ಶನಿವಾರ, ಡಿಸೆಂಬರ್ 19, 2020

ಮಹಿಳೆಯರ ಮೇಲೆ ಲಾಕಡೌನ ಪರಿಣಾಮಗಳು

 

ಮಹಿಳೆಯರ ಮೇಲೆ ಲಾಕಡೌನ ಪರಿಣಾಮಗಳು

ಮಹಿಳೆಯೊಬ್ಬಳು ತನ್ನ ತಾಯಿಗೆ ಪೋನ್‌ “ ಈ ವ್ಯಕಿಯ ಜೊತೆ ನಾನು ಹೇಗೆ ೧೨ ವಷ೯ ಜೀವನ ಸಾಗಿಸಿದೆ ಎಂಬುದೇ ತಿಳಿಯುತ್ತಿಲ್ಲ. ಮಕ್ಕಳು ಇಲ್ಲದೇ ಇದ್ದರೆ  ಈ ದಿನವೇ ಇವನನ್ನು ಬಿಟ್ಟು ಹೋಗುತ್ತಿದೆ”

“ಮಕ್ಕಳನ್ನು ಹೇಗಾದರೂ ಸಂಭಾಳಿಸಬಹುದು ಆದರೇ ಈ ಮನುಷ್ಯನನ್ನೇ ಸಂಭಾಳಿಸುವುದು ಕಷ್ಟವಾಗಿದೆ. ಮುಂಚೆ ಹೀಗೆ ಇರಲಿಲ್ಲ. ಈಗ ಯಾಕೇ ಈ ರೀತಿ ಆಡುತ್ತಾನೋ ಗೊತ್ತಿಲ್ಲ”

“ಅದೇ ಗಂಡ ಮಕ್ಕಳು ೨೪ ಗಂಟೆ ಅವರ ಮುಖ ನೋಡಿ ನೋಡಿ ಸಾಕಾಗಿ ಹೋಗಿದೆ ಯಾವಾಗಾದರೂ ಈ ಲಾಕ ಡೌನ ಕೊನೊಯಾಗುತ್ತೋ ಕಾಯುತ್ತಾ ಇರುವೆನು.

 ಇದು ಯಾವುದೇ ಒಂದು ಮಹಿಳೆಯ ಮಾತಲ್ಲ. ಬದಲಾಗಿ ಲಾಕ ಡೌನ ಕಾರಣದಿಂದ ಮನೆಯಲ್ಲಿ ಇರುವ ಸಹನಶೀಲ ಸಾವಿರಾರು ಮಹಿಳೆಯರ ಸಿಟ್ಟು ಹೊರಬರುತ್ತಿರುವ ವಿವಿಧ ರೀತಿಯ ಉದಾಹರಣೆಗಳಾಗಿದೆ.

ಹೌದು ಪ್ರಥಮ ಬಾರಿಗೆ ಹೆಚ್ಚಿನ ಮಹಿಳೆಯರು ತುಂಬಾ ಕಿರಿ ಕಿರಿ ಅನುಭವಿಸುತ್ತಿರುವರು.  ಮಹಿಳೆಯರಿಗೆ ಲಾಕ ಡೌನ ನೇರವಾಗಿ ಪರಿಣಾಮ ಬೀರಿಲ್ಲ. ಉದ್ಯೊಗಸ್ಥ ಮಹಿಳೆಯರನ್ನು ಬಿಟ್ಟು ಉಳಿದ ಎಲ್ಲಾ ಮಹಿಳೆಯರು ಬಹುತೇಕ ಅಘೋಷಿತ ಲಾಕ ಡೌನನಲ್ಲಿಯೇ ಇರುವರು. ಅದಕ್ಕೆ ಮಹಿಳೆಯರು ಒಗ್ಗಿ ಹೋಗಿರುವರು. ಆದರೇ ಈಗ ಬಂದಿರುವ ಘೋಷಿತ ಲಾಕ ಡೌನ ಮಾತ್ರ ಮಹಿಳೆಯರ ಮೇಲೆ ಭಿನ್ನ ಭಿನ್ನವಾದ ಪರಿಣಾಮವನ್ನು ಉಂಟುಮಾಡಿರುವುದು.

·       ಹೆಚ್ಚಾಗಿ ಮಕ್ಕಳು ಶಾಲೆಗೆ ಗಂಡ ಕೆಲಸಕ್ಕೆ ಹೋದ ಮೇಲೆ ತನ್ನದೇ ಆದ ವೇಳೆ ಮಹಿಳೆಯರಿಗೆ ಸಿಗುತ್ತಾ ಇತ್ತು. ತನಗೆ ಇಷ್ಟದ ಕಾಯ೯ಕ್ರಮ ನೋಡುವುದು, ತಾಯಿ, ತಂಗಿ, ಸ್ನೇಹಿತರೊಂದಿಗೆ ಮುಚ್ಚು ಮರೆ ಇಲ್ಲದೇ ಎಲ್ಲಾ ಮಾತನಾಡುವುದಕ್ಕೆ ಅವಕಾಶ ಇತ್ತು. ಈಗ  ಅಂತಹ ಅವಕಾಶಗಳಿಗೆ ತಡೆಯುಂಟಾಗಿರುವುದು.

·       ರಾತ್ರಿ ನಿದ್ದೆ, ಬೆಳ್ಳಿಗೆ ಸಂಜೆ ಅಡುಗೆ ಕೆಲಸದಲ್ಲಿ ತೊಡಗಿಸಿಕೊಂಡು ಗಂಡನ, ಮಕ್ಕಳ ಬೇಕು ಬೇಡಿಕೆಯನ್ನು ಈಡೇರಿಸುತ್ತಾ ಇದ್ದ ಮಹಿಳೆಯರಿಗೆ ದಿನದ ೨೪ ಗಂಟೆ ಅದೇ ಗಂಡ, ಮಕ್ಕಳ ಮುಖ ನೋಡಿ ನೋಡಿ, ಕಿರಿ ಕಿರಿ ಕೇಳಿ ಕೇಳಿ ಸಹನೆ ಒಡೆಯುತ್ತಾ ಇರುವುದು.

·       ಪದೇ ಪದೇ ಕೆಲಸದ ಆಳುಗಳನ್ನು ನೋಡಿಕೊಳ್ಳುವಂತೆ  ಮಹಿಳೆಯನ್ನು ನೋಡುವ ಮಕ್ಕಳು, ಗಂಡದಿರ ಕಾರಣದಿಂದ ಲಾಕಡೌನ ಜಾರಿ ಮಾಡಿದ ವ್ಯಕ್ತಿಯ ಮೇಲೆ ಮಹಿಳೆಯರಿಗೆ ಸಿಟ್ಟು ಬರುತ್ತಾ ಇರುವುದು.

·       ಮದುವೆಯಾಗಿ ಒಂದೆರಡು ವಷ೯ ಪ್ರೀತಿ, ಪ್ರೇಮ ಸರಸ್‌ ಸಲ್ಲಾಪದಲ್ಲಿ ತೊಡಗಿಸಿಕೊಂಡ ಗಂಡ ಈಗ ಪುನ: ರೊಮ್ಯಾಟಿಕ ಮೂಡನಲ್ಲಿ ಬಂದಿರುವುದನ್ನು ನೋಡಿ ಗಲಿಬಿಗೊಂಡಿರುವರು.

·       ಲಾಕಡೌನ ಘೋಷಣೆಯಾದಾಗ ಗಂಡ ಮಕ್ಕಳೊಂದಿಗೆ ಚೆನ್ನಾಗಿ ಕಾಲ ಕಳೆಯಬಹುದು, ತನಗೇ ದಿನ ನಿತ್ಯದ ಕಾಯ೯ಗಳಿಂದ ಸ್ವಲ್ಪ ನೆಮ್ಮದಿ ಸಿಗಬಹುದು ಎಂದು ಯೋಚಿಸಿದ್ದ ಮಹಿಳೆಗೆ ನಾಲ್ಕೇ ದಿನದಲ್ಲಿ ಆ ಬಗ್ಗೆ ನಿರಾಸೆಯಾಗಿರುವುದು.

·       ಮನೆಯ ಸ್ವಚ್ಚತೆ, ಹತ್ತಾರು ವಷ೯ಗಳಿಂದ ಇರುವ ಹಳೆಯ ದಿನಪತ್ರಿಕೆ, ಪುಸ್ತಕ ಇವುಗಳನ್ನು ವಿಲೇವಾರಿ ಮಾಬಹುದು ಎಂದು ಪ್ರಸ್ಥಾಪವಿಟ್ಟು ಕೆಲಸವೂ ಪ್ರಾರಂಭವಾಯಿತು. ಆದರೇ ಸರಿಯಾಗಿ ಯಾವುದೇ ಕಾಯ೯ವನ್ನು ಮಾಡದೇ ದಿನ ನಿತ್ಯ ೨-೩ ಬಾರಿ ಮನೆಯನ್ನು ಮಹಿಳೆಯೇ ಸ್ವಚ್ಛಗೊಳಿಸುವ ಪರಿಸ್ಥಿತಿ ಬಂದಿರುವುದು.

·       ಮನೆಯಲ್ಲಿಯೇ ಕೆಲಸ ಮಾಡಬೇಕು ಎಂಬ ಹೆಚ್ಚಿನ ಸಕಾ೯ರಿ ಖಾಸಗಿ ಕಂಪನಿಗಳ ನಿಯಮದಿಂದ ಹೆಚ್ಚಿನವರು ಮನೆಯಲ್ಲಿ ಕೆಲಸ ಮಾಡುತ್ತಿರುವರು. ಆದರೇ ಅಲ್ಲಿ ವಾಚಮೆನ್‌ ಕೆಲಸ, ಮಧ್ಯದಲ್ಲಿ ಟೀ ನೀಡುವುದು, ಕೆಲಸ ಮಾಡುವ ಗಂಡಸಿಗೆ ಮಕ್ಕಳಿಂದ, ಟಿವಿ, ಮೊಬೈಲ್‌ ಇತರೆ ಯಾವುದೇ ಶಬ್ದಗಳಿಂದ ಯಾವುದೇ ಅಡೆತಡೆ ಆಗದಂತೆ ನೋಡಿಕೊಳ್ಳುವುದು ಈ ಎಲ್ಲಾ ಕಾಯ೯ಗಳು ಮಹಿಳೆಗೆ ಅತಿಯಾದ ಕಿರಿ ಕಿರಿ ಉಂಟು ಮಾಡುತ್ತಿರುವುದು.

·       ಗಂಡ, ಮಕ್ಕಳು ದಿನಕ್ಕೊಂದು ಊಟದ, ತಿಂಡಿಯ ಬಗ್ಗೆ ಬೇಡಿಕೆಯನ್ನು ಇಡುವುದು ಅದನ್ನು ಅಲ್ಲಗೆಳೆಯಲು ಆಗದೇ ಇರುವುದು. ಆ ಬಗ್ಗೆ ಗಂಡ ಮಕ್ಕಳಿಂದ ದಿನ ನಿತ್ಯ ಉಪನ್ಯಾಸವನ್ನು ಕೇಳಬೇಕಾಗಿದೆ.

·       ತನ್ನದೇ ಬೇಕಾದ ಯಾವುದೇ ಇಷ್ಟಕ್ಕೆ ಮನೆಯಲ್ಲಿ ಯಾವುದೇ ಬೆಲೆ ಇಲ್ಲವಾಗಿದೆ.

·       ಇರುವ ೧-೨ ಮಕ್ಕಳನ್ನು  ೨೪ ಗಂಟೆ ನೋಡಿಕೊಳ್ಳುವುದು ಎಷ್ಟು ಕಷ್ಟ ಎಂದು ಅಥ೯ ಆಗುತ್ತಿದೆ. ಹಾಗೇ ಇಂತಹ ಹತ್ತಾರು ಮಕ್ಕಳನ್ನು ದಿನದ ೮ ಗಂಟೆ ನೋಡಿಕೊಳ್ಳುವ ಶಿಕ್ಷಕರ ಬಗ್ಗೆ ಅನುಕಂಪ ಬರುತ್ತಾ ಇದೆ.

·       ಕೊರೋನಾ ವೈರಸ್‌ ಕ್ಕಿಂತ ಅಪಾಯಕಾರಿಯಾಗಿ ಮನೆಯಲ್ಲಿನ ಕೆಲವು ಜನರು ಕಾಣಿಸುತ್ತಾ ಇರುವರು.

      ಹೊರಗಡೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುವ ಮಹಿಳೆಯರಾಗಿರಬಹುದು ಅಥವಾ ಸದಾ ಕಾಲ ಮನೆಯ ಜವಬ್ದಾರಿ ಹೊತ್ತ ಮಹಿಳೆಯರಿರಬಹುದು ಎಲ್ಲಾ ರೀತಿಯ ಹೆಚ್ಚಿನ ಮಹಿಳೆಯರ ಸ್ಥಿತಿ ಒಂದೇ ಆಗಿದೆ.  ಅವರು ಜಿಲ್ಲಾ ತಾಲ್ಲೂಕಾ ಹಂತದ ಅಧಿಕಾರಿಯಾಗಿರಬಹುದು, ಪೋಲಿಸ್‌ ಇಲಾಖೆಯಲ್ಲಿರುವ ಅಧಿಕಾರಿಯಾಗಿರಬಹುದು ಎಲ್ಲ ಮಹಿಳೆಯರ  ಸ್ಥಿತಿಯೂ ಮನೆಯಲ್ಲಿ ಒಂದೇ ಆಗಿದೆ.

ಸ್ವಲ್ಪ ವಿಭಿನ್ನವಾಗಿ ಯೋಚನೆ ಮಾಡಿ ಮನೆಯಲ್ಲಿ ತಮ್ಮದೇ ಆದ ಅಧಿಕಾರ ಚಲಾಯಿಸುವ ಮಹಿಳೆಯರು ಲಾಕ ಡೌನನ್ನು ತುಂಬಾ ಎಂಜಾಯ ಮಾಡುತ್ತಿರುವರು. ಗಂಡನಿಗೆ ಅಡುಗೆ ಮಾಡಲು ಕಲಿಸಿರುವರು. ಮನೆಯ ಜವಬ್ದಾರಿಯನ್ನು ಮಕ್ಕಳು ಹಾಗೂ ಗಂಡನಲ್ಲಿ ಹಂಚಿಕೆ ಮಾಡಿ ಎಲ್ಲರೂ ಸಂತೋಷ ಪಡುತ್ತಾ ಇರುವರು. ಆದರೇ ಆ ಸಂಖ್ಯೆ ಬೆರಳಣಿಕೆಯಷ್ಟು ಮಾತ್ರ ಎಂಬುದನ್ನು ಗಮನಿಸಬೇಕಾಗಿದೆ.

                                                                                                                                                                              ವಿವೇಕ ಬೆಟ್ಕುಳಿ

                                                                                                                                                                        ೮೭೨೨೯೫೪೧೨೩

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...