ಶನಿವಾರ, ಡಿಸೆಂಬರ್ 19, 2020

ಗಂಡಸರ ಮೇಲೆ ಲಾಕಡೌನ ಪರಿಣಾಮಗಳು

 

ಗಂಡಸರ ಮೇಲೆ ಲಾಕಡೌನ ಪರಿಣಾಮಗಳು

ಕೊರೋನಾ ಕಾರಣದಿಂದಾಗಿ ದೇಶವೇ ಲಾಕಡೌನ ಆಗಿದೆ. ದೇಶದಲ್ಲಿ ಕಾಯ೯ ನಿವ೯ಹಿಸುವ ವಿವಿಧ ಕಾಯ೯ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ. ಗಂಡಸರು ಮೊದಲಬಾರಿಗೆ ಅವರ ಬುದ್ದಿ ಬೆಳೆದ ಮೇಲೆ ಮನೆಯಲ್ಲಿಯೇ  ಇಷ್ಟೊಂದು ದಿನ ಕಾಲ ಕಳೆಯುವಂತೆ ಆಗಿರುವುದು.  ಹೆಚ್ಚಾಗಿ ಕೃಷಿಕರನ್ನು ಹೊರತು ಪಡಿಸಿ, ಉಳಿದಂತೆ ಮನೆಯ ಹೊರಗಡೆ ಕಾಯ೯ನಿವ೯ಹಿಸುವ ಎಲ್ಲಾ ಗಂಡಸರು ಈಗ ಮನೆಯಲ್ಲಿಯೇ ದಿನದ ೨೪ ಗಂಟೆ ಕಾಲ ಕಳೆಯಬೇಕಾಗಿದೆ.  ಬೆಳ್ಳಗಿನ ವಾಕಿಂಗ್‌, ಟಿ ಅಂಗಡಿ ಚಚೆ೯, ಸಂಜೆಯ ಕೆಲವು ಸ್ನೇಹಿತರ ಜೊತೆಗಿನ ಸಭೆ ಎಲ್ಲವೂ ರದ್ದಾಗಿರುವುದು. ಈ ಲಾಕಡೌನ ವಿವಿಧ ಬಗೆಯ ಗಂಡಸರ ಮನಸ್ಥಿತಿಯ ಮೇಲೆ ವಿಭಿನ್ನ  ಪರಿಣಾಮ ಬೀರಿದೆ.  ಕೆಲವು ಗಂಡಸರಿಗೆ  ಯಾವುದೇ ಪರಿಣಾಮ  ಬೀರಿರುವುದಿಲ್ಲ. ಆದರೇ ಹೆಚ್ಚಿನ ಗಂಡಸರ ಮೇಲೆ ಲಾಕಡೌನ ಸಾಕಷ್ಟು ಪರಿಣಾಮವನ್ನು ಬೀರಿರುವುದು  ಆ ಪರಿಣಾಮಗಳನ್ನು ಈ ಕೆಳಗಿನಂತೆ ಗಮನಿಸಬಹುದಾಗಿದೆ.

ಮನೆಯ ಕೆಲಸದ ಕಷ್ಟ ಗೊತ್ತಾಗುತ್ತಿದೆ.

ü  ದುಡ್ಡು ನೀಡಿದರೇ ಮಕ್ಕಳನ್ನು ಬೆಳಸಿದಂತೆ  ಎಂಬ ದೃಷ್ಠಿಕೋನ ಬದಲಾಗಿದೆ. ಮಕ್ಕಳನ್ನು ಸಲುಹುವ ಜವಬ್ದಾರಿಯ ಗಂಭೀರತೆ ಅಥ೯ವಾಗುತ್ತಾ ಇದೆ.

ü  ಬೆಳ್ಳೆಗೆ ಕೆಲಸಕ್ಕೆ ಹೋಗುವಾಗ. ಸಂಜೆ ಮನೆಗೆ ಬಂದಾಗ ಮಾತು ಮಾತಿಗೆ ಹೆಂಡತಿಯ ಮೇಲೆ ಸಿಟ್ಟಾಗುತ್ತಿದ್ದ ಗಂಡಸರಿಗೆ  ಹೆಂಡತಿಯಾದವಳ ಸಹನೆ ಅಥ೯ವಾಗುತ್ತಿದೆ.  

ü  ಮಕ್ಕಳ ಬೇಡಿಕೆ, ಹಠ, ಸಿಟ್ಟು ಪ್ರೀತಿ ಇವುಗಳ ಮನವರಿಕೆ ಆಗುತ್ತಾ ಇದೆ.

ü  ಮದುವೆ ಆಗಿ ಒಂದೆರಡು ವಷ೯ದಲ್ಲಿ ಹೆಂಡತಿಯ ಸೌಂದಯ೯ವನ್ನು ವಣಿ೯ಸುವುದನ್ನು ನಿಲ್ಲಿಸಿದ ಗಂಡಸರಿಗೆ ಈಗ ಹೆಂಡತಿ    ಸುಂದರವಾಗಿ ಕಾಣಿಸುತ್ತಿರುವಳು.

ü  ಕಛೇರಿಯಲ್ಲಿ ಹೊರಗಡೆ ಸುಂದರವಾಗಿ ಕಾಣುತ್ತಿದ್ದ ಬೇರೆಯವರ ಹೆಂಡತಿಗಿಂತ ಮನೆಯಲ್ಲಿ ಇರುವ ತನ್ನ ಮಡದಿಯೇ ಉತ್ತಮ ಎಂಬ ಭಾವನೆ ಬರುತ್ತಾ ಇದೆ.

ü  ಮನೆಯ ಅಡುಗೆ ಬಗ್ಗೆ  ಪುಕ್ಕಟೆ ಸಲಹೆ ನೀಡುತ್ತಿದ್ದ ಗಂಡಸರು ಸಲಹೆಯನ್ನು ನಿಲ್ಲಿಸಿರುವರು.

ü  ತಾನು ಹೇಳಿದ ಕೆಲಸವನ್ನು ಹೆಂಡತಿ ಮಾಡದೇ ಇದ್ದಾಗ, ಮನೆಯಲ್ಲಿಯೇ ಇದ್ದು ೨೪ ಗಂಟೆ ಏನು ಕೆಲಸ ಎಂದು ಪದೇ ಪದೇ ಹೆಂಡತಿಗೆ  ಗದರುತ್ತಿದ್ದ ಗಂಡಸರಿಗೆ ಜ್ಷಾನೋದಯವಾಗಿದೆ.

ü  ಪದೇ ಪದೇ ಯಾಕೇ ಈ ಸಾಮಾನು ತರುವುದು ಎಂದು ಲೆಕ್ಕ ಕೇಳುತ್ತಿದ್ದ ಗಂಡಸರಿಗೆ ಮನೆಗೆ ಬೇಕಾಗುವ ಸಾಮಾನಿನ ಲೆಕ್ಕ ಸಿಕ್ಕು ಹೆಂಡತಿಯ ಬಗ್ಗೆ ಪ್ರೀತಿ ಉಕ್ಕುತ್ತಾ ಇದೆ.

ü  ಮನೆಯಲ್ಲಿ ಎಲ್ಲಿ ಎಲ್ಲಿ ಯಾವ ಯಾವ ಸಾಮಾನು ಇದೆ ಎಂಬ ಬಗ್ಗೆ ಮಾಹಿತಿ ತಿಳಿದಿರುವುದು.

ü  ಅಡುಗೆ ಮಾಡುವ ಕಾಯ೯ ತಾನು ಮಾಡುವ ಕೆಲಸಕ್ಕಿಂತ ಕಷ್ಟದ್ದು ಎಂದು ಅಥ೯ವಾಗಿದೆ.

ü  ಆಗಾಗ ಮಕ್ಕಳಿಗೆ ಪದೇ ಪದೇ ಉಪನ್ಯಾಸ ಮಾಡುತ್ತಿದ್ದ ಗಂಡಸರು ಸರಣಿ ಉಪನ್ಯಾಸವನ್ನು ಪ್ರಾರಂಬಿಸಿರುವರು. ಆದರೇ ಹಿಂದಿನಂತೆ ಮಕ್ಕಳು ಉಪನ್ಯಾಸವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ü  ಮನೆಯಲ್ಲಿ ಹೆಂಗಸರಿಗೆ ಮೊದಲೇ ಭಯ ಪಡುತ್ತಿದ್ದ ಗಂಡಸರು ಮನೆಗೆಲಸದಲ್ಲಿ ಅನುಭವಿಗಳಾಗಿರುವರು.

ü  ಮಕ್ಕಳು , ಹೆಂಡತಿಯ ಮುಖವನ್ನು ದಿನನಿತ್ಯ ನೋಡಿ ನೋಡಿ ಮಾನಸಿಕವಾಗಿ ಖಿನ್ನತೆಗೆ ಸಹಾ ಕೆಲವರು ಒಳಗಾಗಿರುವರು, ಬಾರ್‌ ಓಪನ ಆದ ಮೇಲೆ ಆ ಸತ್ಯ ಅಲ್ಲಿ ಹೊರ ಬರುವುದು. ಅಲ್ಲಿಯವರೆಗೆ ಕಾಯಬೇಕು.

ü  ಹೆಂಡತಿಯನ್ನು ಇಂಪ್ರೆಸ್‌ ಮಾಡಲು ಆಡುತ್ತಿದ್ದ ಆಗಾಗ ನಾಟಕ್‌, ಸುಳ್ಳು, ಹೋಲಿಕೆ ಅದರ ಉದ್ದೇಶ ಈ ಎಲ್ಲವೂ ಮನೆಯಲ್ಲಿ ಗೊತ್ತಾಗಿರುವುದು ಅವೆಲ್ಲವೂ ಈಗ ಕಾಯ೯ನಿವ೯ಹಿಸುತ್ತಿಲ್ಲ.

 

ಈ ರೀತಿಯಾಗಿ ಕೆಲವು ಗಂಡಸರ ಮಾನಸಿಕ ಸ್ಥಿತಿ ಇರುವುದು. ತಮ್ಮ ತಮ್ಮ ಮನೆಯಲ್ಲಿನ ಗಂಡಸರು ಈ ಮನಸ್ಥಿತಿಯಲ್ಲಿ ಇದ್ದರಬಹುದು. ಯಾವ ಅಂಶ ನಿಮ್ಮಲ್ಲಿ ಇದೆ ಎಂಬುದನ್ನು ನೋಡಿಕೊಳ್ಳಿರಿ. ಇವೆಲ್ಲವನನು ಹೊರತು ಪಡಿಸಿ ಬೇರೆ ರೀತಿಯ ಮನಸ್ಥಿತಿಯ ಗಂಡಸರು ಇರಬಹುದು. ಅವರು ಸಹಾ ಬೇರೆ ಇನ್ನೊಂದು ರೀತಿಯ ಮನಸ್ಥಿತಿಯಲ್ಲಿ ಇರುವರು. ಒಟ್ಟಾರೇ ಲಾಕಡೌನ ಗಂಡಸರ ಮೇಲೆ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಬೀರಿರುವುದು.  ಅದೂ ನೋಡುವವರ ದೃಷ್ಠಿಯಲ್ಲಿ ಇರುವುದು.

                                                                                                                                                                              ವಿವೇಕ ಬೆಟ್ಕುಳಿ

                                                                                                                                                                  ೮೭೨೨೯೫೪೧೨೩

 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...