕಟ್ಟೆ ಎಂದು ನಮ್ಮ ದೇಶದಲ್ಲಿ ತಲೆ ಎತ್ತಿ ವ್ಯಾಪಾರ ವಹಿವಾಟು ಪ್ರಾರಂಭವಾಯಿತೋ ಈ ರೀತಿಯ ಆಚರಣೆಗಳು ಪ್ರಾರಂಭವಾದವು. ಅವುಗಳ ಆಚರಣೆಗೆ ಬೇಕಾದ ಸಾಮಗ್ರಿಗಳ ವ್ಯಾಪಾರ ವಹಿವಾಟನ್ನು ಹೆಚ್ಚಿಸುವ ಉದ್ದೇಶದಿಂದ ಅಗತ್ಯಕ್ಕಿಂತ ಹೆಚ್ಚಿನ ಪ್ರಚಾರಗಳು ದೊರೆತವು. ಪರಿಣಾಮವಾಗಿ ಇಂದು ಹುಟ್ಟು ಹಬ್ಬದ ಆಚರಣೆ ದೇಶದ ಹಳ್ಳಿ ಹಳ್ಳಿಗಳಲ್ಲಿ ಪ್ರಾರಂಭವಾಗಿರುವುದು.
ಸಾಮಾಜಿಕ ಮಾಧ್ಯಮಗಳ ಕೊಡುಗೆ : ಫೇಸ್ ಬುಕ್ ನಂತಹ ಸಾಮಾಜಿಕ ಮಾಧ್ಯಗಳು ಇಂದು ಹುಟ್ಟಿದ ದಿನಾಂಕವನ್ನು ಸ್ವತ: ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ವ್ಯಕ್ತಿ ಮತ್ತು ಇತರೆ ಆತನ ಸ್ನೇಹಿತರಿಗೆ ತಿಳಿಸುವುದು/ತೋರಿಸುವುದರೊಂದಿಗೆ ಹುಟ್ಟಿದ ದಿನಕ್ಕೆ ಹೆಚ್ಚಿನ ಪ್ರಚಾರವನ್ನು ನೀಡುತ್ತಿರುವುದು. ಆನ್ ಲೈನನಲ್ಲಿ ಸಂಬಂಧಿಸದ ಯಾವುದೇ ಸೈಟ್ಗಳಲ್ಲಿ ತಮ್ಮ ಹುಟ್ಟಿದ ದಿನವನ್ನು ನಮೂದಿಸಿದ್ದರೇ ಅವರು ಸಹಾ ಮೇಸೆಜ್, ಪೋನ್ ಮೂಲಕ ತಮಗೆ ಶುಭಾಶಯವನ್ನು ತಿಳಿಸುವರು.
ಚಿಕ್ಕ ಕುಟುಂಬ : ಹಿಂದೆ ಒಂದು ಕುಟುಂಬದಲ್ಲಿ ಕನಿಷ್ಠ 5-6 ಮಕ್ಕಳು ಇರುತಿದ್ದರು. ಎಲ್ಲರೂ ಒಟ್ಟಾಗಿ ಒಂದೇ ಮನೆಯಲ್ಲಿ ಇರುತ್ತಿದ್ದರು. ದೊಡ್ಡದಾದ ಕುಟುಂಬ ಇತ್ತು.  ಇಂದು ಒಂದು ಕುಟುಂಬದಲ್ಲಿ 1-2 ಕ್ಕಿಂತ ಹೆಚ್ಚಿನ ಮಕ್ಕಳು ಇರುವುದಿಲ್ಲ, ಚಿಕ್ಕ ಕುಟುಂಬ ಕುಟುಂಬದಲ್ಲಿ ಪ್ರತಯಿಯೊಬ್ಬರಿಗೂ ಗಮನ ನೀಡಲು ಸಮಯ ಮತ್ತು ಹಣ ಇರುವುದು. ಈ ಕಾರಣದಿಂದ ಸಹಾ ಹುಟ್ಟು ಹಬ್ಬದ ಸಂಭ್ರಮ ಬಹುತೇಕ ಎಲ್ಲಾ ಜನರು ಆಚರಿಸಲು ಪ್ರಾರಂಭಿಸಿರುವರು. 
ಸುಧಾರಿಸದ ಹಣಕಾಸು ಸ್ಥಿತಿ : ಇಂದು ಮಕ್ಕಳನ್ನು ಸಾಕಲು ಹೆಚ್ಚಿನ ಪಾಲಕರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಆಧುನಿಕತೆಯಲ್ಲಿ ತಮ್ಮ ಮಕ್ಕಳು ಎಲ್ಲಿಯೂ ಹಿಂದೆ ಬೀಳಬಾರದು ಎಂಬ ಕಾರಣಕ್ಕಾಗಿ ಪಾಲಕರು ಏನು ಬೇಕಾದರೂ ಮಾಡಲು ತಯಾರಾಗಿರುವರು. ಅಧರ ಫಲಿತಾಂಶವಾಗಿಯೇ ಹುಟ್ಟು ಹಬ್ಬದಂತಹ ಆಚರಣೆಗಳು ದಿನೇ ದಿನೇ ಎಲ್ಲಾ ವರ್ಗದ ಮನೆಗಳಲ್ಲಿಯೂ ಪ್ರಾರಂಭವಾಗಿರುವುದು.
ಒಟ್ಟಾರೇ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬಂದಿರುವಂತಹ ಹಬ್ಬಗಳ ಆಚರಣಾ ಶೈಲಿ ಬದಲಾಗುತ್ತಿದೆ. ಈ ಸಂದರ್ಭದಲ್ಲಿ ಹುಟ್ಟು ಹಬ್ಬದಂತಹ ಹೊಸ ಹೊಸ ಸಂಭ್ರಮಾಚರಣೆಗಳು ಎಲ್ಲರ ಮನೆಯಲ್ಲಿ ಸೇರ್ಪಡೆ ಆಗುತ್ತಿರುವುದನ್ನು ಗಮನಿಸಬಹುದಾಗಿದೆ. ಮುಂಬರುವ ದಿನಗಳಲ್ಲಿ ಸಾಂಪ್ರದಾಯಿಕ ಆಚರಣೆ ಇರುವುದೋ ಇಲ್ಲವೋ ತಿಳಿಯದು. ಆದರೇ ಪ್ರತಿ ಮನೆಯಲ್ಲಿ ಹುಟ್ಟು ಹಬ್ಬದ ಆಚರಣೆ ಮಾತ್ರ ಕಡ್ಡಾಯವಾಗುವ ದಿನಗಳು ದೂರವಿಲ್ಲ.
                                                                                                                                                                        ವಿವೇಕ ಬೆಟ್ಕುಳಿ



ಬುಧವಾರ, ಫೆಬ್ರವರಿ 1, 2017

ಸ್ವಚ್ಛ ಭಾರತ...ಸ್ವಚ್ಛ ಗ್ರಾಮ


ಸ್ವಚ್ಛ ಭಾರತಕ್ಕಾಗಿ ನಮ್ಮ ಶಾಲೆಯಲ್ಲಿಯೂ ಊರವರು, ಶಿಕ್ಷಕರು, ಗ್ರಾಮ ಪಂಚಾಯಿತಿಯವರು ಎಲ್ಲರೂ ಊರಿನಲ್ಲಿ ಜ್ರಾಗತಿ ಮೂಡಿಸುವ ಕಾರ್ಯಕ್ರಮ ಮಾಡಿರುವೆವು. ಆದರೇ ಭೃಷ್ಠ ಜನಪ್ರತಿನಿಧಿಗಳಿಗೆ, ಜವಬ್ದಾರಿ ಇಲ್ಲದೆ ಸಂಬಳಕ್ಕಾಗಿ ಕಾರ್ಯ ಮಾಡುವ ಶಿಕ್ಷಕರಿಗೆ ಹಳ್ಳಿಯ ಶಾಲೆಯಲ್ಲಿನ ಸ್ವಚ್ಛತೆ ಬಗ್ಗೆ ಗಮನ ನೀಡುವಷ್ಟು ವೇಳೆಯೂ ಇಲ್ಲ.  ನಮ್ಮ ಊರಿನವರಿಗೆ ಸಕಾ೯ರಿ ವ್ಯವಸ್ಥೆಯ ಬಗ್ಗೆ ಜಿಗುಪ್ಸೆ, ತಾತ್ಸಾರ ಬಂದಿರುವುದು. ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಸಕಾ೯ರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗಿರುವದು........ಇದಕ್ಕೆ ಪರಿಹಾರ ಇದೆಯಾ.....???????????


ಮಂಗಳವಾರ, ಜನವರಿ 31, 2017

ದೇಶಭಕ್ತಿ ಮತ್ತು ಮಾಧ್ಯಮಗಳು

ದೇಶಭಕ್ತಿ ಮತ್ತು ಮಾಧ್ಯಮಗಳು

ಸಜಿ೯ಕಲ್ ದಾಳಿ ಮಾಡಿ ಮತ್ತು ದೇಶದ ರಕ್ಷಣಾ ವೆಚ್ಚವನ್ನು ಹೆಚ್ಚಿಸುವುದರ ಮೂಲಕ ದೇಶವನ್ನು ಬಲಿಷ್ಠಗೊಳಿಸಿರುವೆವು, ಇದು ನಮ್ಮ ನಮ್ಮ ದೇಶದ ಹೆಮ್ಮೆ ಎಂದು ಸಂಭ್ರಮಿಸುವ ದೇಶಭಕ್ತರು ಒಂದು ಕಡೆ, ಸ್ವಾತಂತ್ಯ ಬಂದಾಗಿನಿಂದ ದೇಶದ ರಕ್ಷಣೆಯನ್ನು ಮಾಡುತ್ತಾ, ಅಗತ್ಯವಾದಾಗ ಯುದ್ದವನ್ನು ಮಾಡಿ ದೇಶವನ್ನು ರಕ್ಷಣೆ ಮಾಡುತ್ತಾ ಗಡಿಯನ್ನು ನಿಮಿ೯ಸಿದವರು ನಾವು ಮೂಲ ದೇಶಭಕ್ತರು ಎಂದು ಹೇಳುವವರು ಇನ್ನೊಂದು ಕಡೆ, ನೈಜವಾಗಿ ದೇಶದ ಗಡಿಯಲ್ಲಿ ಗಡಿ ಕಾಯುತ್ತಾ ಮೇಲಾಧಿಕಾರಿಗಳ ಆದೇಶ ಪಾಲಿಸುವ ಸೈನಿಕರು, ತಮಗಿರುವ ಸಂಕಷ್ಟವನ್ನು ಹೇಳಿಕೊಳ್ಳುವ ಸೈನಿಕರು ಈ ಎಲ್ಲವುಗಳ ಮಧ್ಯದಲ್ಲಿ ದೇಶದಲ್ಲಿ ತಮ್ಮ ತಮ್ಮ ವಿಚಾರಗಳ ಬಗ್ಗೆ ಮಾಧ್ಯಮ, ಸಾರ್ವಜನಿಕ ಸಭೆಗಳ ಬಗ್ಗೆ ವಾದ ವಿವಾದ ಮಾಡುವ ಬುದ್ದಿಜೀವಿಗಳು ಇನ್ನೊಂದು ಕಡೆ, ಒಟ್ಟಾರೆ ದೇಶದ ಗಡಿ ರಕ್ಷಣೆ ಚಚೆ೯ಯ ವಿಷಯವಾಗಿರುವುದು. ಇದರ ಮುಂದುವರೆದೆ ಭಾಗವಾಗಿ ಹೊಟ್ಟೆ ತುಂಬಾ ತಿಂದು ಊಂಡು, ಸಕಾ೯ರಿ ಅಥವಾ ಖಾಸಗಿ ಕ್ಷೇತ್ರದಲ್ಲಿ ಅಗತ್ಯವಾದ ಸಂಬಳ ಪಡೆಯುತ್ತಿರುವವರು, ಉತ್ತಮವಾದ ವ್ಯವಹಾರ ಮಾಡುತ್ತಾ ಹಣ ಸಂಪಾದನೆ ಮಾಡುತ್ತಿರುವ ಚಿಕ್ಕ ದೊಡ್ಡ ವ್ಯಾಪಾರಸ್ತರು, ಅತ್ಯುತ್ತಮವಾದ ಕೃಷಿ ಭೂಮಿಯನ್ನು ಹೊಂದಿ (ಕೆಲಸಕ್ಕೆ ಕಾಮಿ೯ಕರನ್ನು ಇರಿಸಿಕೊಂಡು) ಸಕಾ೯ರದ ಸೌಲಭ್ಯವನ್ನು ಪಡೆದು ಸುಖದ ಜೀವನವನ್ನು ಸಾಗಿಸುತ್ತಿರುವ ಪ್ರಗತಿಪರರೆಂಬ ಹಣೆಪಟ್ಟಿ ಪಡೆದ ರೈತರುಗಳು ಇವರುಗಳೆಲ್ಲಾ ಇಂದು ಗಡಿಯ ಬಗ್ಗೆ, ಸೈನಿಕರ ಬಗ್ಗೆ,ದೇಶ ರಕ್ಷಣೆಯ ಚಚೆ೯ ಮಾಡುತ್ತಿರುವರು, ಸಂಭ್ರಮಿಸುತ್ತಿರುವರು ಮುಖ್ಯವಾಗಿ ಸ್ಥಳೀಯ ನೆಲೆಯಲ್ಲಿ ಈ ವಿಷಯಗಳನ್ನು ಇರಿಸಿಕೊಂಡು ರಾಜಕೀಯವನ್ನು ಮಾಡುತ್ತಿರುವರು.
ನೈಜವಾಗಿ ದೇಶದ ಗಡಿಯಲ್ಲಿನ ಸ್ಥಿತಿಯನ್ನು ಬಲ್ಲವರು ಯಾರು ಇಲ್ಲ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ರಾಜಕೀಯ ಪಕ್ಷಗಳ ಮುಖ್ಯಸ್ಥರು ಬೇರೆಯವರ ದೇಶಭಕ್ತಿಯ ಬಗ್ಗೆ ಪ್ರಶ್ನೆ ಮಾಡುತ್ತಿರುವರು.
ಗಡಿಯಲ್ಲಿ ವಾಸ ಮಾಡುವ ಸಾವಿರಾರು ಕುಟುಂಬಗಳು 10-15 ಕೀ.ಮೀ ದೂರದ ತಮ್ಮ ಸಂಭಂದಿಗಳನ್ನು ನೋಡಲು ಪಾಸಪೋರ್ಟ ವೀಸಾ ಎಂದು ಓಡಾಡುತ್ತಿರುವರು. ಗಡಿಯಲ್ಲಿ ಇರುವ ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ, ಶಿಕ್ಷಕರ ಕೊರತೆ ಬೇರೆ, ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ, ವ್ಯವಸ್ಥಿತವಾದ ಮನೆಗಳು ಇಲ್ಲ. ಈ ಎಲ್ಲಾ ವಿಚಾರಗಳು ನಮಗೆ ಬೇಕಾಗಿಯೂ ಇಲ್ಲ, ಅಗತ್ಯವು ಇಲ್ಲ. ನಾವಿರುವದು ಗಡಿ ಪ್ರದೇಶದಲ್ಲಿ ಅಲ್ಲ. ನಮ್ಮದು ಸಮೂಹ ಸನ್ನಿ ದೇಶಭಕ್ತಿಯಾಗಿದೆ. ಮಾಧ್ಯಮ, ಸಾಮಾಜಿಕ ಮಾಧ್ಯಮಗಳು ನಮ್ಮ ಇಂದಿನ ಮಾರ್ಗದರ್ಶಕರಾಗಿರುವರು. ನೈಜತೆಯನ್ನು ಕಳೆದುಕೊಂಡು, ಯಾವುದೋ ವ್ಯಕ್ತಿ, ಪಕ್ಷಗಳಿಗೆ ತಮ್ಮನ್ನು ಮಾರಿಕೊಂಡ ಮಾಧ್ಯಮಗಳಿಗೆ ದಿಕ್ಕಾರವಿರಲಿ, ಇಂತಹ ವ್ಯವಸ್ಥೆಯನ್ನು ಬೆಳೆಸಿ ಪೋಷಿಸುತ್ತಿರುವ ನಮ್ಮ ಶೈಕ್ಷಣಿಕ ಸಾಮಾಜಿಕ ವ್ಯವಸ್ಥೆಯನ್ನು ಮರು ಅವಲೋಕಿಸುವ ಅಗತ್ಯವಿದೆ.









ರಾಜಸ್ಥಾನ ಮತ್ತು ಗುಜರಾತಗೆ ಹೊಂದಿಕೊಂಡಂತೆ ಪಾಕಿಸ್ತಾನದ ಮತ್ತು ಭಾರತದ ಗಡಿ ಪ್ರದೇಶದ ಕೆಲವೊಂದು ಚಿತ್ರಣ.

ಸೋಮವಾರ, ಜನವರಿ 30, 2017

ಗ್ರಾಮೀಣ ಕ್ರೀಡೆ......ನೆನಪಿದೆಯಾ..?


ಗ್ರಾಮೀಣ ಕ್ರೀಡೆ......ನೆನಪಿದೆಯಾ..?
ಗೋಣಿ ಚೀಲದಲ್ಲಿ ಕಾಲುಗಳನ್ನು ಹಾಕಿ ಓಡುವುದು. ತುಂಬಾ ಕಡಿಮೆ ಖಚಿ೯ನಲ್ಲಿನ ಈ ಆಟ ಮಕ್ಕಳಿಗೆ ಸಂತೋಷವನ್ನು ನೀಡುವುದು. ಕೆಳಗೆ ಬೀಳದೆ ನಿಗದಿತ ಗುರಿ ತಲುಪುವ ಈ ಆಟದಲ್ಲಿ ಯಾರು ಗೆದ್ದರು ಏನುವುದಕ್ಕಿಂತ ಪ್ರತಿಯೊಬ್ಬರು ಭಾಗವಹಿಸುವುದು ಅಗತ್ಯವಾಗಿದೆಗೋಣಿ ಚೀಲದಲ್ಲಿ ಕಾಲುಗಳನ್ನು ಹಾಕಿ ಓಡುವುದು. ತುಂಬಾ ಕಡಿಮೆ ಖಚಿ೯ನಲ್ಲಿನ ಈ ಆಟ ಮಕ್ಕಳಿಗೆ ಸಂತೋಷವನ್ನು ನೀಡುವುದು. ಕೆಳಗೆ ಬೀಳದೆ ನಿಗದಿತ ಗುರಿ ತಲುಪುವ ಈ ಆಟದಲ್ಲಿ ಯಾರು ಗೆದ್ದರು ಏನುವುದಕ್ಕಿಂತ ಪ್ರತಿಯೊಬ್ಬರು ಭಾಗವಹಿಸುವುದು ಅಗತ್ಯವಾಗಿದೆ

ಭಾನುವಾರ, ಫೆಬ್ರವರಿ 15, 2015

ದೇಶ, ಜಾತಿ ಧರ್ಮವನ್ನು ಮೀರಿದ ಪ್ರೇಮಮಯ ಜಗತ್ತಿಗಾಗಿ ಪ್ರೇಮಿಗಳ ದಿನಾಚರಣೆ ಅಡಿಪಾಯವಾಗಲಿ




ದೇಶ, ಜಾತಿ ಧರ್ಮವನ್ನು ಮೀರಿದ  ಪ್ರೇಮಮಯ ಜಗತ್ತಿಗಾಗಿ  ಪ್ರೇಮಿಗಳ ದಿನಾಚರಣೆ ಅಡಿಪಾಯವಾಗಲಿ
               
ಪುನ: ಬಂದಿದೆ ಫಬ್ರವರಿ 14, ಈಗಾಗಲೇ ಈ ದಿನದ ಪರ ವಿರೋದಿಗಳ ಕೆಸರೆರಚಾಟ ಪ್ರಾಂರಭವಾಗಿರುವುದು. ಪ್ರೇಮಿಗಳು ಸಿಕ್ಕಿಬಿದ್ದರೆ ಮದುವೆ ಮಾಡಿಸುವುದಾಗಿ ಒಂದು ಧರ್ಮದ ಸಂಘಟನೆಯೊಂದು ಹೇಳಿದರೆ, ಇನ್ನೊಂದು ಧರ್ಮದ ಸಂಘಟನೆಗಳು ಧರ್ಮದ ಗುಂಪಿಗೆ ಈ ಆಚರಣೆ ಮಾಡದಂತೆ ಆದೇಶ ಹೊರಡಿಸಿರುವುದು. ಇವುಗಳ ಮಧ್ಯ ಎಲ್ಲಾ ಧರ್ಮದ ಪ್ರಗತಿ ಶೀಲರೆಂದು ಗುರುತಿಕೊಳ್ಳುವವರು ಸಂಘಟನೆಗಳು ತಮ್ಮದೇ ಆದ ರೀತಿಯಲ್ಲಿ ಪ್ರೇಮಿಗಳ ದಿನಾಚರಣೆ ಆಚರಿಸುವ ತಯಾರಿಯಲ್ಲಿ ಇರುವರು.
 ಈ ರೀತಿಯ ಪರ ವಿರೋಧದ ಅಭಿಪ್ರಾಯಕ್ಕೆ ರಾಜಕೀಯ ಪಕ್ಷಗಳು ತಮ್ಮದೇ ಆದ ಅಭಿಪ್ರಾಯವನ್ನು ಸೇರಿಸಿ ವಾತಾವರಣವನ್ನು ಇನ್ನೂ ಕೆಡಿಸಲು ಪ್ರಯತ್ನಿಸುತ್ತಿರುವರು. ಮಾಧ್ಯಮಗಳಾದರೂ ಇದೇ ವಿಚಾರವನ್ನು ಅತಿರಂಚಿತ ವರದಿಯನ್ನಾಗಿಸಿ ಬ್ರೇಕಿಂಗ್ ನ್ಯೂಸ ಮಾಡುವ ಕಾರ್ಯದಲ್ಲಿ ತೊಡಗಿರುವರು. ಒಟ್ಟಾರೆ ವರ್ಷಕ್ಕೆ ಒಮ್ಮೆ ಬರುವ ಪ್ರೇಮಿಗಳ ದಿನಾಚರಣೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರಚಾರ ಪಡೆದುಕೊಳ್ಳುತ್ತಿರುವುದು. ಇದು ವಿದೇಶ ಬಂಡವಾಳಿಗರ ಸಂಚು ಎಂದು ಕೆಲವರು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಿರುವರು. 
ಈ ದಿನಾಚರಣೆಯ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ಏನೇ ಇರಲಿ ಪ್ರೇಮದಲ್ಲಿ ಕಲ್ಮಶ ಹುಡುಕುವುದು ಸಾಧ್ಯವೇ? ಅಥವಾ ಪ್ರೇಮದಲ್ಲಿ ಕಲ್ಮಶ ಕಾಣುತ್ತದೆ ಎಂದರೆ ಅದು ನಿಜವಾದ ಪ್ರೇಮವೇ? ಈ ಎರಡು ರೀತಿಯಿಂದಲೂ ನಾವು ಆಲೋಚಿಸಬೇಕಾಗಿದೆ.
ಫೆಬ್ರವರಿ 14 ರಂದೇ ಪ್ರೇಮಿಗಳು ಒಟ್ಟಾಗಿ ಸೇರಿ ಮಾತನಾಡುವುದು,  ಉಡುಗೊರೆಕೊಡಬೇಕು ಎಂದು ವಾದಿಸುವುದರಲ್ಲಿ ಅರ್ಥವಿಲ್ಲ. ಒಂದು ಗುಂಪಿನ ವಿರೋಧಕ್ಕಾಗಿ ಈ ರೀತಿ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ ಬದಲಾಗಿ ದ್ವೇಷ ಬೆಳೆಯುವುದು.  ಆದರೇ ಯಾವುದೇ ನಿಜವಾದ ಪ್ರೇಮದಲ್ಲಿ ದ್ವೇಷ ಇರುವುದಿಲ್ಲ.
ಧರ್ಮದ ಸಂಸ್ಕೃತಿಯ ರಕ್ಷಣೆಗಾಗಿ ಈ ದಿನವನ್ನು ವಿರೋಧಿಸುವುದಕ್ಕಾಗಿಯೇ ಫೆಬ್ರವರಿ 14 ರಂದು ಸಿಕ್ಕ ಪ್ರೇಮಿಗಳನ್ನು ಅಥವಾ ಯಾವುದೇ ಹುಡುಗ ಹುಡುಗಿಯರನ್ನು  ಹಿಂದೆ ಮುಂದೆ ನೋಡದೇ ಒತ್ತಾಯದ ಮದುವೆ ಮಾಡಿಸುವುದು, ಆಚರಣೆ ಮಾಡದಂತೆ ಫತ್ವಾ ಹೊರಡಿಸುವುದು ಈ ಎಲ್ಲ ವರ್ತನೆಗಳು ಸಹಾ ಪ್ರತಿರೋಧವೆ ವಿನಹ ಧರ್ಮದ ರಕ್ಷಣೆಯಂತು ಅಲ್ಲವೇ ಅಲ್ಲ. ಯಾವ ಧರ್ಮವು ಒಬ್ಬರಿಗೆ ನೋವು ನೀಡಿ ಧರ್ಮ ರಕ್ಷಣೆ ಮಾಡಲು ಹೇಳುವುದಿಲ್ಲ. ಆ ರೀತಿ ಏನಾದರೂ ಇದ್ದರೇ ಅದು ಧರ್ಮವೇ ಅಲ್ಲವಾಗಿದೆ.
ದೇಶದಲ್ಲಿ ಎಲ್ಲಾ ಧರ್ಮದ ಕಟ್ಟಾ ಸಂಪ್ರದಾಯವಾದಿಗಳ ನಿಲುವುಗಳು ಸಹಾ ಕೊನೆಗಳಿಗೆಯಲ್ಲಿ ಒಂದೇ ಆಗಿರುವುದು ಅದು ನಮ್ಮ ಜಾತ್ಯಾತೀತ ಮೌಲ್ಯಗಳಿಗೆ ದಕ್ಕೆ ತರುವುದರಲ್ಲಿ ಯಾವುದೇ ಸಂಶಯವಿಲ್ಲ.
ಇತೀಚೆಗೆ ನಮ್ಮ ದೇಶದಲ್ಲಿ ನಡೆಯುತ್ತಿರುವ ವಿಧ್ಯಮಾನಗಳನ್ನು ಮಾಧ್ಯಮದಲ್ಲಿ ಗಮನಿಸಿದಾಗ ದೇಶ ತನ್ನ ಜಾತ್ಯಾತೀತ ಮೌಲ್ಯಗಳನ್ನು ಗಾಳಿಗೆ ತೂರಿ ಅವಸಾನದತ್ತ ಸಾಗುತ್ತಿರುವುದನ್ನು ಗಮನಿಸಬಹುದಾಗಿದೆ, ರಾಜಕೀಯ ಪಕ್ಷಗಳ ಪ್ರಮುಖರ ಧರ್ಮದ ಕುರಿತು ಹೇಳಿಕೆಗಳು, ಮತಾಂತರ ಗದ್ದಲ, ಸಾಧು ಸಂತರ , ಮೌಲಿಗಳ ಎಡಬಿಡಂಗಿ ಮಾತುಗಳು, ಕೋಮುಗಲಭೆ, ಧರ್ಮದ ಧಾಮರ್ಿಕ ಕೇಂದ್ರಗಳ ಮೇಲೆ ದಾಳಿ, ಈ ಎಲ್ಲವನ್ನು ನೋಡಿಯೂ ನೋಡದಂತೆ ಕುಳಿತ ಸಕಾ೯ರಗಳು, ಇವೆಲ್ಲವನ್ನು ಗಮನಿಸಿದಾಗ ಇದೇ ರೀತಿ ಮುಂದುವರೆದರೆ ಇನ್ನೂ ಕೆಲವು ವರ್ಷಗಳಲ್ಲಿ ನಮ್ಮ ದೇಶವು ಸಹಾ ಅರಜಕತೆಯ ಬೀಡಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಇಂತಹ ಸಂದರ್ಭದಲ್ಲಿ ದೇಶದಲ್ಲಿ ಯಾವುದೇ ದಿನಾಚರಣೆ ಬಂದರು ಅದಕ್ಕೆ ಪರ ವಿರೋಧ ಧ್ವನಿಗಳು ಇದ್ದೆ ಇರುವುದು. ಈ ಸಂದರ್ಭದಲ್ಲಿ ಜಾಗ್ರತ ನಾಗರೀಕರಾದ ಎಲ್ಲರೂ ಯೋಚಿಸಿ ಮುಂದುವರೆಯಬೇಕಾದ ಅನಿವಾರ್ಯತೆ ಇಂದಿನ ಅಗತ್ಯವಾಗಿರುವುದು. ಈ ಹಿನ್ನಲೆಯಲ್ಲಿ ಪ್ರೇಮವನ್ನು ನೋಡುವ ಅಗತ್ಯ ಇರುವುದು. ನಮ್ಮ ದೇಶದಲ್ಲಿರು ಹತ್ತಾರು, ಜಾತಿ ಧರ್ಮಗಳು ಸಾಮರಸ್ಯದಿಂದ ಇರುವುದಕ್ಕೆ ಈ ಪ್ರೇಮಮಯ ವಾತಾವರಣವೇ ಕಾರಣವಾಗಿರುವುದು. ಆದರೇ ಆ ಮೌಲ್ಯವನ್ನೇ ಮರೆತು ನಾವು ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ವರ್ಷದ 365 ದಿನವು ಯಾವುದೇ ದಿನಾಚರಣೆ ಬರಲಿ, ಬರದೇ ಇರಲಿ, ಆಚರಣೆ ಮಾಡಲಿ ಬಿಡಲಿ ನಾವು ಒಂದು ಸ್ಪಷ್ಟ ನಿಧರ್ಾರ ಮಾಡಬೇಕಾಗಿದೆ. ಜಗತ್ತಿನಲ್ಲಿ ಭಾರತ ಎಲ್ಲಾ ಧರ್ಮ, ಜಾತಿ, ವಿವಿಧ ಸಂಸ್ಕೃತಿ, ವೇಷ ಭೂಷಣ, ಭಾಷೆಗಳನ್ನು ಹೊಂದಿಯೂ  ಸಾಮರಸ್ಯದಿಂದ, ನಿಭೀ೯ತರಾಗಿ ಸಹಭಾಳ್ವೆಯಿಂದ ಬದುಕುತಿರುವ ಜೀವಂತ ಒಂದು ಉದಾಹರಣೆಯಾಗಿದೆ. ಈ  ಕಾರಣಕ್ಕಾಗಿ ದೇಶ ವಿದೇಶಗಳ ಜನ ಭಾರತೀಯ ಸಂಸ್ಕೃತಿಗೆ ಮಾರು ಹೋಗುತ್ತಿರುವರು. ಇಂತಹ ಒಂದು ಅಮೂಲ್ಯವಾದ ಆಸ್ತಿಯನ್ನು ಹೊಂದಿರುವ ನಾವು ಇದನ್ನು ಉಳಿಸಿ ಬೆಳಸಿಕೊಳ್ಳುವುದು ತುಂಬಾ ಅಗತ್ಯವಿದೆ.
ದೇಶವನ್ನು ಮೀರಿ ನಾವು ಕುವೆಂಪುರವರು ತಿಳಿಸಿದಂತೆ ಅನಿಕೇತನ ವಾಗಬೇಕು. ವಿಶ್ವ ಮಾನವರಾಗ ಬೇಕಾದ ಅಗತ್ಯವಿದೆ. ಆ ಒಂದು ಶಕ್ತಿಯೂ ಭಾರತೀಯರಿಗೆ ಇರುವುದು. ಈ ಹಿನ್ನಲೆಯಲ್ಲಿ ನಾವು ಪ್ರೇಮಿಗಳ ದಿನಾಚರಣೆಯನ್ನು ಪ್ರೇಮಮಯ ಜಗತ್ತನ್ನು ಕಾಣುವ ಹಿನ್ನಲೆಯಲ್ಲಿ ನೋಡಬೇಕಾದ ಅಗತ್ಯವಿದೆ.
ಓ ನನ್ನ ಚೇತನ,
ಆಗು ನೀ ಅನಿಕೇತನ!

                                                                                                              
  




ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...