ಸೋಮವಾರ, ಮಾರ್ಚ್ 6, 2023

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

 

ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ. ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ ಸಂಯೆ ಮಾತ್ರ ಬೆರಳಣಿಕಯಷ್ಟು ಇರುವುದು. ಅದೂ ಸಹಾ ಮೀಸಲಾತಿ ಕಾರಣದಿಂದಾಗಿ ಮಾತ್ರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಸಂಖ್ಯೆಗಳು ಕಾಣುವುದು. ಆದರೇ ಉದ್ಯೋಗದ ವಿಚಾರದಲ್ಲಿ  ಆರೋಗ್ಯ, ಶೈಕ್ಷಣಿಕ, ಆಡಳಿತಾತ್ಮಕ ಮತ್ತು ಇತರೆ ಕ್ಷೇತ್ರಗಳಲ್ಲಿ ಮಹಿಳೆಯರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವುದು ಆಶಾದಾಯಕ ಸಂಗತಿಯಾಗಿದೆ. ಮಹಿಳೆಗೆ ಸಮಾನವಾದ ಅವಕಾಶ ಸಿಗಬೇಕು. ಗೌರವ ಸಿಗಬೇಕು, ಆಥಿþಕವಾಗಿ ಸಬಲರಾಗಬೇಕು ಎಲ್ಲಾ ವಿಚಾರಗಳನ್ನು ಖಂಡಿತವಾಗಿ ಮಾಡಲೇ ಬೇಕಾಗಿದೆ. ಪ್ರಯತ್ನಗಳೂ ತಕ್ಕ ಮಟ್ಟಿಗೆ ಆಗಿದೆ ಅದರ ಪರಿಣಾಮವನ್ನು ಸಹಾ ಸುತ್ತಮುತ್ತ ಕಾಣುತ್ತಿರುವೆವು.

ನಗರ ಪ್ರದೇಶಗಳಲ್ಲಿ ಮಹಿಳಾ ಸ್ವಾತಂತ್ಯ, ಸಮಾನತೆಯನ್ನು ಪುರುಷರಿಗಿಂತ ನಾವೇನು ಕಡಿಮೆ ಎಂಬ ಹೋರಾಟದ ರೀತಿ ನೋಡುವ ಮನಸ್ಥಿತಿ ಬರುತ್ತಿರುವುದು.  ಕಾರಣದಿಂದಾಗಿ  ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ? ಎಂಬುದರ ಬಗ್ಗೆ ಚಚಿþಸುವ ಅಗತ್ಯ ಉಂಟಾಗಿದೆ

ಇತ್ತೀಚೀನ ದಿನಗಳಲ್ಲಿ ಕೆಲವು ಮಹಿಳೆಯರು ಕೆಲವು ವಿಚಾರಗಳಲ್ಲಿ ಜಿದ್ದಿಗೆ ಬಿದ್ದವರಂತೆ ಪುರುಷರಿಗೆ ಸಮಾನವಾಗುವ ರೀತಿಯಲ್ಲಿ ಮುನ್ನಡೆಯುತ್ತಿರುವರು. ಧೂಮಪಾನ, ಮಧ್ಯಪಾನಗಳಲ್ಲಿ ನಗರ ಪ್ರದೇಶದಲ್ಲಿ ಅತಿ ಹೆಚ್ಚು ಶಿಕ್ಷಿತ ಮಹಿಳಾ ಸಮುದಾಯ ಪುರುಷರಿಗೆ ಸಮಾನವಾಗಿ ಮುಂದೆ ಬರುತ್ತಿರುವುದು. ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ಉದ್ಯೋಗ, ಶಿಕ್ಷಣದ ಕಾರಣಕ್ಕಾಗಿ ಬರುವ ಸಾವಿರಾರು ಮಹಿಳೆಯರೂ ಮೋಜು ಮಸ್ತಿಯ ಹೆಸರಿನಲ್ಲಿ ಹೆಂಡದ ಹೊಳೆ ಹರಿಯುವ ರೇವ್ ಪಾಟರ್ಿಗಳಲ್ಲಿ, ಪಬ್ ಗಳಲ್ಲಿ, ಕಛೇರಿಯ ಪಾಟರ್ಿಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ಧೂಮಪಾನ ಮಧ್ಯಪಾನ ಹಾಗೂ ಡ್ರಗ್ಸ್ ಸೇವನೆಗಳಲ್ಲಿ ಮಹಿಳೆಯರು ತೊಡಗಿರುವುದು ನಿಜಕ್ಕೂ ಆಂತಕದ ಸಂಗತಿಯಾಗಿರುವುದು. ಹವ್ಯಾಸಗಳು ಯಾರಿಗೂ ಒಳ್ಳೆಯದಲ್ಲ. ಆದರೇ ಜೀವವನ್ನು ಸೃಷ್ಠಿಸುವ ಸಾಮಥ್ರ್ಯವಿರುವ ಮಹಿಳೆಯರು ಚಟಗಳಿಗೆ ಒಳಗಾದರೇ ತಾಯಿ ಹಾಗೂ ಮಗೂ ಎರಡಕ್ಕೂ ಅಪಾಯ ಇರುವುದು.  ಸತ್ಯವನ್ನು ಒಪ್ಪಿ ನಿಧಾþ ಮಾಡುವ ಅಗತ್ಯವಿದೆ.

ಸಹನೆಗೆ ಇನ್ನೊಂದು ಹೆಸರೇ ಮಹಿಳೆ. ಕಾರಣದಿಂದಲ್ಲೇ ಹೆಚ್ಚಾಗಿ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಸಂವೇದನಾ ಶೀಲತೆ ಇರುವುದು ಎಂದರೆ ತಪ್ಪಾಗಲಾರದು. ಮದುವೆಯಾಗಿ ಹೋದ ಗಂಡನ ಮನೆಯಲ್ಲಿ ಒಂದು ಹೆಣ್ಣಾಗಿ ಮನೆಯ ಮಗಳಾಗಿ ಜೀವನ ಸಾಗಿಸಬೇಕಾದದ್ದು ಹಿಂದಿನಿಂದ ನಡೆದು ಬಂದ ಪದ್ದತಿಯಾಗಿದೆ.  ಮಹಿಳೆಗೆ ಸಹನೆ ಇರುವ ಕಾರಣದಿಂದಲ್ಲೇ ಎಷ್ಟೋ ಮದುವೆಯಾದ ಗಂಡಸರು ಸರಿದಾರಿಗೆ ಬಂದು ಜೀವನ ಸಾಗಿಸುತ್ತಿರುವುದನ್ನು ನಾವು ಕಾಣುವೆವು. ಆದರೇ ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಯಂತ್ರಗಳ ಬಳಕೆ, ಮಾನಸಿಕ ದ್ವಂದ, ಗಂಡ-ಗಂಡನ ಮನೆಯವರಿಂದ ಸಿಗದ ಅಪೆಕ್ಷೀತ ಪ್ರೀತಿ ಕಾರಣಗಳಿಂದ ಮಹಿಳೆ ಸಹನತೆಯನ್ನು ಕಳೆದುಕೊಳ್ಳುತ್ತಿರುವಳು. ಆದರೇ ಅದರ ಪರಿಣಾಮ ನೇರವಾಗಿ ತನ್ನದೇ ಮಕ್ಕಳ ಮೇಲೆ ಆಗುತ್ತಿರುವುದನ್ನು ಆಕೆ ಮರೆತಿರುವಳು. ಸಂದರ್ಭದಲ್ಲಿಯೂ ಮಗುವನ್ನು ಸಾಕುವದರ ಬಗ್ಗೆಯೂ ಸಮಾನತೆ ಪ್ರಶ್ನೆ ಬರುತ್ತಿರುವದು ಒಳ್ಳೆಯದಲ್ಲ. ಕಾರಣ ನೈಸಗಿþಕವಾಗಿ ಮಹಿಳೆಗೆ ಇರುವ ಸಹನತೆ ಗಂಡಸರಲ್ಲಿ ಹೆಚ್ಚಾಗಿ ಇರುವುದಿಲ್ಲ.

ಇಂದಿನ ಮಕ್ಕಳು ತಾಯಿಯ ಪ್ರೀತಿ, ಅಜ್ಜಿಯ ಮಮತೆಯಿಂದ ದೂರವಾಗುತ್ತಿರುವರು. ನಗರ ಮಹಾನಗರದಲ್ಲಿ ಹೆಚ್ಚಿನ ಮಹಿಳೆಯರನ್ನು ನೋಡಿಕೊಳ್ಳಲು ಹಳ್ಳಿಗಳಿಂದ ಬಂದ ಕೆಲಸದವರು ಇರುವರು. ಚಿಕ್ಕ ಮಕ್ಕಳೊಂದಿಗೆ ಅಗತ್ಯ ಸಮಯವನ್ನು ತಾಯಿಯಾದವರು ಕಳೆಯುತ್ತಿಲ್ಲ.  ಬಗ್ಗೆ ಚಚೆþ ಆದರೇ ಗಂಡು-ಹೆಣ್ಣಿನ ಸಮಾನತೆಯ ಬಗ್ಗೆ ಚಚೆþ ಆಗುವದು. ಪರಿಣಾಮವಾಗಿ ತಾಯಿಗೆ ತನ್ನ ಮಗೂವನ್ನು ನೋಡಿಕೊಳ್ಳಲು ಟೈಮ ಇಲ್ಲ. ಆದರೇ ಮನೆಯಲ್ಲಿನ ನಾಯಿಯನ್ನು ವಾಕಿಂಗ್ ಕರೆದು ಕೊಂಡು ಹೋಗಲು ಗಂಡ-ಹೆಂಡತಿ ವೇಳೆಯನ್ನು ನಿಗದಿ ಮಾಡಿಕೊಂಡಿರುವುದು  ವಿಪಯರ್ಾಸವಾಗಿದೆ. ಮೇಲೆ ತಿಳಿಸಿದ ಮೂರು ಸಂದರ್ಭವನ್ನು ಹೊರತು ಪಡಿಸಿ ಇಂತಹ ಹತ್ತಾರು ವಿಚಾರಗಳಲ್ಲಿ ಮಹಿಳೆ ಸಮಾನತೆ. ಸ್ವಾತಂತ್ಯ ವಿಚಾರಗಳನ್ನು ಇಟ್ಟು ಸಾಧಕ-ಬಾದಕೆತ ಬಗ್ಗೆ ಯೋಚಿಸುವ ಅಗತ್ಯವಿದೆ.

   ಇಂದು ಮಹಿಳಾ ದಿನಾಚರಣೆ. ಹಿಂದಿನಿಂದಲ್ಲೂ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಸಾಕಷ್ಟು ನೋವು ಅನುಭವಿಸಿರುವಳು. ಇಂದಿಗೂ ಸಹಾ ಹಳ್ಳಿಗಳಲ್ಲಿ ಮಹಿಳೆಗೆ ಸಂಪೂರ್ಣವಾದ ಸ್ವಾತಂತ್ಯ ಸಿಕ್ಕಿರುವುದಿಲ್ಲ. ನಗರಗಳಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವೆವು. ಮಹಿಳೆಯ ಸಮಸ್ಯೆಯನ್ನು ಅರ್ಥಮಾಡಿಕೊಂಡು ಅವರೊಂದಿಗೆ ಸಂವೇದನಾ ಶೀಲರಾಗಿ ವತಿþಸುವದನ್ನು ಪುರುಷ ಸಮಾಜ ರೂಢಿಸಿಕೊಳ್ಳುವ ಅಗತ್ಯವಿದೆ. ದೈಹಿಕವಾಗಿ ಮಹಿಳೆ ಪುರುಷನಾಗಲು ಸಾಧ್ಯವಿಲ್ಲ. ಪುರುಷ ಮಹಿಳೆ ಆಗಲು ಸಾಧ್ಯವಿಲ್ಲ. ಆದರೇ ಎಲ್ಲರೂ ಇನ್ನೂ ಪರಸ್ಪರ ಸಂವೇದನಾ ಶೀಲರಾಗಲೂ ಖಂಡಿತ ಸಾಧ್ಯವಿದೆ.

                                                                    ವಿವೇಕ ಬೆಟ್ಕುಳಿ

                                                                    8722954123             

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...