Tuesday, December 25, 2012

ಉತ್ತರ ಪ್ರದೇಶದ ಚಳಿಗಾಲಉತ್ತರ ಪ್ರದೇಶದ ಚಳಿಗಾಲ
ಉತ್ತರಪ್ರದೇಶದಲ್ಲಿ ಚಳಿ ಹೆಚ್ಚಾಗಿದೆ ಕಳೆದ ಎರಡು ದಿನದಿಂದ ಪೂರ್ಣ ಸೂರ್ಯ ಕಾಣಸಿಗುತ್ತಿಲ್ಲ.  ಬೆಳ್ಳಗಿನ ಮತ್ತು ಸಂಜೆ ಅವಧಿಯಲ್ಲಿ  50 ಮೀಟರ ಅಂತರದಲ್ಲಿ ಏನಿದೆ ಏನು ಗುರುತಿಸುವುದು ಕಷ್ಟವಾಗಿದೆ ಅಷ್ಟೊಂದು ಮಬ್ಬು ಕವಿದಿರುವುದು. ವಾಹನಗಳು ಹಗಲಿನಲ್ಲಿಯೂ ದೀಪದೊಂದಿಗೆ ಚಲಿಸುವ ವಾತಾವರಣವಿದೆ.  ಶಾಲಾ ಕಾಲೇಜುಗಳಿಗೆ ಆಯಾ ಆಯಾ ಜಿಲ್ಲೆಯ ವಾತಾವರಣವನ್ನು ಗಮನಿಸಿ ಜಿಲ್ಲೆಯ ಮ್ಯಾಜಿಸ್ಟ್ರೀಟೆರವರು ರಜೆಯನ್ನು ಘೋಷಿಸಿರುವರು. ಜನರು ಅಲ್ಲಲ್ಲಿ ಕುಳಿತು ಬೆಂಕಿ ಕಾಯಿಸುತ್ತಿರುವರು. ವಾತಾವರಣದಂತೆ ಎಲ್ಲ PÁðರಿ, PÁðರೆತರ ಸಂಸ್ಥೆಗಳ ಕಾರ್ಯನಿರ್ವಹಣೆ ಮಬ್ಬಿನಿಂದ ಸಾಗಿರುವುದು.
 ಕೊಳಿಮೊಟ್ಟೆ, ಶೇಂಗಾ, ಇತರ ದೇಹಕ್ಕೆ ಉಷ್ಣವನ್ನು ನೀಡುವಂತಹ ತಿಂಡಿ, ಆಹಾರ ಪಧಾರ್ಥಗಳ  ವ್ಯಾಪಾರ ಭರದಿಂದ ಸಾಗಿದೆ. ಮೊಟ್ಟೆಯ ದರ 5 ರಿಂದ 6 ಕ್ಕೆ ಏರಿದೆ, ರಸ್ತೆಯ ಬದಿಯಲ್ಲಿ ರೀತಿಯ ವ್ಯಾಪಾರದ್ದೆ ಕಾರುಬಾರಾಗಿದೆ.  ರೂಂ ಹೀಟರ್ಗಳು  ಅಂಗಡಿಗಳಲ್ಲಿ ಮುಂದಿನ ಜಾಗವನ್ನು ಆಕ್ರಿಮಿಸಿದೆ. ಬೇಸಿಗೆಯಲ್ಲಿ ತಮ್ಮ ತಾಕತ್ತು ತೋರಿಸಿದ್ದ , ಪ್ಯಾನ, ಕೂಲರ, ಎಸಿ ಇಂತಹ ತಂಪು ನೀಡುವ ಸಾಮಗ್ರಿಗಳು ಚಳಿಗೆ ಮತ್ತು  ಬಿಸಿ ನೀಡುವ ಸಾಮಗ್ರಿಗಳ ಮುಂದೆ ಶರಣಾಗಿ ಮೂಲೆ ಸೇರಿದೆ.
ಅರ್ಧ ತೋಳಿನ ಅಂಗಿ, ತೆಳುವಾದ ಬಟ್ಟೆಗಳು ಮನೆಯ ಪೆಟ್ಟಿಗೆಯನ್ನು ಸೇರಿದೆ. ಪೂತರ್ಿ ತೋಳಿನ ಅಂಗಿ, ಸ್ವೇಟರ್, ಇನರ್, ಶೂ, ಜಾಕೆಟ್, ಮಪ್ಲರ್ ಇವು ತಮ್ಮ ಅಗತ್ಯತೆಯ ಬಗ್ಗೆ ಎಲ್ಲರಿಗೂ ಮನವರಿಕೆ ಮಾಡಿಕೊಡುತ್ತಿರುವುದು. ಬೇಸಿಗೆಯಲ್ಲಿ ಕೇವಲ ಚಾಪೆ ತೆಳುವಾದ ಬೆಡಶೀಟ್ನ್ನು ಮಾತ್ರ ಮಲಗುವಾಗ ಬಳಸಲಾಗುತ್ತಿತ್ತು ಆದರೆ ಈಗ ಚಾಪೆ ಮೇಲೆ ಹತ್ತಿಯ ಹಾಸಿಗೆ, ಬೆಡ್ಶೀಟ್ ಮೇಲೆ ಹತ್ತಿಯ ರಜಾಯಿ ಬಂದಿರುವುದು.  ಸಾರಿಗೆ ವ್ಯವಸ್ಥೆ ಏರು ಪೇರಾಗಿರುವುದು. ರೈಲು ವೇಳೆಗೆ ಸರಿಯಾಗಿ ಬರುವುದು, ಹೋಗುವುದು ಹೆಚ್ಚು ಕಡಿಮೆಯಾಗಿದೆ. ಕಷ್ಟದ ಬದುಕು ಸೈಕಲ್ ರಿಕ್ಷಾ ಓಡಿಸುವವರದ್ದಾಗಿರುವುದು. ಲಕ್ನೋ ನಗರದಲ್ಲಿರುವ ಹೆಚ್ಚಿನ ಸೈಕಲ್ ರಿಕ್ಷಾ ಓಡಿಸಿ ಜೀವನ ಸಾಗಿಸುವವರು ಬೇರೆ ಜಿಲ್ಲೆ ಅಥವಾ ಬೇರೆ ರಾಜ್ಯದವರಾಗಿರುವರು.  ಇವರು ಮನೆಯಿಂದ ಬಂದು ಇಲ್ಲಿ ಸೈಕಲ್ ರಿಕ್ಷಾ ನಡೆಸಿ ಜೀವನ ಸಾಗಿಸುತ್ತಿರುವರು ಮತ್ತು ದುಡಿದ ದುಡಿಮೆಯಿಂದ ಉಳಿತಾಯ ಮಾಡಿ ಮನೆಗೆ ಹಣ ಕಳುಹಿಸುತ್ತಿರುವರು. ಇವರಿಗೆ ಊಳಿದುಕೊಳ್ಳಲು ಯಾವುದೇ ವ್ಯವಸ್ಥೆ ಇರುವುದಿಲ್ಲ. ರಸ್ತೆಯ ಪಕ್ಕವೇ ಇವರ ಊಟ, ವಸತಿ ಎಲ್ಲವೂ. ಮೈ ಕೊರೆಯುವಂತೆ ಚಳಿ ಇರುವ ಸಂದರ್ಭದಲ್ಲಿ, ಮತ್ತು ಮಳೆಗಾಲದಲ್ಲಿ ಇವರು ತುಂಬಾ ಕಷ್ಟವನ್ನು ಅನುಭವಿಸುವರು.   ರಾಜದ್ಯದಲ್ಲಿ ಬಡತನ ಒಂದು ಶಾಪವಾಗಿದೆ. ಒಂದು ಹೊತ್ತಿನ ಊಟಕ್ಕೆ ಕಷ್ಟ ಪಡುವವರು ಚಳಿಗಾಲಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಬೆಂಕಿಯ ಶಾಖವೇ ಅವರನ್ನು ಚಳಿಯಿಂದ ಕಾಪಾಡಬೇಕಾಗಿದೆ. ಪ್ರತಿ ವರ್ಷ ಚಳಿಯಿಂದ ಉತ್ತರ ಪ್ರದೇಶದಲ್ಲಿ ನೂರಾರು ಜನರು ಸಾವಿಗೆ ತುತ್ತಾದ ಸುದ್ದಿಗಳನ್ನು ನಾವು ಮಾಧ್ಯಮಗಳಲ್ಲಿ ನೋಡುತ್ತಿರುವೆವು. ಅದರಲ್ಲಿ ಎಲ್ಲರೂ ಹೆಚ್ಚಾಗಿ ಕಡುಬಡವರು ಆಗಿರುವರು ಎಂಬುದು ಗಮನಾರ್ಹವಾಗಿದೆ.   21 ಕೋಟಿಗೂ ಅಧಿಕ ಜನಸಂಖ್ಯೆ ಇರುವ  ವಿಶಾಲವಾದ ರಾಜ್ಯದಲ್ಲಿ ಸುದ್ದಿಯಾಗದೇ ಸಾವನ್ನು ಹೊಂದುವರು ಎಷ್ಟು ಎಂದು ಹೇಳಲು ಅಸಾಧ್ಯವಾಗಿರುವುದು.  ಇಂತಹ ಹಲವಾರು ಸನ್ನಿವೇಶಗಳು ನಮ್ಮ ದೇಶದ ವ್ಯವಸ್ಥೆಯ ಕ್ರೂರತೆಯ ಪ್ರತಿಬಿಂಬವಾಗಿ ಕಂಡುಬರುವುದು.   ಸೈಕಲ್ ರಿಕ್ಷಾ ಚಲಿಸುವವರ ಬಗ್ಗೆಯಾಗಲಿ, ಸೂಕ್ತ ವಸತಿ, ಆಹಾರ ಇಲ್ಲದ ಜನರ ಬಗ್ಗೆಯಾಗಲಿ ನಮ್ಮ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾದ ಸಮಾಧಾನ ಇಲ್ಲದೇ ಇರುವುದು ದುರದೃಷ್ಟವಾಗಿರುವುದು. ನಮ್ಮ ಎಲ್ಲಾ ಯೋಜನೆಗಳು  ನನಗೆ ಎಷ್ಟು ಓಟು ಬರುವುದು ಎಂಬುದರ ಮೇಲೆಯೆ ಅವಲಂಬಿತವಾಗಿರುವುದು. ಇವುಗಳ ನಡುವೆಯೇ ಕೆಲವೊಂದು ವ್ಯಕ್ತಿಗಳು ಬಿಸಿಬಿಸಿಯಾದ ಪುರಿ ಪಲ್ಯ, ಬೆಚ್ಚನೆಯ ರಗ್ಗು ಉಚಿತವಾಗಿ ನೀಡುವ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿರುವುದು. ಆದರೇ ಅವುಗಳ ಪ್ರಮಾಣ ನೋಡಿದಾಗ ಮಾನವೀಯತೆಗಿಂತ ಪ್ರಚಾರದ ಹುಚ್ಚೆ ಅದರಲ್ಲಿ ಹೆಚ್ಚಾಗಿ ಕಂಡುಬರುವುದು. ಚಳಿಗಾಲವನ್ನು ನಿಭಾಯಿಸಲು ರಸ್ತೆ ಬದಿಯ ಜನರನ್ನು ರಕ್ಷಿಸುವುದಕ್ಕೋಸ್ಕರ ತಾತ್ಕಾಲಿಕ ಕ್ಯಾಂಪ ಮಾಡಿ ಬಿಸಿಯಾದ ಆಹಾರ, ಸೂಕ್ತ ವಸತಿಯನ್ನು ಮಾಡುವ ಅಗತ್ಯವಿದೆ.
  ಕೈಯಲ್ಲಿ ಕಾಸಿದ್ದು ಚಳಿಗಾಲವನ್ನು ಒಂದು ಮರೆಯಲಾಗದ ಅನುಭವವನ್ನಾಗಿ ಆಸ್ವಾದಿಸಲು ಉತ್ಸುಕವಿರುವ ಜನರಿಗೆ ಉತ್ತರಪ್ರದೇಶ ರಾಜ್ಯ ಡಿಸೆಂಬರ 15 ರಿಂದ ಜನವರಿ 15 ರವರೆಗೆ ಪ್ರವಾಸಕ್ಕೆ ಸೂಕ್ತ ಸಮಯವಾಗಿದೆ.  ಮಾನವೀಯತೆ, ಶೋಷಿತರ ಬಗ್ಗೆ ಕಾಳಜಿ, ಬದಲಾವಣೆಯ ಇಚ್ಛಾಶಕ್ತಿ ಇರುವ ಜನರಿಗೆ  ಇಲ್ಲಿ ವರ್ಷಪೂ ಮಾಡಲು ಸೂಕ್ತ ಕೆಲಸವಿದೆ.  ಪ್ರತಿ ವಾತಾವರಣದಲ್ಲಿನ  ಅನುಭವ, xÂÊðಸುವಿಕೆ  ತಮ್ಮ ಎಲ್ಲರ ಉದ್ದೇಶಗಳನ್ನು ಇನಷ್ಟು ಗಟ್ಟಿಗೊಳಿಸುವುದು.
ವಿವೇಕ ಬೆಟ್ಕುಳಿ