ಬುಧವಾರ, ಸೆಪ್ಟೆಂಬರ್ 4, 2019

“ಗುರಿ ತಪ್ಪಿದ ಕೆಲ ಗುರುಗಳಿಂದಾಗಿ ಸಮಾಜದ ನಂಬಿಕೆ ಕಳೆದುಕೊಳ್ಳುತ್ತಿರುವ ಗುರುವೃಂದ”


“ಗುರಿ ತಪ್ಪಿದ ಕೆಲ ಗುರುಗಳಿಂದಾಗಿ ಸಮಾಜದ ನಂಬಿಕೆ ಕಳೆದುಕೊಳ್ಳುತ್ತಿರುವ ಗುರುವೃಂದ”

    ಪುನ: ಶಿಕ್ಷಕರನ್ನು ವರ್ಷದಲ್ಲಿ ಒಂದು ದಿನದ ಮಟ್ಟಿಗೆ ಹಾಡಿ ಹೊಗಳಿ ಅಟ್ಟಕೇರಿಸುವ ದಿನ ಬಂದಿದೆ. ಪ್ರತಿ ವರ್ಷದಂತೆ ವರ್ಷವು ಹಲವಾರು ಕಡೆ ವಿಭಿನ್ನ ರೀತಿಯ ಕಾರ್ಯಮಗಳು, ಪ್ರಶಸ್ತಿ ಹಂಚಿಕೆ, ಶಿಕ್ಷಕರ ಸನ್ಮಾನ, ಮಕ್ಕಳಿಂದ ಸನ್ಮಾನ ರೀತಿಯಾಗಿ ಭಿನ್ನ ಭಿನ್ನವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡುವರು. ಆಚರಣೆ ಹೇಗೆ ಇರಲಿ ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮಗಳಲ್ಲಿ ಪೋಟೋ ಸಹಿತ ಸುದ್ದಿ ಮಾತ್ರ ಮುಂದಿನ ಕೆಲವು ದಿನಗಳಲ್ಲಿ ಟ್ರೇಂಡನಲ್ಲಿರುವುದು.
  ದುಖ: ಸಂಗತಿ ಎಂದರೆ ಶಿಕ್ಷಕರ ದಿನಾಚರಣೆ ಎಂಬುದು ಕೇವಲ ಸಂಭ್ರಮದ ದಿನಾಚರಣೆ ಆಗುತ್ತಿರುವುದು. ಸಮಾಜದಲ್ಲಿ ದಿನೇ ದಿನೇ ಗುರುವಿನ ಗೌರವ ಕುಸಿಯುತ್ತಿದೆ. ಆದರೂ ಶಿಕ್ಷಕ ವೃಂದವಾಗಲಿ ಅಥವಾ ಮುಖ್ಯ ಭಾಗೀದಾರರಾದ ಯಾವುದೇ ವ್ಯವಸ್ಥೆಯಾಗಲಿ ಕುಸಿಯುತ್ತಿರುವ ಗೌರವನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿಲ್ಲ. ಎಲ್ಲಾ ಭಾಗೀದಾರರು ಭಾಷಣ ಮಾಡುವ, ಪೋಟೋಕೆ ಮುಖ ತೋರಿಸಿ ಸುದ್ದಿ ಬಿತ್ತರಿಸುವ ಕಡೆ ಮಾತ್ರ ಗಮನ ನೀಡುತ್ತಿರುವುದು ನಮ್ಮ ವ್ಯವಸ್ಥೆಯ ದುರಂತವಾಗಿದೆ.
  ಗುರು ಪರಂಪರ ಇರುವ ನಮ್ಮ ದೇಶದಲ್ಲಿ ಜನಸಂಖ್ಯೆ ಬೆಳೆದಂತೆ ಶಾಲೆಗಳ ಮತ್ತು ಗುರುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಯಿತು. ಸಂಖ್ಯೆ ಹೆಚ್ಚಾದಂತೆ ಗುರುವಿನ ಗೌರವ ಮಾತ್ರ ಅದೇ ಪ್ರಮಾಣದಲ್ಲಿ ಸಮಾಜದಿಂದ ಕುಸಿಯುತ್ತಾ ಹೋಗಿರುವುದು ದುರಂತವಾಗಿದೆ. ಗುರುಗಳು ಹಿಂದೆ ಸಮಾಜದ ಆದರ್ಶರಾಗಿದ್ದರು. ಆದರೇ ಇಂದು ಗುರುವನ್ನು ಆದರ್ಶ ವ್ಯಕ್ತಿಯನ್ನಾಗಿ ಕಾಣುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದೆ ಗುರುಗಳ ಅನುಪಸ್ಥಿತಿಯಲ್ಲಿಯೂ ಗುರುವನ್ನು ಬಹುವಚನದಿಂದ ಸಂಭೋದಿಸುವ ಪರಿಪಾಠವಿತ್ತು. ಇಂದು ಗುರುವಿನ ಸಮ್ಮುಖದಲ್ಲಿಯೇ ಏಕವಚನ ಕೊಟ್ಟು ಮಾತನಾಡುವ ಸ್ಥಿತಿ ಬಂದಿದೆ. ಜಗತ್ತಿಗೆ ಗುರು ಪರಂಪರೆಯ ಬಗ್ಗೆ ತಿಳಿಸಿದ್ದ ನಮ್ಮ ದೇಶದಲ್ಲಿ ಯಾಕೆ ಇಂದು ಸ್ಥಿತಿ ಬಂದಿದೆ ಎಂದು ಅವಲೋಕನ ಮಾಡಬೇಕಾಗಿದೆ.ಅದಕ್ಕಾಗಿ ಶಿಕ್ಷಕರ ದಿನಾಚರಣೆಯನ್ನು ಬಳಸಿಕೊಳ್ಳಬೇಕಾಗಿದೆ. ಮುಖ್ಯವಾಗಿ ಗುರುವಿನ ಗೌರವ ಕುಸಿಯಲು ಗುರುತಿಸಿಬಹುದಾದ ಕಾರಣಗಳನ್ನು ಕೆಳಗಿನಂತೆ ಗುರುತಿಸಬಹುದಾಗಿದೆ.
1.            ಸೇವೆಯಾಗಿದ್ದ ಗುರುವಿನ ಹುದ್ದೆ ಇಂದು ಉದ್ಯೋಗವಾಗಿರುವು
2.            ಹುಟ್ಟಿದ ಊರಿನಲ್ಲಿಯೇ ಸೇವೆ ಸಲ್ಲಿಸುವುದು.
3.            ಪಟ್ಟಣದಲ್ಲಿ ವಸತಿ ಹಳ್ಳಿಯಲ್ಲಿ ನೌಕರಿ ಎಂಬ ಸಿದ್ದಾಂತ ಪಾಲಿಸುತ್ತಾ ಇರುವುದು
4.            ಶಿಕ್ಷಕ ವೃತ್ತಿಯ ಜೊತೆಗೆ ಉಪ ಉದ್ಯೋಗವನ್ನು ಮಾಡುವುದು (ಮರ ಕಡಿಯುವುದು, ಗಣಿಗಾರಿಕೆ, ಚಿಪ್ಪಿ ತೆಗೆಯುವುದು, ಸರಾಯಿ ಮಾರಾಟ, ಇಸ್ಪೀಟ್ ಆಟ, ಇತ್ಯಾದಿ)
5.            ಶಿಕ್ಷಕರಿಗೆ ಕಡ್ಡಾಯ ವಗರ್ಾವಣೆ ಇಲ್ಲದೇ ಇರುವುದು.
6.            ಶಿಕ್ಷಕರು ತಮ್ಮ ಮಕ್ಕಳನ್ನು ತಾವು ಇರುವ ಶಾಲೆಗೆ ಕರೆದೊಯ್ಯದೆ ಇತರ ಆಂಗ್ಲ ಮಾಧ್ಯಮ ಅಥವಾ ಇತರೆ ಖಾಸಗಿ ಶಾಲೆಗೆ ಕಳುಹಿಸುವುದು.
7.            ತಮ್ಮ ವೃತ್ತಿಯ ಕಡೆ ಗಮನ ನೀಡದೇ ರಾಜಕೀಯ ಪುಡಾರಿಗಳೊಂದಿಗೆ ಚಮಚಾಗಳಂತೆ ಹಿಂದ ತಿರುಗುತ್ತಾ ಇರುವುದು. 
8.            ತಮ್ಮ ಶಾಲೆಯ ಜವಬ್ದಾರಿ ಮರೆತು ಜಿಲ್ಲಾ ತಾಲ್ಲೂಕಾ ಹಂತದ ಅಧಿಕಾರಿಗಳ ಹಿಂದೆ ಅಲೆಯುತ್ತಾ ಇರುವುದು.
9.            ರಾಜಕೀಯ ಪಕ್ಷಗಳ ಏಜಂಟರಂತೆ ವತರ್ಿಸುತ್ತಾ ಯಾವುದೋ ಒಂದು ಸಿದ್ದಾಂತದ ಬಗ್ಗೆ ಸಾಮಾಜಿಕ ಮಾಧ್ಯಮ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಹರಟೆ ಹೊಡೆಯುವುದು.
10.         ಸಾರ್ವಜನಿಕ ಪ್ರದೇಶದಲ್ಲಿ ಅಕ್ಕ ಪಕ್ಕ ಯಾರು ತಮ್ಮನ್ನು ಅವಲೋಕಿಸುವರು ಎಂಬುದನ್ನು ಗಮನಿಸದೇ ವೇತನ, ರಜೆ, ಬಡ್ತೀ ಬಗ್ಗೆ ಮಾತನಾಡುವುದು.
11.         ಮಕ್ಕಳನ್ನು ಜಾತಿ,ಧರ್ಮದ, ಅಪ್ಪ ಅಮ್ಮನ ಹೆಸರು ಹೇಳಿ ಬೈಯುವುದು.. ಮಕ್ಕಳಲ್ಲಿ ಅನಾವಶ್ಯಕ ಸ್ಪಧರ್ೇಯನ್ನು ಏರ್ಪಡಿಸುವುದು. ಮಕ್ಕಳಲ್ಲಿ ಭೇದ ಬಾವವನ್ನು ಉಂಟು ಮಾಡುವುದು.
12.         ಶಾಲೆಗೆ ಹೋಗದೇ ಇರುವುದು. ಹೋದರು ಲೇಟಾಗಿ ಹೋಗಿ ಬೇಗ ಬರುವುದು.
13.         ಶಾಲೆಯ ವೇಳೆಯಲ್ಲಿ ಮೊಬೈಲ್ ಬಳಕೆ.
14.         ಶಿಕ್ಷಕರ ಜಾತಿ ರಾಜಕೀಯ.
15.         ತಮ್ಮ ಶಾಲೆ ತಮ್ಮ ಕಲಿಸುವ ಪದ್ದತಿ ಮೇಲೆ ನಂಬಿಕೆ ಕಳೆದುಕೊಂಡ ಶಿಕ್ಷಕರು.
16.         ವಗರ್ಾವಣೆ/ನಿಯೋಜನೆಗಳಲ್ಲಿ ದಲ್ಲಾಳಿಗಳಾಗಿರುವ ಶಿಕ್ಷಕರು
ಎಲ್ಲಾ ಕಾರಣಗಳಲ್ಲಿ ಕೆಲವೊಂದು ಕೆಲವು ಕಾರಣಗಳಲ್ಲಿ ಹೆಚ್ಚಿನ ಶಿಕ್ಷಕರು ತೊಡಗಿಸಿಕೊಂಡಿರುವರ ಕಾರಣದಿಂದಾಗಿ ಇಂದು ಸಮಾಜದಲ್ಲಿ ಗುರುವಿನ ಗೌರವ ದಿನೇ ದಿನೇ ಕಡಿಮೆಯಾಗುತ್ತಾ ಇರುವುದು. ಕೆಲವು ಶಿಕ್ಷಕರ ಇಂತಹ ಎಡಬಿಡಂಗಿ ವ್ಯವಹಾರಗಳಿಂದ ಗುರುವೃಂದದ ಗೌರವ ಕಡಿಮೆಯಾಗಿರುವುದು. ಆದರೂ ಹಳ್ಳಿಗಾಡಿನಲ್ಲಿ ಮತ್ತು ಕೆಲವು ಶಾಲೆಗಳಲ್ಲಿ ಪ್ರಾಮಾಣಿಕ ಶಿಕ್ಷಕರು ತಮ್ಮ ಕಾರ್ಯದಿಂದಲ್ಲೇ ಗೌರವನ್ನು ಸಂಪಾದಿಸುತ್ತಿರುವರು ಮತ್ತು ಅವರನ್ನು ಬೇರೆ ಬೇರೆ ಕಡೆಯ ಮಕ್ಕಳು ಹುಡುಕಿ ಬರುತ್ತಿರುವುದನ್ನು ಕಾಣಬಹುದಾಗಿದೆ. ಒಟ್ಟಾರೆಯಾಗಿ ಶಿಕ್ಷಕರಸ್ಥಿತಿ, ಶೈಕ್ಷಣಿಕ ವ್ಯವಸ್ಥೆಯು ಸ್ಥಿತಿ ಎಲ್ಲಾ ವಿಚಾರಗಳಗಳ ಬಗ್ಗೆ ಗುರುವೃಂದ, ಶಿಕ್ಷಕ ಸಘಂಟನೆಗಳು, ಮತ್ತು ಶೈಕ್ಷಣಿಕ ವ್ಯವಸ್ಥೆಯ ಪ್ರಮುಖ ಭಾಗೀದಾರರು ಎಲ್ಲರೂ ಸೇರಿ ಚಿಂತಿಸಿ ಕುಸಿಯುತ್ತಿರುವ ಗುರುವೃಂದದ ಗೌರವ/ಮೌಲ್ಯವನ್ನು ಪುನ: ಸಂಪಾದಿಸುವಂತಹ ವಾತಾವರಣವನ್ನು ಸೃಷ್ಠಿಸಬೇಕಾಗಿದೆ. ಶಿಕ್ಷಕ ದಿನಾಚರಣೆಯ ಸಂದರ್ಭವನ್ನು ಇಂತಹ ಚಿಂತನ ಕಾರ್ಯಕ್ಕೆ ಮೀಸಲಾಗಿಟ್ಟರೇ ಅರ್ಥಪೂರ್ಣವಾಗುವುದು.
                                                                                                                                                                                                                                                                             ವಿವೇಕ ಬೆಟ್ಕುಳಿ

ಶುಕ್ರವಾರ, ಜುಲೈ 12, 2019

ಯಾರಿಗೆ ಹೋಲಿಕೆ?


ಯಾರಿಗೆ ಹೋಲಿಕೆ?
ಪಕ್ಷಾಂತರಿಗಳನ್ನು ನಾಯಿಗೆ ಹೋಲಿಸಬೇಡಿ
ನಾಯಿಯ ನಿಯತ್ತು ಇವರಲ್ಲಿ ಇಲ್ಲ.
ಪಕ್ಷಾಂತರಿಗಳನ್ನು ಮಂಗನಿಗೆ ಹೋಲಿಸಬೇಡಿ
ಮಂಗನ ಕೈ ಹಿಡಿತ, ಗುಂಪು ಪ್ರೇಮ ಇವರಿಗಿಲ್ಲ.
ಪಕ್ಷಂತರಿಗಳನ್ನು ಕತ್ತೆಗೆ ಹೋಲಿಸಬೇಡಿ
ಕತ್ತೆಯ ಕಾರ್ಯದಕ್ಷತೆ ಇವರಿಗಿಲ್ಲ
ಪಕ್ಷಾಂತರಿಗಳನ್ನು ಯಾವುದೇ ಪ್ರಾಣಿಗೆ ಹೋಲಿಸಬೇಡಿ
ಯಾವ ಪ್ರಾಣಿಯ ತೃಣ ಸಮಾನ ಗುಣವು ಇವರಿಗಿಲ್ಲ.
ಇವರನ್ನು ಸೂಳೆಗೆ ಹೋಲಿಸಬೇಡಿ
ಸೂಳೆಗೆ ಇರುವ ಗೌರವ ಇವರಿಗೆ ಇಲ್ಲ
ಹಾಗಾದರೇ ಇವರನ್ನು ಯಾರಿಗೆ ಹೋಲಿಸುವುದು?
ಹೋಲಿಕೆಗೆ ಅರ್ಹರಾದವರಿಗೆ ಮಾತ್ರ ಅಲ್ಲವೇ ಹೋಲಿಕೆ.
                                                                                                                                      ವಿವೇಕ ಬೆಟ್ಕುಳಿ

ಜನಪ್ರತಿನಿಧಿಗಳ ಖರೀದಿ ಪ್ರಕ್ರೀಯೆಯನ್ನು ಪಾರದರ್ಶಕದ ರೀತಿಯಲ್ಲಿ ಮಾಡುವುದು ಒಳ್ಳೆಯದೇ?


ಜನಪ್ರತಿನಿಧಿಗಳ ಖರೀದಿ ಪ್ರಕ್ರೀಯೆಯನ್ನು ಪಾರದರ್ಶಕದ ರೀತಿಯಲ್ಲಿ ಮಾಡುವುದು ಒಳ್ಳೆಯದೇ?

ಜನರಿಂದ ಒಂದು ಪಕ್ಷದ ಸಿದ್ದಾಂತದ ಅಡಿಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಅಭಿವೃದ್ದಿ, ಜಾತಿ, ಹಸ್ತಕ್ಷೇಪ ಎಲ್ಲಾ ಕಾರಣಗಳನ್ನು ಹೇಳಿ ತಮ್ಮ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತಿರುವರು. ಆದರೇ ಮುಖ್ಯವಾಗಿ ಎಲ್ಲರೂ ಅಧಿಕಾರ ಮತ್ತು ಹಣಕ್ಕಾಗಿ ಮಾರಾಟವಾಗಿರುವುದು ಎಲ್ಲರಿಗೂ ಗೊತ್ತಿರುವ ಸತ್ಯವಾಗಿದೆ. ಸತ್ಯ ಎಲ್ಲರಿಗೂ ತಿಳಿದಿದ್ದರೂ ಸಹಾ ಯಾರು ಏನು ಮಾಡಲು ಆಗದ ಸ್ಥಿತಿ ನಮ್ಮದಾಗಿದೆ. ಒಂದು ಎಂಎಲ್ಎ ಆಗಲು ಪ್ರತಿ ಒಟ್ಟಿಗೆ 200/300/500/1000/2000 ರೀತಿಯಾಗಿ ಹಣ ಹಂಚಿಕೆಗಾಗಿ ವೆಚ್ಚ ಮಾಡಿಯಾಗಿದೆ. ತನ್ನ ಏರಿಯಾದ ದೇವಸ್ಥಾನ, ಮಸೀದಿ, ಚರ್ಚ, ಮಠ ಎಲ್ಲಾ ಕಡೆ ಹೇರಳವಾಗಿ ಆಯ್ಕೆಯಾಗುವುದಕ್ಕಿಂತ ಮುಂಚೆ ಹಣವನ್ನು ನೀಡಿಯಾಗಿದೆ. ತನ್ನ ಕ್ಷೇತ್ರದ ಯಾವುದೇ ಹಳ್ಳಿಯಲ್ಲಿ ನಡೆದ ಕ್ರೀಡಾ ಸಂಭಂದಿತ ಚಟುವಟಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದೇಣಿಗೆ ಹೆಸರಿನಲ್ಲಿ ಹಣ ಹಂಚಿಕೆ ಆಗಿದೆ. ಆದರೇ ಇಷ್ಟೇಲ್ಲಾ ಮಾಡಿ ಶಾಸಕರಾದರೂ ಖಚರ್ು ಮಾಡಿದ ಹಣವನ್ನು ತೆಗೆಯಲು ಆಗುತ್ತಾ ಇಲ್ಲ. ಹಾಳಾಗಲಿ ಮುಂದಿನ ಚುನಾವಣೆಯಲ್ಲಿ ಗೆಲ್ಲಲ್ಲಾದರೂ ಹಣಬೇಕು ಅದು ಹೊಂದಾಣಿಕೆ ಆಗುತ್ತಾ ಇಲ್ಲ. ಜೊತೆಗೆ ಯಾವುದೋ ಹಳೆಯ ಕೇಸನಲ್ಲಿ ಮಕ್ಕಳು, ಅಳಿಯಂದಿರು, ಜೈಲಿಗೆ ಹೋಗುವ ಸ್ಥಿತಿ ಇದೆ. ಇಂತಹ ಮಾನಸಿಕ ಒತ್ತಡ ನಮ್ಮ ರಾಜ್ಯದ ಶಾಸಕರ ಮೇಲಿರುವುದು.
ಒಟ್ಟಾರೆ ಶಾಸಕರಾದವರಿಗೂ ಪಾಪ ತುಂಬಾ ಒತ್ತಡಗಳಿರುವುದು. ರೀತಿಯ ಒತ್ತಡದ ಸಾರ್ವಜನಿಕ ಜೀವನದಲ್ಲಿ ಬದುಕುತ್ತಿರುವ ವ್ಯಕ್ತಿಗಳಿಗೆ ಪ್ರಜಾಪ್ರಭುತ್ವ, ಪಕ್ಷ, ತತ್ವ, ನಿಷ್ಠತೆ, ಕ್ಷೇತ್ರದ ಸಮಗ್ರ ಅಭಿವೃದ್ದಿ ಶಬ್ದಗಳು ಕೇವಲ ಆದರ್ಶ ಶಬ್ದಗಳಾಗಿರುವುದು ವಿನಹ: ಅದಕ್ಕೆ ಯಾವುದೇ ಅರ್ಥವಿಲ್ಲ. ಇನ್ನೂ ಶಾಸಕರ ಅನುಯಾಯಿಗಳು ಅವರನ್ನು ಅನುಸರಿಸಲೇ ಬೇಕು. ಕಾರಣ ಸ್ಪಷ್ಟವಾಗಿದೆ. ಅವರಿಗೆ ಇರುವ ದೊಡ್ಡ ಆಸೆಯಂತೆ ಇವರುಗಳಿಗೆ ಇರುವುದು ಸಣ್ಣ ಸಣ್ಣ ಆಸೆ ಅಷ್ಠೇ. ಪಕ್ಷ ಯಾವುದಾದರೂ ಹಾಳಾಗಲಿ ಯಾವ ಪಕ್ಷಕ್ಕೂ ಮಾನ ಮಯರ್ಾದೆಯೂ ಇಲ್ಲ. ನೀತಿ, ತತ್ವಗಳು ಇಲ್ಲ. ಅವೆಲ್ಲ ಅಧಿಕಾರಕ್ಕೆ ಬರುವ ಮುಂಚೆ ಮಾತನಾಡಲು ಮಾತ್ರ. ಒಟ್ಟಾರೆ ಎಲ್ಲರಿಗೂ ಸ್ಪಷ್ಟವಾಗಿ ತಿಳಿದಿದೆ. ದುಡ್ಡು ಹಣ್ಣ ಇದ್ದರೆ ಮಾತ್ರ ಗೌರವ, ಅದಕ್ಕಾಗಿ ಹೊಲಸಾದರೂ ತಿನ್ನು, ತಾಯಿಯನ್ನು ಬೇಕಾದರೂ ಮಾರಾಟ ಮಾಡು, ದೇವರ ಹೆಸರನ್ನಾದರೂ ಹಾಳು ಮಾಡು. ನೈತಿಕವೋ ಅನೈತಿಕವೂ ಅಧಿಕಾರ ಜೊತೆಗೆ ದುಡ್ಡು ಬೇಕು ಅಷ್ಠೇ.
ಇಂತಹ ಸ್ಥಿತಿ ತಲುಪಿರುವ ರಾಜಕೀಯದಲ್ಲಿ ಬದಲಾವಣೆ ಆಗುವುದು ಎಂದು ಭಾವಿಸುವುದು ಮುರ್ಖತನವಾಗುವುದು. ಆದರೂ ನಾಣಯ್ಯ, ವೈಎಸ್ದತ್ತ, ಹೆಚ್ ವಿಶ್ವನಾಥ, ಸುರೇಶ ಕುಮಾರ ಇಂತಹ ಕೆಲವೊಂದು ವ್ಯಕ್ತಿಗಳ ಉದಾಹರಣೆ ಆಶಾಭಾವನೆಯನ್ನು ಹುಟ್ಟಿಸಿದ್ದು ನಿಜ. ಆದರೇ ಈಗ ಎಲ್ಲಾ ವ್ಯಕ್ತಿಗಳ ಸ್ಥಿತಿ ನೋಡಿದರೇ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬುದು ಅರ್ಥವಾಗುತ್ತಿಲ್ಲ.  ವೈಎಸ್ವಿ ದತ್ತನಂತ ಸಜ್ಜನರನ್ನು ಜನ ಸೋಲಿಸುತ್ತಾರೆ. ನಾಣಯ್ಯ ರಂತಹ ವ್ಯಕ್ತಿಗಳನ್ನು ಯಾವುದೇ ಪಕ್ಷ ಗುರುತಿಸಿ ಅವರ ಪ್ರಯೋಜನ ತೆಗೆದುಕೊಳ್ಳುವುದಿಲ್ಲ. ವಿಶ್ವನಾಥ ತರಹದ ವ್ಯಕ್ತಿಗಳು ಆಡುವ ಮಾತು, ಬರೆಯುವ ಭಾಷೆ ಈಗ ಅವರು ವತರ್ಿಸುವ ರೀತಿಯಲ್ಲಿ ಹೊಂದಾಣಿಕೆ ಕಾಣುತ್ತಿಲ್ಲ. ಒಟ್ಟಾರೆಯಾಗಿ ಸೈದ್ದಾಂತಿಕ ರಾಜಕಾರಣದಲ್ಲಿ ಯಾವುದೇ ಭರವಸೆ ಕಾಣುತ್ತಿಲ್ಲ.
ಸಂದರ್ಭದಲ್ಲಿ ನಮಗಿರು ದಾರಿ ಎಂದರೆ ಐಪಿಎಲ್ ಪಂದ್ಯಾವಳಿಗೂ ಮುಂಚೆ ಆಟಗಾರರ ಹರಾಜು ಕೂಗುವಂತೆ ನಮ್ಮ ಎಲ್ಲಾ ಶಾಸಕರನ್ನು ಮುಂಬೈನಲ್ಲಿಯೇ ಹರಾಜು ಮಾಡುವುದು. ಯಾವುದೇ ಉದ್ಯಮಿ, ಮಾಪಿಯಾ ವ್ಯಕ್ತಿ, ಗುಂಡಾ, ಖರೀದಿಯ ಸಾಮಥ್ರ್ಯವಿರು ಸೆಲಿಬ್ರಿಟಿ ಯಾರೇ ಆಗಲಿ ಯಾವುದಾದರೂ ಪಕ್ಷದ ಹೆಸರಿನಿಂದ ಯಾರು ಬೇಕು ಅವರನ್ನು ಖರೀದಿಸುವುದು, ನಂತರ ಅಧಿಕಾರ ನಡೆಸುವುದು ತತ್ವ ಬಹುಶ ಎಲ್ಲರಿಗೂ ಹೊಂದಾಣಿಕೆ ಆಗುವುದು. ಯಾರಿಗೂ ಸಮಸ್ಯೆ ಇಲ್ಲ. ಎಲ್ಲರಿಗೂ ದುಡ್ಡು, ಅಧಿಕಾರವೇ ಮುಖ್ಯ ಅದೇ ಮುಖ್ಯ ಅಜೆಂಡಾ. ಸುಮ್ಮನೇ, ದೇಶಭಕ್ತಿ, ಜ್ಯಾತ್ಯಾತೀತ ರಾಷ್ಠ, ಸಂಸ್ಕೃತಿ ರಕ್ಷಣೆ, ಅಭಿವೃದ್ದಿ, ಕೃಷಿ ಬೆಳವಣಿಗೆ ಇಂತಹ ವಿಷಯಗಳನ್ನು ಮುಂದೆ ಹೇಳುತ್ತಾ ಹಿಂದೆ ಅಧಿಕಾರ ಮತ್ತು ಹಣದ ಹಿಂದೆ ಹೋಗುವ ರೀತಿಯನ್ನು ತೆಗೆದು ಹಾಕಿ ಅಧಿಕೃತವಾದ ವ್ಯವಸ್ಥೆಯನ್ನು ತರುವ ಬಗ್ಗೆ ಚಿಂತಿಸಬೇಕಾದ ಅಗತ್ಯವಿದೆ. ಬಹುಶ: ಹಾಗೇ ಆದರೇ ಬ್ಯಾಂಕುಗಳಿಗೆ ಟೋಪಿ ಹಾಕಿ ಹೋದ ಉಧ್ಯಮಿಗಳು ಹಿಂದಿರುಗಿ ಬರಲು ಅವಕಾಶವಿದೆ. ಒಟ್ಟಾರೇ ಖರೀದಿ ಪ್ರಕ್ರೀಯೆ ಪಾರದರ್ಶಕವಾಗಿರಬೇಕು ಅಲ್ಲವೇ ನಿಮ್ಮ ಅಭಿಪ್ರಾಯವೇನು?

                                                                                                                                    ವಿವೇಕ ಬೆಟ್ಕುಳಿ

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...