ಶನಿವಾರ, ಡಿಸೆಂಬರ್ 19, 2020

ಸಹಜ ಬಾಲ್ಯ ಜೀವನವನ್ನು ಪರಿಚಯಿಸಿದ ಕೊರೊನಾಕ್ಕೆ ಧನ್ಯವಾದಗಳು

 

                                       ಸಹಜ ಬಾಲ್ಯ ಜೀವನವನ್ನು ಪರಿಚಯಿಸಿದ ಕೊರೊನಾಕ್ಕೆ ಧನ್ಯವಾದಗಳು

ಮಗು ಶಾಲೆಗೆ ಹೋಗಲು ಪ್ರಾರಂಭಿಸಿದಾಗಿನಿಂದ ಇಂದಿನವರೆಗೆ ಇಷ್ಟ ಇದೆಯೋ ಇಲ್ಲವೋ ದಿನಾಲು ಬೆಳ್ಳಿಗೆಯಿಂದ ಸಂಜೆ ಶಾಲೆ,  ಟ್ಯೂಶನ ಕ್ಲಾಸ್‌, ವಾರದಲ್ಲಿ ಸಿಗುವ ರಜೆಯ ಒಂದು ದಿನ  ಕರಾಟೆ/ಸಂಗೀತ/ಡಾನ್ಸ್/ಸ್ವೀಮಿಂಗ್ ಯಾವುದೋ ಒಂದು (ಅಪ್ಪ ಅಮ್ಮನಿಗೆ ಪ್ರತಿಷ್ಠೆಗೆ ಪುರಕವಾದ ತರಗತಿ), ಬೇಸಿಗೆ ರಜೆಯಾಗಲಿ ಮಧ್ಯಂತರ ರಜೆಯಾಗಲಿ ಶಿಬಿರಗಳ ಹೆಸರಿನಲ್ಲಿ ಮನೆ ಬಿಟ್ಟು ಬೇರೆ ಕಡೆ ಹೋಗುವುದು. ಒಟ್ಟಾರೇ  ಮಕ್ಕಳ ಬಾಲ್ಯವನ್ನು ಪಾಲಕರಾದವರು ತಮ್ಮ ಪ್ರತಿಷ್ಠೆಗೆಗಾಗಿ ಬಲಿಕೊಟ್ಟರು. ಮಕ್ಕಳ ಬಾಲ್ಯ ಎಂದರೆ ಇದೇ ರೀತಿಯಾದದ್ದು ಎಂದು ಸಮಾಜ ನಂಬುವಂತಹ ಅಪಾಯಕಾರಿಯಾದ ಹಂತಕ್ಕೆ ನಾವು ತಲುಪಿದೆವು.  ಅನೂಕರಣೆ ಎಂಬುದು ಎಲ್ಲಿಗೆ ತಲುಪಿತು ಎಂದರೆ  ಮಕ್ಕಳನ್ನು ನಾವು ಭಾಗಶ: ಯಂತ್ರಗಳನ್ನಾಗಿ ಮಾಡಿದೆವು.  ಯಂತ್ರಗಳ ಸಾಧನೆ ನೋಡಿ ಖುಷಿಪಡುವಂತೆ ನಾವು ಮಕ್ಕಳ ಸಾಧನೆ ನೋಡಿ ಸಂತೋಷ ಪಡಲು ಪ್ರಾರಂಭಿಸಿದವು. ಪರಿಣಾಮವಾಗಿ ಪಾಲಕರ ಮಕ್ಕಳ ಸಂಬಂಧ ದಿನೇ ದಿನೇ ಸಂಕೀಣ೯ವಾಗುತ್ತಾ ಹೋಯಿತು. ಅವನ ನೋಡ, ಇವನ ನೋಡ  ಎಂದು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಿ ಮಾಡಿ ನಮ್ಮ ಮಗುವಿನ ಸ್ವಂತಿಕೆಯನ್ನೇ ನಾಶ ಮಾಡಿಬಿಟ್ಟೆವು.

 ಒಟ್ಟರೇ ಬಾಲ್ಯದಲ್ಲಿ ಬಾಲ್ಯವನ್ನು ಅನುಭವಿಸಬೇಕಾದ ಮಗುವನ್ನು ನಾವು ಆಡಿಸುವ ಗೊಂಬೆಯನ್ನಾಗಿಸಿದೆವು. ಬಹುಶ:  ಈ ರೀತಿಯಲ್ಲಿ ಬಾಲ್ಯವನ್ನು ಕಳೆದುಕೊಂಡ ಮಕ್ಕಳ ನೋವು ದೇವರಿಗೆ ಕೇಳಿಸಿರಬೇಕು. ಕೊರೊನಾ ಹೆಸರಿನಲ್ಲಿ ಸರಿಯಾದ ವೇಳೆಯಲ್ಲಿ ಮಕ್ಕಳ ನೆರವಿಗೆ ಬಂದಿರುವುದು. ಕಡ್ಡಾಯವಾಗಿ ಮನೆಯಲ್ಲಿ ಎಲ್ಲರೂ ಇರಬೇಕಾದ ಸ್ಥಿತಿ ಬಂದಿದೆ. ಹೌದು ಎಲ್ಲರೂ ಒಟ್ಟಾಗಿ ತಿಂಗಳುಗಟ್ಟಲೇ ದಿನಾದ ೨೪ ಗಂಟೆ ಒಂದೇ ಮನೆಯಲ್ಲಿ ಇರುವುದು ಸುಲಭವಲ್ಲ. ಆದರೇ ಅನಿವಾಯ೯ವಾಗಿದೆ. ಈ ರೀತಿಯ ಸ್ಥಿತಿ ಮಕ್ಕಳ ಪಾಲಿಗೆ ಒಂದು ಅದೃಷ್ಟವೇ ಸರಿ.  ಈ ರೀತಿಯ ಸಂದಭ೯ ಮಕ್ಕಳಲ್ಲಿ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನ ಈ ಕೆಳಗಿನಂತೆ ಗುರುತಿಸಬಹುದಾಗಿದೆ

ಮಕ್ಕಳು ಮನಸ್ಸಿನಲಲ್ಲಿಯೇ ತುಂಬಾ ಸಂತೋಷದಿಂದ ಇರುವರು. 

ಮನೆಯವರೆಲ್ಲರೂ  ಮಕ್ಕಳೊಂದಿಗೆ ಕಾಲ ಕಳೆಯುತ್ತಿರುವುದರಿಂದ ಮಕ್ಕಳಲ್ಲಿ ಪರಸ್ಪರ ಸಂಬಂಧದ ಬಗ್ಗೆ ಭರವಸೆ ಮೂಡಿರುವುದು.

ಮನೆಯವರೊಂದಿಗೆ  ಆಟ, ಟಿವಿ ನೋಡುವುದು, ಓದಿನ ಬಗ್ಗೆಹಾಗೂ ಇತರೆ ಚಚೆ೯ ನಡೆಯುದುದರಿಂದ ಮಕ್ಕಳಿಗೆ ತಮ್ಮ ಬಗ್ಗೆ ತಮಗೆ ಗವ೯  ವೆನಿಸುತ್ತಿರುವುದು.

ಮನೆಯಲ್ಲಿ ಆಗಾಗ ನಡೆಯುವ ಅಪ್ಪ ಅಮ್ಮನ ಜಗಳ, ಸಿಟ್ಟು, ಪ್ರೀತಿ, ಕಾಳಜಿ  ಈ ಎಲ್ಲವನ್ನು ಗಮನಿಸಲು ಸಾಧ್ಯವಾಗಿದೆ. ಈ ಅಂಶಗಳ ಬಗ್ಗೆ ಯಾವ ಶಾಲೆ, ಟ್ಯೂಶನ ತರಗತಿಗಳಲ್ಲಿಯೂ ಹೇಳುವುದಿಲ್ಲ. ಮನುಷ್ಯ ಸಂಬಂಧದಗಳ ಭಾಗವಾಗಿರುವ ಈ ಎಲ್ಲಾ ಅಂಶಗಳನ್ನ ಸ್ಮೂಕ್ಮವಾಗಿ ಗ್ರಹಿಸಲು ಸಾಧ್ಯವಾಗುತ್ತಾ ಇರುವುದು.

ಮನೆಯ ನಿವ೯ಹಣೆಯಲ್ಲಿ ಅಮ್ಮನ ಪಾತ್ರದ ಹಾಗೂ ಅಪ್ಪನ ಜವಬ್ದಾರಿಯ  ಬಗ್ಗೆ ಅರಿವಾಗುತ್ತಾ ಇರುವುದು.

ಅಪ್ಪ –ಅಮ್ಮನ ಬಾಯಿಂದ ಅಜ್ಜ –ಅಜ್ಜಿಯರ ಕಾಲದ ಘಟನೆಗಳ ಬಗ್ಗೆ ತಿಳಿಯುತ್ತಿರುವುದು. ಆ ಘಟನೆಗಳನ್ನು ಇಂದಿನ ಸ್ಥಿತಿಗೆ ಹೋಲಿಸಿ ಯೋಚಿಸಲು ಅವಕಾಶವಾಗಿದೆ.

ಯಾವುದೇ ರೀತಿಯ ಕೆಲಸ ಮಾಡಲಿ, ಹಣ ಸಂಪಾದನೆ ಮಾಡಲಿ , ಮನೆಯಲ್ಲಿ ಎಷ್ಟೇ ಜಗಳವಾಡಲಿ ಕೊನೆಗೆ ಮನೆಯೇ ಗತಿ ಆಗಿರುವುದು ಎಂಬ ಸತ್ಯ ತಿಳಿದಿರುವುದು.

ಮೂಲೆ ಸೇರಿದ ಒಳಾಂಗಣ ಕ್ರೀಡಾ ಸಾಮಗ್ರಿಗಳು ಕಪಾಟು ಸೇರಿದ್ದ ವಿವಿಧ ಪುಸ್ತಕಗಳು ಹೊರ ಬಂದಿರುವುದು.  ಅದರೊಂದಿಗೆ ಮಕ್ಕಳ ಮಾತುಕತೆ ನಡೆದಿರುವುದು.

ಅಣ್ಣ-ತಂಗಿಯರ ಗುಟ್ಟಿನ ವಿಚಾರಗಳು ಪರಸ್ಪರ ಹಂಚಿಕೆಯಾಗಿರುವುದು. ಈ ಕಾರಣಕ್ಕಾಗಿಯೇ ಇಬ್ಬರಲ್ಲಿ ಅನ್ಯೋನ್ಯತೆ ಮೂಡಿರುವುದು.

ಒಟ್ಟಾರೆಯಾಗಿ ಕೊರೊನಾ ಪರಿಣಾಮದಿಂದಾಗಿ ಮಕ್ಕಳಿಗೆ ಹಲವಾರು ವಷ೯ಗಳಿಂದ ಕಣ್ಮರೆಯಾಗಿದ್ದ ಬಾಲ್ಯ ಜೀವನ ಪುನ: ಬಂದಿರುವುದು. ಲಾಕಡೌನ ಪರಿಣಾಮದಿಂದಾಗಿ ಸಾಕಷ್ಟು ಸಮಸ್ಯೆಗಳಾಗಿರುವುದು.  ಆಥಿ೯ಕತೆಯಲ್ಲಿ ನಾವು ೧೦-೧೫ ವಷ೯ ಹಿಂದೆ ಹೋಗಬಹುದು. ಆದರೇ ೨೦-೨೫ ವಷ೯ದ  ಹಿಂದೆ ನಮಗೆ ಸಿಗುತ್ತಿದ್ದ ಬಾಲ್ಯವನ್ನು ನಮ್ಮ ಭವಿಷ್ಯದ ನಾಗರೀಕರಾದ ಇಂದಿನ ಮಕ್ಕಳಿಗೆ ಒದಗಿಸಿಕೊಡುವಲ್ಲಿ ಲಾಕಡೌನ ಬಹುತೇಕ ಯಶಸ್ವಿಯಾಗಿರುವುದು. ಎಷ್ಟೇ ಹಣ ನೀಡಿದರು ಸಹಾ ಈ ತರಹದ ಅನುಭವವನ್ನು ಮಕ್ಕಳಿಗೆ ನೀಡಲು ಸಾಧ್ಯವಾಗುತ್ತಾ ಇರಲಿಲ್ಲ.  ಥ್ಯಾಂಕ್ಸ  ಕೊರೊನಾ.

                                                                                                                                                                          ವಿವೇಕ ಬೆಟ್ಕುಳಿ

                                                                                                                                                               ೮೭೨೨೯೫೪೧೨೩ 

ಮಹಿಳೆಯರ ಮೇಲೆ ಲಾಕಡೌನ ಪರಿಣಾಮಗಳು

 

ಮಹಿಳೆಯರ ಮೇಲೆ ಲಾಕಡೌನ ಪರಿಣಾಮಗಳು

ಮಹಿಳೆಯೊಬ್ಬಳು ತನ್ನ ತಾಯಿಗೆ ಪೋನ್‌ “ ಈ ವ್ಯಕಿಯ ಜೊತೆ ನಾನು ಹೇಗೆ ೧೨ ವಷ೯ ಜೀವನ ಸಾಗಿಸಿದೆ ಎಂಬುದೇ ತಿಳಿಯುತ್ತಿಲ್ಲ. ಮಕ್ಕಳು ಇಲ್ಲದೇ ಇದ್ದರೆ  ಈ ದಿನವೇ ಇವನನ್ನು ಬಿಟ್ಟು ಹೋಗುತ್ತಿದೆ”

“ಮಕ್ಕಳನ್ನು ಹೇಗಾದರೂ ಸಂಭಾಳಿಸಬಹುದು ಆದರೇ ಈ ಮನುಷ್ಯನನ್ನೇ ಸಂಭಾಳಿಸುವುದು ಕಷ್ಟವಾಗಿದೆ. ಮುಂಚೆ ಹೀಗೆ ಇರಲಿಲ್ಲ. ಈಗ ಯಾಕೇ ಈ ರೀತಿ ಆಡುತ್ತಾನೋ ಗೊತ್ತಿಲ್ಲ”

“ಅದೇ ಗಂಡ ಮಕ್ಕಳು ೨೪ ಗಂಟೆ ಅವರ ಮುಖ ನೋಡಿ ನೋಡಿ ಸಾಕಾಗಿ ಹೋಗಿದೆ ಯಾವಾಗಾದರೂ ಈ ಲಾಕ ಡೌನ ಕೊನೊಯಾಗುತ್ತೋ ಕಾಯುತ್ತಾ ಇರುವೆನು.

 ಇದು ಯಾವುದೇ ಒಂದು ಮಹಿಳೆಯ ಮಾತಲ್ಲ. ಬದಲಾಗಿ ಲಾಕ ಡೌನ ಕಾರಣದಿಂದ ಮನೆಯಲ್ಲಿ ಇರುವ ಸಹನಶೀಲ ಸಾವಿರಾರು ಮಹಿಳೆಯರ ಸಿಟ್ಟು ಹೊರಬರುತ್ತಿರುವ ವಿವಿಧ ರೀತಿಯ ಉದಾಹರಣೆಗಳಾಗಿದೆ.

ಹೌದು ಪ್ರಥಮ ಬಾರಿಗೆ ಹೆಚ್ಚಿನ ಮಹಿಳೆಯರು ತುಂಬಾ ಕಿರಿ ಕಿರಿ ಅನುಭವಿಸುತ್ತಿರುವರು.  ಮಹಿಳೆಯರಿಗೆ ಲಾಕ ಡೌನ ನೇರವಾಗಿ ಪರಿಣಾಮ ಬೀರಿಲ್ಲ. ಉದ್ಯೊಗಸ್ಥ ಮಹಿಳೆಯರನ್ನು ಬಿಟ್ಟು ಉಳಿದ ಎಲ್ಲಾ ಮಹಿಳೆಯರು ಬಹುತೇಕ ಅಘೋಷಿತ ಲಾಕ ಡೌನನಲ್ಲಿಯೇ ಇರುವರು. ಅದಕ್ಕೆ ಮಹಿಳೆಯರು ಒಗ್ಗಿ ಹೋಗಿರುವರು. ಆದರೇ ಈಗ ಬಂದಿರುವ ಘೋಷಿತ ಲಾಕ ಡೌನ ಮಾತ್ರ ಮಹಿಳೆಯರ ಮೇಲೆ ಭಿನ್ನ ಭಿನ್ನವಾದ ಪರಿಣಾಮವನ್ನು ಉಂಟುಮಾಡಿರುವುದು.

·       ಹೆಚ್ಚಾಗಿ ಮಕ್ಕಳು ಶಾಲೆಗೆ ಗಂಡ ಕೆಲಸಕ್ಕೆ ಹೋದ ಮೇಲೆ ತನ್ನದೇ ಆದ ವೇಳೆ ಮಹಿಳೆಯರಿಗೆ ಸಿಗುತ್ತಾ ಇತ್ತು. ತನಗೆ ಇಷ್ಟದ ಕಾಯ೯ಕ್ರಮ ನೋಡುವುದು, ತಾಯಿ, ತಂಗಿ, ಸ್ನೇಹಿತರೊಂದಿಗೆ ಮುಚ್ಚು ಮರೆ ಇಲ್ಲದೇ ಎಲ್ಲಾ ಮಾತನಾಡುವುದಕ್ಕೆ ಅವಕಾಶ ಇತ್ತು. ಈಗ  ಅಂತಹ ಅವಕಾಶಗಳಿಗೆ ತಡೆಯುಂಟಾಗಿರುವುದು.

·       ರಾತ್ರಿ ನಿದ್ದೆ, ಬೆಳ್ಳಿಗೆ ಸಂಜೆ ಅಡುಗೆ ಕೆಲಸದಲ್ಲಿ ತೊಡಗಿಸಿಕೊಂಡು ಗಂಡನ, ಮಕ್ಕಳ ಬೇಕು ಬೇಡಿಕೆಯನ್ನು ಈಡೇರಿಸುತ್ತಾ ಇದ್ದ ಮಹಿಳೆಯರಿಗೆ ದಿನದ ೨೪ ಗಂಟೆ ಅದೇ ಗಂಡ, ಮಕ್ಕಳ ಮುಖ ನೋಡಿ ನೋಡಿ, ಕಿರಿ ಕಿರಿ ಕೇಳಿ ಕೇಳಿ ಸಹನೆ ಒಡೆಯುತ್ತಾ ಇರುವುದು.

·       ಪದೇ ಪದೇ ಕೆಲಸದ ಆಳುಗಳನ್ನು ನೋಡಿಕೊಳ್ಳುವಂತೆ  ಮಹಿಳೆಯನ್ನು ನೋಡುವ ಮಕ್ಕಳು, ಗಂಡದಿರ ಕಾರಣದಿಂದ ಲಾಕಡೌನ ಜಾರಿ ಮಾಡಿದ ವ್ಯಕ್ತಿಯ ಮೇಲೆ ಮಹಿಳೆಯರಿಗೆ ಸಿಟ್ಟು ಬರುತ್ತಾ ಇರುವುದು.

·       ಮದುವೆಯಾಗಿ ಒಂದೆರಡು ವಷ೯ ಪ್ರೀತಿ, ಪ್ರೇಮ ಸರಸ್‌ ಸಲ್ಲಾಪದಲ್ಲಿ ತೊಡಗಿಸಿಕೊಂಡ ಗಂಡ ಈಗ ಪುನ: ರೊಮ್ಯಾಟಿಕ ಮೂಡನಲ್ಲಿ ಬಂದಿರುವುದನ್ನು ನೋಡಿ ಗಲಿಬಿಗೊಂಡಿರುವರು.

·       ಲಾಕಡೌನ ಘೋಷಣೆಯಾದಾಗ ಗಂಡ ಮಕ್ಕಳೊಂದಿಗೆ ಚೆನ್ನಾಗಿ ಕಾಲ ಕಳೆಯಬಹುದು, ತನಗೇ ದಿನ ನಿತ್ಯದ ಕಾಯ೯ಗಳಿಂದ ಸ್ವಲ್ಪ ನೆಮ್ಮದಿ ಸಿಗಬಹುದು ಎಂದು ಯೋಚಿಸಿದ್ದ ಮಹಿಳೆಗೆ ನಾಲ್ಕೇ ದಿನದಲ್ಲಿ ಆ ಬಗ್ಗೆ ನಿರಾಸೆಯಾಗಿರುವುದು.

·       ಮನೆಯ ಸ್ವಚ್ಚತೆ, ಹತ್ತಾರು ವಷ೯ಗಳಿಂದ ಇರುವ ಹಳೆಯ ದಿನಪತ್ರಿಕೆ, ಪುಸ್ತಕ ಇವುಗಳನ್ನು ವಿಲೇವಾರಿ ಮಾಬಹುದು ಎಂದು ಪ್ರಸ್ಥಾಪವಿಟ್ಟು ಕೆಲಸವೂ ಪ್ರಾರಂಭವಾಯಿತು. ಆದರೇ ಸರಿಯಾಗಿ ಯಾವುದೇ ಕಾಯ೯ವನ್ನು ಮಾಡದೇ ದಿನ ನಿತ್ಯ ೨-೩ ಬಾರಿ ಮನೆಯನ್ನು ಮಹಿಳೆಯೇ ಸ್ವಚ್ಛಗೊಳಿಸುವ ಪರಿಸ್ಥಿತಿ ಬಂದಿರುವುದು.

·       ಮನೆಯಲ್ಲಿಯೇ ಕೆಲಸ ಮಾಡಬೇಕು ಎಂಬ ಹೆಚ್ಚಿನ ಸಕಾ೯ರಿ ಖಾಸಗಿ ಕಂಪನಿಗಳ ನಿಯಮದಿಂದ ಹೆಚ್ಚಿನವರು ಮನೆಯಲ್ಲಿ ಕೆಲಸ ಮಾಡುತ್ತಿರುವರು. ಆದರೇ ಅಲ್ಲಿ ವಾಚಮೆನ್‌ ಕೆಲಸ, ಮಧ್ಯದಲ್ಲಿ ಟೀ ನೀಡುವುದು, ಕೆಲಸ ಮಾಡುವ ಗಂಡಸಿಗೆ ಮಕ್ಕಳಿಂದ, ಟಿವಿ, ಮೊಬೈಲ್‌ ಇತರೆ ಯಾವುದೇ ಶಬ್ದಗಳಿಂದ ಯಾವುದೇ ಅಡೆತಡೆ ಆಗದಂತೆ ನೋಡಿಕೊಳ್ಳುವುದು ಈ ಎಲ್ಲಾ ಕಾಯ೯ಗಳು ಮಹಿಳೆಗೆ ಅತಿಯಾದ ಕಿರಿ ಕಿರಿ ಉಂಟು ಮಾಡುತ್ತಿರುವುದು.

·       ಗಂಡ, ಮಕ್ಕಳು ದಿನಕ್ಕೊಂದು ಊಟದ, ತಿಂಡಿಯ ಬಗ್ಗೆ ಬೇಡಿಕೆಯನ್ನು ಇಡುವುದು ಅದನ್ನು ಅಲ್ಲಗೆಳೆಯಲು ಆಗದೇ ಇರುವುದು. ಆ ಬಗ್ಗೆ ಗಂಡ ಮಕ್ಕಳಿಂದ ದಿನ ನಿತ್ಯ ಉಪನ್ಯಾಸವನ್ನು ಕೇಳಬೇಕಾಗಿದೆ.

·       ತನ್ನದೇ ಬೇಕಾದ ಯಾವುದೇ ಇಷ್ಟಕ್ಕೆ ಮನೆಯಲ್ಲಿ ಯಾವುದೇ ಬೆಲೆ ಇಲ್ಲವಾಗಿದೆ.

·       ಇರುವ ೧-೨ ಮಕ್ಕಳನ್ನು  ೨೪ ಗಂಟೆ ನೋಡಿಕೊಳ್ಳುವುದು ಎಷ್ಟು ಕಷ್ಟ ಎಂದು ಅಥ೯ ಆಗುತ್ತಿದೆ. ಹಾಗೇ ಇಂತಹ ಹತ್ತಾರು ಮಕ್ಕಳನ್ನು ದಿನದ ೮ ಗಂಟೆ ನೋಡಿಕೊಳ್ಳುವ ಶಿಕ್ಷಕರ ಬಗ್ಗೆ ಅನುಕಂಪ ಬರುತ್ತಾ ಇದೆ.

·       ಕೊರೋನಾ ವೈರಸ್‌ ಕ್ಕಿಂತ ಅಪಾಯಕಾರಿಯಾಗಿ ಮನೆಯಲ್ಲಿನ ಕೆಲವು ಜನರು ಕಾಣಿಸುತ್ತಾ ಇರುವರು.

      ಹೊರಗಡೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುವ ಮಹಿಳೆಯರಾಗಿರಬಹುದು ಅಥವಾ ಸದಾ ಕಾಲ ಮನೆಯ ಜವಬ್ದಾರಿ ಹೊತ್ತ ಮಹಿಳೆಯರಿರಬಹುದು ಎಲ್ಲಾ ರೀತಿಯ ಹೆಚ್ಚಿನ ಮಹಿಳೆಯರ ಸ್ಥಿತಿ ಒಂದೇ ಆಗಿದೆ.  ಅವರು ಜಿಲ್ಲಾ ತಾಲ್ಲೂಕಾ ಹಂತದ ಅಧಿಕಾರಿಯಾಗಿರಬಹುದು, ಪೋಲಿಸ್‌ ಇಲಾಖೆಯಲ್ಲಿರುವ ಅಧಿಕಾರಿಯಾಗಿರಬಹುದು ಎಲ್ಲ ಮಹಿಳೆಯರ  ಸ್ಥಿತಿಯೂ ಮನೆಯಲ್ಲಿ ಒಂದೇ ಆಗಿದೆ.

ಸ್ವಲ್ಪ ವಿಭಿನ್ನವಾಗಿ ಯೋಚನೆ ಮಾಡಿ ಮನೆಯಲ್ಲಿ ತಮ್ಮದೇ ಆದ ಅಧಿಕಾರ ಚಲಾಯಿಸುವ ಮಹಿಳೆಯರು ಲಾಕ ಡೌನನ್ನು ತುಂಬಾ ಎಂಜಾಯ ಮಾಡುತ್ತಿರುವರು. ಗಂಡನಿಗೆ ಅಡುಗೆ ಮಾಡಲು ಕಲಿಸಿರುವರು. ಮನೆಯ ಜವಬ್ದಾರಿಯನ್ನು ಮಕ್ಕಳು ಹಾಗೂ ಗಂಡನಲ್ಲಿ ಹಂಚಿಕೆ ಮಾಡಿ ಎಲ್ಲರೂ ಸಂತೋಷ ಪಡುತ್ತಾ ಇರುವರು. ಆದರೇ ಆ ಸಂಖ್ಯೆ ಬೆರಳಣಿಕೆಯಷ್ಟು ಮಾತ್ರ ಎಂಬುದನ್ನು ಗಮನಿಸಬೇಕಾಗಿದೆ.

                                                                                                                                                                              ವಿವೇಕ ಬೆಟ್ಕುಳಿ

                                                                                                                                                                        ೮೭೨೨೯೫೪೧೨೩

 

ಗಂಡಸರ ಮೇಲೆ ಲಾಕಡೌನ ಪರಿಣಾಮಗಳು

 

ಗಂಡಸರ ಮೇಲೆ ಲಾಕಡೌನ ಪರಿಣಾಮಗಳು

ಕೊರೋನಾ ಕಾರಣದಿಂದಾಗಿ ದೇಶವೇ ಲಾಕಡೌನ ಆಗಿದೆ. ದೇಶದಲ್ಲಿ ಕಾಯ೯ ನಿವ೯ಹಿಸುವ ವಿವಿಧ ಕಾಯ೯ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ. ಗಂಡಸರು ಮೊದಲಬಾರಿಗೆ ಅವರ ಬುದ್ದಿ ಬೆಳೆದ ಮೇಲೆ ಮನೆಯಲ್ಲಿಯೇ  ಇಷ್ಟೊಂದು ದಿನ ಕಾಲ ಕಳೆಯುವಂತೆ ಆಗಿರುವುದು.  ಹೆಚ್ಚಾಗಿ ಕೃಷಿಕರನ್ನು ಹೊರತು ಪಡಿಸಿ, ಉಳಿದಂತೆ ಮನೆಯ ಹೊರಗಡೆ ಕಾಯ೯ನಿವ೯ಹಿಸುವ ಎಲ್ಲಾ ಗಂಡಸರು ಈಗ ಮನೆಯಲ್ಲಿಯೇ ದಿನದ ೨೪ ಗಂಟೆ ಕಾಲ ಕಳೆಯಬೇಕಾಗಿದೆ.  ಬೆಳ್ಳಗಿನ ವಾಕಿಂಗ್‌, ಟಿ ಅಂಗಡಿ ಚಚೆ೯, ಸಂಜೆಯ ಕೆಲವು ಸ್ನೇಹಿತರ ಜೊತೆಗಿನ ಸಭೆ ಎಲ್ಲವೂ ರದ್ದಾಗಿರುವುದು. ಈ ಲಾಕಡೌನ ವಿವಿಧ ಬಗೆಯ ಗಂಡಸರ ಮನಸ್ಥಿತಿಯ ಮೇಲೆ ವಿಭಿನ್ನ  ಪರಿಣಾಮ ಬೀರಿದೆ.  ಕೆಲವು ಗಂಡಸರಿಗೆ  ಯಾವುದೇ ಪರಿಣಾಮ  ಬೀರಿರುವುದಿಲ್ಲ. ಆದರೇ ಹೆಚ್ಚಿನ ಗಂಡಸರ ಮೇಲೆ ಲಾಕಡೌನ ಸಾಕಷ್ಟು ಪರಿಣಾಮವನ್ನು ಬೀರಿರುವುದು  ಆ ಪರಿಣಾಮಗಳನ್ನು ಈ ಕೆಳಗಿನಂತೆ ಗಮನಿಸಬಹುದಾಗಿದೆ.

ಮನೆಯ ಕೆಲಸದ ಕಷ್ಟ ಗೊತ್ತಾಗುತ್ತಿದೆ.

ü  ದುಡ್ಡು ನೀಡಿದರೇ ಮಕ್ಕಳನ್ನು ಬೆಳಸಿದಂತೆ  ಎಂಬ ದೃಷ್ಠಿಕೋನ ಬದಲಾಗಿದೆ. ಮಕ್ಕಳನ್ನು ಸಲುಹುವ ಜವಬ್ದಾರಿಯ ಗಂಭೀರತೆ ಅಥ೯ವಾಗುತ್ತಾ ಇದೆ.

ü  ಬೆಳ್ಳೆಗೆ ಕೆಲಸಕ್ಕೆ ಹೋಗುವಾಗ. ಸಂಜೆ ಮನೆಗೆ ಬಂದಾಗ ಮಾತು ಮಾತಿಗೆ ಹೆಂಡತಿಯ ಮೇಲೆ ಸಿಟ್ಟಾಗುತ್ತಿದ್ದ ಗಂಡಸರಿಗೆ  ಹೆಂಡತಿಯಾದವಳ ಸಹನೆ ಅಥ೯ವಾಗುತ್ತಿದೆ.  

ü  ಮಕ್ಕಳ ಬೇಡಿಕೆ, ಹಠ, ಸಿಟ್ಟು ಪ್ರೀತಿ ಇವುಗಳ ಮನವರಿಕೆ ಆಗುತ್ತಾ ಇದೆ.

ü  ಮದುವೆ ಆಗಿ ಒಂದೆರಡು ವಷ೯ದಲ್ಲಿ ಹೆಂಡತಿಯ ಸೌಂದಯ೯ವನ್ನು ವಣಿ೯ಸುವುದನ್ನು ನಿಲ್ಲಿಸಿದ ಗಂಡಸರಿಗೆ ಈಗ ಹೆಂಡತಿ    ಸುಂದರವಾಗಿ ಕಾಣಿಸುತ್ತಿರುವಳು.

ü  ಕಛೇರಿಯಲ್ಲಿ ಹೊರಗಡೆ ಸುಂದರವಾಗಿ ಕಾಣುತ್ತಿದ್ದ ಬೇರೆಯವರ ಹೆಂಡತಿಗಿಂತ ಮನೆಯಲ್ಲಿ ಇರುವ ತನ್ನ ಮಡದಿಯೇ ಉತ್ತಮ ಎಂಬ ಭಾವನೆ ಬರುತ್ತಾ ಇದೆ.

ü  ಮನೆಯ ಅಡುಗೆ ಬಗ್ಗೆ  ಪುಕ್ಕಟೆ ಸಲಹೆ ನೀಡುತ್ತಿದ್ದ ಗಂಡಸರು ಸಲಹೆಯನ್ನು ನಿಲ್ಲಿಸಿರುವರು.

ü  ತಾನು ಹೇಳಿದ ಕೆಲಸವನ್ನು ಹೆಂಡತಿ ಮಾಡದೇ ಇದ್ದಾಗ, ಮನೆಯಲ್ಲಿಯೇ ಇದ್ದು ೨೪ ಗಂಟೆ ಏನು ಕೆಲಸ ಎಂದು ಪದೇ ಪದೇ ಹೆಂಡತಿಗೆ  ಗದರುತ್ತಿದ್ದ ಗಂಡಸರಿಗೆ ಜ್ಷಾನೋದಯವಾಗಿದೆ.

ü  ಪದೇ ಪದೇ ಯಾಕೇ ಈ ಸಾಮಾನು ತರುವುದು ಎಂದು ಲೆಕ್ಕ ಕೇಳುತ್ತಿದ್ದ ಗಂಡಸರಿಗೆ ಮನೆಗೆ ಬೇಕಾಗುವ ಸಾಮಾನಿನ ಲೆಕ್ಕ ಸಿಕ್ಕು ಹೆಂಡತಿಯ ಬಗ್ಗೆ ಪ್ರೀತಿ ಉಕ್ಕುತ್ತಾ ಇದೆ.

ü  ಮನೆಯಲ್ಲಿ ಎಲ್ಲಿ ಎಲ್ಲಿ ಯಾವ ಯಾವ ಸಾಮಾನು ಇದೆ ಎಂಬ ಬಗ್ಗೆ ಮಾಹಿತಿ ತಿಳಿದಿರುವುದು.

ü  ಅಡುಗೆ ಮಾಡುವ ಕಾಯ೯ ತಾನು ಮಾಡುವ ಕೆಲಸಕ್ಕಿಂತ ಕಷ್ಟದ್ದು ಎಂದು ಅಥ೯ವಾಗಿದೆ.

ü  ಆಗಾಗ ಮಕ್ಕಳಿಗೆ ಪದೇ ಪದೇ ಉಪನ್ಯಾಸ ಮಾಡುತ್ತಿದ್ದ ಗಂಡಸರು ಸರಣಿ ಉಪನ್ಯಾಸವನ್ನು ಪ್ರಾರಂಬಿಸಿರುವರು. ಆದರೇ ಹಿಂದಿನಂತೆ ಮಕ್ಕಳು ಉಪನ್ಯಾಸವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ü  ಮನೆಯಲ್ಲಿ ಹೆಂಗಸರಿಗೆ ಮೊದಲೇ ಭಯ ಪಡುತ್ತಿದ್ದ ಗಂಡಸರು ಮನೆಗೆಲಸದಲ್ಲಿ ಅನುಭವಿಗಳಾಗಿರುವರು.

ü  ಮಕ್ಕಳು , ಹೆಂಡತಿಯ ಮುಖವನ್ನು ದಿನನಿತ್ಯ ನೋಡಿ ನೋಡಿ ಮಾನಸಿಕವಾಗಿ ಖಿನ್ನತೆಗೆ ಸಹಾ ಕೆಲವರು ಒಳಗಾಗಿರುವರು, ಬಾರ್‌ ಓಪನ ಆದ ಮೇಲೆ ಆ ಸತ್ಯ ಅಲ್ಲಿ ಹೊರ ಬರುವುದು. ಅಲ್ಲಿಯವರೆಗೆ ಕಾಯಬೇಕು.

ü  ಹೆಂಡತಿಯನ್ನು ಇಂಪ್ರೆಸ್‌ ಮಾಡಲು ಆಡುತ್ತಿದ್ದ ಆಗಾಗ ನಾಟಕ್‌, ಸುಳ್ಳು, ಹೋಲಿಕೆ ಅದರ ಉದ್ದೇಶ ಈ ಎಲ್ಲವೂ ಮನೆಯಲ್ಲಿ ಗೊತ್ತಾಗಿರುವುದು ಅವೆಲ್ಲವೂ ಈಗ ಕಾಯ೯ನಿವ೯ಹಿಸುತ್ತಿಲ್ಲ.

 

ಈ ರೀತಿಯಾಗಿ ಕೆಲವು ಗಂಡಸರ ಮಾನಸಿಕ ಸ್ಥಿತಿ ಇರುವುದು. ತಮ್ಮ ತಮ್ಮ ಮನೆಯಲ್ಲಿನ ಗಂಡಸರು ಈ ಮನಸ್ಥಿತಿಯಲ್ಲಿ ಇದ್ದರಬಹುದು. ಯಾವ ಅಂಶ ನಿಮ್ಮಲ್ಲಿ ಇದೆ ಎಂಬುದನ್ನು ನೋಡಿಕೊಳ್ಳಿರಿ. ಇವೆಲ್ಲವನನು ಹೊರತು ಪಡಿಸಿ ಬೇರೆ ರೀತಿಯ ಮನಸ್ಥಿತಿಯ ಗಂಡಸರು ಇರಬಹುದು. ಅವರು ಸಹಾ ಬೇರೆ ಇನ್ನೊಂದು ರೀತಿಯ ಮನಸ್ಥಿತಿಯಲ್ಲಿ ಇರುವರು. ಒಟ್ಟಾರೇ ಲಾಕಡೌನ ಗಂಡಸರ ಮೇಲೆ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಬೀರಿರುವುದು.  ಅದೂ ನೋಡುವವರ ದೃಷ್ಠಿಯಲ್ಲಿ ಇರುವುದು.

                                                                                                                                                                              ವಿವೇಕ ಬೆಟ್ಕುಳಿ

                                                                                                                                                                  ೮೭೨೨೯೫೪೧೨೩

 


ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...