ಕವನಗಳು
ಗಂಡು
ಮದುವೆ ಮುಂಚೆ ವೀರ
ಮದುವೆ ನಂತರ ಗಂಭೀರ
ಮಕ್ಕಳಾದ ನಂತರ
ಫಕೀರ !
ಹೆಣ್ಣು
ಮದುವೆಗೆ ಮುಂಚೆ
ನಾರಿ
ಮದುವೆ ಆದ ಮೇಲೆ
ಅಲೆಮಾರಿ
ಮದುವೆಯ ನಂತರ
ಹೆಮ್ಮಾರಿ!
ನಾನು ಈ ರೀತಿ
ಬರೆದದ್ದು ತಪ್ಪೆನಿಸಿದರೆ ಸ್ವಾರಿ.
ಕುಡುಕನ
ಜೀವನ
ಮಗುವಾಗಿರುವಾಗ
ಮೊಲೆಹಾಲು ಕುಡಿದು ನಡೆದಾಡಿದೆ
ನಡೆದಾಡುವಾಗ ಹಾಲು ಕುಡಿದು ಹುಡುಗನಾದೆ
ಹುಡುಗನಾದಾಗ ಕೋಲಾ
ಪೆಪ್ಸಿ ಕುಡಿದು ಯುವಕನಾದೆ
ಯುವಕನಾದಾಗ ಬೀರು
ಕುಡಿದು ದೊಡ್ಡವನಾದೆ
ದೊಡ್ಡವನಾದಾಗ ಹಾಟ್
ಕುಡಿದು ಗ್ರಹಸ್ಥನಾದೆ
ಗ್ರಹಸ್ಥನಾದಾಗ
ಕಂಟ್ರಿ ಸರಾಯಿ ಕುಡಿದು ಹಾಸಿಗೆ ಹಿಡಿದೆ
ಹಾಸಿಗೆ ಹಿಡಿದಾಗ, ತುಳಸಿನೀರು ಕುಡಿದು
ಯಾತ್ರೆ ಮುಗಿಸಲು ಕಾದೆ !
ವಿವೇಕ
ಬೆಟ್ಕುಳಿ ಕುಮಟಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ