ಮಂಗಳವಾರ, ಅಕ್ಟೋಬರ್ 9, 2018

ಪ್ರತಿ ಮನೆಯ ಸಂಭ್ರಮವಾಗುತ್ತಿರುವ ಹುಟ್ಟು ಹಬ್ಬದ ಆಚರಣೆ


ಪ್ರತಿ ಮನೆಯ ಸಂಭ್ರಮವಾಗುತ್ತಿರುವ ಹುಟ್ಟು ಹಬ್ಬದ ಆಚರಣೆ
ಇಂದು ನನ್ನ ಸ್ನೇಹಿತ ಕಿರಣನ ಹುಟ್ಟಿದ ಹಬ್ಬ ಇತ್ತು. ನಮಗೆಲ್ಲಾ ಚಾಕಲೇಟ್ ಕೊಟ್ಟನು. ಶಾಲೆಯಲ್ಲಿ ಇರುವ ಎಲ್ಲಾ ಮಕ್ಕಳಿಗೂ ಚಾಕಲೇಟ್ ಕೊಟ್ಟಿರುವನು. ಆಯಿ.. ನನ್ನ ಹುಟ್ಟು ಹಬ್ಬ ಯಾವಾಗ.,,, ಶಿರಶಿ ತಾಲ್ಲೂಕಿನ ಕೊರ್ಲಕಟ್ಟಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 90 ದಶಕದಲ್ಲಿ ಓದುತ್ತಿದ್ದ ನಾನು ಮನೆಗೆ ಬಂದು ಕೇಳಿದೆನು. ಶಾಲೆಯಲ್ಲಿ ಓದುತ್ತಿದ್ದ ಸುಮಾರು 200 ಮಕ್ಕಳಲ್ಲಿ ಕಾಲದಲ್ಲಿ ಶಾನಭಾಗ, ಭಟ್ಟ್ ತೇಲಂಗ್.. ಇಂತಹ ಮನೆಯಿಂದ ಬಂದ ನಾಲ್ಕಾರು ಮಕ್ಕಳು ಮಾತ್ರ ಹುಟ್ಟು ಹಬ್ಬದ ದಿನ ಹೊಸ ಬಟ್ಟೆಯನ್ನು ಧರಿಸಿ ಬರುತ್ತಿದ್ದರು. ಶಾಲೆಯ ಎಲ್ಲಾ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಚಾಕಲೇಟು ಹಂಚುತ್ತಿದ್ದರು. ಉಳಿದ ನಮಗೆ ಯಾರಿಗೂ ಸಹಾ ತಾವು ಹುಟ್ಟಿದ ದಿನ ಯಾವುದು ಎಂದುದು ತಿಳಿದಿರಲಿಲ್ಲ. ಶಾಲೆಯ ನೊಂದಣಿ ಪುಸ್ತಕದಲ್ಲಿ ಎಲ್ಲರದು ಜುಲೈ 1 ಹುಟ್ಟಿದ ದಿನವಾಗಿ ದಾಖಲೆಗಾಗಿ ಬರೆಸುತ್ತಿದ್ದರು. ನಾನು ಹುಟ್ಟಿದು ರವಿವಾರ ಅದಕ್ಕಾಗಿಯೇ. ಇಂದು ತಲೆ ಕುದಲನ್ನು ಹೊಡಸಬೇಡ ಎಂಬ ಆಯಿಯ ಎಚ್ಚರಿಕೆಯಿಂದ ನಾನು ಹುಟ್ಟಿದ ವಾರ ಪಕ್ಕಾ ಆಗಿತ್ತು. ನನ್ನ ಹುಟ್ಟಿದ ಹಬ್ಬದ ಬಗ್ಗೆ ಮಾತಾಡಿದರೆ ರವಿವಾರ ಮೀನು ತಂದಿರುವುದು ಅದೇ ಸಂಭ್ರಮಕ್ಕೆ ಎಂದು ಆಯಿ,,,,, ಸಮಜಾಯಿಷಿ ನೀಡುತ್ತಿದ್ದರು. ಹೌದು ಇವೆಲ್ಲಾ 20-25 ವರ್ಷದ ಹಿಂದಿನ ಮಾತಾಗಿರುವುದು. ಆದರೇ ಇಂದು ಅದೇ ನನ್ನ ಆಯಿ ಇಂದು ಅಣ್ಣನ ಮಗಳ ಹುಟ್ಟಿದ ಹಬ್ಬದ ಆಚರಣೆ ಬಗ್ಗೆ ವಾರದ ಮೊದಲೆ ತಯಾರಿ ಮಾಡಿಕೊಳ್ಳುವಳು.
ಹೌದು ಚೌತಿ, ದೀಪಾವಳಿ, ಸಂಕ್ರಾತಿ ಅಥವಾ ಬೇರೆ ಯಾವುದೋ ವಿಶೇಷ ದಿನದಂದು ಹುಟ್ಟಿದರೇ ಮಾತ್ರ ಅಂದಿನ ತಾಯಂದಿರಿಗೆ ತಮ್ಮ ಮಕ್ಕಳು ಹುಟ್ಟಿದ ದಿವಸ ನೆನಪಿರುತ್ತಿತ್ತು. ಇಲ್ಲಾ ಅಂದರೇ ಇಲ್ಲ. ಹುಟ್ಟಿದ ಹಬ್ಬದ ಸಂಭ್ರಮ ಮುಂಚೆ ಇರುತ್ತಿರಲಿಲ್ಲ. ಬಗ್ಗೆ ಹೆಚ್ಚಿನ ಜನಕ್ಕೆ ಗೊತ್ತು ಇರಲಿಲ್ಲ.
ಇಂದು ಕಾಲ ಬದಲಾಗಿದೆ. ಹುಟ್ಟಿದ ಒಂದನೇ ವರ್ಷದಿಂದ ಮಕ್ಕಳ ಹುಟ್ಟು ಹಬ್ಬದ ಆಚರಣೆಗಳು ಪ್ರಾರಂಭವಾಗಿರುವುದು. ದಿನ ಮನೆಯಲ್ಲಿ ವಿಶೇಷ ಅಡುಗೆ, ಕೇಕ್. ತಂಪು ಪಾನಿಯ ಇದ್ದರೆ ಬರುವ ಸಂಬಂಧಿಕರು, ಸ್ನೇಹಿತರು ಗಿಪ್ಟ್ ತರುವ ಸಂಪ್ರದಾಯ ಹೆಚ್ಚಾಗುತ್ತಾ ಇರುವುದು.
ಹೈಸ್ಕೂಲ್ ಪದವಿ ಪೂರ್ವ ಕಾಲೇಜಿಗೆ ಹೋಗುವ ಮಕ್ಕಳಲ್ಲಿ ಸ್ನೇಹಿತರಿಗೆ ವಿಶೇಷ ಪಾ ನೀಡುವ ಸಂಪ್ರದಾಯ ಪ್ರಾರಂಭವಾಗಿರುವುದು. ಇನ್ನೂ ಒಂದು ಹಂತ ಮುಮದುವರೆದವರಿಗೆ ಬಾರನಲ್ಲಿಯೇ ಪಾ ಆಗಬೇಕು. ಒಟ್ಟಾರೆ ಆಯಾ ವಯಸ್ಸಿನವನರಿಗೆ ತಕ್ಕುದಾದ ರೀತಿಯಲ್ಲಿ ಹುಟ್ಟು ಹಬ್ಬದ ಆಚರಣೆಗಳು ಚಾಲ್ತಿಯಲ್ಲಿ ಇರುವುದು. ರೀತಿಯ ಆಚರಣೆಗಳು 20-25 ವರ್ಷದ ಹಿಂದೆ ಇರಲಿಲ್ಲ. ಇದು ಆಧುನಿಕತೆಯ ಕೊಡುಗೆಯಾಗಿರುವುದು. ಇಂದು ಹುಟ್ಟು ಹಬ್ಬದ ಗಿಪ್ಟ್ ಅಂಗಡಿಗಳು ಎಲ್ಲಾ ಕಾಲೇಜುಗಳ ಅಕ್ಕ ಪಕ್ಕದಲ್ಲಿ ಪ್ರಾರಂಭವಾಗಿರುವುದು. ಬರ್ತಡೇ ಸಂಬಂಧಿತ ಗ್ರಿಟಿಂಗ್ಸ್ಗಳು ಎಲ್ಲಾ ಕಡೆ ಸಿಗುತ್ತಿರುವುದು. ಹುಟ್ಟು ಹಬ್ಬಕ್ಕೆ ಆಚರಣೆಗೆ ಸಂಬಂಧಿಸಿದಂತೆ ಹೋಟೆಲಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮುಖ್ಯ ನಗರಗಳಲ್ಲಿ ಪ್ರಾರಂಭವಾಗಿರುವುದು. ಒಟ್ಟಾರೆ ಹುಟ್ಟು ಹಬ್ಬದ ಶುಭಾಶಯ ಕೊರುವಿಕೆಯೂ ಇಂದು ದೊಡ್ಡ ಮಟ್ಟದ ವ್ಯವಹಾರವಾಗಿ ನಮ್ಮ ದೇಶದ ಜಿಡಿಪಿ ಹೆಚ್ಚಾಗಲು ಕಾಣಿಕೆ ನೀಡಿರುವುದು. ಕಾಲೇಜು ದಿನಗಳ ನಂತರದಲ್ಲಿ ಸಾಮನ್ಯವಾಗಿ ಎಲ್ಲರೂ ಅವರವರ ಕಾರ್ಯಗಳಲ್ಲಿ ಮಗ್ನವಾದ ಮೇಲೆ ಹುಟ್ಟು ಹಬ್ಬದ ಆಚರಣೆ ಎಂಬುದು ಸ್ವಲ್ಪ ಕಡಿಮೆಯಾಗುವುದು. ಬದಲಾಗಿ ಮನೆಯ ಮಕ್ಕಳ ಹೊಸದಾಗಿ ಬಂದಿರುವ ಪತ್ನಿಯರ ಹುಟ್ಟು ಹಬ್ಬದ ಆಚರಣೆಯ ಕಡೆ ಹೆಚ್ಚಿನ ಗಮನ ಇರುವುದು.
ಹುಟ್ಟು ಹಬ್ಬದ ಸಂಭ್ರಮ ಇಂದು ಹೆಚ್ಚಾಗಲು ಕಾರಣಗಳು :
ಮಾಧ್ಯಮಗಳು : ಟಿ.ವಿಯ ಪ್ರಭಾವ ಹೆಚ್ಚಾದಂತೆ ವಿದೇಶ ಮತ್ತು ದೇಶದ ವಿವಿಧ ಆಚರಣೆಗಳ ಬಗ್ಗೆ ತಿಳಿಯಲಾರಂಭಿಸಿದೆವು. ಅದನ್ನೇ ಅನುಕರಣೆ ಮಾಡುತ್ತಾ ನಾವಿಂದ ನಮ್ಮ ಹಿರಿಯರಿಗೆ ತಿಳಿದಿರದ ಹಲವಾರು ಸಂಭ್ರಮಗಳನ್ನು ಆಚರಿಸುತ್ತಿರುವೆವು. ಅದರಲ್ಲಿ ಹುಟ್ಟು ಹಬ್ಬದ ಆಚರಣೆಯೂ ಒಂದಾಗಿದೆ.
ಜಾಗತೀಕರಣದ ಪ್ರಭಾವ : ಪ್ರತ್ಯಕ್ಷವಾಗಿ ಇಲ್ಲಾ ಅಪ್ರತ್ಯಕ್ಷವಾಗಿ ವಿಶ್ವ ಮಾರುಕಟ್ಟೆ ಎಂದು ನಮ್ಮ ದೇಶದಲ್ಲಿ ತಲೆ ಎತ್ತಿ ವ್ಯಾಪಾರ ವಹಿವಾಟು ಪ್ರಾರಂಭವಾಯಿತೋ ರೀತಿಯ ಆಚರಣೆಗಳು ಪ್ರಾರಂಭವಾದವು. ಅವುಗಳ ಆಚರಣೆಗೆ ಬೇಕಾದ ಸಾಮಗ್ರಿಗಳ ವ್ಯಾಪಾರ ವಹಿವಾಟನ್ನು ಹೆಚ್ಚಿಸುವ ಉದ್ದೇಶದಿಂದ ಅಗತ್ಯಕ್ಕಿಂತ ಹೆಚ್ಚಿನ ಪ್ರಚಾರಗಳು ದೊರೆತವು. ಪರಿಣಾಮವಾಗಿ ಇಂದು ಹುಟ್ಟು ಹಬ್ಬದ ಆಚರಣೆ ದೇಶದ ಹಳ್ಳಿ ಹಳ್ಳಿಗಳಲ್ಲಿ ಪ್ರಾರಂಭವಾಗಿರುವುದು.
ಸಾಮಾಜಿಕ ಮಾಧ್ಯಮಗಳ ಕೊಡುಗೆ : ಫೇಸ್ ಬುಕ್ ನಂತಹ ಸಾಮಾಜಿಕ ಮಾಧ್ಯಗಳು ಇಂದು ಹುಟ್ಟಿದ ದಿನಾಂಕವನ್ನು ಸ್ವತ: ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ವ್ಯಕ್ತಿ ಮತ್ತು ಇತರೆ ಆತನ ಸ್ನೇಹಿತರಿಗೆ ತಿಳಿಸುವುದು/ತೋರಿಸುವುದರೊಂದಿಗೆ ಹುಟ್ಟಿದ ದಿನಕ್ಕೆ ಹೆಚ್ಚಿನ ಪ್ರಚಾರವನ್ನು ನೀಡುತ್ತಿರುವುದು. ಆನ್ ಲೈನನಲ್ಲಿ ಸಂಬಂಧಿಸದ ಯಾವುದೇ ಸೈಟ್ಗಳಲ್ಲಿ ತಮ್ಮ ಹುಟ್ಟಿದ ದಿನವನ್ನು ನಮೂದಿಸಿದ್ದರೇ ಅವರು ಸಹಾ ಮೇಸೆಜ್, ಪೋನ್ ಮೂಲಕ ತಮಗೆ ಶುಭಾಶಯವನ್ನು ತಿಳಿಸುವರು.
ಚಿಕ್ಕ ಕುಟುಂಬ : ಹಿಂದೆ ಒಂದು ಕುಟುಂಬದಲ್ಲಿ ಕನಿಷ್ಠ 5-6 ಮಕ್ಕಳು ಇರುತಿದ್ದರು. ಎಲ್ಲರೂ ಒಟ್ಟಾಗಿ ಒಂದೇ ಮನೆಯಲ್ಲಿ ಇರುತ್ತಿದ್ದರು. ದೊಡ್ಡದಾದ ಕುಟುಂಬ ಇತ್ತು.  ಇಂದು ಒಂದು ಕುಟುಂಬದಲ್ಲಿ 1-2 ಕ್ಕಿಂತ ಹೆಚ್ಚಿನ ಮಕ್ಕಳು ಇರುವುದಿಲ್ಲ, ಚಿಕ್ಕ ಕುಟುಂಬ ಕುಟುಂಬದಲ್ಲಿ ಪ್ರತಯಿಯೊಬ್ಬರಿಗೂ ಗಮನ ನೀಡಲು ಸಮಯ ಮತ್ತು ಹಣ ಇರುವುದು. ಕಾರಣದಿಂದ ಸಹಾ ಹುಟ್ಟು ಹಬ್ಬದ ಸಂಭ್ರಮ ಬಹುತೇಕ ಎಲ್ಲಾ ಜನರು ಆಚರಿಸಲು ಪ್ರಾರಂಭಿಸಿರುವರು. 
ಸುಧಾರಿಸದ ಹಣಕಾಸು ಸ್ಥಿತಿ : ಇಂದು ಮಕ್ಕಳನ್ನು ಸಾಕಲು ಹೆಚ್ಚಿನ ಪಾಲಕರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಆಧುನಿಕತೆಯಲ್ಲಿ ತಮ್ಮ ಮಕ್ಕಳು ಎಲ್ಲಿಯೂ ಹಿಂದೆ ಬೀಳಬಾರದು ಎಂಬ ಕಾರಣಕ್ಕಾಗಿ ಪಾಲಕರು ಏನು ಬೇಕಾದರೂ ಮಾಡಲು ತಯಾರಾಗಿರುವರು. ಅಧರ ಫಲಿತಾಂಶವಾಗಿಯೇ ಹುಟ್ಟು ಹಬ್ಬದಂತಹ ಆಚರಣೆಗಳು ದಿನೇ ದಿನೇ ಎಲ್ಲಾ ವರ್ಗದ ಮನೆಗಳಲ್ಲಿಯೂ ಪ್ರಾರಂಭವಾಗಿರುವುದು.
ಒಟ್ಟಾರೇ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬಂದಿರುವಂತಹ ಹಬ್ಬಗಳ ಆಚರಣಾ ಶೈಲಿ ಬದಲಾಗುತ್ತಿದೆ. ಸಂದರ್ಭದಲ್ಲಿ ಹುಟ್ಟು ಹಬ್ಬದಂತಹ ಹೊಸ ಹೊಸ ಸಂಭ್ರಮಾಚರಣೆಗಳು ಎಲ್ಲರ ಮನೆಯಲ್ಲಿ ಸೇರ್ಪಡೆ ಆಗುತ್ತಿರುವುದನ್ನು ಗಮನಿಸಬಹುದಾಗಿದೆ. ಮುಂಬರುವ ದಿನಗಳಲ್ಲಿ ಸಾಂಪ್ರದಾಯಿಕ ಆಚರಣೆ ಇರುವುದೋ ಇಲ್ಲವೋ ತಿಳಿಯದು. ಆದರೇ ಪ್ರತಿ ಮನೆಯಲ್ಲಿ ಹುಟ್ಟು ಹಬ್ಬದ ಆಚರಣೆ ಮಾತ್ರ ಕಡ್ಡಾಯವಾಗುವ ದಿನಗಳು ದೂರವಿಲ್ಲ.
                                                                                                                                                                        ವಿವೇಕ ಬೆಟ್ಕುಳಿ



ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...