ಬುಧವಾರ, ಸೆಪ್ಟೆಂಬರ್ 4, 2019

“ಗುರಿ ತಪ್ಪಿದ ಕೆಲ ಗುರುಗಳಿಂದಾಗಿ ಸಮಾಜದ ನಂಬಿಕೆ ಕಳೆದುಕೊಳ್ಳುತ್ತಿರುವ ಗುರುವೃಂದ”


“ಗುರಿ ತಪ್ಪಿದ ಕೆಲ ಗುರುಗಳಿಂದಾಗಿ ಸಮಾಜದ ನಂಬಿಕೆ ಕಳೆದುಕೊಳ್ಳುತ್ತಿರುವ ಗುರುವೃಂದ”

    ಪುನ: ಶಿಕ್ಷಕರನ್ನು ವರ್ಷದಲ್ಲಿ ಒಂದು ದಿನದ ಮಟ್ಟಿಗೆ ಹಾಡಿ ಹೊಗಳಿ ಅಟ್ಟಕೇರಿಸುವ ದಿನ ಬಂದಿದೆ. ಪ್ರತಿ ವರ್ಷದಂತೆ ವರ್ಷವು ಹಲವಾರು ಕಡೆ ವಿಭಿನ್ನ ರೀತಿಯ ಕಾರ್ಯಮಗಳು, ಪ್ರಶಸ್ತಿ ಹಂಚಿಕೆ, ಶಿಕ್ಷಕರ ಸನ್ಮಾನ, ಮಕ್ಕಳಿಂದ ಸನ್ಮಾನ ರೀತಿಯಾಗಿ ಭಿನ್ನ ಭಿನ್ನವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡುವರು. ಆಚರಣೆ ಹೇಗೆ ಇರಲಿ ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮಗಳಲ್ಲಿ ಪೋಟೋ ಸಹಿತ ಸುದ್ದಿ ಮಾತ್ರ ಮುಂದಿನ ಕೆಲವು ದಿನಗಳಲ್ಲಿ ಟ್ರೇಂಡನಲ್ಲಿರುವುದು.
  ದುಖ: ಸಂಗತಿ ಎಂದರೆ ಶಿಕ್ಷಕರ ದಿನಾಚರಣೆ ಎಂಬುದು ಕೇವಲ ಸಂಭ್ರಮದ ದಿನಾಚರಣೆ ಆಗುತ್ತಿರುವುದು. ಸಮಾಜದಲ್ಲಿ ದಿನೇ ದಿನೇ ಗುರುವಿನ ಗೌರವ ಕುಸಿಯುತ್ತಿದೆ. ಆದರೂ ಶಿಕ್ಷಕ ವೃಂದವಾಗಲಿ ಅಥವಾ ಮುಖ್ಯ ಭಾಗೀದಾರರಾದ ಯಾವುದೇ ವ್ಯವಸ್ಥೆಯಾಗಲಿ ಕುಸಿಯುತ್ತಿರುವ ಗೌರವನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿಲ್ಲ. ಎಲ್ಲಾ ಭಾಗೀದಾರರು ಭಾಷಣ ಮಾಡುವ, ಪೋಟೋಕೆ ಮುಖ ತೋರಿಸಿ ಸುದ್ದಿ ಬಿತ್ತರಿಸುವ ಕಡೆ ಮಾತ್ರ ಗಮನ ನೀಡುತ್ತಿರುವುದು ನಮ್ಮ ವ್ಯವಸ್ಥೆಯ ದುರಂತವಾಗಿದೆ.
  ಗುರು ಪರಂಪರ ಇರುವ ನಮ್ಮ ದೇಶದಲ್ಲಿ ಜನಸಂಖ್ಯೆ ಬೆಳೆದಂತೆ ಶಾಲೆಗಳ ಮತ್ತು ಗುರುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಯಿತು. ಸಂಖ್ಯೆ ಹೆಚ್ಚಾದಂತೆ ಗುರುವಿನ ಗೌರವ ಮಾತ್ರ ಅದೇ ಪ್ರಮಾಣದಲ್ಲಿ ಸಮಾಜದಿಂದ ಕುಸಿಯುತ್ತಾ ಹೋಗಿರುವುದು ದುರಂತವಾಗಿದೆ. ಗುರುಗಳು ಹಿಂದೆ ಸಮಾಜದ ಆದರ್ಶರಾಗಿದ್ದರು. ಆದರೇ ಇಂದು ಗುರುವನ್ನು ಆದರ್ಶ ವ್ಯಕ್ತಿಯನ್ನಾಗಿ ಕಾಣುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದೆ ಗುರುಗಳ ಅನುಪಸ್ಥಿತಿಯಲ್ಲಿಯೂ ಗುರುವನ್ನು ಬಹುವಚನದಿಂದ ಸಂಭೋದಿಸುವ ಪರಿಪಾಠವಿತ್ತು. ಇಂದು ಗುರುವಿನ ಸಮ್ಮುಖದಲ್ಲಿಯೇ ಏಕವಚನ ಕೊಟ್ಟು ಮಾತನಾಡುವ ಸ್ಥಿತಿ ಬಂದಿದೆ. ಜಗತ್ತಿಗೆ ಗುರು ಪರಂಪರೆಯ ಬಗ್ಗೆ ತಿಳಿಸಿದ್ದ ನಮ್ಮ ದೇಶದಲ್ಲಿ ಯಾಕೆ ಇಂದು ಸ್ಥಿತಿ ಬಂದಿದೆ ಎಂದು ಅವಲೋಕನ ಮಾಡಬೇಕಾಗಿದೆ.ಅದಕ್ಕಾಗಿ ಶಿಕ್ಷಕರ ದಿನಾಚರಣೆಯನ್ನು ಬಳಸಿಕೊಳ್ಳಬೇಕಾಗಿದೆ. ಮುಖ್ಯವಾಗಿ ಗುರುವಿನ ಗೌರವ ಕುಸಿಯಲು ಗುರುತಿಸಿಬಹುದಾದ ಕಾರಣಗಳನ್ನು ಕೆಳಗಿನಂತೆ ಗುರುತಿಸಬಹುದಾಗಿದೆ.
1.            ಸೇವೆಯಾಗಿದ್ದ ಗುರುವಿನ ಹುದ್ದೆ ಇಂದು ಉದ್ಯೋಗವಾಗಿರುವು
2.            ಹುಟ್ಟಿದ ಊರಿನಲ್ಲಿಯೇ ಸೇವೆ ಸಲ್ಲಿಸುವುದು.
3.            ಪಟ್ಟಣದಲ್ಲಿ ವಸತಿ ಹಳ್ಳಿಯಲ್ಲಿ ನೌಕರಿ ಎಂಬ ಸಿದ್ದಾಂತ ಪಾಲಿಸುತ್ತಾ ಇರುವುದು
4.            ಶಿಕ್ಷಕ ವೃತ್ತಿಯ ಜೊತೆಗೆ ಉಪ ಉದ್ಯೋಗವನ್ನು ಮಾಡುವುದು (ಮರ ಕಡಿಯುವುದು, ಗಣಿಗಾರಿಕೆ, ಚಿಪ್ಪಿ ತೆಗೆಯುವುದು, ಸರಾಯಿ ಮಾರಾಟ, ಇಸ್ಪೀಟ್ ಆಟ, ಇತ್ಯಾದಿ)
5.            ಶಿಕ್ಷಕರಿಗೆ ಕಡ್ಡಾಯ ವಗರ್ಾವಣೆ ಇಲ್ಲದೇ ಇರುವುದು.
6.            ಶಿಕ್ಷಕರು ತಮ್ಮ ಮಕ್ಕಳನ್ನು ತಾವು ಇರುವ ಶಾಲೆಗೆ ಕರೆದೊಯ್ಯದೆ ಇತರ ಆಂಗ್ಲ ಮಾಧ್ಯಮ ಅಥವಾ ಇತರೆ ಖಾಸಗಿ ಶಾಲೆಗೆ ಕಳುಹಿಸುವುದು.
7.            ತಮ್ಮ ವೃತ್ತಿಯ ಕಡೆ ಗಮನ ನೀಡದೇ ರಾಜಕೀಯ ಪುಡಾರಿಗಳೊಂದಿಗೆ ಚಮಚಾಗಳಂತೆ ಹಿಂದ ತಿರುಗುತ್ತಾ ಇರುವುದು. 
8.            ತಮ್ಮ ಶಾಲೆಯ ಜವಬ್ದಾರಿ ಮರೆತು ಜಿಲ್ಲಾ ತಾಲ್ಲೂಕಾ ಹಂತದ ಅಧಿಕಾರಿಗಳ ಹಿಂದೆ ಅಲೆಯುತ್ತಾ ಇರುವುದು.
9.            ರಾಜಕೀಯ ಪಕ್ಷಗಳ ಏಜಂಟರಂತೆ ವತರ್ಿಸುತ್ತಾ ಯಾವುದೋ ಒಂದು ಸಿದ್ದಾಂತದ ಬಗ್ಗೆ ಸಾಮಾಜಿಕ ಮಾಧ್ಯಮ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಹರಟೆ ಹೊಡೆಯುವುದು.
10.         ಸಾರ್ವಜನಿಕ ಪ್ರದೇಶದಲ್ಲಿ ಅಕ್ಕ ಪಕ್ಕ ಯಾರು ತಮ್ಮನ್ನು ಅವಲೋಕಿಸುವರು ಎಂಬುದನ್ನು ಗಮನಿಸದೇ ವೇತನ, ರಜೆ, ಬಡ್ತೀ ಬಗ್ಗೆ ಮಾತನಾಡುವುದು.
11.         ಮಕ್ಕಳನ್ನು ಜಾತಿ,ಧರ್ಮದ, ಅಪ್ಪ ಅಮ್ಮನ ಹೆಸರು ಹೇಳಿ ಬೈಯುವುದು.. ಮಕ್ಕಳಲ್ಲಿ ಅನಾವಶ್ಯಕ ಸ್ಪಧರ್ೇಯನ್ನು ಏರ್ಪಡಿಸುವುದು. ಮಕ್ಕಳಲ್ಲಿ ಭೇದ ಬಾವವನ್ನು ಉಂಟು ಮಾಡುವುದು.
12.         ಶಾಲೆಗೆ ಹೋಗದೇ ಇರುವುದು. ಹೋದರು ಲೇಟಾಗಿ ಹೋಗಿ ಬೇಗ ಬರುವುದು.
13.         ಶಾಲೆಯ ವೇಳೆಯಲ್ಲಿ ಮೊಬೈಲ್ ಬಳಕೆ.
14.         ಶಿಕ್ಷಕರ ಜಾತಿ ರಾಜಕೀಯ.
15.         ತಮ್ಮ ಶಾಲೆ ತಮ್ಮ ಕಲಿಸುವ ಪದ್ದತಿ ಮೇಲೆ ನಂಬಿಕೆ ಕಳೆದುಕೊಂಡ ಶಿಕ್ಷಕರು.
16.         ವಗರ್ಾವಣೆ/ನಿಯೋಜನೆಗಳಲ್ಲಿ ದಲ್ಲಾಳಿಗಳಾಗಿರುವ ಶಿಕ್ಷಕರು
ಎಲ್ಲಾ ಕಾರಣಗಳಲ್ಲಿ ಕೆಲವೊಂದು ಕೆಲವು ಕಾರಣಗಳಲ್ಲಿ ಹೆಚ್ಚಿನ ಶಿಕ್ಷಕರು ತೊಡಗಿಸಿಕೊಂಡಿರುವರ ಕಾರಣದಿಂದಾಗಿ ಇಂದು ಸಮಾಜದಲ್ಲಿ ಗುರುವಿನ ಗೌರವ ದಿನೇ ದಿನೇ ಕಡಿಮೆಯಾಗುತ್ತಾ ಇರುವುದು. ಕೆಲವು ಶಿಕ್ಷಕರ ಇಂತಹ ಎಡಬಿಡಂಗಿ ವ್ಯವಹಾರಗಳಿಂದ ಗುರುವೃಂದದ ಗೌರವ ಕಡಿಮೆಯಾಗಿರುವುದು. ಆದರೂ ಹಳ್ಳಿಗಾಡಿನಲ್ಲಿ ಮತ್ತು ಕೆಲವು ಶಾಲೆಗಳಲ್ಲಿ ಪ್ರಾಮಾಣಿಕ ಶಿಕ್ಷಕರು ತಮ್ಮ ಕಾರ್ಯದಿಂದಲ್ಲೇ ಗೌರವನ್ನು ಸಂಪಾದಿಸುತ್ತಿರುವರು ಮತ್ತು ಅವರನ್ನು ಬೇರೆ ಬೇರೆ ಕಡೆಯ ಮಕ್ಕಳು ಹುಡುಕಿ ಬರುತ್ತಿರುವುದನ್ನು ಕಾಣಬಹುದಾಗಿದೆ. ಒಟ್ಟಾರೆಯಾಗಿ ಶಿಕ್ಷಕರಸ್ಥಿತಿ, ಶೈಕ್ಷಣಿಕ ವ್ಯವಸ್ಥೆಯು ಸ್ಥಿತಿ ಎಲ್ಲಾ ವಿಚಾರಗಳಗಳ ಬಗ್ಗೆ ಗುರುವೃಂದ, ಶಿಕ್ಷಕ ಸಘಂಟನೆಗಳು, ಮತ್ತು ಶೈಕ್ಷಣಿಕ ವ್ಯವಸ್ಥೆಯ ಪ್ರಮುಖ ಭಾಗೀದಾರರು ಎಲ್ಲರೂ ಸೇರಿ ಚಿಂತಿಸಿ ಕುಸಿಯುತ್ತಿರುವ ಗುರುವೃಂದದ ಗೌರವ/ಮೌಲ್ಯವನ್ನು ಪುನ: ಸಂಪಾದಿಸುವಂತಹ ವಾತಾವರಣವನ್ನು ಸೃಷ್ಠಿಸಬೇಕಾಗಿದೆ. ಶಿಕ್ಷಕ ದಿನಾಚರಣೆಯ ಸಂದರ್ಭವನ್ನು ಇಂತಹ ಚಿಂತನ ಕಾರ್ಯಕ್ಕೆ ಮೀಸಲಾಗಿಟ್ಟರೇ ಅರ್ಥಪೂರ್ಣವಾಗುವುದು.
                                                                                                                                                                                                                                                                             ವಿವೇಕ ಬೆಟ್ಕುಳಿ

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...